500, 1000 ರೂ ನೋಟು ಬ್ಯಾನ್: ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ 'ಕ್ಯಾಶ್‌ ಆನ್‌ ಡೆಲಿವರಿ' ಬ್ಯಾನ್

Written By:

ಇಕಾಮರ್ಸ್ ಪ್ರಖ್ಯಾತ ಆನ್‌ಲೈನ್ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಮತ್ತು ಸ್ನಾಪ್‌ಡೀಲ್‌'ಗಳು 500, 1000 ರೂಪಾಯಿ ನೋಟುಗಳು ಬ್ಯಾನ್‌ ಆದ ಹಿನ್ನೆಲೆಯಲ್ಲಿ 'ಕ್ಯಾಶ್‌ ಆನ್‌ ಡೆಲಿವರಿ' ಹಣ ಪಾವತಿ ಆಪ್ಶನ್‌ ಅನ್ನು ಸ್ಥಗಿತಗೊಳಿಸಿವೆ. ಅಂದಹಾಗೆ ಈ ಆನ್‌ಲೈನ್‌ ಖರೀದಿ ತಾಣಗಳು ನವೆಂಬರ್ 8 ರಂದು ಮಧ್ಯರಾತ್ರಿ 12 ಗಂಟೆ ಇಂದ 'ಕ್ಯಾಶ್‌ ಆನ್‌ ಡೆಲಿವರಿ' ಆಪ್ಶನ್‌ ಅನ್ನು ನಿಲ್ಲಿಸಿವೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಆಸ್ಪತ್ರೆ, ಪೆಟ್ರೋಲ್ ಬ್ಯಾಂಕ್‌ಗಳು, ರೈಲ್ವೆ ಸ್ಟೇಷನ್, ಮೆಟ್ರೊ ಸ್ಟೇಷನ್‌ಗಳಲ್ಲಿ ಮಾತ್ರ ನವೆಂಬರ್ 11 ರವರೆಗೆ 500, 1000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತವೆ.

ಅಮೆಜಾನ್‌, ಸ್ನಾಪ್‌ಡೀಲ್, ಫ್ಲಿಪ್‌ಕಾರ್ಟ್(Flipkart, Snapdeal, Amezon) ಆನ್‌ಲೈನ್‌ ತಾಣಗಳಲ್ಲಿ ಯಾವುದಾದರೂ ಪ್ರಾಡಕ್ಟ್ ಖರೀದಿ ಮಾಡುವ ಮುನ್ನ, ಇಕಾಮರ್ಸ್ ರೀಟೇಲರ್‌ಗಳು ಏನು ಹೇಳಿದ್ದಾರೆ ಎಂಬುದನ್ನು ಇಂದಿನ ಲೇಖನದಲ್ಲಿ ಮಿಸ್‌ ಮಾಡದೇ ಓದಿಕೊಳ್ಳಿ.

500, 1000 ರೂ ನೋಟುಗಳ ಬ್ಯಾನ್: ಸಾಮಾಜಿಕ ತಾಣದಲ್ಲಿ ಹೀಗೆಲ್ಲಾ ಆಗೋಯ್ತು!

2000 ರೂಪಾಯಿ ನೋಟು 'ನ್ಯಾನೋ ಜಿಪಿಎಸ್ ಚಿಪ್' ಹೊಂದಿದೆಯೇ/ಇಲ್ಲವೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಅಮೆಜಾನ್

ಅಮೆಜಾನ್

ಅಮೆಜಾನ್‌ನಲ್ಲಿ 'ಕ್ಯಾಶ್‌ ಆನ್‌ ಡೆಲಿವರಿ' ಆಪ್ಶನ್‌ ಮೂಲಕ ಪ್ರಾಡಕ್ಟ್ ಖರೀದಿಸಲು ಪ್ರಯತ್ನಿಸಿದರೆ, ಖರೀದಿದಾರರು "ಕ್ಯಾಶ್ ಆನ್‌ ಡೆಲಿವರಿ ಆಪ್ಸನ್‌ ಅನ್ನು ಡಿಸೇಬಲ್ ಮಾಡಲಾಗಿದೆ" ಎಂಬ ಮೆಸೇಜ್ ಪಡೆಯುತ್ತೀರಿ. ಅಲ್ಲದೇ ಖರೀದಿದಾರರಿಗೆ ನಿಮ್ಮ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್‌ಗಳನ್ನು ಅಥವಾ ನೆಟ್‌ಬ್ಯಾಂಕಿಂಗ್ ಬಳಸಿ ಖರೀದಿಸಿ ಎಂದು ಸಲಹೆ ಪಡೆಯುತ್ತೀರಿ.

ಸ್ನಾಪ್‌ಡೀಲ್‌ನಲ್ಲಿ ಖರೀದಿ

ಸ್ನಾಪ್‌ಡೀಲ್‌ನಲ್ಲಿ ಖರೀದಿ

ಆನ್‌ಲೈನ್‌ ಶಾಪಿಂಗ್ ತಾಣ ಸ್ನಾಪ್‌ಡೀಲ್‌ನಲ್ಲಿ ಕ್ಯಾಶ್‌ ಆನ್‌ ಡೆಲಿವರಿ ಆಪ್ಸನ್‌ ಅನ್ನು ಹಣ ಪಾವತಿಸಲು ನೀಡಲಾಗಿದೆ. ಆದರೆ ವೆಬ್‌ಸೈಟ್‌ನಲ್ಲಿ "500, 1000 ರೂಪಾಯಿ ನೋಟುಗಳ ಸ್ವೀಕಾರವನ್ನು ಕ್ಯಾಶ್‌ ಆನ್‌ ಡೆಲಿವರಿ ಸಮಯದಲ್ಲಿ ನಿಷೇಧಿಷಲಾಗಿದ್ದು, ಇತರೆ ನಿಖರ ಹಣ ಪಾವತಿ ಅನ್ನು ಪ್ರಾಡಕ್ಟ್ ಡೆಲಿವರಿ ಸಮಯದಲ್ಲಿ ನೀಡಬೇಕು" ಎಂದು ಹೇಳಿದೆ. ಆದರೆ ಕ್ಯಾಶ್ ಆನ್‌ ಡೆಲಿವರಿ ಆಪ್ಸನ್‌ ಆಯ್ಕೆ ಮಾಡಿಕೊಂಡವರು ಹೆಚ್ಚಿನ ಹಣದ ವಸ್ತು ಬುಕ್ ಮಾಡಿದಾಗ ಏನಾಗಬಹುದು ಎಂಬುದು ಗೊತ್ತಿಲ್ಲ. 50, 100 ರೂಪಾಯಿಗಳ ನೋಟುಗಳನ್ನು ನೀಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ನಲ್ಲಿ 1000 ರೂಪಾಯಿಗಿಂತ ಕಡಿಮೆ ಬೆಲೆಯ ಪ್ರಾಡಕ್ಟ್‌ ಅನ್ನು ಖರೀದಿಸಿ 'ಕ್ಯಾಶ್‌ ಆನ್ ಡೆಲಿವರಿ' ಆಪ್ಶನ್ ಆಯ್ಕೆ ಮಾಡಬಹುದು. ಆದರೆ 1000 ರೂಪಾಯಿಗಿಂತ ಹೆಚ್ಚಿನ ಹಣದ ಪ್ರಾಡಕ್ಟ್ ಅನ್ನು ಖರೀದಿಸಿ , 'ಕ್ಯಾಶ್‌ ಆನ್‌ ಡೆಲಿವರಿ' ಆಪ್ಶನ್ ಆಯ್ಕೆ ಮಾಡಿದಲ್ಲಿ, "This payment option is not available for this order. please try some other payment mode' ಎಂಬ ಬ್ಯಾನರ್ ಮೆಸೇಜ್ ಪ್ರದರ್ಶನವಾಗುತ್ತದೆ.

500, 1000 ರೂಪಾಯಿ ನೋಟುಗಳ ಬ್ಯಾನ್'ಗೆ ಫ್ಲಿಪ್‌ಕಾರ್ಟ್ ಪ್ರತಿಕ್ರಿಯೆ

500, 1000 ರೂಪಾಯಿ ನೋಟುಗಳ ಬ್ಯಾನ್'ಗೆ ಫ್ಲಿಪ್‌ಕಾರ್ಟ್ ಪ್ರತಿಕ್ರಿಯೆ

"ಭಾರತ ಸರ್ಕಾರದ ಈ ದಿಟ್ಟ ಮತ್ತು ಐತಿಹಾಸಿಕ ಕ್ರಮವನ್ನು ನಾವು ಸ್ವಾಗಿಸುತ್ತೇವೆ. ಈ ಕ್ರಮವು ಭಾರತ ವೇಗವಾಗಿ ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಅಭಿವೃದ್ದಿಹೊಂದಲು ಅವಕಾಶ ನೀಡುತ್ತದೆ ಮತ್ತು ಈ ಉಪಕ್ರಮದಿಂದ ಫ್ಲಿಪ್‌ಕಾರ್ಟ್ ಮತ್ತು ಇತರೆ ಇಕಾಮರ್ಸ್ ಇಂಡಸ್ಟ್ರಿ ಬದಲಾವಣೆ ಸಾಧ್ಯ" ಎಂದು ಫ್ಲಿಪ್‌ಕಾರ್ಟ್ ಪ್ರತಿಕ್ರಿಯೆ ನೀಡಿದೆ.

500, 1000 ರೂಪಾಯಿ ನೋಟುಗಳ ಬ್ಯಾನ್'ಗೆ ಊಬರ್ ಪ್ರತಿಕ್ರಿಯೆ

500, 1000 ರೂಪಾಯಿ ನೋಟುಗಳ ಬ್ಯಾನ್'ಗೆ ಊಬರ್ ಪ್ರತಿಕ್ರಿಯೆ

"ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಿ, ಹೊಸ ನೋಟುಗಳನ್ನು ಬಿಡುಗಡೆ ಮಾಡುವ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಈ ಸಮಯದಲ್ಲಿ ನಮ್ಮ ರೈಡರ್‌ನಗಳನ್ನು ನಾವು ಕೇಳಿಕೊಳ್ಳುವುದು ಏನೆಂದರೆ, ಊಬರ್ ಖಾತೆಯನ್ನು ತಮ್ಮ ಡಿಜಿಟಲ್ ಪೇಮೆಂಟ್ ಮಾದರಿಗೆ ಲಿಂಕ್‌ ಮಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. ಅಥವಾ 500, 1000 ರೂಪಾಯಿ ನೋಟುಗಳನ್ನು ಹೊರತುಪಡಿಸಿ ಇತರೆ ನೋಟುಗಳನ್ನು ನೀಡಬೇಕಾಗಿ ವಿನಂತಿಸುತ್ತೇವೆ" ಎಂದು ಊಬರ್ ತನ್ನ ಪ್ರತಿಕ್ರಿಯೆ ನೀಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Rs 500, Rs 1000 notes are gone: Flipkart, Amazon disable Cash on Delivery option. To know more about this visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot