ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ A51' ಮತ್ತು 'ಗ್ಯಾಲಾಕ್ಸಿ A71' ಬೆಲೆ ಲೀಕ್!

|

ಜನಪ್ರಿಯ ಸ್ಯಾಮ್‌ಸಂಗ್ ಇತ್ತೀಚಿಗೆ ವಿವಿಧ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಪ್ರಸಕ್ತ ವರ್ಷ 2020ರಲ್ಲಿಯೂ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವು ಸುಳಿವು ನೀಡಿದೆ. ಅದರ ಮುನ್ನುಡಿಯಾಗಿ ಈಗ ಸ್ಯಾಮ್‌ಸಂಗ್‌ನ ಬಹುನಿರೀಕ್ಷಿತ 'ಗ್ಯಾಲಾಕ್ಸಿ A51' ಮತ್ತು 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನ್‌ಗಳು ರಿಲೀಸ್‌ಗೆ ತಯಾರಾಗಿದ್ದು, ಇದೀಗ ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಮತ್ತು ಬೆಲೆಗಳು ಲೀಕ್ ಆಗಿವೆ.

ಗ್ಯಾಲಾಕ್ಸಿ A51' ಮತ್ತು 'ಗ್ಯಾಲಾಕ್ಸಿ A71

ಹೌದು, ಗ್ರಾಹಕರಲ್ಲಿ ಭಾರಿ ಕುತೂಹಲ ಮೂಡಿಸಿರುವ ಸ್ಯಾಮ್‌ಸಂಗ್ ಕಂಪನಿಯ 'ಗ್ಯಾಲಾಕ್ಸಿ A51' ಮತ್ತು 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಮತ್ತು ಬೆಲೆ ಈಗ ಲೀಕ್ ಆಗಿವೆ. ಈ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್ RAM, ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್, ಕ್ಯಾಮೆರಾ ಫೀಚರ್, ಸೇರಿದಂತೆ ಡಿಸೈನ್‌ನಿಂದಲೂ ಗ್ರಾಹಕರನ್ನು ಸೆಳೆಯುವ ಲಕ್ಷಣಗಳನ್ನು ವಿಶೇಷತೆಗಳನ್ನು ಹೊಂದಿದೆ. ಇನ್ನು ಮುಂದಿನ ವಾರ ಮಾರುಕಟ್ಟೆಗೆ ಲಾಂಚ್ ಆಗುವ ಸಾಧ್ಯತೆಗಳಿವೆ. ಹಾಗಾದರೇ ಲೀಕ್ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ A51' ಮತ್ತು 'ಗ್ಯಾಲಾಕ್ಸಿ A71' ಬೆಲೆ ಎಷ್ಟು ಮತ್ತು ಫೀಚರ್ಸ್‌ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿರಲಿದೆ

ಡಿಸ್‌ಪ್ಲೇ ಹೇಗಿರಲಿದೆ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇಯು ಸೂಪರ್ AMOLED ಇನ್‌ಫಿನಿಟಿ-O ಮಾದರಿ ಹೊಂದಿರಲಿದೆ. ಅದೇ ರೀತಿ 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನ್‌ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಡಿಸ್‌ಪ್ಲೇಯು ಸೂಪರ್ AMOLED ಮಾದರಿಯಲ್ಲಿರಲಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ 2.3GHz ವೇಗದಲ್ಲಿ Exynos 9611 ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. 8GB RAM+128GB ಆಯ್ಕೆ ಇರಲಿದ್ದು, ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸುವ ಅವಕಾಶ ಇರಲಿದೆ. ಇನ್ನು 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನಿನಲ್ಲಿ 2.2GHz ವೇಗದ ಬೆಂಬಲದೊಂದಿಗೆ ಆಕ್ಟಾ ಕೋರ್ Exynos 9611 ಪ್ರೊಸೆಸರ್ ಕೆಲಸ ಮಾಡಲಿದೆ. ಹಾಗೆಯೇ 8GB RAM+128GB ಆಯ್ಕೆ ಜೊತೆಗೆ ಬಾಹ್ಯ ಮೆಮೊರಿ ಹೆಚ್ಚಿಸುವ ಸೌಲಭ್ಯ ಇರಲಿದೆ.

ಕ್ಯಾಮೆರಾ ವಿಶೇಷತೆ ಏನು

ಕ್ಯಾಮೆರಾ ವಿಶೇಷತೆ ಏನು

ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು, ಮುಖ್ಯ ಕ್ಯಾಮೆರಾವು 487ಎಂಪಿ ಸೆನ್ಸಾರ್ ಪಡೆದಿರಲಿದೆ. ಉಳಿದಂತೆ 5ಎಂಪಿ + 12ಎಂಪಿ + 5ಎಂಪಿ ಸೆನ್ಸಾರ್‌ನ ಕ್ಯಾಮೆರಾ ಇರಲಿವೆ. ಅದೇ ರೀತಿ 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನಿನಲ್ಲಿಯೂ ಸಹ ನಾಲ್ಕು ಕ್ಯಾಮೆರಾ ಆಯ್ಕೆ ಇರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಪಡೆದಿರಲಿದೆ. ಉಳಿದ ಮೂರು ಕ್ಯಾಮೆರಾಗಳು 5ಎಂಪಿ + 12ಎಂಪಿ + 5ಎಂಪಿ ಸೆನ್ಸಾರ್‌ನಲ್ಲಿರಲಿವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನ ಬ್ಯಾಟರಿ ಸಾಮರ್ಥ್ಯವು 4,000mAh ಆಗಿರಲಿದ್ದು, ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇರಲಿದೆ. ಹಾಗೆಯೇ 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನಿನಲ್ಲಿಯೂ ಸಹ 4,000mAh - 4,500mAh ವರೆಗಿನ ಬ್ಯಾಟರಿ ಬಾಳಿಕೆ ಒದಗಿಸುವ ಸಾಧ್ಯತೆಗಳಿದ್ದು, ಫಾಸ್ಟ್‌ ಚಾರ್ಜಿಂಗ್ ಬೆಂಬಲ ಸಹ ಇರಲಿದೆ ಎನ್ನಲಾಗಿದೆ.

ಕಲರ್ ಆಯ್ಕೆ ಮತ್ತು ಬೆಲೆ

ಕಲರ್ ಆಯ್ಕೆ ಮತ್ತು ಬೆಲೆ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಫೋನ್ ಪ್ರಿಸ್ಮ್ ಕ್ರಶ್ ಬ್ಲ್ಯಾಕ್, ವೈಟ್, ಬ್ಲೂ ಮತ್ತು ಪಿಂಕ್ ಬಣ್ಣಗಳ ಆಯ್ಕೆ ಹೊಂದಿರಲಿದೆ. ಇನ್ನು ಈ ಫೋನಿನ ಆರಂಭಿಕ 6GB + 128GB ವೇರಿಯಂಟ್‌ನ ಬೆಲೆಯು 22,990ರೂ ಆಗಿರಲಿದೆ. ಅದೇ ರೀತಿ 'ಗ್ಯಾಲಾಕ್ಸಿ A71' ಸ್ಮಾರ್ಟ್‌ಫೋನ್‌ ಪ್ರಿಸ್ಮ್ ಕ್ರಶ್ ಬ್ಲ್ಯಾಕ್, ಸಿಲ್ವರ್, ಬ್ಲೂ ಮತ್ತು ಪಿಂಕ್ ಬಣ್ಣಗಳ ಆಯ್ಕೆ ಪಡೆದಿರಲಿದೆ. ಆರಂಭಿಕ 6GB + 128GB ವೇರಿಯಂಟ್ ಬೆಲೆಯು 29,990ರೂ. ಇರಲಿದೆ ಎನ್ನಲಾಗಿದೆ.

Best Mobiles in India

English summary
Samsung Galaxy A51, Galaxy A71 Smartphones price and Specification leak. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X