ಪಿಕ್ಸೆಲ್‌ ಫೋನ್‌ನಲ್ಲಿ ಭದ್ರತಾ ದೋಷ; ಯಾರು ಬೇಕಾದರೂ ಅನ್‌ಲಾಕ್‌ ಮಾಡಬಹುದು!?

|

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈಗ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳು ಜನಪ್ರಿಯತೆ ಪಡೆದಿದೆ. ಇದಕ್ಕೆ ಕಾರಣ ಆಕರ್ಷಕ ಫೀಚರ್ಸ್‌. ಅದಕ್ಕೂ ಮಿಗಿಲಾಗಿ ನಿಮ್ಮ ಬಳಿ ಏನಾದರೂ ಪಿಕ್ಸೆಲ್‌ ಫೋನ್‌ ಇದ್ದರೆ ಎಚ್ಚರ ವಹಿಸಬೇಕಿದೆ. ಯಾಕೆಂದರೆ ಈ ಸ್ಮಾರ್ಟ್‌ಫೋನ್‌ನ ಲಾಕ್ ಸ್ಕ್ರೀನ್ ಅನ್ನು ಬೈಪಾಸ್ ಮಾಡಬಹುದಾದ ಮಾರ್ಗ ಪತ್ತೆಯಾಗಿದೆ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷಿತವಲ್ಲ ಎಂಬುದು ತಿಳಿದುಬಂದಿದೆ.

ಸೈಬರ್‌ಸೆಕ್ಯುರಿಟಿ

ಹೌದು, ಪಿಕ್ಸೆಲ್ ಡಿವೈಸ್‌ನಲ್ಲಿ ಈ ಹೊಸ ದುರ್ಬಲತೆಯನ್ನು ಸೈಬರ್‌ಸೆಕ್ಯುರಿಟಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಆದರೆ, ಈ ದುರ್ಬಲತೆ ಪಿಕ್ಸೆಲ್‌ ಫೋನ್‌ ಹೊರತುಪಡಿಸಿ ಇತರೆ ಆಂಡ್ರಾಯ್ಡ್ ಫೋನ್‌ಗಳ ಮೇಲೂ ಪರಿಣಾಮ ಬೀರುತ್ತದೆಯೇ ಎಂಬ ಮಾಹಿತಿ ಮಾತ್ರ ಇನ್ನು ಸ್ಪಷ್ಟವಾಗಿಲ್ಲವಾದರೂ ಸಂಶೋಧಕರು ಮಾತ್ರ ಯಾವುದೇ ಆಂಡ್ರಾಯ್ಡ್‌ ಡಿವೈಸ್‌ನಲ್ಲೂ ಸಹ ಈ ರೀತಿಯಾದ ದೋಷ ಇದೆ ಎಂದು ತಿಳಿಸಿದ್ದಾರೆ.

ಸಂಶೋಧಕ

ಸೈಬರ್ ಸೆಕ್ಯುರಿಟಿ ಸಂಶೋಧಕ ಡೇವಿಡ್ ಶುಟ್ಜ್ ಅವರು ಪಿಕ್ಸೆಲ್‌ ಫೋನ್‌ನಲ್ಲಿ ಈ ದುರ್ಬಲತೆ ಕಂಡುಕೊಂಡಿದ್ದಾರೆ. ಹಾಗೆಯೇ ಲಾಕ್ ಸ್ಕ್ರೀನ್ ಅನ್ನು ಬೈಪಾಸ್ ಮಾಡಲು ಅಗತ್ಯವಿರುವ ಏಕೈಕ ಅಂಶ ಎಂದರೆ ಅದು ಸಿಮ್‌ ಕಾರ್ಡ್‌ ಮಾತ್ರ ಎಂದು ಅವರು ಈ ಮಾಹಿತಿಯನ್ನು ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ ಈ ದುರ್ಬಲತೆಯನ್ನು CVE-2022-20465 ಎಂದು ಟ್ರ್ಯಾಕ್ ಮಾಡಲಾಗಿದೆ ಜೊತೆಗೆ ಇದು ಇತರ ಆಂಡ್ರಾಯ್ಡ್ ಮಾರಾಟಗಾರರ ಮೇಲೂ ಪರಿಣಾಮ ಬೀರಬಹುದು ಎಂದು ಉಲ್ಲೇಖಿಸಿದ್ದಾರೆ. ಆದರೆ, ಈವರೆಗೆ ಪಿಕ್ಸೆಲ್‌ ಡಿವೈಸ್‌ಗಳಲ್ಲಿ ಮಾತ್ರ ಈ ದೋಷವನ್ನು ಪತ್ತೆಮಾಡಲಾಗಿದೆ ಎಂಬುದು ನಿಮಗೆ ತಿಳಿದಿರಲಿ.

ಗೂಗಲ್ ಪಿಕ್ಸೆಲ್

ನಾನು ಎಲ್ಲಾ ಗೂಗಲ್ ಪಿಕ್ಸೆಲ್ ಫೋನ್‌ಗಳ ಮೇಲೆ ಪರಿಣಾಮ ಬೀರುವ ದುರ್ಬಲತೆಯನ್ನು ಪತ್ತೆ ಮಾಡಿದ್ದೇನೆ. ನೀವು ನನಗೆ ಯಾವುದೇ ಲಾಕ್ ಆಗಿರುವ ಪಿಕ್ಸೆಲ್ ಡಿವೈಸ್‌ ಅನ್ನು ನೀಡಿದರೆ, ನಾನು ಅದನ್ನು ನಿಮಗೆ ಅನ್‌ಲಾಕ್ ಮಾಡಿ ಕೊಡುತ್ತೇನೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಶುಟ್ಜ್ ಬರೆದುಕೊಂಡಿದ್ದು, ಇದು ಪಿಕ್ಸೆಲ್‌ ಡಿವೈಸ್‌ ಬಳಕೆದಾರರಿಗೆ ಎಚ್ಚರಿಕೆ ಸಂದೇಶವಾಗಿದೆ. ಇನ್ನೂ ಒಂದಷ್ಟು ಮಾಹಿತಿ ನೀಡಿರುವ ಶುಟ್ಜ್, ನವೆಂಬರ್ 5, 2022 ರಂದು ಬಿಡುಗಡೆಯಾದ ಭದ್ರತಾ ಅಪ್‌ಡೇಟ್‌ನಲ್ಲಿ ಗೂಗಲ್ ದುರ್ಬಲತೆಯನ್ನು ಪ್ಯಾಚ್ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ.

ಈ ದೋಷ ಕಂಡು ಬಂದಿದ್ದು ಹೇಗೆ?

ಈ ದೋಷ ಕಂಡು ಬಂದಿದ್ದು ಹೇಗೆ?

ಶುಟ್ಜ್ ಅವರ ಫೋನ್‌ನಲ್ಲಿ ಒಂದು ದಿನ ಅವರ ಫೋನ್ ಬ್ಯಾಟರಿ ಖಾಲಿಯಾದಾಗ ಅವರು ಚಾರ್ಜರ್‌ಗೆ ಇಟ್ಟು ನಂತರ ಫೋನ್‌ ಅನ್ನು ಬೂಟ್ ಮಾಡಿದ್ದಾರೆ. ಇದಾದ ಬಳಿಕ ಫೋನ್‌ನಲ್ಲಿರುವ ಸಿಮ್ ಕಾರ್ಡ್‌ಗೆ ಭದ್ರತಾ ಪಿನ್ ಅನ್ನು ನಮೂದಿಸಲು ಫೋನ್‌ ಕೇಳಿದೆ. ಆದರೆ ಶುಟ್ಜ್ ಅವರಿಗೆ ಇದು ನೆನಪಿಲ್ಲದ ಕಾರಣ ಮೂರು ಬಾರಿ ತಪ್ಪಾದ ಪಿಕ್‌ ನಮೂದು ಮಾಡಿದ್ದಾರೆ.

PUK

ಲಾಕ್‌ ಆದ ಫೋನ್‌ ಅನ್ನು ಅಲ್‌ಲಾಕ್‌ ಮಾಡಲು ಫೋನ್‌ PUK ಕೋಡ್ ಕೇಳಿದೆ. ನಂತರ ಸರಿಯಾದ PUK ಕೋಟ್‌ ಅನ್ನು ನಮೂದು ಮಾಡಿದ ಬಳಿಕ ಹೊಸದಾಗಿ ಫೋನ್‌ ಪಿನ್‌ ರಚಿಸಿ ಎಂಬ ಆಯ್ಕೆ ಕಾಣಿಸಿಕೊಂಡಿದೆ. ಅಲ್ಲಿ ಅವರು ಈ ದೋಷವನ್ನು ಪತ್ತೆ ಮಾಡಿದ್ದಾರೆ. ಅದರಲ್ಲೂ ಹೊಸದಾಗಿ ಫಿಂಗರ್‌ಪ್ರಿಂಟ್ ಐಕಾನ್ ಅನ್ನು ಸಹ ಸೆಟ್‌ ಮಾಡುವ ಆಯ್ಕೆಯನ್ನು ತೋರಿಸಲಾಗಿದೆ.

ಫೋನ್

ಸಾಮಾನ್ಯವಾಗಿ ಫೋನ್ ಅನ್ನು ರಿಬೂಟ್ ಮಾಡಿದ ಬಳಿಕ ಡಿವೈಸ್‌ನ ಪಿನ್ ಕೋಡ್ ಅಥವಾ ಪಾಸ್‌ವರ್ಡ್ ಅನ್ನು ನಮೂದಿಸಲೇಬೇಕು. ಆಗ ಮಾತ್ರ ಫೋನ್‌ನ ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್ ಫೀಚರ್ಸ್‌ ಕಾಣಿಸಿಕೊಳ್ಳುತ್ತದೆ. ಆದರೆ, ಈ ಫೋನ್‌ನಲ್ಲಿ ಆರಂಭದಲ್ಲೇ ಈ ಫೀಚರ್ಸ್‌ ಕಂಡುಬಂದಿದ್ದು, ಬೆರಾಗಾಗಿದ್ದಾರೆ. ಜೊತೆಗೆ ಹೊಸದಾಗಿ ಪಿನ್‌ ಚೇಂಜ್‌ ಮಾಡುವ ಸಂದರ್ಭದಲ್ಲಿ ಶುಟ್ಜ್‌ ಅವರ ಫಿಂಗರ್‌ಪ್ರಿಂಟ್ ಅನ್ನು ಸಹ ಅದು ಸ್ವೀಕರಿಸಿದೆ.

ದುರ್ಬಲತೆಯನ್ನು ಮತ್ತೆ ಪರಿಶೀಲಿಸಿದರು

ದುರ್ಬಲತೆಯನ್ನು ಮತ್ತೆ ಪರಿಶೀಲಿಸಿದರು

ಈ ಪ್ರಕ್ರಿಯೆಗಳು ಮುಗಿದ ನಂತರ ಅವರು ಫೋನ್ ಅನ್ನು ರಿಬೂಟ್ ಮಾಡದೆಯೇ ಪ್ರಕ್ರಿಯೆಯನ್ನು ಪುನರಾವರ್ತಿಸಲು ಪ್ರಯತ್ನಿಸಿದರು. ಫೋನ್ ಸ್ವಿಚ್ ಆನ್ ಆಗಿರುವಾಗಲೇ ಅದರ ಸಿಮ್ ಟ್ರೇ ತೆಗೆದು ಮತ್ತೆ ಹಾಕಿದ್ದಾರೆ. ಅಲ್ಲಿ ಮತ್ತೆ ಮೂರು ಬಾರಿ ತಪ್ಪಾಗಿ ಪಿನ್‌ಕೋಡ್ ನಮೂದಿಸಿದ್ದಾರೆ, ನಂತರ PUK ಅನ್ನು ನಮೂದಿಸಿದ್ದಾರೆ. ಇದಾದ ಬಳಿಕ ಹೊಸ ಪಿನ್‌ ರಚಿಸಿದ್ದಾರೆ.

 ಲಾಕ್

ಈ ಪ್ರಕ್ರಿಯೆಯಲ್ಲಿ ಡಿವೈಸ್‌ ಈ ಮೊದಲು ಲಾಕ್ ಆಗಿದ್ದರೂ ಸಹ, ಫೋನ್ ಶುಟ್ಜ್ ಅವರಿಗೆ ಅನ್‌ಲಾಕ್ ಮಾಡಲಾದ ಹೋಮ್ ಸ್ಕ್ರೀನ್‌ ಅನ್ನು ತೋರಿಸಿದೆ. ಇದನ್ನು ಮತ್ತೆ ಪರಿಶೀಲನೆ ಒಳಪಡಿಸಲು ಶುಟ್ಜ್ ನಂತರ ಹಲವಾರು ಬಾರಿ ಇದನ್ನು ಮಾಡಿದ್ದಾರೆ. ಆಗ ಪ್ರತಿ ಸಲವೂ ಫೋನ್‌ ಅನ್‌ಲಾಕ್‌ ಆಗಿದೆ.

Best Mobiles in India

English summary
Pixel smartphones are now popular in the smartphone segment. But there is a security bug in this phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X