ಸ್ಯಾಮ್‌ಸಂಗ್ ಸಂಸ್ಥೆಯ ಈ ಅಗ್ಗದ ಫೋನಿನಲ್ಲಿ ಈಗ ಆಂಡ್ರಾಯ್ಡ್‌ 13 ಲಭ್ಯ!

|

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ನೂತನ ಆಂಡ್ರಾಯ್ಡ್ 13 ಆಧಾರಿತ ಒನ್‌ ಯುಐ 5.0 ಅಪ್‌ಡೇಟ್ ಅನ್ನು ಈಗಾಗಲೇ ತನ್ನ ಕೆಲವು ಫೋನ್‌ಗಳಿಗೆ ನೀಡಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಇದೀಗ ಗ್ಯಾಲಕ್ಸಿ A03 ಫೋನಿಗಾಗಿ ತನ್ನ ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ ಆಂಡ್ರಾಯ್ಡ್ 13 ಅನ್ನು ಹೊರತಂದಿದೆ. ಅಂದಹಾಗೆ ಈ ಎಂಟ್ರಿ ಲೆವೆಲ್‌ ಫೋನ್‌ ಆಂಡ್ರಾಯ್ಡ್‌ 11 ಓಎಸ್‌ ಪಡೆದಿತ್ತು. ಬಳಿಕ ಆಂಡ್ರಾಯ್ಡ್‌ 12 ಓಎಸ್ ಅಪ್‌ಡೇಟ್‌ ಪಡೆದಿದ್ದು, ಈಗ ಆಂಡ್ರಾಯ್ಡ್‌ 13 ಅಪ್‌ಡೇಟ್‌ಗೆ ಸಜ್ಜಾಗಿದೆ.

ಅಪ್‌ಡೇಟ್

ಸ್ಯಾಮ್‌ಮೊಬೈಲ್‌ ವರದಿಯ ಪ್ರಕಾರ, ಗ್ಯಾಲಕ್ಸಿ A03 ಫರ್ಮ್‌ವೇರ್ ಆವೃತ್ತಿ A035FXXU2CVL4 ನೊಂದಿಗೆ ಸೆರ್ಬಿಯಾದಲ್ಲಿ ಆಂಡ್ರಾಯ್ಡ್‌ 13 ಅಪ್‌ಡೇಟ್‌ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಹೊಸ ಅಪ್‌ಡೇಟ್ ಸ್ಮಾರ್ಟ್‌ಫೋನ್‌ಗೆ ಒನ್‌ ಯುಐ ಕೋರ್ 5.0 ಮತ್ತು ಇತ್ತೀಚಿನ ಭದ್ರತಾ ಪ್ಯಾಚ್ ಅನ್ನು ಒದಗಿಸಲಿದೆ. ಸಂಸ್ಥೆಯು ಇತ್ತೀಚೆಗೆ ಗ್ಯಾಲಕ್ಸಿ A04s ಗಾಗಿ ಆಂಡ್ರಾಯ್ಡ್‌ 13 ಅಪ್‌ಡೇಟ್‌ ಅನ್ನು ಹೊರತಂದಿದೆ.

ಆಂಡ್ರಾಯ್ಡ್‌ 13 ಅಪ್‌ಡೇಟ್‌ ಮಾಡುವುದು ಹೇಗೆ

ಆಂಡ್ರಾಯ್ಡ್‌ 13 ಅಪ್‌ಡೇಟ್‌ ಮಾಡುವುದು ಹೇಗೆ

ನೀವು ಸೆರ್ಬಿಯಾದಲ್ಲಿ ವಾಸಿಸುತ್ತಿದ್ದರೆ ಮತ್ತು ಗ್ಯಾಲಕ್ಸಿ A03 ಅನ್ನು ಹೊಂದಿದ್ದರೆ, ಆಪರೇಟಿಂಗ್ ಸಿಸ್ಟಮ್ ಅನ್ನು ಆವೃತ್ತಿ 13 ಗೆ ಅಪ್‌ಡೇಟ್‌ ಮಾಡಬಹುದು. ಅದಕ್ಕಾಗಿ ಫೋನ್ ಸೆಟ್ಟಿಂಗ್‌ಗಳು » ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಹೋಗಿ ಮತ್ತು 'ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌' ಅನ್ನು ಆಯ್ಕೆ ಮಾಡುವ ಮೂಲಕ ಅಪ್‌ಡೇಟ್‌ ಮಾಡಬಹುದು. ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಇನ್ಫಿನಿಟಿ-ವಿ ಟಿಎಫ್‌ಟಿ ಡಿಸ್‌ಪ್ಲೇ ಆಗಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 81.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ ಒಂದು UI ಕೋರ್ 3.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TBವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಸ್ಮಾರ್ಟ್ ಸೆಲ್ಫಿ ಆಂಗಲ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A03 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಒಂದು ದಿನದವರೆಗೆ ಬಾಳಿಕೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS/ A-GPS, ಮೈಕ್ರೋ-USB, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

Best Mobiles in India

English summary
Samsung rolls out Android 13 software update to Galaxy A03.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X