ಸ್ಯಾಮ್‌ಸಂಗ್‌ನ ಈ ಹೊಸ ಡಿವೈಸ್‌ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?

|

ಸ್ಮಾರ್ಟ್‌ಗ್ಯಾಜೆಟ್‌ ವಿಭಾಗದಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ಫೀಚರ್ಸ್‌ಗೆ ಹೇಗೆ ಪ್ರಾಮುಖ್ಯತೆ ನೀಡಲಿವೆಯೋ ಅದೇ ರೀತಿ ಡಿವೈಸ್‌ಗಳ ಡಿಸೈನ್‌ ಬಗ್ಗೆಯೂ ಹೆಚ್ಚಾಗಿ ಕೇಂದ್ರೀಕರಿಸುತ್ತವೆ. ಈ ಕಾರಣಕ್ಕಾಗಿಯೇ ದಿನಿತ್ಯವೂ ಸ್ಮಾರ್ಟ್‌ಫೋನ್‌ಗಳಾಗಿರಲಿ ಅಥವಾ ಇಯರ್‌ಪಾಡ್ಸ್‌ ಅಥವಾ ಇಯರ್‌ಫೋನ್ ಆಗಿರಲಿ ಎಲ್ಲವೂ ವಿಧವಿಧವಾದ ಶೈಲಿಯನ್ನು ಪಡೆದುಕೊಳ್ಳುತ್ತಿದೆ. ಅದರಂತೆ ಸ್ಯಾಮ್‌ಸಂಗ್‌ನ ಈ ಗ್ಯಾಜೆಟ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಸ್ಯಾಮ್‌ಸಂಗ್‌ನ ಈ ಹೊಸ ಡಿವೈಸ್‌ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?

ಹೌದು, ಸ್ಯಾಮ್‌ಸಂಗ್‌ ಇತ್ತೀಚೆಗೆ ಪೋರ್ಟಬಲ್ ಸಾಲಿಡ್-ಸ್ಟೇಟ್ ಡ್ರೈವ್ (SSD) T7 ಶೀಲ್ಡ್ (solid-state drive (SSD) T7 Shield) ಅನ್ನು ಪರಿಚಯಿಸಿದ್ದು, ಇದರ ಚಿತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ವೈರಲ್‌ ಆಗುತ್ತಿದೆ. ಯಾಕೆಂದರೆ ಇದು ನೋಡಲು ಥೇಟ್‌ ಬಟ್ಟೆ ಒಗೆಯುವ ಸೋಪ್‌ ಶೈಲಿಯನ್ನೇ ಹೋಲುತ್ತದೆ. ಹಾಗಿದ್ರೆ, ಈ ಡಿವೈಸ್‌ನ ಕೆಲ ಫೀಚರ್ಸ್‌ ಹಾಗೂ ಈ ನೂತನ ಡಿಸೈನ್ ಬಗ್ಗೆ ಜನರು ಏನೆಲ್ಲಾ ಕಾಮೆಂಟ್‌ ಮಾಡಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಇತ್ತೀಚೆಗೆ ಈ ಹೊಸ ಡಿವೈಸ್‌ ಪೋರ್ಟಬಲ್ ಸಾಲಿಡ್-ಸ್ಟೇಟ್ ಡ್ರೈವ್ (SSD) T7 ಅನ್ನು ಅನಾವರಣ ಮಾಡಿದ್ದು, ಇದು ಸಾಕಷ್ಟು ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದರಲ್ಲೂ ದೀರ್ಘಕಾಲ ಬಾಳಿಕೆ ಬರುವ ಬಾಡಿಯನ್ನು ಹೊಂದಿರುವುದು ಇನ್ನಷ್ಟು ವಿಶೇ‍ಷ. ಹಾಗೆಯೇ ಯಾವುದೇ ಪರಿಸರ ವ್ಯವಸ್ಥೆಯಲ್ಲೂ ಈ ಡಿವೈಸ್‌ ಅನ್ನು ಬಳಕೆ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಫೈಲ್‌ ಹೆಚ್ಚು ಸುರಕ್ಷಿತವಾಗಿ ಇರಲಿವೆ.

ಸ್ಯಾಮ್‌ಸಂಗ್‌ನ ಈ ಹೊಸ ಡಿವೈಸ್‌ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?

T7 ಶೀಲ್ಡ್ PSSD ಪ್ರಮುಖ ಫೀಚರ್ಸ್‌
T7 ಶೀಲ್ಡ್ PSSD ಗ್ಯಾಜೆಟ್‌ ಮೂಲಕ ಬಳಕೆದಾರರು ಶೀಘ್ರವಾಗಿ ಯಾವುದೇ ಫೈಲ್‌ಗಳನ್ನು ವರ್ಗಾವಣೆ ಮಾಡಬಹುದಾಗಿದೆ. ಇದಕ್ಕಾಗಿ ಯುಎಸ್‌ಬಿ 3.2 ಜನ್‌ 2 ಪೋರ್ಟ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಡೈನಾಮಿಕ್ ಥರ್ಮಲ್ ಗಾರ್ಡ್‌ನೊಂದಿಗೆ ಹೈಟೆಕ್ ರಬ್ಬರ್ ಹೊರಭಾಗವು ಶಾಖವನ್ನು ನಿಯಂತ್ರಿಸಲು ಸಹಾಯ ಮಾಡಲಿದೆ.

ಇನ್ನು ಕಾನ್ಫಿಗರೇಶನ್ ಅನ್ನು ಅವಲಂಬಿಸಿ ಕಾರ್ಯಕ್ಷಮತೆ ಬದಲಾಗಲಿದ್ದು, ಇದರ ಸೂಪರ್ ಫಾಸ್ಟ್ ವೇಗ 1,050MB/s ವರೆಗೆ ಇರಲಿದೆ. ಬಾಹ್ಯ ಹೆಚ್‌ಡಿಡಿ ಗಿಂತ ಸುಮಾರು 9.5x ವೇಗವಾಗಿ ಇದು ಕೆಲಸ ಮಾಡಲಿದೆ. IP65 ರೇಟೆಡ್ ಹೊಂದಿರುವ ಈ ಡಿವೈಸ್‌ ನೀರು, ಧೂಳಿಗೆ ಪ್ರತಿರೋಧ ಒಡ್ಡುತ್ತದೆ. ಇದರೊಂದಿಗೆ ಪಾಸ್‌ವರ್ಡ್ ರಕ್ಷಣೆ ಸಹ ಇದರಲ್ಲಿದ್ದು, AES 256-ಬಿಟ್ ಹಾರ್ಡ್‌ವೇರ್ ಎನ್‌ಕ್ರಿಪ್ಶನ್ ಆಯ್ಕೆ ಒದಗಿಸಲಾಗಿದೆ.

ಮ್ಯಾಕ್‌, ಪಿಸಿ, ಆಂಡ್ರಾಯ್ಡ್‌ ಡಿವೈಸ್‌ ಹಾಗೂ ಗೇಮಿಂಗ್ ಕನ್ಸೋಲ್ ಮತ್ತು ಇನ್ನೂ ಹೆಚ್ಚಿನ ಸ್ಮಾರ್ಟ್‌ ಡಿವೈಸ್‌ಗಳಿಗೆ ಇದು ಬೆಂಬಲ ನೀಡಲಿದೆ. ಆದರೆ, ಕೆಲವು ಆಪರೇಟಿಂಗ್ ಸಿಸ್ಟಮ್‌ಗಳಿಗೆ T7 ಶೀಲ್ಡ್ ರಿಫಾರ್ಮ್ಯಾಟಿಂಗ್ ಅಗತ್ಯ ಸಹ ಇದೆ ಎನ್ನಲಾಗಿದೆ.

ಆದರೆ, ವಿಷಯ ಇದಲ್ಲ. ಈ ಎಲ್ಲಾ ಫೀಚರ್ಸ್‌ಗಳ ಹೊರತಾಗಿ ಈ ಗ್ಯಾಜೆಟ್‌ನ ಶೈಲಿಗೆ ಜನ ಮಾರುಹೋಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸ್ಯಾಮ್‌ಸಂಗ್‌ ಈ ಗ್ಯಾಜೆಟ್‌ನ ಚಿತ್ರಗಳನ್ನು ತನ್ನ‌ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ. ಇದರಿಂದಾಗಿ ಅತಿ ಬೇಗವಾಗಿ ವೈರಲ್‌ ಆಗಿದ್ದು, ಹಲವಾರು ಬಳಕೆದಾರು ತಮಗೆ ದೋಚಿದಂತೆ ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ಯಾಕೆಂದರೆ ಈ ಡಿವೈಸ್‌ ಡಿಟರ್ಜೆಂಟ್ ಬಾರ್ ಶೈಲಿಯಲ್ಲಿ ಕಂಡುಬಂದಿದೆ.

ಸ್ಯಾಮ್‌ಸಂಗ್‌ನ ಈ ಹೊಸ ಡಿವೈಸ್‌ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?

ಇದರ ನಡುವೆ ಈ ಡಿವೈಸ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುವಾಗ ಶೀರ್ಷಿಕೆ ನೀಡಿರುವ ಸ್ಯಾಮ್‌ಸಂಗ್‌, ಒರಟಾದ ಬಾಳಿಕೆ, ನಿಮ್ಮ ಸೇವೆಯಲ್ಲಿ. ನಿಮ್ಮ ಎಲ್ಲಾ ಫೈಲ್‌ಗಳನ್ನು ಅತ್ಯಂತ ಸವಾಲಿನ ಪರಿಸರ ಪರಿಸ್ಥಿತಿಗಳಲ್ಲಿಯೂ ಸಹ ರಕ್ಷಿಸಲು ಮತ್ತು ಕಾರ್ಯನಿರ್ವಹಿಸಲು T7 ಶೀಲ್ಡ್ PSSD ಬಳಸಿ ಎಂದು ಉಲ್ಲೇಖಿಸಿದೆ.

ಇದರ ನಡುವೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ನಗು ಬರಿಸುವಂತಹ ಕಾಮೆಂಟ್‌ಗಳನ್ನು ಮಾಡಿದ್ದು, ನಾನು ಯಾವಾಗ ಈ ಚಿತ್ರವನ್ನು ನೋಡಿದೆನೋ ಅವಾಗ ನನಗೆ ಅನಿಸಿದ್ದು ಏನೆಂದರೆ ಎಲ್ಲಿ ಸ್ಯಾಮ್‌ಸಂಗ್‌ ರಿನ್‌ ಸೋಪ್‌ಗೆ ಪೈಪೋಟಿ ನೀಡುತ್ತಿದೆಯಾ ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು ಡಿಟರ್ಜೆಂಟ್‌ ಎಸ್‌ಎಸ್‌ಡಿ ಎಂದು ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ ಸ್ಯಾಮ್‌ಸಂಗ್‌ ಯಾಕೆ ಡಿಟರ್ಜೆಂಟ್‌ ಸೋಪ್‌ ಮಾಡಲು ಮುಂದಾಯಿತು ಎಂದು ಆಶ್ಚರ್ಯಪಟ್ಟೆ ಎಂದು ಮತ್ತೋರ್ವರು ಕಾಮೆಂಟ್ ಮಾಡಿದ್ದಾರೆ.

Best Mobiles in India

English summary
A picture of a solid-state drive (SSD) T7 Shield gadget has gone viral on social media, and it looks like a detergent soap. complete details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X