ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್: ಫೋನ್‌ಗಳಿಗೆ ಎಷ್ಟು ಡಿಸ್ಕೌಂಟ್‌?.ಇಲ್ಲಿದೆ ಮಾಹಿತಿ!

|

ಜನಪ್ರಿಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಫ್ಯಾಬ್‌ ಗ್ರಾಬ್‌ ಫೆಸ್ಟ್‌ ಸೇಲ್‌ ಅನ್ನು ಘೋಷಣೆ ಮಾಡಿದೆ. ಈ ಸೇಲ್‌ ಮೇ 1 ರಿಂದ ಪ್ರಾರಂಭವಾಗಲಿದ್ದು, ಸ್ಯಾಮ್‌ಸಂಗ್‌ ಉತ್ಪನ್ನಗಳ ಮೇಲೆ ಬೊಂಬಾಟ್ ಕೊಡುಗೆ ನೀಡಲಿದೆ. ಇನ್ನು ಈ ಸೇಲ್‌ನಲ್ಲಿ ದೊಡ್ಡ ಆಫರ್‌, ಲೈವ್ ಡೆಮೊ, ರಿಯಾಯಿತಿ ಗಿಫ್ಟ್‌ ವೋಚರ್‌ಗಳು ಮತ್ತು ಮೆಗಾ ಡಿಸ್ಕೌಂಟ್‌ ಅನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಸಾಧನಗಳನ್ನು ಖರೀದಿ ಮಾಡಲು ಈ ಸೇಲ್ ಬೆಸ್ಟ್‌ ಆಗಿದೆ.

ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್: ಫೋನ್‌ಗಳಿಗೆ ಎಷ್ಟು ಡಿಸ್ಕೌಂಟ್‌?

ಸ್ಯಾಮ್‌ಸಂಗ್‌ ಫ್ಯಾಬ್‌ ಗ್ರಾಬ್‌ ಫೆಸ್ಟ್‌ ಸೇಲ್‌ ಮೇ 1 ರಿಂದ ಶುರುವಾಗಲಿದೆ. ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು, ಸ್ಯಾಮ್‌ಸಂಗ್‌ ಪ್ರಾಡಕ್ಟ್‌ಗಳನ್ನು ಆಫರ್‌ನಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಸೇಲ್‌ನಲ್ಲಿ ನೀವು ಖರೀದಿಸಲು ಬಯಸುವ ಗ್ಯಾಜೆಟ್ಸ್‌ಗಳನ್ನು ಫ್ರಿ ರಿಸರ್ವ್‌ ಅನ್ನು ಕೂಡ ಘೋಷಣೆ ಮಾಡಿದೆ. ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ರಿಯಾಯಿತಿ (1000ರೂ.) ಸಿಗಲಿದೆ. ಆಯ್ದ ಮೊಬೈಲ್‌ಗಳ ಮೇಲೆ 50% ವರೆಗೆ ರಿಯಾಯಿತಿ ಸಿಗಲಿದೆ. ಹಾಗಾದರೆ ಯಾವೆಲ್ಲಾ ಸ್ಯಾಮ್‌ಸಂಗ್ ಮೊಬೈಲ್‌ಗಳು ರಿಯಾಯಿತಿ ದರದಲ್ಲಿ ಲಭ್ಯ ಆಗಲಿವೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ ಫೋನ್ 2400 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇನ್ಫಿನಿಟಿ-ಯು ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ತಂತ್ರಜ್ಞಾನ ವನ್ನು ಬೆಂಬಲಿಸುತ್ತದೆ.

ಸ್ಯಾಮ್‌ಸಂಗ್ ಫ್ಯಾಬ್ ಗ್ರಾಬ್ ಫೆಸ್ಟ್: ಫೋನ್‌ಗಳಿಗೆ ಎಷ್ಟು ಡಿಸ್ಕೌಂಟ್‌?

ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್‌ 700 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G80 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಒನ್ ಯುಐ 3.1 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್‌ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD + ಇನ್ಫಿನಿಟಿ V ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ 5nm ಎಕ್ಸಿನೋಸ್‌ ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Samsung ‘Fab Grab Fest’: Get Offers & Cashbacks on Samsung Mobiles.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X