India

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್ 2' ಲಾಂಚ್!..ಸೂಪರ್‌ ಫೀಚರ್ಸ್‌!

|

ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಜನಪ್ರಿಯ 'ಸ್ಯಾಮ್‌ಸಂಗ್' ಕಂಪನಿಯು 'ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್' ಸರಣಿ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆದುಕೊಂಡಿದೆ. ಇದೀಗ ಕಂಪನಿಯು ಅದೇ ಸರಣಿಯಲ್ಲಿ ಆಕ್ಟಿವ್ ವಾಚ್ 2' ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಡಿವೈಸ್‌ ಅತ್ಯುತ್ತಮ ಫಿಟ್ನೆಸ್‌ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುವ ಲಕ್ಷಣ ಹೊರಹಾಕಿದೆ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್ 2' ಲಾಂಚ್!..ಸೂಪರ್‌ ಫೀಚರ್ಸ್‌!

ಹೌದು, ಸ್ಯಾಮ್‌ಸಂಗ್ ಕಂಪನಿಯು ಹೊಸದಾಗಿ 'ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್ 2' ಅನ್ನು ಇದೇ ಅಗಷ್ಟ5 ರಂದು ಲಾಂಚ್‌ ಮಾಡಿದೆ. ಈ ಡಿವೈಸ್‌ 40mm ಮತ್ತು 44mm ಮಾದರಿಯ ಎರಡು ವೇರಿಯಂಟ್‌ಗಳ ಆಯ್ಕೆಯನ್ನು ಹೊಂದಿದ್ದು, ಜೊತೆಗೆ ಆಕ್ಟಿವಿಟಿಗಳನ್ನು ಆಟೋಮ್ಯಾಟಿಕ್ ಟ್ರಾಕಿಂಗ್ ಸೌಲಭ್ಯ, ವಾಯಿಸ್‌ ಕರೆಗಳ ಬೆಂಬಲ, ರೌಂಡ್‌ ಬೆಜಲ್ ಟಚ್ ಸೆನ್ಸಾರ್‌ ಪಡೆದುಕೊಂಡಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಆಕ್ಟಿವ್ 2 ವಾಚ್‌ಹೊಂದಿರುವ ಇನ್ನಿತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಲೈಕ್ ಪಡೆಯಬೇಕೆ?..ಹೀಗೆ ಮಾಡಿ!ಓದಿರಿ : ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಲೈಕ್ ಪಡೆಯಬೇಕೆ?..ಹೀಗೆ ಮಾಡಿ!

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಅಲ್ಯೂಮಿನಿಯಮ್ ಮತ್ತು ಸ್ಟೈನ್‌ಲೆಸ್‌ ಸ್ಟಿಲ್ ಮಾದರಿಯ ರಚನೆ ಇದ್ದು, 40mm ವೇರಿಯಂಟ್ ವಾಚ್‌ 1.2 ಇಂಚಿನ ಮತ್ತು 44mm ವೇರಿಯಂಟ್‌ ವಾಚ್‌1.4 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 360 x 360 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಸ್ಕ್ರೀನ್‌ನ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌DX+ ನೀಡಲಾಗಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್ 2 ಡಿವೈಸ್‌ ಸ್ಯಾಮ್‌ಸಂಗ್ Exynos 9110 ಪ್ರೊಸೆಸರ್‌ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 1.5GB RAM ಸಾಮರ್ಥ್ಯದೊಂದಿಗೆ ಹೊಂದಿದ್ದು, 4GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಹಾಗೆಯೇ ರೌಂಡ್‌ ಬೆಜಲ್‌ನಲ್ಲಿ ಟಚ್ ಸೆನ್ಸಾರ್‌ ಆಯ್ಕೆ ಇದ್ದು, UI ನಾವಿಗೇಶನ್ ಸಪೋರ್ಟ್‌ ಸಹ ಒಳಗೊಂಡಿದೆ.

ಓದಿರಿ : 'ಟಿಕ್‌ಟಾಕ್'‌ ಆಪ್‌ ಮೂಲಕ ಹಣ ಗಳಿಸಬಹುದು!..ಹೇಗೆ ಗೊತ್ತಾ?ಓದಿರಿ : 'ಟಿಕ್‌ಟಾಕ್'‌ ಆಪ್‌ ಮೂಲಕ ಹಣ ಗಳಿಸಬಹುದು!..ಹೇಗೆ ಗೊತ್ತಾ?

ಫಿಟ್ನೆಸ್‌ ಫೀಚರ್ಸ್‌

ಫಿಟ್ನೆಸ್‌ ಫೀಚರ್ಸ್‌

ಸೈಕ್ಲಿಂಗ್, ಸ್ವಿಮ್ಮಿಂಗ್, ರನ್ನಿಂಗ್ ಮತ್ತು ನಡಿಗೆ, ಸೇರಿದಂತೆ ಸುಮಾರು 39 ಆಕ್ಟಿವಿಟಿಗಳನ್ನು ನಿಯಮಿತವಾಗಿ ಟ್ರಾಕ್ ಮಾಡುವ ಸೌಲಭ್ಯವನ್ನು ಹೊಂದಿದೆ. ಜೊತೆಗೆ ಹಾರ್ಟ್‌ ರೇಟ್, ECG ಸೆನ್ಸಾರ್, ಆಕ್ಸಿಲರೋಮೀಟರ್, ಬಾರೊಮೀಟರ್, ಗೈರೋಸ್ಕೋಪ್, ಲೈಟ್‌ ಆಂಬಿಯಂಟ್ ಸೆನ್ಸಾರ್‌ನಂಹತ ಅಗತ್ಯ ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ. ಸ್ಪಾಟಿಫೈ ಬೆಂಬಲ ಸಹ ಇದೆ.

ಬ್ಯಾಟರಿ ಮತ್ತು ಬಣ್ಣಗಳ ಆಯ್ಕೆ

ಬ್ಯಾಟರಿ ಮತ್ತು ಬಣ್ಣಗಳ ಆಯ್ಕೆ

ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್ 2 ಡಿವೈಸ್‌ 340mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಪವರ್‌ಶೇರ್‌ ಫೀಚರ್ಸ್‌ನಿಂದ ವಾಯರ್‌ಲೆಸ್‌ ಚಾರ್ಜ್ ಮಾಡುವ ಸೌಲಭ್ಯದ ಆಯ್ಕೆ ಸಹ ಒಳಗೊಂಡಿದೆ. ಸಿಲ್ಚರ್, ಬ್ಲ್ಯಾಕ್ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಫ್ಲೋರೋಎಲ್ಯಾಸ್ಟೊಮರ್(FKM) ವಾಚ್ ಸ್ಟ್ರಿಪ್ ಮಾದರಿ ಆಯ್ಕೆ ಸಹ ಇದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗ್ಯಾಲ್ಯಾಕ್ಸಿ ಆಕ್ಟಿವ್ ವಾಚ್ 2 ಡಿವೈಸ್‌ ಎರಡು ವೇರಿಯಂಟ್ ಮಾದರಿಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 40mm ಮತ್ತು 44mm ಆಗಿವೆ. ಯುಎಸ್‌ನಲ್ಲಿ ಸೆಪ್ಟಂಬರ್ 26ರಂದು ಸೇಲ್ ಆರಂಭಿಸಲಿದ್ದು, ಆದರೆ ಪ್ರೀ ಆರ್ಡರ್‌ಗೆ ಅವಕಾಶ ನೀಡಲಾಗಿದೆ. 40mm ವೇರಿಯಂಟ್ ಬೆಲೆಯು $279.99 (ಅಂದಾಜು 20,000ರೂ) ಹಾಗೂ 44mm ವೇರಿಯಮಟ್ ಬೆಲೆಯು $299.99 (ಅಂದಾಜು 21,000ರೂ).

ಓದಿರಿ : ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇಲ್‌ ಹೆಚ್ಚಳ!.ಈ ಫೋನ್‌ಗಳು ಮುಂದಿವೆ!ಓದಿರಿ : ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇಲ್‌ ಹೆಚ್ಚಳ!.ಈ ಫೋನ್‌ಗಳು ಮುಂದಿವೆ!

Most Read Articles
Best Mobiles in India

English summary
Samsung Galaxy Watch Active 2 pre-orders will be rewarded with a free wireless charger portable battery. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X