ಇ-ಕಾಮರ್ಸ್ ವಲಯಕ್ಕೆ ಜಿಯೋ ಎಂಟ್ರಿ!..ಬೆದರಿದ ಅಮೆಜಾನ್, ಫ್ಲಿಪ್‌ಕಾರ್ಟ್‌!

|

ಟೆಲಿಕಾಂ ವಲಯದಲ್ಲಿ ಭಾರಿ ಸದ್ದು ಮಾಡಿರುವ ರಿಲಾಯನ್ಸ್ ಜಿಯೋ ಇದೀಗ ಇ-ಕಾಮರ್ಸ್‌ ಉದ್ಯಮಕ್ಕೆ ಕಾಲಿಟ್ಟಿದೆ. ಜಿಯೋ ಈ ಮೂಲಕ ಫ್ಲಿಪ್‌ಕಾರ್ಟ್‌, ಅಮೆಜಾನ್ ನಂತಹ ದೊಡ್ಡ ಇ-ಕಾಮರ್ಸ್‌ ತಾಣಗಳಿಗೆ ಶಾಕ್ ನೀಡಿದ್ದು, ಪ್ರಮುಖ ಇ-ಕಾಮರ್ಸ್‌ ತಾಣಗಳ ಲಿಸ್ಟಿಗೆ ಈಗ ಜಿಯೋ ಸೇರಿಕೊಂಡಿದೆ. ಸಂಸ್ಥೆಯು ತನ್ನ ಹೊಸ ಸೇವೆಯನ್ನು ಜಿಯೋಮಾರ್ಟ್ ಎಂದು ಹೇಳಿಕೊಂಡಿದೆ.

ಇ-ಕಾಮರ್ಸ್ ವಲಯಕ್ಕೆ ಜಿಯೋ ಎಂಟ್ರಿ!..ಬೆದರಿದ ಅಮೆಜಾನ್, ಫ್ಲಿಪ್‌ಕಾರ್ಟ್‌!

ಜಿಯೋ ಸಂಸ್ಥೆಯು ಇ-ಕಾಮರ್ಸ್‌ ಸೇವೆಗೆ ಎಂಟ್ರಿ ಕೊಟ್ಟಿದ್ದು, ಅದಕ್ಕಾಗಿ ಜಿಯೋ ಮಾರ್ಟ್‌ ಆಪ್‌ ಅನ್ನು ಪರಿಚಯಿಸಿದೆ. ಈ ಸೇವೆಯಲ್ಲಿ ಒಟ್ಟು 50000 ದಷ್ಟು ದಿನಸಿ ಉತ್ಪನ್ನಗಳು ಲಭ್ಯವಾಗಲಿವೆ. ಗ್ರಾಹಕರು ಇಂತಿಷ್ಟೆ ಆರ್ಡರ್ ಮಾಬೇಕು ಎಂದೆನಿಲ್ಲ, ಯಾವುದೇ ಉತ್ಪನ್ನ ಖರೀದಿಸಿದರು ಉಚಿತ ಹೋಮ್ ಡೆಲಿವರಿ ಸೇವೆ ಸಿಗಲಿದೆ. ಸ್ಪೀಡ್‌ ಡೆಲಿವರಿ/ ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆ ಸೇರುವ ಸಾಧ್ಯತೆಗಳಿವೆ.

ಇ-ಕಾಮರ್ಸ್ ವಲಯಕ್ಕೆ ಜಿಯೋ ಎಂಟ್ರಿ!..ಬೆದರಿದ ಅಮೆಜಾನ್, ಫ್ಲಿಪ್‌ಕಾರ್ಟ್‌!

ಇನ್ನು ಈ ಸೇವೆಯು ಮುಂಬೈ, ಠಾಣಾ ಸೇರಿದಂತೆ ಕೆಲವು ನಗರಗಳಲ್ಲಿ ಮಾತ್ರ ಲಭ್ಯವಾಗಲಿದೆ. ಜಿಯೋ ಮಾರ್ಟ್‌ ಆಪ್ ಮೂಲಕ ಸರಳವಾಗಿ ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಹಾಗೆಯೇ ಆರಂಭದಲ್ಲಿ ಇಶೆಷ ಕೊಡುಗೆಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಮತ್ತು ಬ್ರಾಂಡ್‌ಗಳನ್ನು ತಂತ್ರಜ್ಞಾನದ ಮೂಲಕ ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕಿಸುವ ಉದ್ದೇಶವನ್ನು ಜಿಯೋ ಹೊಂದಿದೆ.

ಇ-ಕಾಮರ್ಸ್ ವಲಯಕ್ಕೆ ಜಿಯೋ ಎಂಟ್ರಿ!..ಬೆದರಿದ ಅಮೆಜಾನ್, ಫ್ಲಿಪ್‌ಕಾರ್ಟ್‌!

ಪ್ರಸ್ತುತ ಈಗಾಗಲೇ ರಿಲಾಯನ್ಸ್ ಸೂಪರ್‌ ಮಾರ್ಕೆಟ್, ಮಳಿಗೆಗಳು, ಸಗಟು ಅಂಗಡಿಗಳು, ಹೈಪರ್ ಮಾರ್ಕೆಟ್, ವಿಶೇಷ ಮಳಿಗೆಗಳನ್ನು ಸಹ ನಡೆಸುತ್ತಿದೆ. ಹಾಗೆಯೇ ಈಗ ಹೊಸದಾಗಿ ಇ-ಕಾಮರ್ಸ್‌ ಅನ್ನು ಶುರು ಮಾಡಿದೆ. ಜಿಯೋ ಮಾರ್ಟ್‌ ಸೇವೆಯನ್ನು ಸಂಸ್ಥೆಯು ದೇಶದ ಹೊಸ ಅಂಗಡಿ ಎಂದು ಕರೆದುಕೊಂಡಿದೆ. ರಿಲಯನ್ಸ್ ಜಿಯೋಮಾರ್ಟ್ ಚೀನಾದಲ್ಲಿನ ಇ-ಕಾಮರ್ಸ್‌ ಸೇವೆ ಅಲಿಬಾಬಾವನ್ನು ಹೋಲುತ್ತದೆ.

ಭಾರತದಲ್ಲಿ ಜಿಯೋ ಮತ್ತು ಏರ್‌ಟೆಲ್‌ VoWi-Fi ಸೇವೆ ಶುರು!.ಆದರೆ ಇದೆ ತೊಡಕು!

ಭಾರತದಲ್ಲಿ ಜಿಯೋ ಮತ್ತು ಏರ್‌ಟೆಲ್‌ VoWi-Fi ಸೇವೆ ಶುರು!.ಆದರೆ ಇದೆ ತೊಡಕು!

ಸದ್ಯ ದೇಶದಲ್ಲಿ VoWi-Fi ತಂತ್ರಜ್ಞಾನ ಸೇವೆಯು ಹೆಚ್ಚು ಆಕರ್ಷಕವಾಗುತ್ತದ್ದು, ಬಳಕೆದಾರರು ಹೊಸತನ ಅಳವಡಿಕೆಯತ್ತ ಮುನ್ನಡೆದಿದ್ದಾರೆ. ಜಿಯೋ ಮತ್ತು ಏರ್‌ಟೆಲ್‌ ಸಂಸ್ಥೆಗಳು ಈ ತಂತ್ರಜ್ಞಾನವನ್ನು ದೇಶದ ಬಳಕೆದಾರರಿಗೆ ಲಭ್ಯ ಮಾಡಿವೆ. ಇನ್ನು ಈ ಸೇವೆಯನ್ನು ಮೊದಲ ಆರಂಭಿಸಿದ್ದೆ ಜಿಯೋ ಟೆಲಿಕಾಂ. ತದ ನಂತರ ಏರ್‌ಟೆಲ್‌ ಸಹ VoWi-Fi ತಂತ್ರಜ್ಞಾನ ಪರಿಚಯಿಸಿತು. ಆದರೆ ಈ ಸೇವೆಯನ್ನು ಎಲ್ಲ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಅಲಭ್ಯ. ಯಾಕೆ ಅಂತೀರಾ?

ಜಿಯೋ ಮತ್ತು ಏರ್‌ಟೆಲ್‌

ಹೌದು, ದೇಶದಲ್ಲಿ ಜಿಯೋ ಮತ್ತು ಏರ್‌ಟೆಲ್‌ VoWi-Fi ಸೇವೆ ಶುರು ಮಾಡಿವೆ. VoWi-Fi (Voice over Wi-Fi) ತಂತ್ರಜ್ಞಾನವು 4G ನೆಟವರ್ಕ ಆಧಾರಿತವಾಗಿದ್ದು, ಮೊಬೈಲ್ ಸಿಗ್ನಲ್ ಇಲ್ಲದೇಯೂ ಸಂಪರ್ಕ ಸಾಧ್ಯವಿದೆ. VoWi-Fi ತಂತ್ರಜ್ಞಾನದ ವಿಷಯಕ್ಕೆ ಬಂದಾಗ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಈ ಎರಡು ಟೆಲಿಕಾಂ ಆಪರೇಟರ್‌ಗಳು ತಮ್ಮ ಚಂದಾದಾರರು ಸೆಳೆಯಲು ಅನೇಕ ಸ್ಥಳಗಳಲ್ಲಿ ತಂತ್ರಜ್ಞಾನವನ್ನು ಒದಗಿಸಿದ್ದಾರೆ. ಯಾವುದೇ ಅಡೆ ತಡೆ ಇಲ್ಲದ ವಾಯಿಸ್ ಕರೆ ಲಭ್ಯ ಇದೆ. ಈ VoWi-Fi ತಂತ್ರಜ್ಞಾನ ಕೆಲವು ಸಂಗತಿಗಳ ಬಗ್ಗೆ ತಿಳಿಯಲು ಮುಂದೆ ಓದಿರಿ

ಸೀಮಿತ ವ್ಯಾಪ್ತಿ

ಸೀಮಿತ ವ್ಯಾಪ್ತಿ

ಏರ್‌ಟೆಲ್ ಮತ್ತು ಜಿಯೋ ಎರಡರಿಂದಲೂ VoWi-Fi ಸೇವೆಯ ಬೆಂಬಲ ಇದ್ದು, ಆದರೆ ಕೆಲವು ನಗರಗಳಲ್ಲಿ ಮಾತ್ರ ಸೀಮಿತವಾಗಿವೆ. ಇದರರ್ಥ VoWi-Fi ಸೇವೆಯ ವ್ಯಾಪ್ತಿಯ ಪ್ರದೇಶಗಳಲ್ಲಿ ಇದ್ದರೇ ಮಾತ್ರ VoWi-Fi ಸೇವೆಯ ಪ್ರಯೋಜನ ಪಡೆಯಲು ಸಾಧ್ಯ. ದೆಹಲಿ-ಎನ್‌ಸಿಆರ್, ಮುಂಬೈ, ಮತ್ತು ಇತರ ಮಹಾನಗರಗಳಂತಹ ಪ್ರಮುಖ ಪ್ರದೇಶಗಳಲ್ಲಿನ ಚಂದಾದಾರರಿಗೆ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ VoWi-Fi ಬೆಂಬಲವನ್ನು ಸಕ್ರಿಯ ಮಾಡಿವೆ.

ಸ್ಮಾರ್ಟ್‌ಫೋನ್ ಸಪೋರ್ಟ್‌

ಸ್ಮಾರ್ಟ್‌ಫೋನ್ ಸಪೋರ್ಟ್‌

ಈ VoWi-Fi ತಂತ್ರಜ್ಞಾನವು ಕೆಲವು ಆಯ್ದ ಹಾಗೂ ಇತ್ತೀಚಿನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಬೆಂಬಲ ಪಡೆದಿರುವುದು VoWi-Fi ತಂತ್ರಜ್ಞಾನದ ಮೈನಸ್‌ ಪಾಯಿಂಟ್ ಎನ್ನಬಹುದು. ಅವುಗಳಲ್ಲಿ ಶಿಯೋಮಿ, ಸ್ಯಾಮ್‌ಸಂಗ್, ಆಪಲ್ ಮತ್ತು ಒನ್‌ಪ್ಲಸ್‌ನ ಬೆರಳೆಣಿಕೆಯಷ್ಟು ಫೋನ್‌ಗಳು ಮಾತ್ರ ಟೆಲಿಕಾಂ ಆಪರೇಟರ್‌ಗಳಿಂದ VoWi-Fi ಗೆ ಬೆಂಬಲವನ್ನು ಪಡೆದಿವೆ.

ವೈ-ಫೈ ಸಪೋರ್ಟ್‌

ವೈ-ಫೈ ಸಪೋರ್ಟ್‌

VoWi-Fi ತಂತ್ರಜ್ಞಾನದ ಪ್ರಯೋಜನ ಪಡೆಯಲು ವೈ-ಫೈ ಕನೆಕ್ಷನ್ ಅಗತ್ಯ ಇದೆ. ವೈಫೈ ಇಲ್ಲದೇ ಈ ಸೇವೆ ಅಲಭ್ಯ. ಹೀಗಾಗಿ ಚಂದಾದಾರರು ಯಾವ ವೈ-ಫೈ ನೆಟ್‌ವರ್ಕ್ ಅನ್ನು ಬಳಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಏರ್‌ಟೆಲ್ ಚಂದಾದಾರರು VoWi-Fi ವೈಶಿಷ್ಟ್ಯವನ್ನು ಬಳಸಲು ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ VoWi-Fi ಸಂಪರ್ಕ ಅಗತ್ಯ.

Most Read Articles
Best Mobiles in India

English summary
Jio has just announced the soft launch of its much-anticipated e-commerce service called JioMart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X