ಸ್ಯಾಮ್‌ಸಂಗ್‌ ಲಕ್ಸುರಿ ಸ್ಮಾರ್ಟ್‌ಟಿವಿ ಸರಣಿಯ ಅನಾವರಣ!..292 ಇಂಚಿನ ಡಿಸ್‌ಪ್ಲೇ!

|

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪನಿ ಎಲ್ಲಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿವೆ. ಅವುಗಳಲ್ಲಿ ಸ್ಮಾರ್ಟ್‌ಟಿವಿಗಳು ಸಹ ಅತ್ಯುತ್ತಮ ಗುಣಮಟ್ಟದಿಂದ ಗುರುತಿಸಿಕೊಂಡಿವೆ. ಹಲವು ವೈವಿಧ್ಯ ಶ್ರೇಣಿಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಚಯಿಸಿರುವ ಕಂಪನಿಯು ಈಗ 'ವಾಲ್‌ ಲಕ್ಸುರಿ' ಶ್ರೇಣಿಯಲ್ಲಿ ಬಿಗ್‌ ಸ್ಕ್ರೀನ್‌ ಸ್ಮಾರ್ಟ್‌ಟಿವಿಗಳನ್ನು ರಿಲೀಸ್‌ ಮಾಡಲು ಸಜ್ಜಾಗುತ್ತಿದೆ.

ಸ್ಯಾಮ್‌ಸಂಗ್‌ ಲಕ್ಸುರಿ ಸ್ಮಾರ್ಟ್‌ಟಿವಿ ಸರಣಿಯ ಅನಾವರಣ!..292 ಇಂಚಿನ ಡಿಸ್‌ಪ್ಲೇ!

ಹೌದು, ಸ್ಯಾಮ್‌ಸಂಗ್ ಕಂಪನಿಯು ಒರ್ಲ್ಯಾಂಡೊದಲ್ಲಿ ನಡೆದ ಇನ್ಫೋಕಾಮ್ 2019 ಕಾರ್ಯಕ್ರಮದಲ್ಲಿ 'ವಾಲ್‌ ಲಕ್ಸುರಿ' ಸರಣಿಯ ಸ್ಮಾರ್ಟ್‌ಟಿವಿಗಳನ್ನು ಅನಾವರಣಗೊಳಿಸಿದೆ. ಈ ಬಿಗ್‌ ಡಿಸ್‌ಪ್ಲೇ ಸ್ಮಾರ್ಟ್‌ಟಿವಿಗಳು 2K ರೆಸಲ್ಯೂಶನ್‌ನಿಂದ 8K ರೆಸಲ್ಯೂಶನ್‌ ವರೆಗಿನ ಆಯ್ಕೆಗಳನ್ನು ಹೊಂದಿರಲಿದೆ. ಹಾಗೆಯೇ 73 ಇಂಚಿನ ಆರಂಭಿಕ ಸ್ಕ್ರೀನ್ ಮಾದರಿ ಯಿಂದ 292 ಇಂಚಿನ ಬಿಗ್‌ ಸ್ಕ್ರೀನ್‌ ಮಾದರಿಯ ವಿಶಾಲ ಆಯ್ಕೆಯ ಶ್ರೇಣಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಓದಿರಿ : ಮಳೆಗಾಲದಲ್ಲಿ ಬೀಳುವ ಸಿಡಿಲುಗಳ ಬಗ್ಗೆ ನಿಖರ ಮುನ್ಸೂಚನೆ ನೀಡಲಿದೆ ಈ ಆಪ್‌!ಓದಿರಿ : ಮಳೆಗಾಲದಲ್ಲಿ ಬೀಳುವ ಸಿಡಿಲುಗಳ ಬಗ್ಗೆ ನಿಖರ ಮುನ್ಸೂಚನೆ ನೀಡಲಿದೆ ಈ ಆಪ್‌!

ಸ್ಯಾಮ್‌ಸಂಗ್‌ ಲಕ್ಸುರಿ ಸ್ಮಾರ್ಟ್‌ಟಿವಿ ಸರಣಿಯ ಅನಾವರಣ!..292 ಇಂಚಿನ ಡಿಸ್‌ಪ್ಲೇ!

ಈ ಸ್ಮಾರ್ಟ್‌ಟಿವಿಗಳು ಮೈಕ್ರೋಎಲ್‌ಇಡಿ ಸ್ಕ್ರೀನ್‌ ಆಗಿರಲಿದ್ದು, 100,000ಗಂಟೆಗಳ ಬಾಳಿಕೆ ಹೊಂದಿರಲಿವೆ ಎಂದೆನ್ನಲಾಗಿದೆ. ಆಂಬಿಯಂಟ್ ಮೋಡ್‌ ಆಯ್ಕೆ ನೀಡಲಾಗಿದ್ದು, ಈ ಆಯ್ಕೆಯು ವಿವಿಧ ಆರ್ಟ್‌ ಮತ್ತು ಫ್ರೇಮ್‌ಗಳನ್ನು ಡಿಸ್‌ಪ್ಲೇ ಮಾಡಲಿದೆ. ಹಾಗಾದರೇ ಸ್ಯಾಮ್‌ಸಂಗ್‌ ವಾಲ್‌ ಲಕ್ಸುರಿ ಸರಣಿಯ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಮತ್ತು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಟ್ರೂ ಕಾಲರ್‌ ಆಪ್‌ನಲ್ಲಿ ಲಭ್ಯವಾಗಲಿದೆ 'ಉಚಿತ ವಾಯಿಸ್‌ ಕರೆ' ಸೇವೆ! ಓದಿರಿ : ಟ್ರೂ ಕಾಲರ್‌ ಆಪ್‌ನಲ್ಲಿ ಲಭ್ಯವಾಗಲಿದೆ 'ಉಚಿತ ವಾಯಿಸ್‌ ಕರೆ' ಸೇವೆ!

ವಾಲ್‌ ಲಕ್ಸುರಿ ಸರಣಿ

ವಾಲ್‌ ಲಕ್ಸುರಿ ಸರಣಿ

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಹೆಸರುವಾಸಿಯಾಗಿದ್ದು, ಈ ದಿಸೆಯಲ್ಲಿ ಮುಂದುವರೆದಿರುವ ಕಂಪನಿಯು ವಾಲ್‌ ಲಕ್ಸುರಿ ಸರಣಿಯಲ್ಲಿ ಸಂಪೂರ್ಣ ಲಕ್ಸುರಿಮಾದರಿಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಲಿದೆ. ಈ ಸ್ಮಾರ್ಟ್‌ಟಿವಿಗಳು ಹಾರ್ಮನ್ ಲಕ್ಸುರಿ ಆಡಿಯೊ ಅಥವಾ ಸ್ಟೀನ್ವೇ ಲಿಂಗ್ಡಾರ್ಫ್ ಆಡಿಯೊಗಳನ್ನು ಹೊಂದಿರಲಿವೆ. ಡಿಸ್‌ಪ್ಲೇಯು 2K ಟು 8K ರೆಸಲ್ಯೂಶನ್‌ನಲ್ಲಿರಲಿದ್ದು, ಗ್ರಾಹಕರಿಗೆ ಅಗತ್ಯ ಗಾತ್ರದಲ್ಲಿ ಲಭ್ಯವಾಗಲಿವೆ.

ಡಿಸ್‌ಪ್ಲೇ ರೆಸಲ್ಯೂಶನ್

ಡಿಸ್‌ಪ್ಲೇ ರೆಸಲ್ಯೂಶನ್

ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಯಲ್ಲಿ ಸಾಕಷ್ಟು ಹೊಸತನ ನೀಡಿದ್ದು, ಈಗ ಬಿಡುಗಡೆ ಮಾಡಲಿರುವ ವಾಲ್‌ ಲಕ್ಸುರಿ ಸ್ಮಾರ್ಟ್‌ಟಿವಿ ಸರಣಿಯ ಡಿಸ್‌ಪ್ಲೇಗಳು 2K ರೆಸಲ್ಯೂಶನ್ ಟು 8K ರೆಸಲ್ಯೂಶನ್ ಆಯ್ಕೆಗಳಲ್ಲಿ ದೊರೆಯಲಿದೆ. ಹಾಗೆಯೇ ಡಿಸ್‌ಪ್ಲೇಯು ಸ್ಪೋರ್ಟ್ಸ್‌ ಬೆಜಲ್‌ಲೆಸ್‌ ಡಿಸೈನ್ ಮಾದರಿಯ ರಚನೆಯನ್ನು ಪಡೆದಿರಲಿದ್ದು, ಸ್ಕ್ರೀನ್‌ ಮೈಕ್ರೋಎಲ್‌ಇಡಿ ಮಾದರಿಯಲ್ಲಿ ಇರಲಿದೆ.

ಓದಿರಿ : ಬಲ್ಕ್ ಮೆಸೆಜ್ ಕಳುಹಿಸುವವರ ವಿರುದ್ಧ 'ವಾಟ್ಸಪ್' ಕಠಿಣ ಕ್ರಮ! ಓದಿರಿ : ಬಲ್ಕ್ ಮೆಸೆಜ್ ಕಳುಹಿಸುವವರ ವಿರುದ್ಧ 'ವಾಟ್ಸಪ್' ಕಠಿಣ ಕ್ರಮ!

ಫುಲ್‌ ಬಿಗ್‌ ಸ್ಕ್ರೀನ್‌

ಫುಲ್‌ ಬಿಗ್‌ ಸ್ಕ್ರೀನ್‌

ಸದ್ಯ ವಿಲಾಸಿ ಸ್ಮಾರ್ಟ್‌ಟಿವಿ ಸರಣಿಯತ್ತ ಗಮನ ನೀಡಿರುವ ಸ್ಯಾಮ್‌ಸಂಗ್ ದೊಡ್ಡ ಡಿಸ್‌ಪ್ಲೇಯ ಟಿವಿಗಳನ್ನು ಪರಿಚಯಿಸುತ್ತಿದೆ. ಈಗ 'ವಾಲ್‌ ಲಕ್ಸುರಿ' ಸರಣಿಯಲ್ಲಿ ಆರಂಭಿಕ 73 ಇಂಚಿನಿಂದ 292 ಇಂಚಿನ ವರೆಗಿನ ಹಲವು ವಿವಿಧ ಗಾತ್ರಗಳ ವಿಶಾಲ ಸ್ಕ್ರೀನ್‌ ಆಯ್ಕೆ ಇರಲಿದ್ದು, ಅಂಚುರಹಿತ ಡಿಸ್‌ಪ್ಲೇ ಮಾದರಿಯಲ್ಲಿರಲಿವೆ. ಇದರೊಂದಿಗೆ ಕಸ್ಟಮೈಸ್ ಕನ್‌ಫಿಗರೈಷನ್ ಆಯ್ಕೆ ಗ್ರಾಹಕರಿಗೆ ಲಭ್ಯವಾಗಲಿದೆ.

AI ಟೆಕ್ನಾಲಜಿ

AI ಟೆಕ್ನಾಲಜಿ

ಕೃತಕ ಬುದ್ಧಿಮತ್ತೆ AI ಪಿಚ್ಚರ್‌ ಕ್ವಾಲಿಟಿ ತಂತ್ರಜ್ಙಾನವನ್ನು ಹೊಂದಿದ್ದು, ಇದನ್ನು ಕ್ವಾಂಟಮ್ ಪ್ರೊಸೆಸರ್ ಫ್ಲೆಕ್ಸ್‌ ಎನ್ನಲಾಗಿದೆ. ಇದರ ನೆರವಿನಿಂದ ದೃಶ್ಯಗಳು ಅಧ್ಬುತವಾಗಿ ಮೂಡಿಬರಲಿವೆ. ಆಗೆಯೇ ಎಚ್‌ಆರ್‌ಡಿ ಟೆಕ್ನಾಲಜಿ ಗುಣಮಟ್ಟವನ್ನು ಮತ್ತಷ್ಟು ವೃದ್ಧಿಸಲಿದ್ದು, ರಿಫ್ರೇಶಿಂಗ್ ರೇಟ್‌ 120Hz ಆಗಿದೆ. ಒಟ್ಟಾರೇ ವೀಕ್ಷಣೆಯ ಅನುಭವ ಅತ್ಯುನ್ನತ ಗುಣಮಟ್ಟದಲ್ಲಿರಲಿದೆ ಎನ್ನಲಾಗಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಸ್ಯಾಮ್‌ಸಂಗ್‌ನ ವಾಲ್‌ ಲಕ್ಸುರಿ ಸ್ಮಾರ್ಟ್‌ಟಿವಿ ಸರಣಿಯು 'ಆಂಬಿಯಂಟ್' ಮೋಡ್‌ ಆಯ್ಕೆಯನ್ನು ಹೊಂದಿದೆ.ಈ ಆಯ್ಕೆಯು ಆರ್ಟ್‌ ಮತ್ತು ಡಿಜಿಟಲ್ ಫ್ರೇಮ್‌ಗಳನ್ನು ಒಳಗೊಂಡಿದ್ದು, ಟಿವಿ ನೋಡದಿದ್ದಾಗ ಆಂಬಿಯಂಟ್ ಮೋಡ್‌ ಮಾಡಿದರೇ, ಆರ್ಟ್‌ ಮತ್ತು ಡಿಜಿಟಲ್ ಫ್ರೇಮ್‌ಗಳು ಡಿಸ್‌ಪ್ಲೇಯಲ್ಲಿ ಕಾಣಲಿವೆ. ರಿಮೋಟ್‌ ಕಂಟ್ರೋಲ್‌ಗಾಗಿ Domotz, Ihiji ಮತ್ತು OrvC ಆಯ್ಕೆಗಳನ್ನು ಸಹ ಒಳಗೊಂಡಿದೆ.

ಓದಿರಿ : ಬೋಸ್‌ ಪರಿಚಯಿಸಲಿದೆ 'ಆಡಿಯೊ ಕನ್ನಡಕ'!..ಹೇಗಿದೆ ಈ ಡಿವೈಸ್‌!ಓದಿರಿ : ಬೋಸ್‌ ಪರಿಚಯಿಸಲಿದೆ 'ಆಡಿಯೊ ಕನ್ನಡಕ'!..ಹೇಗಿದೆ ಈ ಡಿವೈಸ್‌!

Best Mobiles in India

English summary
Samsung has unveiled The Wall Luxury line of modular MicroLED screen TVs. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X