'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ?

|

ಸ್ಮಾರ್ಟ್‌ಟಿವಿ ವಲಯದಲ್ಲಿ ಈಗಾಗಲೇ ಹಲವು ಸಂಚಲನ ಸೃಷ್ಠಿಸಿರೊ ಸ್ಯಾಮ್‌ಸಂಗ್‌ ಕಂಪನಿಯ ಇದೀಗ ಮತ್ತೊಂದು ಅಚ್ಚರಿಯನ್ನು ಹೊರಹಾಕಿದೆ. ವಿಶ್ವದ ಮೊದಲ QLED 8K ಸ್ಮಾರ್ಟ್‌ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇಡೀ ಟಿವಿ ಮಾರುಕಟ್ಟೆಯೇ ಸ್ಯಾಮ್‌ಸಂಗ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ಈ ಮೂಲಕ ದೇಶಿಯ ಸ್ಮಾರ್ಟ್‌ಟಿವಿ ಕ್ಷೇತ್ರದಲ್ಲಿ ಹೊಸ ಹೆಗ್ಗುರುತನ್ನು ಮೂಡಿಸಿದೆ.

'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ?

ಹೌದು, ಸ್ಯಾಮ್‌ಸಂಗ್‌ ಇದೇ ನೊದಲ ಬಾರಿಗೆ QLED 8K ಗುಣಮಟ್ಟದ ಸ್ಮಾರ್ಟ್‌ಟಿವಿ ಸರಣಿಯನ್ನು ಭಾರತದಲ್ಲಿ ಲಾಂಚ್‌ ಮಾಡಿದ್ದು, ಡಿಸ್‌ಪ್ಲೇ ಮತ್ತು ಸೌಂಡ್‌ ಕ್ವಾಲಿಟಿ ಗ್ರಾಹಕರನ್ನು ಟಿವಿ ವೀಕ್ಷಣೆಯಲ್ಲಿ ತಲ್ಲಿನಗೊಳಿಸಲಿದೆ. ಈ QLED 8K ಸ್ಮಾರ್ಟ್‌ಟಿವಿ ಸರಣಿಯು 8K ರೆಸಲ್ಯೂಶನ್, 8K AI, ಕ್ವಾಂಟಮ್ ಪ್ರೊಸೆಸರ್‌ ಮತ್ತು ಕ್ವಾಂಟಮ್ ಎಚ್‌ಆರ್‌ಡಿ ಆಯ್ಕೆಗಳಂತಹ ಉನ್ನತ ಸೌಲಭ್ಯಗಳನ್ನು ಒಳಗೊಂಡಿದೆ.

'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ?

ಒಟ್ಟು ನಾಲ್ಕು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 98, 82, 75 ಮತ್ತು 65 ಇಂಚಿನ ಸಾಮರ್ಥ್ಯದಲ್ಲಿವೆ. ಈ ಸ್ಮಾರ್ಟ್‌ಟಿವಿ ಸರಣಿ ಆರಂಭಿಕ ಬೆಲೆಯು 10,99,900ರೂ.ಗಳು ಆಗಿದೆ. ಹಾಗಾದರೇ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿರುವ ವಿಶ್ವದ ಮೊದಲ QLED 8K ಸ್ಮಾರ್ಟ್‌ಟಿವಿ ಸರಣಿ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

8K ರೆಸಲ್ಯೂಶನ್‌

8K ರೆಸಲ್ಯೂಶನ್‌

8K ರೆಸಲ್ಯೂಶನ್‌ ಅಂದರೇ ಡಿಸ್‌ಪ್ಲೇಯ ರಚನೆಯಲ್ಲಿ ಸುಮಾರು 33 ಮಿನಿಯನ್‌ ಪಿಕ್ಸಲ್‌ ಗುಚ್ಛಗಳ ಸಂಯೋಜನೆ ಆಗಿರುತ್ತದೆ. ರೆಸಲ್ಯೂಶನ್‌ ಮಟ್ಟ ಹೇಗಿರುತ್ತದೆಂದರೇ 4K UHD ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇ ಗಳಿಗಿಂತ 4 ಪಟ್ಟು ಹೆಚ್ಚು ರೆಸಲ್ಯೂಶನ, ಮತ್ತು ಫುಲ್‌ ಹೆಚ್‌ಡಿ ಸ್ಮಾರ್ಟ್‌ಟಿವಿಯ ರೆಸಲ್ಯೂಶನ್‌ನ 16 ಪಟ್ಟು ಹೆಚ್ಚಿನ ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುತ್ತದೆ.

ನಾಲ್ಕು ವೇರಿಯಂಟ್ಸ್‌

ನಾಲ್ಕು ವೇರಿಯಂಟ್ಸ್‌

ಸ್ಯಾಮ್‌ಸಂಗ್‌ ಮೊದಲ ಬಾರಿಗೆ 8K ರೆಸಲ್ಯೂಶನ್‌ ಸ್ಮಾರ್ಟ್‌ಟಿವಿ ಸರಣಿಯನ್ನು ಪರಿಚಯಿಸಿದ್ದು, ಈ ಸರಣಿಯಲ್ಲಿ ಒಟ್ಟು ನಾಲ್ಕು ವೇರಿಯಂಟ್‌ಗಳನ್ನು ಲಾಂಚ್‌ ಮಾಡಿದೆ. ಅವುಗಳು ಕ್ರಮವಾಗಿ 98-ಇಂಚು (247 cm), 82 ಇಂಚು(207 cm), 75-ಇಂಚು (189cm) ಮತ್ತು 65-ಇಂಚು (163 cm) ಸಾಮರ್ಥ್ಯದ ಆಯ್ಕೆಯಲ್ಲಿವೆ.

8K AI ತಂತ್ರಜ್ಞಾನ

8K AI ತಂತ್ರಜ್ಞಾನ

ಸ್ಯಾಮ್‌ಸಂಗ್‌ನ QLED 8K ಸ್ಮಾರ್ಟ್‌ಟಿವಿ ಸರಣಿಯ 8K AI ಮತ್ತು ಕ್ವಾಂಟಮ್ ಪ್ರೊಸೆಸರ್ ಅನ್ನು ಹೊಂದಿದ್ದು, ಹೀಗಾಗಿ ವೀಕ್ಷಣೆಯ ಗುಣಮಟ್ಟವು ಅದ್ಭುತವಾಗಿರುತ್ತದೆ. ಗ್ರಾಹಕರು HDMI, USB ಮತ್ತು ಸೆಟ್‌ಅಪ್‌ ಬಾಕ್ಸ್‌ ಸಾಧನಗಳಿಂದ ಕನೆಕ್ಟ್ ಮಾಡಿ ಟಿವಿ ವೀಕ್ಷಿಸಿದಾಗಲೂ 8K AI ತಂತ್ರಜ್ಞಾನವು ದೃಶ್ಯಗಳ ಗುಣಮಟ್ಟವನ್ನು ರೆಸಲ್ಯೂಶನ್‌ಗೆ ಬದಲಿಸಿಕೊಳ್ಳುತ್ತದೆ.

ವಾಯಿಸ್‌ ಕಮಾಂಡ್‌

ವಾಯಿಸ್‌ ಕಮಾಂಡ್‌

ಸ್ಯಾಮ್‌ಸಂಗ್‌ನ ಈ ಹೊಸ ಸ್ಮಾರ್ಟ್‌ಟಿವಿ ಸರಣಿಯು ಬಿಕ್ಸ್ಬಿ 2.0 ಮತ್ತು ಗೂಗಲ್‌ ಅಸಿಸ್ಟಂಟ್‌ ಬೆಂಬಲ ಪಡೆದಿದ್ದು, ವಾಯಿಸ್‌ ಮೂಲಕವೇ ಸ್ಮಾರ್ಟ್‌ಟಿವಿಯನ್ನು ನಿಯಂತ್ರಿಸುವ ಸೌಲಭ್ಯ ಇದೆ. ಅದರೊಂದಿಗೆ ಆಪಲ್ ಏರ್‌ಪ್ಲೇ 2 ಆಯ್ಕೆಯನ್ನು ಒಳಗೊಂಡಿದ್ದು, ಆಂಬಿಯಂಟ್‌ ಮೋಡ್‌ ಆಯ್ಕೆ ಸಹ ಈ ಸರಣಿಯಲ್ಲಿ ಕಾಣಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ QLED 8K ಸ್ಮಾರ್ಟ್‌ಟಿವಿ ಸರಣಿಯು ನಾಲ್ಕು ವೇರಿಯಂಟ್‌ ಅನ್ನು ಹೊಂದಿದೆ. ಅದರಲ್ಲಿ 98-ಇಂಚಿನ ವೇರಿಯಂಟ್ ಬೆಲೆಯು 59,99,900ರೂ, 82 ಇಂಚಿನ ಸ್ಮಾರ್ಟ್‌ಟಿವಿ ಬೆಲೆಯು 16,99,900ರೂ. ಮತ್ತು 75-ಇಂಚಿನ ವೇರಿಯಂಟ್ ಬೆಲೆಯು 10,99,900ರೂ. ಆಗಿದೆ. ಇದೇ ಜುಲೈ ತಿಂಗಳಿನಲ್ಲಿ ಸೇಲ್‌ ಆರಂಭಿಸಲಿದೆ ಎನ್ನಲಾಗಿದೆ.

Best Mobiles in India

English summary
Samsung India on Tuesday announced the launch of the "world's first QLED 8K TV" in the country, the Samsung QLED 8K TV. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X