ಸ್ಯಾಮ್‌ಸಂಗ್ AKG ಹೊಸ ಹೆಡ್‌ಫೋನ್‌ಗಳು ಲಾಂಚ್!.ಆರಂಭಿಕ ಬೆಲೆ 6,699ರೂ!

|

ಮಾರುಕಟ್ಟೆಯಲ್ಲಿ ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ಗಳಿಗೆ ವ್ಯಾಪಕ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ನವೀನ ತಂತ್ರಜ್ಞಾನದ ಹೊಸ ಮಾದರಿಯ ಬ್ಲೂಟೂತ್ ಆಧಾರಿತ ಹೆಡ್‌ಫೋನ್ ಮತ್ತು ಇಯರ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಈಗ ಏಕಕಾಲಕ್ಕೆ ನಾಲ್ಕು ಅತ್ಯುತ್ತಮ AKG ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿ, ಮ್ಯೂಸಿಕ್ ಪ್ರಿಯರನ್ನು ಖುಷಿಪಡಿಸಿದೆ.

AKG ಹೆಡ್‌ಫೋನ್

ಹೌದು, ಸ್ಯಾಮ್‌ಸಂಗ್ ಕಂಪನಿಯು ನಿನ್ನೆ (ಸೆ.24) Y100, Y500, N200 and N700NC M2 ಹೆಸರಿನ ನಾಲ್ಕು AKG ಹೆಡ್‌ಫೋನ್‌ಗಳನ್ನು ಪರಿಚಯಿಸಿದ್ದು, ಈ ಮೂಲಕ ತನ್ನ AKG ಹೆಡ್‌ಫೋನ್ ಸರಣಿಯನ್ನು ವಿಸ್ತರಿಸಿಕೊಂಡಿದೆ. ಈ ಡಿವೈಸ್‌ಗಳು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ ಮತ್ತು ಎಕ್ಸ್‌ಕ್ಲ್ಯೂಸಿವ್ ರಿಟೈಲ್ ಔಟ್‌ಲೆಟ್‌ಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿವೆ. ಆನಂತರದಲ್ಲಿ ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ದೊರೆಯಲಿವೆ. ಹಾಗಾದರೇ ಈ ಸ್ಯಾಮ್‌ಸಂಗ್ AKG ಹೆಡ್‌ಫೋನ್‌ಗಳ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

AKG-N700NC M2-ಹೆಡ್‌ಫೋನ್

AKG-N700NC M2-ಹೆಡ್‌ಫೋನ್

AKG-N700NC M2-ಹೆಡ್‌ಫೋನ್ ಕಂಪನಿಯ ಫ್ಲ್ಯಾಗ್‌ಶಿಪ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ನಾಯಿಸ್‌ ಕ್ಯಾನ್ಸ್‌ಲೇಶನ್ ತಂತ್ರಜ್ಞಾನವನ್ನು ಹೊಂದಿದೆ. ಹಾಗೆಯೇ ಈ ಡಿವೈಸ್‌ ಬ್ಲೂಟೂತ್ ಮತ್ತು ನಾಯಿಸ್‌ ಕ್ಯಾನ್ಸ್‌ಲೇಶನ್ ಬಳಕೆಯೊಂದಿಗೆ ಸುಮಾರು 23 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಬರಲಿದೆ. ಏರ್‌ಲೈನ್ ಅಡಾಪ್ಟರ್, ಟ್ಯಾಂಗಲ್ ಫ್ರೀ ಫ್ಯಾಬ್ರಿಕ್ ಕೇಬಲ್, ಒನ್ ಬಟನ್ ರೀಮೋಟ್‌ಗಳನ್ನು ಒಳಗೊಂಡಿದೆ. ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಬೆಲೆಯು 26,999ರೂ. ಆಗಿದೆ.

ಸ್ಯಾಮ್‌ಸಂಗ್ AKG-N200

ಸ್ಯಾಮ್‌ಸಂಗ್ AKG-N200

ಸ್ಯಾಮ್‌ಸಂಗ್ AKG-N200 ಹೆಡ್‌ಫೋನ್ Apt-x ತಂತ್ರಜ್ಞಾನವನ್ನು ಒಳಗೊಂಡಿದ್ದು, ಜೊತೆಗೆ ACC ಕೋಡ್ ಟೆಕ್ನಾಲಜೀಸ್ ಬೆಂಬಲವನ್ನು ಪಡೆದಿದೆ. ಕೇವಲ 10 ನಿಮಿಷದ ಚಾರ್ಜ್‌ ಸುಮಾರು ಒಂದು ಗಂಟೆಯ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಬ್ಲ್ಯಾಕ್, ಬ್ಲೂ ಮತ್ತು ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಇದರ ಬೆಲೆಯು 9,999ರೂ.ಗಳಾಗಿದೆ. ಬ್ಲೂಟೂತ್ ಸಪೋರ್ಟ್‌ ಪಡೆದಿದೆ.

ಸ್ಯಾಮ್‌ಸಂಗ್ AKG-Y500

ಸ್ಯಾಮ್‌ಸಂಗ್ AKG-Y500

ಸ್ಯಾಮ್‌ಸಂಗ್ AKG-Y500 ಹೆಡ್‌ಫೋನ್ ಸುಮಾರು 33 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವ ಜೊತೆಗೆ ಮಲ್ಟಿ-ಪಾಯಿಂಟ್ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ. ಇದು ಸಹ ACC ಕೋಡ್ ಟೆಕ್ನಾಲಜೀಸ್ ಬೆಂಬಲ ಹೊಂದಿದ್ದು, ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇದರ ಬೆಲೆಯು 9,999ರೂ.ಗಳಾಗಿದ್ದು, ಬ್ಲ್ಯಾಕ್, ಬ್ಲೂ, ಪಿಂಕ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ AKG-Y100

ಸ್ಯಾಮ್‌ಸಂಗ್ AKG-Y100

ಸ್ಯಾಮ್‌ಸಂಗ್ AKG-Y100 ಹೆಡ್‌ಫೋನ್ ಇದು ನೆಕ್‌ಬ್ಯಾಂಡ್ ಡಿಸೈನ್‌ ಹೊಂದಿದ್ದು, ಮ್ಯೂಸಿಕ್ ಕೇಳಲು ಅತ್ಯುತ್ತಮ ರಚನೆ ಪಡೆದಿದೆ. ಈ ಡಿವೈಸ್‌ ಆಂಬಿಯಂಟ್ ಅವೇರ್ ಮೋಡ್ ಆಯ್ಕೆಯನ್ನು ಹೊಂದಿದ್ದು, ಬ್ಲ್ಯಾಕ್, ಬ್ಲೂ, ಪಿಂಕ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಡಿವೈಸ್‌ ಬೆಲೆಯು 6,699ರೂ.ಗಳಾಗಿದೆ.

Best Mobiles in India

English summary
The latest Samsung AKG Y100, Y500, N200, and N700NC headphones will be available via the company's e-store. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X