ಉಚಿತ ಕ್ಲೌಡ್‌ ಸ್ಟೋರೇಜ್‌ ಸ್ಥಳಾವಕಾಶಕ್ಕೆ ಕತ್ತರಿ ಹಾಕಿದ 'ಸ್ಯಾಮ್‌ಸಂಗ್‌'!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಆಂತರಿಕ ಸಂಗ್ರಹಕ್ಕೆ ಹೆಚ್ಚಿನ ಸ್ಥಳಾವಕಾಶ ಒದಗಿಸಿ ಕೊಟ್ಟರು ಗ್ರಾಹಕರಿಗೆ ಅದು ಕಡಿಮೆ ಎನಿಸುತ್ತದೆ. ಏಕೆಂದರೇ ಅಧಿಕ ಡೇಟಾ ಆಪ್‌ಗಳು ಮತ್ತು ಸಾಫ್ಟ್‌ವೇರ್‌ಗಳು ಬಹುತೇಕ ಆಂತರಿಕ ಮೆಮೊರಿಯನ್ನು ಕಬಳಿಸಿಬಿಡುತ್ತವೆ. ಹೀಗಾಗಿ ಗ್ರಾಹಕರಿಗೆ 'ಕ್ಲೌಡ್‌ ಸ್ಟೋರೇಜ್‌' ಪರ್ಯಾಯ ಆಯ್ಕೆಗೆ ಮುಂದಾಗುತ್ತಾರೆ. ಅವುಗಳಲ್ಲಿ ಸ್ಯಾಮ್‌ಸಂಗ್‌ ಸಹ ಕ್ಲೌಡ್ ಸ್ಟೋರೇಜ್‌ ಸೌಲಭ್ಯವಿದ್ದು, ಆದರೆ ಕಂಪನಿ ಇದೀಗ ಗ್ರಾಹಕರಿಗೆ ಶಾಕ್‌ ನೀಡಿದೆ.

ಉಚಿತ ಕ್ಲೌಡ್‌ ಸ್ಟೋರೇಜ್‌ ಸ್ಥಳಾವಕಾಶಕ್ಕೆ ಕತ್ತರಿ ಹಾಕಿದ 'ಸ್ಯಾಮ್‌ಸಂಗ್‌'!

ಹೌದು, ಸ್ಯಾಮ್‌ಸಂಗ್‌ ಕಂಪನಿಯು 'ಕ್ಲೌಡ್ ಸ್ಟೋರೇಜ್‌' ವ್ಯವಸ್ಥೆಯನ್ನು ತನ್ನ ಗ್ರಾಹಕರಿಗೆ ಒದಗಿಸಿದ್ದು, ಈ ಆಯ್ಕೆಯಲ್ಲಿ ಗ್ರಾಹಕರಿಗೆ ಸುಮಾರು 15GB ಸಾಮರ್ಥ್ಯದ ಉಚಿತ ಸ್ಥಳಾವಕಾಶ ಲಭ್ಯವಾಗಿತ್ತು. ಆದರೆ ಇದೀಗ ಉಚಿತ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದು, ಉಚಿತ ಸ್ಟೋರೇಜ್‌ ಸ್ಥಳವನ್ನು 15GB ಯಿಂದ ಕೇವಲ 5GBಗೆ ಇಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಇದೇ ಜೂನ್‌ ಆರಂಭದಲ್ಲಿ ಈ ವ್ಯವಸ್ಥೆ ಜಾರಿ ಆಗಲಿದೆ.

ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ! ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ಉಚಿತ ಕ್ಲೌಡ್‌ ಸ್ಟೋರೇಜ್‌ ಸ್ಥಳಾವಕಾಶಕ್ಕೆ ಕತ್ತರಿ ಹಾಕಿದ 'ಸ್ಯಾಮ್‌ಸಂಗ್‌'!

ಪೋಟೊಗಳು ಗ್ಯಾಲರಿಯಲ್ಲಿದ್ದರೇ ಅಚಾನಕ್‌ ಆಗಿ ಡಿಲೀಟ್‌ ಆಗುವ ಸಾಧ್ಯತೆಗಳಿರುತ್ತವೆ ಅದೇ ಕ್ಲೌಡ್‌ ಸ್ಟೋರೇಜ್‌ನಲ್ಲಿ ಡೇಟಾಗಳು ಹೆಚ್ಚು ಸೇಫ್‌ ಆಗಿರುತ್ತವೆ ಎನ್ನುವ ಕಾರಣಕ್ಕಾಗಿ ಗ್ರಾಹಕರು ಕ್ಲೌಡ್‌ ಸ್ಟೋರೇಜ್‌ ಸ್ಥಳಾವಕಾಶ ಬಳಸಿಕೊಳ್ಳಲು ಮುಂದಾಗುತ್ತಾರೆ. ಹಾಗಾದರೇ ಗೂಗಲ್ ಡ್ರೈವ್‌ ಸ್ಟೋರೇಜ್‌ ಮತ್ತು ಸ್ಯಾಮ್‌ಸಂಗ್‌ ಕ್ಲೌಡ್‌ ಸ್ಟೋರೇಜ್‌ ಕುರಿತು ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್‌ ಡ್ರಾಪ್ಸ್

ಸ್ಯಾಮ್‌ಸಂಗ್‌ ಡ್ರಾಪ್ಸ್

ಸ್ಯಾಮ್‌ಸಂಗ್‌ ಕಂಪನಿಯ ಅಧಿಕೃತ ಕ್ಲೌಡ್‌ ಸ್ಟೋರೇಜ್‌ ಫೀಚರ್‌ ಇದಾಗಿದ್ದು, ಗ್ರಾಹಕರಿಗೆ ಡೇಟಾಗಳನ್ನು ಸಂಗ್ರಹಿಸಲು ಉಚಿತವಾಗಿ ನಿಗದಿತ ಸ್ಥಳಾವಕಾಶವಿರುತ್ತದೆ. ಈ ಸೌಲಭ್ಯವನ್ನು ಪಡೆಯಲು ಗ್ರಾಹಕರು ಸ್ಯಾಮ್‌ಸಂಗ್‌ ಕ್ಲೌಡ್‌ ಸ್ಟೋರೇಜ್‌ ಅಕೌಂಟ್‌ ತೆರೆಯಬೇಕು ಆನಂತರದಲ್ಲಿ ಐಡಿ ಮತ್ತು ಪಾಸ್‌ವರ್ಡ್‌ಗಳಿಂದ ಲಾಗಿನ ಆಗಬಹುದು.

ಓದಿರಿ : 'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು! ಓದಿರಿ : 'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

15GB ಟು 5GB

15GB ಟು 5GB

ಸ್ಯಾಮ್‌ಸಂಗ್‌ ಕ್ಲೌಡ್‌ ಸ್ಟೋರೇಜ್‌ ಖಾತೆಯಲ್ಲಿ ಗ್ರಾಹಕರಿಗೆ ಉಚಿತವಾಗಿ 15GB ಸಾಮರ್ಥ್ಯದ ಸ್ಥಳಾವಕಾಶವನ್ನು ಒದಗಿಸಲಾಗಿತ್ತು. ಆದರೆ ಕಂನಿಯು ಇದೀಗ ಉಚಿತ ಸ್ಥಳಾವಕಾಶದಲ್ಲಿ 10GB ಕಡಿತ ಮಾಡಲಿದ್ದು, ಹೀಗಾಗಿ ಇನ್ನು ಕ್ಲೌಡ್ ಸ್ಟೋರೇಜ್‌ನಲ್ಲಿ ಗ್ರಾಹಕರಿಗೆ ಕೇವಲ 5GB ಮಾತ್ರ ಉಚಿತ ಸ್ಥಳಾವಕಾಶ ಲಭ್ಯವಾಗಲಿದೆ.

ಯಾವಾಗ ಜಾರಿ

ಯಾವಾಗ ಜಾರಿ

ಕಂಪನಿಯು ಗ್ರಾಹಕರಿಗೆ ಕ್ಲೌಡ್‌ ಸ್ಟೋರೇಜ್‌ನಲ್ಲಿ ಡೇಟಾ ಸಂಗ್ರಹಕ್ಕೆ ಕೇವಲ 5GB ಮಾತ್ರ ಉಚಿತ ಸ್ಥಳಾವಕಾಶ ನೀಡಲು ನಿರ್ಧರಿಸಿದ್ದು, ಈ ವ್ಯವಸ್ಥೆಯು ಇದೇ ಜೂನ್‌ 1ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಅಲ್ಲಿಯವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ. ಹೊಸದಾಗಿ ಸ್ಯಾಮ್‌ಸಂಗ್‌ ಅಕೌಂಟ್‌ ತೆರೆಯುವ ಬಳಕೆದಾರರಿಗೆ ಮಾತ್ರ ಈ ವ್ಯವಸ್ಥೆ ಅನ್ವಯಿಸಲಿದೆ ಎನ್ನಲಾಗಿದೆ.

ಗೂಗಲ್‌ ಡ್ರೈವ್‌

ಗೂಗಲ್‌ ಡ್ರೈವ್‌

ಗೂಗಲ್‌ ಕಂಪನಿಯು ಸಹ ಗೂಗಲ್ ಡ್ರೈವ್‌ ಹೆಸರಿನಲ್ಲಿ ಕ್ಲೌಡ್‌ ಸ್ಟೋರೇಜ್‌ ವ್ಯವಸ್ಥೆಯನ್ನು ನೀಡುತ್ತಿದ್ದು, ಪ್ರಸ್ತುತ ಉಚಿತವಾಗಿ 15GB ಸ್ಥಳಾವಕಾಶವನ್ನು ಒದಗಿಸುತ್ತಿದೆ. ಆದರೆ ಖುಷಿ ವಿಚಾರವೆನೆಂದರೇ ಗೂಗಲ್‌ ಡ್ರೈವ್ ಉಚಿತ ಸ್ಟೋರೇಜ್‌ ಸಾಮರ್ಥ್ಯವನ್ನು ಸುಮಾರು 20GBಗೆ ಹೆಚ್ಚಿಸುವ ಆಲೋಚನೆಯಲ್ಲಿದೆ ಎನ್ನಲಾಗಿದೆ.

ಓದಿರಿ : ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'! ಓದಿರಿ : ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'!

Best Mobiles in India

English summary
Samsung Cloud drops free storage from 15GB to 5GB as Google Drive grandfathers some users’ 20GB plans.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X