ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ' ಸರಣಿ ಸೇರಲಿವೆ ಮತ್ತೆ ಮೂರು ಫೋನ್‌ಗಳು!

|

ಸ್ಯಾಮ್‌ಸಂಗ್ ಕಂಪೆನಿಯು ಇತ್ತೀಚಿಗೆ ಗ್ಯಾಲ್ಯಾಕ್ಸಿ ಎಂ20, ಗ್ಯಾಲ್ಯಾಕ್ಸಿ ಎಂ30 ಮತ್ತು ಗ್ಯಾಲ್ಯಾಕ್ಸಿ ಎಂ40 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ಗಳು ಬೆಲೆ ಮತ್ತು ವಿಶೇಷ ಫೀಚರ್ಸ್‌ಗಳಿಂದ ಅತ್ಯುತ್ತಮ ಸೇಲ್‌ಟ್ರಾಕ್‌ನಲ್ಲಿವೆ. ಈ ಯಶಸ್ಸಿನ ಬೆನ್ನಲೇ ಈಗ ಕಂಪೆನಿಯು ಗ್ಯಾಲ್ಯಾಕ್ಸಿ ಎಂ ಸರಣಿಗೆ ಮತ್ತೆ ಮೂರು ಹೊಸ ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಕಲ ತಯಾರಿ ನಡೆಸಿದೆ.

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ' ಸರಣಿ ಸೇರಲಿವೆ ಮತ್ತೆ ಮೂರು ಫೋನ್‌ಗಳು!

ಹೌದು, ಸ್ಯಾಮ್‌ಸಂಗ್ ಕಂಪೆನಿಯು ಇದೀಗ ಹೊಸದಾಗಿ ಗ್ಯಾಲ್ಯಾಕ್ಸಿ ಎಂ21, ಗ್ಯಾಲ್ಯಾಕ್ಸಿ ಎಂ31 ಮತ್ತು ಗ್ಯಾಲ್ಯಾಕ್ಸಿ ಎಂ41 ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸುಳಿವು ಹೊರಹಾಕಿದೆ. ಗ್ಯಾಲ್ಯಾಕ್ಸಿ ಎಂ ಸರಣಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ತಾಂತ್ರಿಕವಾಗಿ ಸಾಕಷ್ಟು ಅಪ್‌ಡೇಟ್‌ ಹೊಂದಿದ್ದು, ಹಲವು ನೂತನ ಫೀಚರ್ಸ್‌ಗಳನ್ನು ಸಹ ಅಳವಡಿಸಿಕೊಂಡಿವೆ ಎಂಬುದು ಲೀಕ್ ಮಾಹಿತಿಗಳಿಂದ ತಿಳಿದಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ21, ಗ್ಯಾಲ್ಯಾಕ್ಸಿ ಎಂ31 ಮತ್ತು ಗ್ಯಾಲ್ಯಾಕ್ಸಿ ಎಂ41 ಸ್ಮಾರ್ಟ್‌ಫೋನ್‌ಗಳ ಕೀ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಗ್ಯಾಲ್ಯಾಕ್ಸಿ ಎಂ21

ಗ್ಯಾಲ್ಯಾಕ್ಸಿ ಎಂ21

ಹೊಸ 'ಗ್ಯಾಲ್ಯಾಕ್ಸಿ ಎಂ21' ಸ್ಮಾರ್ಟ್‌ಫೋನ್‌ ಕಂಪೆನಿಯ 'Exynos 9609 SoC' ಪ್ರೊಸೆಸರ್‌ ಶಕ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಫೋನ್‌ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡಿರಲಿದೆ. ಅವುಗಳು ಕ್ರಮವಾಗಿ 24ಎಂಪಿ ಮತ್ತು 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿವೆ. ಹಾಗೆಯೇ 4GB RAM ಇರಲಿದ್ದು, ಫೋನ್‌ ವೇಗಕ್ಕೆ ಪೂರಕ ಬೆಂಬಲ ನೀಡಲಿದೆ.

ಗ್ಯಾಲ್ಯಾಕ್ಸಿ ಎಂ31

ಗ್ಯಾಲ್ಯಾಕ್ಸಿ ಎಂ31

'ಗ್ಯಾಲ್ಯಾಕ್ಸಿ ಎಂ31' ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್ 665 SoC ಪ್ರೊಸೆಸರ್ ಬಲದೊಂದಿಗೆ ಕೆಲಸ ಮಾಡಲಿದೆ. ಜೊತೆಗೆ 6GB RAM ಇದ್ದು, ಫೋನ್ ವೇಗವರ್ಧನೆಗೆ ನೆರವು ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿವೆ.

ಗ್ಯಾಲ್ಯಾಕ್ಸಿ ಎಂ41

ಗ್ಯಾಲ್ಯಾಕ್ಸಿ ಎಂ41

ಮುಂಬರುವ 'ಗ್ಯಾಲ್ಯಾಕ್ಸಿ ಎಂ41' ಸ್ಮಾರ್ಟ್‌ಫೋನ್‌ Exynos 9630 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 6GB RAM ಬಲವನ್ನು ಪಡೆದಿರಲಿದೆ. ಈ ಫೋನ್‌ ಸಹ ಮೂರು ಕ್ಯಾಮೆರಾ ಆಯ್ಕೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್(ವೈಲ್ಡ್‌ ಆಂಗಲ್ ) ಮತ್ತು ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿವೆ.

ಮುಖ್ಯ ಬದಲಾವಣೆ

ಮುಖ್ಯ ಬದಲಾವಣೆ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ ಸರಣಿಯ ಗ್ಯಾಲ್ಯಾಕ್ಸಿ 20, ಗ್ಯಾಲ್ಯಾಕ್ಸಿ 30 ಮತ್ತು ಗ್ಯಾಲ್ಯಾಕ್ಸಿ 40 ಸ್ಮಾರ್ಟ್‌ಫೋನ್‌ಗಳ ಅಪ್‌ಡೇಟ್‌ ವರ್ಷನ್‌ ರೂಪ್‌ದಲ್ಲಿ ಗ್ಯಾಲ್ಯಾಕ್ಸಿ ಎಂ21, ಗ್ಯಾಲ್ಯಾಕ್ಸಿ ಎಂ31 ಮತ್ತು ಗ್ಯಾಲ್ಯಾಕ್ಸಿ ಎಂ41 ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಪ್ರೊಸೆಸರ್, ಕ್ಯಾಮೆರಾ ಸೆನ್ಸಾರ್, ಡಿಸೈನ್ ಮತ್ತು ಓಎಸ್‌ ಫೀಚರ್ಸ್‌ಗಳಲ್ಲಿ ಹೆಚ್ಚಿನ ಬದಲಾವಣೆಗಳು ಸೇರಿಕೊಳ್ಳುವ ಸಾಧ್ಯತೆಗಳಿವೆ.

Best Mobiles in India

English summary
Details of the Samsung Galaxy M21, Galaxy M31, and Galaxy M41 have surfaced online. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X