ಆಪಲ್‌ ಫೋನ್‌ಗೆ ಸ್ಯಾಮ್‌ಸಂಗ್‌ ಅಗ್ರಗಣ್ಯ ಡಿಸ್‌ಪ್ಲೇ ಪೂರೈಕೆದಾರ!?

|

ಮಾರುಕಟ್ಟೆಯಲ್ಲಿ ಐಫೋನ್‌ ಬಳಕೆ ಹೆಚ್ಚಾಗುತ್ತಿದೆ. ಈ ಫೋನ್‌ನ ಕಾರ್ಯಕ್ಷಮತೆ ಬಳಕೆದಾರರನ್ನು ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ. ಹಾಗೆಯೇ ಐಫೋನ್‌ನಲ್ಲಿ ವಿಡಿಯೋ ನೋಡುವಾಗ ಅಥವಾ ಫೋಟೋಗಳನ್ನು ಸೆರೆ ಹಿಡಿಯುವಾದ ವಿಶೇಷ ಅನುಭವ ಸಿಗಲಿದ್ದು, ಇದಕ್ಕೆ ಸ್ಯಾಮ್‌ಸಂಗ್‌ ಕೂಡ ಪ್ರಮುಖ ಕಾರಣ ಎಂದು ಹೇಳಬಹುದು.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ಐಫೋನ್‌ ರೀತಿಯಲ್ಲೇ ಸ್ಯಾಮ್‌ಸಂಗ್ ಫೋನ್‌ಗಳಿಗೂ ಸಹ ಬೇಡಿಕೆ ಇದೆ. ಆದರೆ, ಲಕ್ಷಾಂತರ ಯೂನಿಟ್‌ಗಳ ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಇತರ ಡಿವೈಸ್‌ಗಳನ್ನು ಉತ್ಪಾದಿಸಲು ಆಪಲ್‌ ಹಲವಾರು ಉಪಕರಣ ಪೂರೈಕೆದಾರರನ್ನು ಅವಲಂಭಿಸಿದ್ದು, ಅದರಲ್ಲಿ ಸ್ಯಾಮ್‌ಸಂಗ್‌ ಮೊದಲ ಸ್ಥಾನದಲ್ಲಿದೆ.

ಐಫೋನ್‌ಗಳ ಡಿಸ್‌ಪ್ಲೇ ಗಳು ಬಹುಪಾಲು ಸ್ಯಾಮ್‌ಸಂಗ್‌ ಕಂಪೆನಿಯವು

ಐಫೋನ್‌ಗಳ ಡಿಸ್‌ಪ್ಲೇ ಗಳು ಬಹುಪಾಲು ಸ್ಯಾಮ್‌ಸಂಗ್‌ ಕಂಪೆನಿಯವು

ಆಪಲ್‌ ತನ್ನ ಐಫೋನ್‌ಗಳಿಗಾಗಿ OLED ಡಿಸ್‌ಪ್ಲೇ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾ ಬರುತ್ತಿದೆ. ಈ ಸಂಬಂಧ ವರದಿಯೊಂದು ಹೊರಬಿದ್ದಿದ್ದು, ಅದರ ಪ್ರಕಾರ ಐಫೋನ್ ತಯಾರಕರಿಗೆ ದೊಡ್ಡ OLED ಡಿಸ್‌ಪ್ಲೇ ಪೂರೈಕೆದಾರರಾಗಿ ಸ್ಯಾಮ್‌ಸಂಗ್‌ ಮೊದಲ ಸ್ಥಾನ ಪಡೆಯಬಹುದು ಎಂದು ತಿಳಿದುಬಂದಿದೆ.

70% OLED ಡಿಸ್‌ಪ್ಲೇ ಬಳಕೆ

70% OLED ಡಿಸ್‌ಪ್ಲೇ ಬಳಕೆ

ಇದಕ್ಕೆ ನಿದರ್ಶನ ಎಂಬಂತೆ ಆಪಲ್‌ನ ಐಫೋನ್‌ 14 ಫೋನ್‌ಗಳಿಗೆ ಈ ವರ್ಷದ ಅಂತ್ಯದ ವೇಳೆಗೆ ಸುಮಾರು 70% OLED ಡಿಸ್‌ಪ್ಲೇಗಳನ್ನು ಸ್ಯಾಮ್‌ಸಂಗ್‌ ಒಂದೇ ಪೂರೈಸಲಿದೆ ಎಂದು ತಿಳಿದುಬಂದಿದೆ. ಇತರೆ ಪೂರೈಕೆದಾರ ಕಂಪೆನಿಗಳಿದ್ದರೂ ಸಹ ಸ್ಯಾಮ್‌ಸಂಗ್‌ನ ಈ ಡಿಸ್‌ಪ್ಲೇಗಳು ಅಗ್ರ ಸ್ಥಾನ ಪಡೆದುಕೊಂಡಿವೆ. ಹಾಗೆಯೇ ಆಪಲ್‌ ಐಫೋನ್‌ 14 ಲೈನ್‌ಅಪ್‌ಗಾಗಿ 120 ಮಿಲಿಯನ್ OLED ಪ್ಯಾನೆಲ್‌ಗಳಿಗೆ ಬೇಡಿಕೆ ಇಟ್ಟಿದೆಯಂತೆ.

ಎಲ್‌ಜಿ ಹಾಗೂ ಬಿಒಇ ನಿಂದಲೂ ಆರ್ಡರ್‌

ಎಲ್‌ಜಿ ಹಾಗೂ ಬಿಒಇ ನಿಂದಲೂ ಆರ್ಡರ್‌

ಆಪಲ್‌ ಕೇವಲ ಸ್ಯಾಮ್‌ಸಂಗ್‌ನಿಂದ ಮಾತ್ರವಲ್ಲದೆ ಐಫೋನ್ 14 ಸರಣಿಯ ಫೋನ್‌ಗಳಿಗೆ ಎಲ್‌ಜಿ ಹಾಗೂ ಬಿಒಇ ಸಂಸ್ಥೆಗಳಿಂದಲೂ ಸಹ ಸೇವೆ ಪಡೆಯುತ್ತದೆ. ಅದರಂತೆ ಒಟ್ಟು ಆರ್ಡರ್ ಮಾಡಿದ ಡಿಸ್‌ಪ್ಲೇಗಳಲ್ಲಿ ಸ್ಯಾಮ್‌ಸಂಗ್ ಸಂಸ್ಥೆ 80 ಮಿಲಿಯನ್ OLED ಪ್ಯಾನೆಲ್‌ಗಳನ್ನು ಪೂರೈಸುವ ಸಾಧ್ಯತೆಯಿದ್ದು, ಎಲ್‌ಜಿ 20 ಮಿಲಿಯನ್ ಹಾಗೂ ಬಿಒಇ ಆರು ಮಿಲಿಯನ್ ಡಿಸ್‌ಪ್ಲೇ ಗಳನ್ನು ಆಪಲ್‌ಗೆ ನೀಡುತ್ತಿದೆ.

ಸ್ಯಾಮ್‌ಸಂಗ್‌ಗೆ ಯಾಕೆ ಇಷ್ಟೊಂದು ಆರ್ಡರ್‌

ಸ್ಯಾಮ್‌ಸಂಗ್‌ಗೆ ಯಾಕೆ ಇಷ್ಟೊಂದು ಆರ್ಡರ್‌

ಇತರೆ ಡಿಸ್‌ಪ್ಲೇ ಪೂರೈಕೆದಾರರಿಗಿಂತ ಸ್ಯಾಮ್‌ಸಂಗ್‌ ಯಾಕೆ ಇಷ್ಟೊಂದು ಡಿಸ್‌ಪ್ಲೇಗಳನ್ನು ಪೂರೈಕೆ ಮಾಡುತ್ತದೆ ಎಂದರೆ,ಸ್ಯಾಮ್‌ಸಂಗ್‌ ಐಫೋನ್‌ 14 ಶ್ರೇಣಿಯಲ್ಲಿನ ಪ್ರತಿ ಮಾಡೆಲ್‌ಗೂ ಇದು ಪ್ಯಾನಲ್‌ಗಳನ್ನು ಪೂರೈಸುತ್ತದೆ. ಆದರೆ, ಎಲ್‌ಜಿ ಐಫೋನ್ 14 ಗಾಗಿ ಎಲ್‌ಟಿಪಿಎಸ್ ಡಿಸ್‌ಪ್ಲೇಗಳನ್ನು ಹಾಗೂ ಐಫೋನ್‌ 14 ಪ್ರೊ ಮ್ಯಾಕ್ಸ್‌ಗಾಗಿ ಎಲ್‌ಟಿಪಿಒ ಪ್ಯಾನೆಲ್‌ಗಳನ್ನು ಮಾತ್ರ ಪೂರೈಕೆ ಮಾಡುತ್ತದೆ. ಇದರೊಂದಿಗೆ ಬಿಒಇ ಸಂಸ್ಥೆಯು ಐಫೋನ್ 14 ಗಾಗಿ ಎಲ್‌ಟಿಪಿಎಸ್ ಡಿಸ್‌ಪ್ಲೇ ಗಳನ್ನು ಮಾತ್ರ ಒದಗಿಸುತ್ತದೆ. ಹೀಗಾಗಿ ಸ್ಯಾಮ್‌ಸಂಗ್‌ಗೆ ಹೆಚ್ಚಿನ ಬೇಡಿಕೆ ಇದೆ.

ಸ್ಯಾಮ್‌ಸಂಗ್‌

ಗಮನಿಸಬೇಕಾದ ವಿಷಯ ಏನೆಂದರೆ ಸ್ಯಾಮ್‌ಸಂಗ್‌ನಿಂದ ರವಾನೆಯಾಗುವ 80 ಮಿಲಿಯನ್ ಯೂನಿಟ್‌ ಡಿಸ್‌ಪ್ಲೇಗಳಲ್ಲಿ ಕನಿಷ್ಠ 60 ಮಿಲಿಯನ್ ಐಫೋನ್ 14 ಸರಣಿಯ ಉನ್ನತ ಮಟ್ಟದ ಪ್ರೊ ಮಾಡೆಲ್‌ಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅದಾಗ್ಯೂ ಎಲ್‌ಜಿ ಸಂಸ್ಥೆ ತಾನೂ ಸಹ ಈ ರೀತಿಯ ಪೂರೈಕೆದಾರನಾಗಬೇಕು ಎಂದು ಸ್ಯಾಮ್‌ಸಂಗ್‌ಗೆ ಪೈಪೋಟಿ ನೀಡುತ್ತಿದೆ.

ಆಪಲ್‌ನಿಂದ ಹೆಚ್ಚಿನ OLED ಡಿಸ್‌ಪ್ಲೇ ಬಳಕೆ

ಆಪಲ್‌ನಿಂದ ಹೆಚ್ಚಿನ OLED ಡಿಸ್‌ಪ್ಲೇ ಬಳಕೆ

ಇನ್ನು ಆಪಲ್ ಒಂದೆರಡು ತಿಂಗಳ ಹಿಂದೆ ಐಫೋನ್ 14 ಶ್ರೇಣಿಯನ್ನು ಜಾಗತಿಕವಾಗಿ ಲಾಂಚ್‌ ಮಾಡಿತ್ತು. ಇದರೊಂದಿಗೆ ಮುಂದಿನ ಸರಣಿಯ ಸ್ಮಾರ್ಟ್‌ಫೋನ್‌ ಆದ ಐಫೋನ್‌ 15 ಸ್ಮಾರ್ಟ್‌ಫೋನ್‌ಗಳಲ್ಲಿ ಈ OLED ಡಿಸ್‌ಪ್ಲೇಗಳನ್ನು ಬಳಕೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅದರಂತೆ 2024 ರಲ್ಲಿ ಹೊಸ ಐಫೋನ್‌ SE ಅನ್ನು ಲಾಂಚ್‌ ಮಾಡಲು ಆಪಲ್‌ ಸಿದ್ಧತೆ ಮಾಡಿಕೊಂಡಿದೆ ಎನ್ನುವ ಮಾಹಿತಿ ಸಹ ತಿಳಿದುಬಂದಿದೆ. ಹಾಗೆಯೇ ಐಫೋನ್‌ SE ಫೋನ್‌ ಸಹ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿರಬಹುದು ಎಂಬ ನಿರೀಕ್ಷೆ ಇದೆ.

Best Mobiles in India

English summary
Samsung may become the largest OLED display supplier for apple company.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X