ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಲ್ಯಾಪ್‌ಟಾಪ್‌ ಘೋಷಣೆ!..ಮ್ಯಾಕ್‌ಬುಕ್‌ ಹೋಲಿಕೆ!

|

ಸ್ಯಾಮ್‌ಸಂಗ್‌ ಕಂಪನಿಯು ಈಗಾಗಲೇ ಹಲವು ಗ್ಯಾಜೆಟ್‌ ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯ ಸ್ಮಾರ್ಟ್‌ಫೋನ್‌ಗಳಂತೆ, ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್‌ಗಳು ಭಾರಿ ಸದ್ದು ಮಾಡಿದ್ದು, ಹಲವು ಶ್ರೇಣಿಗಳಲ್ಲಿ ಲಭ್ಯ ಇವೆ. ಈ ದಿಸೆಯಲ್ಲಿ ಮುಂದುವರೆದಿರುವ ಕಂಪನಿಯು ಇದೀಗ ಮತ್ತೆರಡು ಹೊಸ ಲ್ಯಾಪ್‌ಟಾಪ್‌ಗಳನ್ನು ಘೋಷಣೆ ಮಾಡಿದ್ದು, ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದೆ.

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಲ್ಯಾಪ್‌ಟಾಪ್‌ ಘೋಷಣೆ!..ಮ್ಯಾಕ್‌ಬುಕ್‌ ಹೋಲಿಕೆ!

ಹೌದು, ಸ್ಯಾಮ್‌ಸಂಗ್‌ ಕಂಪನಿಯು 'ನೋಟ್‌ಬುಕ್‌ 7' ಮತ್ತು 'ನೋಟ್‌ಬುಕ್‌ 7 ಫೋರ್ಸ್‌' ಹೆಸರಿನ ಎರಡು ಹೊಸ ಲ್ಯಾಪ್‌ಟಾಪ್‌ಗಳನ್ನು ಘೋಷಿಸಿದ್ದು, ಇವು ಆಪಲ್‌ನ ಮ್ಯಾಕ್‌ಬುಕ್‌ ಪ್ರೊ ನೋಟ್‌ಬುಕ್ಸ್‌ ಮಾದರಿಯನ್ನು ಹೋಲುವಂತಿವೆ. ಈ ಎರಡು ಲ್ಯಾಪ್‌ಟಾಪ್‌ಗಳು ಕ್ರಮವಾಗಿ 13 ಮತ್ತು 15 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇ ಸುತ್ತಲೂ ಅತೀ ಕಡಿಮೆ ಅಂಚಿನ ರಚನೆ ಪಡೆದುಕೊಂಡಿವೆ.

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಲ್ಯಾಪ್‌ಟಾಪ್‌ ಘೋಷಣೆ!..ಮ್ಯಾಕ್‌ಬುಕ್‌ ಹೋಲಿಕೆ!

ಸ್ಯಾಮ್‌ಸಂಗ್‌ನ್ ಈ ಲ್ಯಾಪ್‌ಟಾಪ್‌ಗಳ ಡಿಸೈನ್‌ ಅತ್ಯಾಕರ್ಷಕವಾಗಿದೆ. ತೆಳುವಾದ ಮತ್ತು ಹಗುರವಾದ ರಚನೆಯ ಜೊತೆಗೆ ಸುತ್ತಲೂ ಡೈಮಂಡ್‌ ಕಟ್‌ ಎಡ್ಜ್ ಆಕಾರ ನೀಡಲಾಗಿದ್ದು, ಇದು ಲ್ಯಾಪ್‌ಟಾಪ್‌ಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾದರೇ ಸ್ಯಾಮ್‌ಸಂಗ್‌ ಕಂಪನಿಯ 'ನೋಟ್‌ಬುಕ್‌ 7' ಮತ್ತು 'ನೋಟ್‌ಬುಕ್‌ 7 ಫೋರ್ಸ್‌' ಲ್ಯಾಪ್‌ಟಾಪ್‌ಗಳು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌! ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ನೋಟ್‌ಬುಕ್‌ 7 ಡಿಸ್‌ಪ್ಲೇ

ನೋಟ್‌ಬುಕ್‌ 7 ಡಿಸ್‌ಪ್ಲೇ

ಸ್ಯಾಮ್‌ಸಂಗ್‌ ನೋಟ್‌ಬುಕ್‌ 7 ಲ್ಯಾಪ್‌ಟಾಪ್‌ 13 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಸುತ್ತಲೂ ಅತೀ ತೆಳುವಾದ ರಚನೆ ನೀಡಲಾಗಿದೆ. ಹಾಗೆಯೇ ಡಿಸ್‌ಪ್ಲೇಯ ಅಂಚುಗಳು ಸಹ ಅತೀ ಕಡಿಮೆಯಾಗಿದ್ದು, ಪೂರ್ಣ ಡಿಸ್‌ಪ್ಲೇ ವೀಕ್ಷಣೆಗೆ ಇದು ನೆರವಾಗಲಿದೆ. ಡೈಮಂಡ್‌ ಕಟ್‌ ಎಡ್ಜ್ ಆಕಾರದವನ್ನು ಪಡೆದಿದೆ.

ನೋಟ್‌ಬುಕ್‌ 7 ಪ್ರೊಸೆಸರ್‌

ನೋಟ್‌ಬುಕ್‌ 7 ಪ್ರೊಸೆಸರ್‌

ಸ್ಯಾಮ್‌ಸಂಗ್‌ನ ಈ ಲ್ಯಾಪ್‌ಟಾಪ್‌ 8ನೇ ತಲೆಮಾರಿನ ಇಂಟೆಲ್‌ ಕೋರ್‌ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಮಲ್ಟಿಟಾಸ್ಕ್‌ ಕೆಲಸಗಳು ವೇಗವಾಗಿರಲಿವೆ. 6GB RAM ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಎಸ್‌ಎಸ್‌ಡಿ ಸ್ಟೋರೇಜ್‌ ಮೂಲಕ ಬಾಹ್ಯವಾಗಿ 512GBವರೆಗೂ ಸ್ಥಳಾವಕಾಶ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ. ವಿಂಡೊಸ್‌ 10 ಓಎಸ್‌ ಬೆಂಬಲ ಇದೆ.

ನೋಟ್‌ಬುಕ್‌ 7 ಇತರೆ ಸೌಲಭ್ಯಗಳು

ನೋಟ್‌ಬುಕ್‌ 7 ಇತರೆ ಸೌಲಭ್ಯಗಳು

ನೋಟ್‌ಬುಕ್‌ 7 ಲ್ಯಾಪ್‌ಟಾಪ್‌ ಸ್ಪೀಕರ್ಸ್‌ಗಳು ಡಾಲ್ಬಿ ಅಟೋಮ್‌ ಸೌಂಡ್‌ ಬೆಂಬಲ ಪಡೆದಿದ್ದು, ಸೌಂಡ್‌ ಅದ್ಭುತವಾಗಿ ಹೊರಹೊಮ್ಮಲಿದೆ. ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, ಮೈಕ್ರೋಎಸ್‌ಡಿ ಕಾರ್ಡ್‌ ಸ್ಲಾಟ್‌, HDMI ಪೋರ್ಟ್‌, ಗಿಗಾಬೈಟ್‌ ವೈ-ಫೈ ಸೌಲಭ್ಯವನ್ನು ಸಹ ಹೊಂದಿದೆ.

ಓದಿರಿ : ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ? ಓದಿರಿ : ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ?

ನೋಟ್‌ಬುಕ್‌ 7 ಫೋರ್ಸ್‌ ಡಿಸ್‌ಪ್ಲೇ

ನೋಟ್‌ಬುಕ್‌ 7 ಫೋರ್ಸ್‌ ಡಿಸ್‌ಪ್ಲೇ

ಸ್ಯಾಮ್‌ಸಂಗ್‌ ನೋಟ್‌ಬುಕ್‌ 7 ಫೋರ್ಸ್‌' ಲ್ಯಾಪ್‌ಟಾಪ್‌ 15 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯ ಸುತ್ತಲೂ ಸಹ ಅತೀ ತೆಳುವಾದ ರಚನೆ ನೀಡಲಾಗಿದೆ. ಹಾಗೆಯೇ ಡಿಸ್‌ಪ್ಲೇಯ ಅಂಚುಗಳು ಸಹ ಅತೀ ಕಡಿಮೆಯಾಗಿದ್ದು, ಪೂರ್ಣ ಡಿಸ್‌ಪ್ಲೇ ವೀಕ್ಷಣೆಗೆ ಇದು ನೆರವಾಗಲಿದೆ. ಡೈಮಂಡ್‌ ಕಟ್‌ ಎಡ್ಜ್ ಆಕಾರದವನ್ನು ಪಡೆದಿದೆ.

ನೋಟ್‌ಬುಕ್‌ 7 ಫೋರ್ಸ್‌ ಪ್ರೊಸೆಸರ್‌

ನೋಟ್‌ಬುಕ್‌ 7 ಫೋರ್ಸ್‌ ಪ್ರೊಸೆಸರ್‌

ಸ್ಯಾಮ್‌ಸಂಗ್‌ನ ಈ ಲ್ಯಾಪ್‌ಟಾಪ್‌ ಸಹ 8ನೇ ತಲೆಮಾರಿನ ಇಂಟೆಲ್‌ ಕೋರ್‌ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಮಲ್ಟಿಟಾಸ್ಕ್‌ ಕೆಲಸಗಳು ವೇಗವಾಗಿರಲಿವೆ. 24GB RAM ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಎಸ್‌ಎಸ್‌ಡಿ ಸ್ಟೋರೇಜ್‌ ಮೂಲಕ ಬಾಹ್ಯವಾಗಿ 512GBವರೆಗೂ ಸ್ಥಳಾವಕಾಶ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ. ವಿಂಡೊಸ್‌ 10 ಓಎಸ್‌ ಬೆಂಬಲ ಇದೆ.

ನೋಟ್‌ಬುಕ್‌ 7 ಫೋರ್ಸ್‌ ಇತರೆ ಸೌಲಭ್ಯಗಳು

ನೋಟ್‌ಬುಕ್‌ 7 ಫೋರ್ಸ್‌ ಇತರೆ ಸೌಲಭ್ಯಗಳು

ನೋಟ್‌ಬುಕ್‌ 7 ಫೋರ್ಸ್‌ ಲ್ಯಾಪ್‌ಟಾಪ್‌ನಲ್ಲಿಯೂ ಸಹ ಸ್ಪೀಕರ್ಸ್‌ಗಳು ಡಾಲ್ಬಿ ಅಟೋಮ್‌ ಸೌಂಡ್‌ ಬೆಂಬಲ ಪಡೆದಿದ್ದು, ಸೌಂಡ್‌ ಅದ್ಭುತವಾಗಿ ಹೊರಹೊಮ್ಮಲಿದೆ. GeForce GTX 1650 ಗ್ರಾಫಿಕ್‌ ಕಾರ್ಡ್‌ ಜೊತೆಗೆ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, ಮೈಕ್ರೋಎಸ್‌ಡಿ ಕಾರ್ಡ್‌ ಸ್ಲಾಟ್‌, HDMI ಪೋರ್ಟ್‌, ಗಿಗಾಬೈಟ್‌ ವೈ-ಫೈ ಸೌಲಭ್ಯವನ್ನು ಸಹ ಹೊಂದಿದೆ.

ಲಭ್ಯತೆ

ಲಭ್ಯತೆ

ಸ್ಯಾಮ್‌ಸಂಗ್‌ ಕಂಪನಿಯು ಹೊಸದಾಗಿ ಘೋಷಣೆ ಮಾಡಿರುವ 'ನೋಟ್‌ಬುಕ್‌ 7' ಮತ್ತು 'ನೋಟ್‌ಬುಕ್‌ 7 ಫೋರ್ಸ್‌' ಲ್ಯಾಪ್‌ಟಾಪ್‌ಗಳು ಮೊದಲು ಹಾಂಗ್‌ಕಾಂಗ್‌, ಯುಎಸ್‌, ಚೀನಾ, ರಾಷ್ಟ್ರಗಳಲ್ಲಿ ಆನ್‌ಲೈನ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ. ಇನ್ನು ಭಾರತದಲ್ಲಿ ಈ ವರ್ಷದ ಅಂತ್ಯದೊಳಗೆ ಸೇಲ್‌ ಆರಂಭಿಸುವ ಸಾಧ್ಯತೆಗಳಿವೆ.

ಓದಿರಿ : 'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!ಓದಿರಿ : 'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!

Best Mobiles in India

English summary
Samsung has announced two new Windows 10-based laptops. The two laptops, Notebook 7 and Notebook 7 Force. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X