ಸ್ಯಾಮ್‌ಸಂಗ್‌ನ ವಾಯರ್‌ಲೆಸ್‌ ಪವರ್‌ಬ್ಯಾಂಕ್ ಹೇಗಿದೆ ಗೊತ್ತಾ?

|

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಬ್ಯಾಟರಿ ಪವರ್‌ ನೀಡುತ್ತಿದ್ದು, ಅತಿಯಾದ ಬಳಕೆಯಿಂದ ಪೂರ್ಣ ಒಂದು ದಿನವು ಬ್ಯಾಟರಿ ಬಾಳಿಕೆ ಬರುವುದಿಲ್ಲ. ಹೀಗಾಗಿ ಪವರ್‌ಬ್ಯಾಂಕ್‌ಗಳು ಅಗತ್ಯ ಸಾಧನಗಳಾಗಿವೆ. ಜನಪ್ರಿಯ ಕಂಪನಿಗಳ ಪವರ್‌ಬ್ಯಾಂಕ್‌ಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯಗಳಿದ್ದು, ಕೇಬಲ ಮೂಲಕ ಫೋನ್‌ಗಳಿಗೆ ಬಹುಬೇಗನೆ ಚಾರ್ಜ್ ಒದಗಿಸುತ್ತವೆ. ಆದ್ರೆ ವಾಯರ್‌ಲೆಸ್‌ ಪವರ್‌ಬ್ಯಾಂಕ್‌ಗಳು ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನ ಪಡೆದಿವೆ.

ಸ್ಯಾಮ್‌ಸಂಗ್‌ನ ವಾಯರ್‌ಲೆಸ್‌ ಪವರ್‌ಬ್ಯಾಂಕ್ ಹೇಗಿದೆ ಗೊತ್ತಾ?

ಹೌದು, ವಾಯರ್‌ಲೆಸ್‌ ಪವರ್‌ಬ್ಯಾಂಕ್‌ಗಳು ಇದೀಗ ಜನಪ್ರಿಯತೆ ಪಡೆಯುತ್ತಿದೆ. ಆ ಫೈಕಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪನಿಯ ವಾಯರ್‌ಲೆಸ್‌ ಪವರ್‌ಬ್ಯಾಂಕ್ ಸದ್ದು ಸ್ವಲ್ಪ ಜೋರಾಗಿಯೇ ಇದೆ. 10000mAh ಸಾಮರ್ಥ್ಯದ ಈ ವಾಯರ್‌ಲೆಸ್‌ ಪವರ್‌ಬ್ಯಾಂಕ್‌ ಡಿವೈಸ್‌ನಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್ ಫೀಚರ್‌ ಬೆಂಬಲಿತ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌ನ ವಾಯರ್‌ಲೆಸ್‌ ಪವರ್‌ಬ್ಯಾಂಕ್ ಹೇಗಿದೆ ಗೊತ್ತಾ?

ಸ್ಯಾಮ್‌ಸಂಗ್‌ನ ಈ ಡಿವೈಸ್‌ನಲ್ಲಿ 8 ಇಂಚಿನ ಚಾರ್ಜಿಂಗ್ ಕೇಬಲ್ ನೀಡಲಾಗುತ್ತದೆ. ಒಂದೇ ವೇಳೆಗೆ ಎರಡು ಡಿವೈಸ್‌ಗಳನ್ನು (ಗ್ಯಾಲ್ಯಾಕ್ಸಿ ಎಸ್‌10 ಮತ್ತು ಗ್ಯಾಲ್ಯಾಕ್ಸಿ ವಾಚ್‌) ಚಾರ್ಜ್‌ ಮಾಡಬಹುದಾಗಿದೆ. 15W ಸಾಮರ್ಥ್ಯದ ಫಾಸ್ಟ್‌ ಜಾರ್ಜಿಂಗ್ ತಂತ್ರಜ್ಞಾನ್ ಪಡೆದುಕೊಂಡಿದ್ದು, ಪವರ್‌ಔಟ್‌ಪುಟ್‌ಗಾಗಿ ಯುಎಸ್‌ಬಿ-ಎ ಫೋರ್ಟ್‌ ಒಳಗೊಂಡಿದೆ. ಹಾಗೆಯೇ ಡಿವೈಸ್‌ನ ಇಂಟರ್ನಲ್ ಬ್ಯಾಟರಿ ಚಾರ್ಜ್‌ಗಾಗಿ ಯುಎಸ್‌ಬಿ-ಸಿ ಪೋರ್ಟ್‌ ನೀಡಲಾಗಿದೆ.

ಸ್ಯಾಮ್‌ಸಂಗ್‌ನ ವಾಯರ್‌ಲೆಸ್‌ ಪವರ್‌ಬ್ಯಾಂಕ್ ಹೇಗಿದೆ ಗೊತ್ತಾ?

ಸ್ಯಾಮ್‌ಸಂಗ್‌ನ ಈ ಪವರ್‌ಬ್ಯಾಂಕ್ ಗ್ಯಾಲಕ್ಸಿ ಎಸ್9, ಎಸ್9+, ಗ್ಯಾಲಕ್ಸಿ ಎಸ್ 8, ಎಸ್ 8 +, ಎಸ್ 8 ಆಕ್ಟಿವ್, ಗ್ಯಾಲಕ್ಸಿ ಎಸ್7, ಎಸ್ 7 ಎಡ್ಜ್, ಎಸ್ 7 ಆಕ್ಟಿವ್, ಗ್ಯಾಲಕ್ಸಿ ಎಸ್6, ಎಸ್ 6 ಎಡ್ಜ್, ಎಸ್ 6 ಆಕ್ಟಿವ್, ಎಸ್ 6 ಎಡ್ಜ್ +, ಗ್ಯಾಲಕ್ಸಿ ನೋಟ್ 9, ನೋಟ್ 8 ನಂತಹ ಡಬ್ಲ್ಯುಪಿಸಿ ಕ್ಯೂ ವೈರ್‌ಲೆಸ್ ಚಾರ್ಜಿಂಗ್ ಹೊಂದಿರುವ ಸ್ಯಾಮ್‌ಸಂಗ್ ಮತ್ತು ಇತರ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿದೆ.

ಓದಿರಿ : 'ಟಿಕ್‌ಟಾಕ್' ಆಪ್‌ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳು! ಓದಿರಿ : 'ಟಿಕ್‌ಟಾಕ್' ಆಪ್‌ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳು!

10000mAh ಸಾಮರ್ಥ್ಯದ ಸ್ಯಾಮ್‌ಸಂಗ್‌ನ ಈ ವಾಯರ್‌ಲೆಸ್‌ ಡಿವೈಸ್‌ 149.93 x 70.8 x 15.09 mm ಸುತ್ತಳತೆಯನ್ನು ಪಡೆದಿದ್ದು, 234ಗ್ರಾಂ ತೂಕಹೊಂದಿ ಹಗುರವಾದ ರಚನೆಯ ಪಡೆದಿದೆ. ಪಿಂಕ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದ್ದು, ಈ ಪವರ್‌ಬ್ಯಾಂಕ್‌ನ ಬೆಲೆಯು 3699ರೂ.ಗಳಾಗಿದ್ದು, ಗ್ರಾಹಕರು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

ಓದಿರಿ : ಕೈಗೆಟುವ ಬೆಲೆಯಲ್ಲಿ 'ಇನ್‌ಫಿನಿಕ್ಸ್‌ S4' 4GB RAM ಸ್ಮಾರ್ಟ್‌ಫೋನ್ ಲಾಂಚ್! ಓದಿರಿ : ಕೈಗೆಟುವ ಬೆಲೆಯಲ್ಲಿ 'ಇನ್‌ಫಿನಿಕ್ಸ್‌ S4' 4GB RAM ಸ್ಮಾರ್ಟ್‌ಫೋನ್ ಲಾಂಚ್!

Best Mobiles in India

English summary
The Samsung Wireless Powerbank goes a step beyond most and also includes fast charging. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X