ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ತನಿಖೆ ಅಂತ್ಯ: ಸಂಶೋಧನೆ ಹೇಳಿದ್ದೇನು?

By Suneel
|

ದೀರ್ಘ ಸಮಯಗಳ ನಂತರ, ಸ್ಯಾಮ್‌ಸಂಗ್ ತನ್ನ 'ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳಲು ಮೂಲ ಕಾರಣಗಳ ತನಿಖೆಯನ್ನು ಅಂತ್ಯಗೊಳಿಸಿದೆ. ದಕ್ಷಿಣ ಕೊರಿಯಾ ಸ್ಮಾರ್ಟ್‌ಫೋನ್‌ ತಯಾರಕ ದೈತ್ಯ ಕಂಪನಿ ಸ್ಫೋಟಗೊಳ್ಳಲು ಕಾರಣವಾದ ಅಂಶಗಳನ್ನು ಕೊರಿಯಾ ಟೆಸ್ಟಿಂಗ್ ಲ್ಯಾಬೋರೇಟರಿ, ಯುಎಲ್‌(ಅಮೆರಿಕ ಸುರಕ್ಷತಾ ಸಂಸ್ಥೆ) ಮತ್ತು ಇತರೆ ನಿಯಂತ್ರಣ ಸಂಸ್ಥೆಗಳಿಗೆ ನೀಡಿದೆ.

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ತನಿಖೆ ಅಂತ್ಯ: ಸಂಶೋಧನೆ ಹೇಳಿದ್ದೇನು?

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ನೋಟ್ 7 ಡಿವೈಸ್ ಸ್ಫೋಟಗೊಳ್ಳಲು ಕಾರಣಗಳ ಆಂತರಿಕ ತನಿಖೆಯನ್ನು ಪೂರ್ಣಗೊಳಿಸಿದ್ದು, ಇದರ ಸಂಶೋಧನೆ ಅಂಶಗಳನ್ನು ಹೊರಗಿನ ಲ್ಯಾಬೋರೇಟರಿಗಳಿಗೆ ವರದಿ ಮಾಡಿದೆ. ಆದರೆ ಸಂಶೋಧನೆಯಿಂದ ಕಂಡುಬಂದ ಅಂಶಗಳನ್ನು ಸಾರ್ವಜನಿಕರಿಗೆ ಹಾಗೂ ಯಾವುದೇ ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ ಎಂದು ಹೂಡಿಕೆದಾರರು ವರದಿ ನೀಡಿದ್ದಾರೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಫೋಟಕ್ಕೆ ಕಾರಣವು, ಸ್ಪೋಟಗೊಂಡ ಎಲ್ಲಾ ಡಿವೈಸ್‌ಗಳ ಕಾರಣದಿಂದ ಈ ವರದಿ ದೀರ್ಘ ಕಾಲ ಹಾಗೆ ಉಳಿದಿತ್ತು ಎನ್ನಲಾಗಿದೆ.

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ತನಿಖೆ ಅಂತ್ಯ: ಸಂಶೋಧನೆ ಹೇಳಿದ್ದೇನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಫೋಟ, ವಿಮಾನದಲ್ಲಿ ಡಿವೈಸ್ ಬ್ಯಾನ್

ಈ ಹಿಂದೆ ಮೂರನೇ ತನಿಖಾ ತಂಡದವರು, ಸಣ್ಣ ಫ್ರೇಮ್‌ನ ಡಿವೈಸ್‌ ಒಳಗೆ ಹಲವು ವೈಶಿಷ್ಟಗಳನ್ನು ವ್ಯವಸ್ಥೆಗೊಳಿಸುವುದರಿಂದ, ಬ್ಯಾಟರಿ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಅಲ್ಲದೇ ವಿಸ್ತರಿಸಲು ಯಾವುದೇ ಉಚಿತ ಆಪ್ಶನ್‌ಗಳು ಇರುವುದಿಲ್ಲ. ಇಂತಹ ಸಮಯದಲ್ಲಿ ಬ್ಯಾಟರಿ ಸ್ಫೋಟಗೊಳ್ಳುತ್ತದೆ ಎಂದು ಸಲಹೆ ನೀಡಿದ್ದರು.

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ತನಿಖೆ ಅಂತ್ಯ: ಸಂಶೋಧನೆ ಹೇಳಿದ್ದೇನು?

ಸ್ಮಾರ್ಟ್‌ಫೋನ್‌ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?

ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ನಿಮಿತ್ತ ಎಲ್ಲಾ ಡಿವೈಸ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿತ್ತು. ಅಲ್ಲದೇ ವಿವರಿಸಲಾಗದ ಸ್ಫೋಟಗಳು ಸಹ ಕಂಡುಬಂದಿದ್ದವು. ಒಂದು ಜೀಪ್ ಬೆಂಕಿಗೆ ಆಹುತಿಯಾಗಿತ್ತು, ತನ್ನ ರೂಮ್‌ನಲ್ಲಿ 'ಗ್ಯಾಲಕ್ಸಿ ನೋಟ್ 7' ಡಿವೈಸ್‌ ಸ್ಫೋಟದಿಂದ ಆದ ಹಾನಿಗೆ ವ್ಯಕ್ತಿಯೊಬ್ಬ ಪೂರ್ಣ ಹೋಟೆಲ್‌ ಬಿಲ್‌ ಅನ್ನು ಪಾವತಿಸಿದ್ದ. ಅಲ್ಲದೇ ಹಲವು ಅಪಾಯಕಾರಿ ಪರಿಣಾಮಗಳು ಈ ಡಿವೈಸ್‌ನಿಂದ ಉಂಟಾಗಿದ್ದವು.

'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ವಿಮಾನಗಳಲ್ಲಿ ಬ್ಯಾನ್: 5 ಅಘಾತಕಾರಿ ವಿಷಯಗಳು!

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ತನಿಖೆ ಅಂತ್ಯ: ಸಂಶೋಧನೆ ಹೇಳಿದ್ದೇನು?

ಅಂದಹಾಗೆ ಸ್ಯಾಮ್‌ಸಂಗ್ ಈಗ ತನ್ನ ಗ್ಯಾಲಕ್ಸಿ ಎಸ್‌8 ಮೂಲಕ, ಗ್ಯಾಲಕ್ಸಿ ನೋಟ್ 7(Samsung Galaxy Note 7) ಡಿವೈಸ್‌ನಿಂದ ಆದ ಹಾನಿಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ. ಗ್ಯಾಲಕ್ಸಿ ಎಸ್‌8 ಅನ್ನು 2017 ರ ಫೆಬ್ರವರಿಯಲ್ಲಿ ಲಾಂಚ್‌ ಮಾಡಲು ಪ್ಲಾನ್‌ ಮಾಡಿದೆ. ಇದರಲ್ಲಿ 3.5mm ಆಡಿಯೋ ಜಾಕ್‌ ಮತ್ತು ಹೋಮ್ ಬಟನ್‌ ನೀಡಲು ಹೊರಟಿದೆ. ಸ್ಮಾರ್ಟ್‌ಫೋನ್ ಆಟೋಫೋಕಸ್ ಫೀಚರ್‌ನ ಸೆಲ್ಫಿ ಕ್ಯಾಮೆರಾ ನೀಡವು ನಿರೀಕ್ಷೆ ಇದೆ. ಅಲ್ಲದೇ 6GB RAM ಜೊತೆಗೆ 256GB ಇನ್‌ಬಿಲ್ಟ್ ಸ್ಟೋರೇಜ್‌ ಹೊಂದಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Samsung Galaxy Note 7 Explosion Investigation Completed, Findings Submitted to Regulators: Report. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X