ಚೀನಾ ಕಂಪೆನಿಗಳಿಗೆ ಬ್ರೇಕ್ ಹಾಕಲು ಭಾರತೀಯರಿಗೆ ಸಿಹಿಸುದ್ದಿ ನೀಡಿದ ಸ್ಯಾಮ್‌ಸಂಗ್!

|

ಭಾರತದಲ್ಲಿ ನಂ.1 ಸ್ಥಾನದಿಂದ ಕೆಳಕ್ಕಿಳಿದಿರುವ ಜನಪ್ರಿಯ ಮೊಬೈಲ್ ಕಂಪೆನಿ 'ಸ್ಯಾಮ್‌ಸಂಗ್' ಮತ್ತೆ ಫಿನಿಕ್ಸ್ ಹಕ್ಕಿಯಂತೆ ಎದ್ದುಬರಲು ತಯಾರಿ ನಡೆಸಿದೆ. ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಥಾನವನ್ನು ಮತ್ತೆ ಗಳಿಸಿಕೊಳ್ಳುವ ಸಲುವಾಗಿ ಸ್ಯಾಮ್‌ಸಂಗ್ ಭರ್ಜರಿ ತಯಾರಿಯೊಂದನ್ನು ನಡೆಸಿದ್ದು, ಇದು ಭಾರತೀಯರಿಗೂ ಸಿಹಿಸುದ್ದಿಯಾಗಿದೆ.

ಹೌದು, ಹೊಸ ವರ್ಷಕ್ಕೆ ಸ್ಯಾಮ್‌ಸಂಗ್ ಏನಾದರೂ ಭರ್ಜರಿ ಆಫರ್ ನೀಡಲಿದೆ ಎಂಬ ಮೊಬೈಲ್ ಪ್ರಿಯರ ನಿರೀಕ್ಷೆಯನ್ನು ಸುಳ್ಳುಮಾಡಿರುವ ಕಂಪೆನಿ ಅದಕ್ಕೂ ಮೀರಿದ ಮತ್ತೊಂದು ಮತ್ತೊಂದು ಸಿಹಿಸುದ್ದಿಯೊಂದನ್ನು ನೀಡಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೇಶದಲ್ಲಿ ತನ್ನ ಹೊದ ಸರಣಿಯ ಬಜೆಟ್ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಲು ಕಂಪೆನಿ ಮುಂದಾಗಿದೆ.

ಚೀನಾ ಕಂಪೆನಿಗಳಿಗೆ ಬ್ರೇಕ್ ಹಾಕಲು ಭಾರತೀಯರಿಗೆ ಸಿಹಿಸುದ್ದಿ ನೀಡಿದ ಸ್ಯಾಮ್‌ಸಂಗ್!

ಇಂದು ಹೊರಬಿದ್ದಿರುವ ಒಂದು ವರದಿ ಪ್ರಕಾರ, ಈ ಹೊಸ ವರ್ಷಕ್ಕೆ ಸ್ಯಾಮ್‌ಸಂಗ್ ತನ್ನ ನೂತನ ಸರಣಿಯ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮೊಬೈಲ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವರದಿಯ ಪ್ರಮುಖ ವಿಶೇಷವೆಂದರೆ, ಈ ಸರಣಿ ಸ್ಮಾರ್ಟ್‌ಪೋನ್‌ಗಳು ಭಾರತದಲ್ಲೇ ಮೊದಲು ಬಿಡುಗಡೆಯಾಗುತ್ತಿವೆ ಎಂಬುದನ್ನು ಕಂಪೆನಿ ಮೂಲಗಳು ತಿಳಿಸಿವೆ.

ಐಎಎನ್ಎಸ್ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಜಾಗತಿಕಮಟ್ಟದಲ್ಲಿ ಮೊದಲ ಬಾರಿಗೆ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯುವ ಸಲುವಾಗಿ ಸ್ಯಾಮ್‌ಸಂಗ್ ಕಂಪೆನಿ ನೂತನವಾಗಿ 'ಗ್ಯಾಲಕ್ಸಿ M' ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಮೊದಲು ಬಿಡುಗಡೆ ಮಾಡುತ್ತಿದೆ.

ಚೀನಾ ಕಂಪೆನಿಗಳಿಗೆ ಬ್ರೇಕ್ ಹಾಕಲು ಭಾರತೀಯರಿಗೆ ಸಿಹಿಸುದ್ದಿ ನೀಡಿದ ಸ್ಯಾಮ್‌ಸಂಗ್!

ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬೇಡಿಕೆಯಲ್ಲಿರುವ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಆರ್ಭಟ ನಡೆಸುತ್ತಿವೆ. ಇದು ಸ್ಯಾಮ್‌ಸಂಗ್‌ ಕಂಪೆನಿಗೆ ನುಂಗಲಾರದ ತುತ್ತಾಗಿದ್ದು, ಹಾಗಾಗಿ, ಬಜೆಟ್ ಪ್ರಿಯರನ್ನು ಸೆಳೆಯಲು ದೇಶದಲ್ಲೇ ತನ್ನ ಹೊಚ್ಚ ಹೊಸ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ.

ಓದಿರಿ: 2018ನೇ ವರ್ಷದ ಅತಿ ಕೆಟ್ಟ ಪಾಸ್‌ವರ್ಡ್‌ಗಳ ಶಾಕಿಂಗ್ ಲೀಸ್ಟ್ ಬಿಡುಗಡೆ!

Best Mobiles in India

English summary
Giving the New Year a head-start to capture the market, Samsung India has geared up to launch a new Galaxy 'M' series with three smartphones in January 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X