ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್‌ ಅನಾವರಣ! ಅತ್ಯದ್ಭುತ ಕಾರ್ಯದಕ್ಷತೆ!

|

ಸ್ಯಾಮ್‌ಸಂಗ್‌ ಕಂಪೆನಿಯ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಹಲವು ಭಿನ್ನ ಶ್ರೇಣಿಯ ಡಿವೈಸ್‌ಗಳು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಸ್ಯಾಮ್‌ಸಂಗ್‌ ಕಂಪೆನಿ ಹೊಸ ಲ್ಯಾಪ್‌ಟಾಪ್‌ ಗ್ಯಾಲಕ್ಸಿ ಬುಕ್‌ 2 Go ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ನವೀನ ಮಾದರಿಯ ತಂತ್ರಜ್ಞಾನವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸೋದು ಗ್ಯಾರಂಟಿ ಎಂದು ಹೇಳಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಸ್ನಾಪ್‌ಡ್ರಾಗನ್‌ 7c+ Gen 3 ಕಂಪ್ಯೂಟ್ ಪ್ಲಾಟ್‌ಫಾರ್ಮ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸದಾಗಿ ಗ್ಯಾಲಕ್ಸಿ ಬುಕ್‌ 2 Go ಅನಾವರಣಗೊಳಿಸಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಉನ್ನತ-ಕಾರ್ಯಕ್ಷಮತೆಯ PC ಆಗಿದೆ. ಈ ಲ್ಯಾಪ್‌ಟಾಪ್ 15.5 ಮಿಮೀ ದಪ್ಪ ಮತ್ತು 1.44 ಕೆಜಿ ತೂಕವನ್ನು ಹೊಂದಿದ್ದು, ತೆಳುವಾದ ಮತ್ತು ಹಗುರವಾಗಿದೆ. ಜೊತೆಗೆ ಲ್ಯಾಪ್‌ಟಾಪ್‌ ವೈಫೈ 6E ಮತ್ತು ಬ್ಲೂಟೂತ್ 5.2 ನೊಂದಿಗೆ ವೇಗವಾದ ವಾಯರ್‌ಲೆಸ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಗೋ ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಗೋ ಫೀಚರ್ಸ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 Go 14 ಇಂಚಿನ IPS LCD ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 180 ಡಿಗ್ರಿ ಹಿಂಜ್ ಅನ್ನು ಹೊಂದಿದೆ. ಇನ್ನು ಲ್ಯಾಪ್‌ಟಾಪ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7c+ Gen 3 ಕಂಪ್ಯೂಟ್ ಪ್ಲಾಟ್‌ಫಾರ್ಮ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಗ್ಯಾಲಕ್ಸಿ ಬುಕ್‌ ಗೋ ನಲ್ಲಿರುವ ಸ್ನಾಪ್‌ಡ್ರಾಗನ್‌ 7c Gen 2 ಪ್ರೊಸೆಸರ್‌ಗಿಂತ 40% ವೇಗದ CPU ಮತ್ತು 35% ಹೆಚ್ಚು ಶಕ್ತಿಯುತ GPU ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಲ್ಯಾಪ್‌ಟಾಪ್‌ 3,200MHz ಮತ್ತು NVMe SSD ಸ್ಟೋರೇಜ್‌ನಲ್ಲಿ LPDDR4X RAM ಅನ್ನು ಬೆಂಬಲಿಸಲಿದೆ. ಆದರೆ ಈ ಲ್ಯಾಪ್‌ಟಾಪ್‌ನ RAM, ಸ್ಟೋರೇಜ್‌ ಆಯ್ಕೆ ವಿವರ ಇನ್ನು ಕೂಡ ಬಹಿರಂಗವಾಗಿಲ್ಲ. ಜೊತೆಗೆ ಬ್ಯಾಟರಿ ಸಾಮರ್ಥ್ಯದ ವಿವರ ಕೂಡ ಬಹಿರಂಗವಾಗಿಲ್ಲ. ಈ ಲ್ಯಾಪ್‌ಟಾಪ್‌ ವೈಫೈ 6E ಮತ್ತು ಬ್ಲೂಟೂತ್ 5.2 ನೊಂದಿಗೆ ಸ್ಪೀಡ್‌ ವಾಯರ್‌ಲೆಸ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 Go ಲ್ಯಾಪ್‌ಟಾಪ್ ವಿಂಡೋಸ್ 11 ಅನ್ನು ಬಾಕ್ಸ್‌ನ ಹೊರಗೆ ರನ್ ಆಗಲಿದೆ. ಇದು ಗ್ಯಾಲಕ್ಸಿ ಬಡ್ಸ್ ಆಟೋ ಸ್ವಿಚ್, ವಿಂಡೋಸ್‌ಗೆ ಲಿಂಕ್, ಮಲ್ಟಿ ಕಂಟ್ರೋಲ್ (ಗ್ಯಾಲಕ್ಸಿ ಟ್ಯಾಬ್ಲೆಟ್), ಕ್ವಿಕ್ ಶೇರ್, ಸ್ಯಾಮ್‌ಸಂಗ್ ನೋಟ್ಸ್‌ ಮತ್ತು ಸೆಕೆಂಡ್‌ ಸ್ಕ್ರೀನ್‌ನಂತಹ ಗ್ಯಾಲಕ್ಸಿ ಎಕೋ ಸಿಸ್ಟಂ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದನ್ನು MIL-STD-810G ಸ್ಪೆಕ್‌ನೊಂದಿಗೆ ನಿರ್ಮಿಸಲಾಗಿದೆ ಅದು ಸಾಕಷ್ಟು ಬಾಳಿಕೆ ಬರುವಂತೆ ಮಾಡುತ್ತದೆ. ಈ ಲ್ಯಾಪ್‌ಟಾಪ್‌ ಇದೇ ಜನವರಿ 20 ರಂದು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟವಾಗಲಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಹೊಸ ಗ್ಯಾಲಕ್ಸಿ ಬುಕ್‌ 2 ಪ್ರೊ 360 ಲ್ಯಾಪ್‌ಟಾಪ್‌ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ ಸಿಂಗಲ್‌ ಚಾರ್ಜ್‌ನಲ್ಲಿ 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಲ್ಯಾಪ್‌ಟಾಪ್ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಒಳಗೊಂಡಂತೆ ಅನೇಕ ಪೋರ್ಟ್‌ಗಳನ್ನು ಆಫರ್‌ನಲ್ಲಿ ಹೊಂದಿದೆ.

Best Mobiles in India

English summary
Samsung Galaxy Book 2 Go launched: Details Here

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X