Subscribe to Gizbot

ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿದೆ ಈ ಬ್ಯಾಟರಿ:

Written By:

ಇಂದಿನ ದಿನದಲ್ಲಿ ಪೋರ್ಟಬಲ್ ಪವರ್ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಇದಕ್ಕಾಗಿ ಅನೇಕ ಸಂಶೋಧನೆಗಳು ವೇಗವಾಗಿ ನಡೆಯುತ್ತಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ವಾಹನಗಳು ಇಂದು ಪೋರ್ಟಬಲ್ ಪವರ್ ನಿಂದ ನಡೆಯುವ ದಿನಗಳು ಈಗಾಗಲೇ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಹೊಸದೊಂದು ಸಂಶೋಧನೆ ಪೋರ್ಟಬಲ್ ಪವರ್ ಮೂಲವಾದ ಬ್ಯಾಟರಿಗಳನ್ನು ಕ್ಷಣ ಮಾತ್ರದಲ್ಲಿ ಚಾರ್ಜ್ ಮಾಡುವ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿದ್ದಾರೆ.

ಓದಿರಿ: ZTE ನುಬಿಯಾ Z17 ಸ್ಮಾರ್ಟ್ಫೋನಿನಲ್ಲಿದೆ 8GB RAM ಇನ್ನು ಹಲವು..!!!

ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿದೆ ಈ ಬ್ಯಾಟರಿ:

ಸದ್ಯ ಶೋಧಗೊಂಡಿರುವ ಹೊಸ ಮಾದರಿಯ ಚಾರ್ಜಜಿಂಗ್ ಹೈಬ್ರಿಡ್ ಕಾರುಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಹೈಬ್ರಿಡ್ ಬ್ಯಾಟರಿ ಚಾಲಿತ ಕಾರುಗಳ ಬಹುದೊಡ್ಡ ಸಮಸ್ಯೆ ಎಂದರೇ ಅದರ ಬ್ಯಾಟರಿಗಳು ಚಾರ್ಜ್ ಆಗುವುದು ನಿಧಾನ. ಈ ಸಮಸ್ಯೆಗೆ ಹೊಸ ಆವಿಷ್ಕಾರವು ಸಹಾಯ ಮಾಡಲಿದೆ.

ಈ ಹೊಸ ಸಂಶೋಧನೆಯಲ್ಲಿ ದೊರಕಿರುವ ಚಾರ್ಜಿಂಗ್ ವಿಧಾನದಲ್ಲಿ ಕಾರಿಗೆ ಇಂಧನ ಭರ್ತಿ ಮಾಡುವ ಸಮಯದಲ್ಲೇ ಒಂದು ಫುಲ್ ಬ್ಯಾಟರಿ ಚಾರ್ಜ್ ಮಾಡಲಿದೆ. ಈ ಹೊಸ ಮಾದರಿಯೂ ವಿದ್ಯುತ್ ಬ್ಯಾಟಿರಿ ಚಾಲಿತ ಕಾರುಗಳ ತಯಾರಿಕೆಯಲ್ಲಿ ಹೊಸ ಭಾಷ್ಯವನ್ನು ಬರೆಯುವುದು ಖಂಡಿತ.

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿದೆ ಈ ಬ್ಯಾಟರಿ:

ಇಫ್ ಬ್ಯಾಟರಿ ಎಂಬ ಕಂಪನಿಯೂ ಹೊಸದಾದ ಚಾರ್ಜಿಂಗ್ ವಿಧಾನವನ್ನು ತಯಾರಿಸಿದೆ. ಇದು ಎಲೆಕ್ಟ್ರೋಲೆಟ್ ಮಾದರಿಯಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ. ಇದು ಮೊಬೈಲ್ ಬ್ಯಾಟರಿಗಳ ಟರ್ಬೋ ಚಾರ್ಜಿಂಗ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಹೈಡ್ರೋಎಲೆಕ್ಟಿಕ್ ಪ್ಲಾನ್ಟ್ ರಿಚಾರ್ಜಿಂಗ್ ಮಾಡಲಿದೆ.

Read more about:
English summary
Researchers from the US have developed a safe, affordable and environment friendly method that can 'instantly recharge' batteries of electric and hybrid vehicle. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot