Subscribe to Gizbot

ಮಾರುಕಟ್ಟೆಯಲ್ಲೇ ಜಿಯೋ ಬೆಲೆ ಅತೀ ಕಡಿಮೆ: ಏರ್‌ಟೆಲ್‌ ಬೆಲೆ ದುಪ್ಪಟ್ಟು..! ಈ ವರದಿ ನೋಡಿ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಜನರಿಗೆ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿತ್ತು. ಡೇಟಾ ಬೆಲೆಯನ್ನು ಅತೀ ಕಡಿಮೆ ಮಾಡಿದ್ದು ಅಲ್ಲದೇ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿತ್ತು. ಬೇರೆ ಎಲ್ಲಾ ಕಂಪನಿಗಳು ಇದೆರಡು ವಿಭಾಗದಲ್ಲಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದರೆ ಜಿಯೋ ಮಾತ್ರವೇ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡಿತ್ತು.

ಮಾರುಕಟ್ಟೆಯಲ್ಲೇ ಜಿಯೋ ಬೆಲೆ ಅತೀ ಕಡಿಮೆ: ಏರ್‌ಟೆಲ್‌ ಬೆಲೆ ದುಪ್ಪಟ್ಟು..!

ಆದರೆ ಜಿಯೋ 2017 ಆರಂಭದಲ್ಲಿ ನೀಡಿದ್ದ ಹ್ಯಾಪಿ ನ್ಯೂಯರ್ ಆಫರ್ ನೀಡಿದ್ದ ಸಂದರ್ಭದಲ್ಲಿ ಡೇಟಾ ಬೆಲೆಯನ್ನು ಅತೀ ಕಡಿಮೆ ಮೊತ್ತಕ್ಕೆ ನೀಡಿತ್ತು. ಆದರೆ ಇದಾದ ನಂತರದಲ್ಲಿ ಮೊನ್ನೆ ಗಣರಾಜ್ಯೋತ್ಸವ ಅಂಗವಾಗಿ ಹೆಚ್ಚುವರಿ ಡೇಟಾವನ್ನು ಬಳಕೆಗೆ ನೀಡಿದ ಹಿನ್ನಲೆಯಲ್ಲಿ ಜಿಯೋ ಡೇಟಾ ಬೆಲೆಯೂ ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದು, ಜಿಯೋವನ್ನು ಬಿಟ್ಟರೇ ಬೇರೆಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ಕಡಿಮೆಗೆ ನೀಡುತ್ತಿಲ್ಲ ಎನ್ನಲಾಗಿದೆ.

ಓದಿರಿ: ಟೆಲಿಕಾಂ ಮಾರುಕಟ್ಟೆಯೇ ಬಿದ್ದು ಹೋಗುವ ಆಫರ್ ಕೊಟ್ಟ ಜಿಯೋ: ರೂ.49ಕ್ಕೆ 28 ವ್ಯಾಲಿಡಿಟಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಶೇ.25-33ರಷ್ಟು ಬೆಲೆ ಕಡಿಮೆ:

ಶೇ.25-33ರಷ್ಟು ಬೆಲೆ ಕಡಿಮೆ:

ಸದ್ಯ ಜಿಯೋ ನೀಡಿರುವ ಗಣರಾಜ್ಯೋತ್ಸವ ಆಫರ್ ನಲ್ಲಿ ಬಳಕೆದಾರಿಗೆ ಹೊಸ ಆಫರ್ ನೀಡಿರುವ ಹಿನ್ನಲೆಯಲ್ಲಿ ಜಿಯೋ ಡೇಟಾ ಬೆಲೆಯಲ್ಲಿ ಶೇ.25-33ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಡೇಟಾವನ್ನು ನೀಡುತ್ತಿದೆ ಎನ್ನುವ ಮಾಹಿತಿಯನ್ನು ವರದಿಯೊಂದು ಹೊರ ಹಾಕಿದೆ.

1GB ಬೆಲೆ ರೂ.2.7:

1GB ಬೆಲೆ ರೂ.2.7:

ಜಿಯೋ ದೇಶಿಯ ಮಾರುಕಟ್ಟೆಯಲ್ಲಿ 1GB ಡೇಟಾವನ್ನು ರೂ.2.7ಕ್ಕೆ ನೀಡುತ್ತಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ಕಡಿಮೆ ಬೆಲೆಗೆ ಡೇಟಾವನ್ನು ನೀಡುತ್ತಿಲ್ಲ ಎನ್ನಲಾಗಿದೆ.

ಏರ್‌ಟೆಲ್ ಬೆಲೆ ದುಪ್ಪಟ್ಟು:

ಏರ್‌ಟೆಲ್ ಬೆಲೆ ದುಪ್ಪಟ್ಟು:

ಇದೇ ಮಾದರಿಯಲ್ಲಿ ಏರ್‌ಟೆಲ್ ನೀಡುತ್ತಿರವ ಡೇಟಾ ರೂ.4ಕ್ಕೆ ದೊರೆಯುತ್ತಿದೆ. ಜಿಯೋ ಬೆಲೆ ರೂ.2.7 ಇದ್ದು, ಏರ್‌ಟೆಲ್ ಬೆಲೆ ದುಪ್ಪಟ್ಟು ಆಗಿದೆ ಎನ್ನಲಾಗಿದೆ. ಇದರಿಂದಾಗಿ ಜಿಯೋ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಲಾಗಿದೆ.

ಜಿಯೋ ಬೆಲೆ ಇಳಿಕೆ:

ಜಿಯೋ ಬೆಲೆ ಇಳಿಕೆ:

ಇದೆ ಕೆಲವು ದಿನಗಳ ಹಿಂದೆ ಜಿಯೋ ಪ್ಲಾನ್‌ಗಳ ಬೆಲೆಯನ್ನು ಏರಿಕೆ ಮಾಡಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿದ್ದವು. ಆದರೆ ಜಿಯೋ ಇದಕ್ಕೆ ವಿರುದ್ಧವಾಗಿದೆ. ಮಾರುಕಟ್ಟೆಯಲ್ಲಿ ತನ್ನ ಬೆಲೆಗಳನ್ನು ಇಳಿಕೆ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Rs 2.7 for per GB data after new Reliance Jio offer. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot