Samsung Galaxy: ಕೇವಲ 44 ರೂ. ಗಳ ಇಎಮ್‌ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್‌!

|

ಭಾರತದಲ್ಲಿ ಈಗ ಬಹು ವೇಗವಾಗಿ 5G ಸೇವೆ ಲಭ್ಯವಾಗುತ್ತಿದೆ. ಈ 5G ಲಾಂಚ್‌ ಆಗುವ ಮುನ್ನವೇ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು 5G ಬೆಂಬಲ ಇರುವ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದವು. ವಿಷಯ ಏನೆಂದರೆ, 5G ಸೇವೆ ಏನೋ ಲಭ್ಯ ಇದೆಯಾದರೂ ಅದನ್ನು ಬಳಕೆ ಮಾಡಲು 5G ಫೋನ್‌ ಬಳಕೆ ಮಾಡುವುದು ಅನಿವಾರ್ಯ. ಆದರೆ, ತಕ್ಷಣಕ್ಕೆ ಹೆಚ್ಚಿನ ಹಣ ನೀಡಿ ಖರೀದಿ ಮಾಡಲು ಸಾಧ್ಯವಿಲ್ಲ ಎಂದಾದರೆ ಪ್ರತಿ ನಿತ್ಯ ನೀವು ತಿಂಡಿ ಹಾಗೂ ಟೀ ಕುಡಿಯಲು ಖರ್ಚು ಮಾಡುವ ಹಣವನ್ನಷ್ಟೇ ಬಳಸಿಕೊಂಡು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G (samsung galaxy a14 5g) ಸ್ಮಾರ್ಟ್‌ಫೋನ್ ಖರೀದಿಸಬಹುದು.

ಸ್ಮಾರ್ಟ್‌ಫೋನ್‌

ಹೌದು, ಭಾರತೀಯರಿಗೆ ಇದು ಖಂಡಿತಾ ಸಂತಸಡುವ ವಿಷಯ. ಭಾರತೀಯರು ಈಗ ದಿನಕ್ಕೆ ಕೇವಲ 44 ರೂ.ಗಳಲ್ಲಿ 5G ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು ಎಂದು ಪ್ರಮುಖ ಹಾಗೂ ಜನಪ್ರಿಯ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಕಂಪೆನಿ ಸ್ಯಾಮ್‌ಸಂಗ್‌ ತಿಳಿಸಿದೆ. ಹಾಗಿದ್ರೆ, ಕೇವಲ 44 ರೂ. ಗಳಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸುವುದು ಹೇಗೆ?, ಸ್ಯಾಮ್‌ಸಂಗ್‌ನ ಈ ಹೊಸ ಫೋನ್‌ ಬೆಲೆ ಎಷ್ಟು ಎಂಬ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಗ್ಯಾಲಕ್ಸಿ ಎ ಸರಣಿ ಫೋನ್‌ ಖರೀದಿಗೆ ದಿನಕ್ಕೆ 44 ರೂ. ಮೀಸಲಿಡಿ

ಗ್ಯಾಲಕ್ಸಿ ಎ ಸರಣಿ ಫೋನ್‌ ಖರೀದಿಗೆ ದಿನಕ್ಕೆ 44 ರೂ. ಮೀಸಲಿಡಿ

ಸ್ಯಾಮ್‌ಸಂಗ್ ಇಂಡಿಯಾ ಭಾರತದಲ್ಲಿ 62 ಮಿಲಿಯನ್ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್ ಗ್ರಾಹಕರನ್ನು ಹೊಂದಿದ್ದು, ಇದು ಸ್ಯಾಮ್‌ಸಂಗ್‌ಗೆ ದೊಡ್ಡ ವಿಷಯ. ಅದರಂತೆ ಈಗ ದಿನಕ್ಕೆ 44 ರೂಪಾಯಿ ಅಥವಾ ತಿಂಗಳಿಗೆ 1,320 ರೂಪಾಯಿಗಳಲ್ಲಿ ನೀವು ಇಷ್ಟ ಪಡುವ ಸ್ಯಾಮ್‌ಸಂಗ್‌ನ 5G ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡಬಹುದು. ಈ ಮೂಲಕ ಸುಲಭವಾಗಿ 5G ಅನುಭವ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌ನ ಹೊಸ ಕಾರ್ಯತಂತ್ರ ಇದು

ಸ್ಯಾಮ್‌ಸಂಗ್‌ನ ಹೊಸ ಕಾರ್ಯತಂತ್ರ ಇದು

ಹೊಸ 5G ಸ್ಮಾರ್ಟ್‌ಫೋನ್‌ಗಳ ಆರಂಭಿಕ ಬಿಡುಗಡೆಗೆ ಇದೊಂದು ದೊಡ್ಡ ಕಾರ್ಯತಂತ್ರವಾಗಿದೆ. ಈ ಮೂಲಕ ಸ್ಯಾಮ್‌ಸಂಗ್‌ ತನ್ನ ಸ್ಮಾರ್ಟ್‌ಫೋನ್ ವ್ಯವಹಾರದ 75 ಪ್ರತಿಶತವನ್ನು ಸುರಕ್ಷಿತಗೊಳಿಸಲು ಮುಂದಾಗಿದೆ ಎಂದ ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರದ ಹಿರಿಯ ನಿರ್ದೇಶಕ ಆದಿತ್ಯ ಬಬ್ಬರ್ ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್‌ಫೋನ್‌

ನಾವು ನಮ್ಮ ಗ್ರಾಹಕರಿಗೆ ಈ ಹೊಸ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ಅತ್ಯಂತ ಕಡಿಮೆ ಇಎಮ್‌ಐ ಗಳನ್ನು ನೀಡುತ್ತಿದ್ದೇವೆ. ಹೊಸದಾಗಿ ಪ್ರಾರಂಭಿಸಲಾದ ಗ್ಯಾಲಕ್ಸಿ A14 5G ಖರೀದಿಸಲು ಗ್ರಾಹಕರು ದಿನಕ್ಕೆ 44 ರೂ. ಗಳ ಆರಂಭಿಕ ಇಎಮ್‌ಐ ಆಯ್ಕೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ಯಾಲಕ್ಸಿ ಎ ಸರಣಿಗೆ ಹೆಚ್ಚು ಬೇಡಿಕೆ

ಗ್ಯಾಲಕ್ಸಿ ಎ ಸರಣಿಗೆ ಹೆಚ್ಚು ಬೇಡಿಕೆ

ಇನ್ನು ಈ ಫೋನ್‌ ವಿಚಾರದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಎಂದರೆ ಕಳೆದ ವರ್ಷ, ಗ್ಯಾಲಕ್ಸಿ ಎ ಸರಣಿಯು ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಸರಣಿಯಾಗಿದೆ.ಅಂದರೆ 10 ಮಿಲಿಯನ್ ಯೂನಿಟ್‌ಗಳಿಗಿಂತ ಹೆಚ್ಚು ಫೋನ್‌ಗಳು ಈವರೆಗೆ ತಯಾರಾಗಿವೆ. ಇದರ ನಡುವೆ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ ಅನ್ನು ಅಗ್ಗದ ದರದಲ್ಲಿ ಸ್ಯಾಮ್‌ಸಂಗ್‌ ಲಭ್ಯವಾಗಿಸುತ್ತಿದೆ.

ಗ್ಯಾಲಕ್ಸಿ ಎ ಸರಣಿ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್

ಗ್ಯಾಲಕ್ಸಿ ಎ ಸರಣಿ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್

ಸ್ಯಾಮ್‌ಸಂಗ್‌ನ ಹೊಸ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಈಗ 5G ಬೆಂಬಲ ನೀಡುವಂತೆ ತಯಾರಿಸಲಾಗುತ್ತಿದ್ದು, ಈ ಫೋನ್‌ಗಳು 6.6 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿರಲಿವೆ. ಅದರಲ್ಲೂ ಈ ಫೋನ್‌ಗಳು 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಹೊಂದಿರುವುದು ಇನ್ನಷ್ಟು ವಿಶೇಷ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  A14 5G ಬೆಲೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G ಬೆಲೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G ಗ್ಯಾಲಕ್ಸಿ ಸಿಗ್ನೇಚರ್ ವಿನ್ಯಾಸದೊಂದಿಗೆ ಪ್ಯಾಕ್‌ ಆಗಿರಲಿದ್ದು, ಈ ಫೋನ್‌ ಕಂಪೆನಿಯ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಳ್ಳಲಿದೆ. ಹಾಗೆಯೇ ಕಂಪೆನಿಯು ಈ ಫೋನ್‌ಗೆ 14,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಮತ್ತೊಂದು ಫೋನ್‌ ಆದ ಗ್ಯಾಲಕ್ಸಿ A23 5G ಫೋನ್‌ಗೂ ಹೆಚ್ಚು ಪ್ರಚಾರ ನೀಡಲಾಗುತ್ತಿದ್ದು, ಈ ಫೋನ್‌ಗೆ 20,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

Best Mobiles in India

English summary
You can buy 5G enabled smartphone for just Rs 44 per day. The company is offering the Samsung Galaxy A14 5G smartphone in this easy EMI offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X