3 ಜಿಬಿ RAM ಉಳ್ಳ ಸ್ಯಾಮ್‌ಸಂಗ್ ಆನ್7

By Shwetha
|

ಇತ್ತೀಚೆಗೆ ತಾನೇ ಸ್ಯಾಮ್‌ಸಂಗ್ ಆನ್ 7 ಪ್ರೊ ಮತ್ತು ಆನ್ 5 ಪ್ರೊವನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಆನ್ 7 ಡಿವೈಸ್‌ನ ಇನ್ನೊಂದು ಅವತರಣಿಕೆಯನ್ನು ಕಂಪೆನಿ ಲಾಂಚ್ ಮಾಡುತ್ತಿದ್ದು ಮೂಲಗಳ ಪ್ರಕಾರ ಇದು 3 ಜಿಬಿ RAM ಅನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ 7 ಕೂಡ 3 ಜಿಬಿ RAM ಅನ್ನು ಒಳಗೊಂಡಿದ್ದು, 13 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 8 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ.

ಓದಿರಿ: ವಾಟ್ಸಾಪ್ ಚಾಟ್ ಮರೆಮಾಡುವುದು ಹೇಗೆ?

ಡಿವೈಸ್ 4.8 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಮಾರುಕಟ್ಟೆಯಲ್ಲಿ 5.5 ಇಂಚಿನ ಡಿಸ್‌ಪ್ಲೇಯೊಂದಿಗೆ ದೊರೆಯುತ್ತಿದೆ. ಬಳಕೆದಾರರಿಗೆ ಅನುಕೂಲಕರವಾಗಿರುವ ವಿಧಾನದಲ್ಲೇ ಸ್ಯಾಮ್‌ಸಂಗ್ ಡಿವೈಸ್ ಅನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಡಿವೈಸ್ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಓದಿರಿ: ಆಂಡ್ರಾಯ್ಡ್ ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?

ಕೋಡ್‌ನೇಮ್ SM-G610F

ಕೋಡ್‌ನೇಮ್ SM-G610F

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 (2016) ಕೋಡ್‌ನೇಮ್ SM-G610F ಎಂಬುದಾಗಿ ಪಡೆದುಕೊಂಡಿದ್ದು, 7870 ಪ್ರೊಸೆಸರ್ ಅನ್ನು ಹೊಂದಿದೆ. ಡಿವೈಸ್ ಭಾರತಕ್ಕೆ ತಲುಪಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಎಕ್ಸೋನಸ್ ಚಿಪ್‌ಸೆಟ್

ಎಕ್ಸೋನಸ್ ಚಿಪ್‌ಸೆಟ್

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಚೀನಾದಲ್ಲಿ ಮಾತ್ರವೇ ಬಿಡುಗಡೆಯಾಗಿರಬಹುದು. ಗ್ಯಾಲಕ್ಸಿ ಆನ್7 ನಿಂದ ಪ್ರಾರಂಭವಾಗಿ ಹೆಚ್ಚಿನ ಡಿವೈಸ್‌ಗಳಿಗೆ ಕಂಪೆನಿ ಎಕ್ಸೋನಸ್ ಚಿಪ್‌ಸೆಟ್ ಅನ್ನು ವಿಸ್ತರಿಬಹುದಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್

ಫಿಂಗರ್ ಪ್ರಿಂಟ್ ಸ್ಕ್ಯಾನರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಕೂಡ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಒದಗಿಸುತ್ತಿರುವ ಮಧ್ಯಮ ಕ್ರಮಾಂಕದ ಡಿವೈಸ್ ಇದಾಗಿದೆ.

15,000

15,000

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಭಾರತದಲ್ಲಿ ರೂ 15,000 ಕ್ಕೆ ದೊರೆಯಬಹುದಾಗಿದೆ. ಭಾರತದಲ್ಲಿ ಇದು ಉತ್ತಮ ಮಾರುಕಟ್ಟೆಯನ್ನು ಗಳಿಸಿಕೊಳ್ಳಬಹುದಾಗಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಮತ್ತು ಆನ್5 ವಿಶೇಷವಾಗಿ ಫ್ಲಿಪ್‌ಕಾರ್ಟ್‌ನಲ್ಲೇ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿವೆ.

ಎಲ್‌ಇಡಿ ರಿಂಗ್

ಎಲ್‌ಇಡಿ ರಿಂಗ್

ಸ್ಯಾಮ್‌ಸಂಗ್ ಇತ್ತೀಚೆಗೆ ತಾನೇ ಗ್ಯಾಲಕ್ಸಿ ಜೆ2 ವನ್ನು ಲಾಂಚ್ ಮಾಡಿದ್ದು ಇದು ಅನನ್ಯ ಫೀಚರ್‌ಗಳನ್ನು ಪಡೆದುಕೊಂಡಿದೆ. ರಿಯರ್ ಕ್ಯಾಮೆರಾದ ಸುತ್ತಲೂ ಇದು ಎಲ್‌ಇಡಿ ರಿಂಗ್ ಅನ್ನು ಪಡೆದುಕೊಂಡಿದ್ದು ವಿವಿಧ ರೀತಿಯ ಅಧಿಸೂಚನೆಗಳನ್ನು ಒದಗಿಸಲಿದೆ.

Best Mobiles in India

English summary
Samsung, which recently announced On7 Pro and On5 Pro in India, is likely developing another variant of the On7 device. The smartphone spotted on benchmarking website Geekbench suggests the device will feature 3GB RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X