ನೀವು ಎಸ್‌ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್‌ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!

|

ಬ್ಯಾಂಕಿಂಗ್‌ ವಿಚಾರದಲ್ಲಿ ಈ ಕ್ಷಣಕ್ಕೂ ಹೆಚ್ಚು ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಗ್ರಾಹಕರಿಗೆ ಮೋಸ ಮಾಡುವ ಉದ್ದೇಶದಿಂದ ಸೈಬರ್‌ ಕಳ್ಳರು ನಕಲಿ ಮೆಸೆಜ್‌ಗಳನ್ನು ಮಾಡಿ ಅದರಲ್ಲಿ ಯಾವುದೋ ಲಿಂಕ್‌ ಅನ್ನು ನೀಡುವ ಮೂಲಕ ಹಣವನ್ನು ಎಗರಿಸುತ್ತಿದ್ದಾರೆ. ಈ ರೀತಿಯ ಘಟನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಎಸ್‌ಬಿಐ ಕೆಲವು ಸಲಹೆಗಳನ್ನು ನೀಡಿದೆ.

ನೀವು ಎಸ್‌ಬಿಐ ಗ್ರಾಹಕರೇ?,ಯುಪಿಐ ಪೇಮೆಂಟ್‌ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ

ಹೌದು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐನಲ್ಲಿ ದಿನನಿತ್ಯವೂ ಸಾವಿರಾರು ಕೋಟಿ ರೂ. ಗಳ ವಹಿವಾಟು ನಡೆಯುತ್ತದೆ. ಹಾಗೆಯೇ ಈ ಬ್ಯಾಂಕ್‌ನ ಗ್ರಾಹಕರ ಸಂಖ್ಯೆ ಸಹ ಹೆಚ್ಚಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ಫಿಶಿಂಗ್ ಮತ್ತು ಮಾಲ್ ಕಂಟೆಂಟ್‌ಗಳ ಮೂಲಕ ಗ್ರಾಹಕರ ಖಾತೆಯನ್ನು ಪ್ರವೇಶಿಸುವುದರ ಜೊತೆಗೆ ಅವರ ಖಾತೆಗಳಿಂದ ಹಣವನ್ನು ಕದಿಯುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಅದರಲ್ಲೂ ಡಿಜಿಟಲ್ ವ್ಯವಸ್ಥೆಯ ಭಾಗವಾಗಿ ಯುಪಿಐ ಮೂಲಕ ಗ್ರಾಹಕರು ಆನ್‌ಲೈನ್ ವಹಿವಾಟುಗಳನ್ನು ನಡೆಸುತ್ತಿದ್ದು, ಇದು ವರದಾನದ ಜೊತೆ ಕೆಲವರಿಗೆ ಶಾಪವಾಗಿಯೂ ಪರಿಣಮಿಸಿದೆ.

ಇನ್ನು ಈ ರೀತಿಯ ಸ್ಕ್ಯಾಮರ್‌ಗಳ ನಿರಂತರ ಬೆದರಿಕೆಯನ್ನು ಎದುರಿಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಯುಪಿಐ ವಹಿವಾಟುಗಳನ್ನು ನಡೆಸುವಾಗ ಕೆಲವು ಭದ್ರತಾ ಪ್ರೋಟೋಕಾಲ್‌ಗಳು ಮತ್ತು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಇಲ್ಲವಾದರೆ ಖಂಡಿತಾ ಸೈಬರ್‌ ಕಳ್ಳರ ಗಾಳಕ್ಕೆ ಬಿದ್ದು, ನೀವು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಬೇರೆಯವರ ಪಾಲು ಮಾಡಬೇಕಾದೀತು. ಇದಕ್ಕಾಗಿ ಕೆಲವು ಎಸ್‌ಬಿಐ ಸಲಹೆಗಳನ್ನು ನೀಡಿದೆ ಗಮನಿಸಿ.

ನೀವು ಎಸ್‌ಬಿಐ ಗ್ರಾಹಕರೇ?,ಯುಪಿಐ ಪೇಮೆಂಟ್‌ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ
  • -ನೀವು ಪಾವತಿಯನ್ನು ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಯುಪಿಐ ಐಡಿಯನ್ನು ನಮೂದಿಸುವ ಅಗತ್ಯವಿಲ್ಲ. ಅಕಸ್ಮಾತ್‌ ಯುಪಿಐಐಡಿ ನಮೂದಿಸಬೇಕು ಎಂದು ಕೇಳಿದರೆ ಅದು ಖಂಡಿತಾ ಮೋಸಗೊಳಿಸುವ ತಂತ್ರವಾಗಿದೆ ಎಂದರ್ಥ.
  • -ನಿಮ್ಮ ಯುಪಿಐ ಪಿನ್ ಅನ್ನು ಎಂದಿಗೂ ಹಾಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ.ಇದರಿಂದ ಹೆಚ್ಚು ಭದ್ರತೆ ಸಿಗಲಿದ್ದು, ನೀವು ಸುರಕ್ಷತೆಯ ವಹಿವಾಟು ನಡೆಸಬಹುದಾಗಿದೆ.
  • -ಇದಿಷ್ಟೇ ಅಲ್ಲದೆ ಆಗಾಗ್ಗೆ ನಿಮ್ಮ ಯುಪಿಐ ಪಿನ್‌ ಅನ್ನು ಬದಲಾವಣೆ ಮಾಡುವುದು ಅನಿವಾರ್ಯ. ಇದು ಕೇವಲ ಯುಪಿಐಗಷ್ಟೇ ಸೀಮಿತವಲ್ಲದೆ, ಬ್ಯಾಂಕ್‌ನ ಇತರೆ ವ್ಯವಹಾರದಲ್ಲೂ ಈ ಕ್ರಮ ಅನುಸರಿಸಿ.
  • -ನೀವು ಸಾಮಾನ್ಯವಾಗಿ ಯಾರಿಗೆ ಹಣವನ್ನು ಕಳುಹಿಸುತ್ತೀರ ಎಂದು ಮೊದಲು ಪರಿಶೀಲಿಸಿ, ಯಾಕೆಂದರೆ ಒಂದೇ ಹೆಸರಿನ ಹಲವರು ಇರಬಹುದು ಇದು ನಿಮ್ಮನ್ನು ಗೊಂದಲಕ್ಕೆ ದೂಡುತ್ತದೆ.
  • -ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾವುದಾದರೂ ಪಾವತಿ ವಿನಂತಿಯ ಸಂದೇಶಗಳು ಬಂದರೆ ಯಾವುದೇ ಕಾರಣಕ್ಕೂ ಅವುಗಳ ಮೇಲೆ ಕ್ಲಿಕ್‌ ಮಾಡಬೇಡಿ. ಈ ಅನಾಮಿಕ ವಿನಂತಿಗಳು ನಿಮ್ಮನ್ನು ಯಾವುದಾದರೂ ಬೇರೆ ಸೈಟ್‌ಗೆ ಕರೆದೋಯ್ದು ನಿಮ್ಮ ಖಾತೆಯಲ್ಲಿನ ಹಣವನ್ನು ಖಾಲಿ ಮಾಡಿಸಿಬಿಡುತ್ತವೆ.
  • ನೀವು ಎಸ್‌ಬಿಐ ಗ್ರಾಹಕರೇ?,ಯುಪಿಐ ಪೇಮೆಂಟ್‌ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ

ಫೀಚರ್ ಫೋನ್‌ಗಳಲ್ಲಿಯೂ ಹಣ ವರ್ಗಾಯಿಸಬಹುದೇ?
ಸಾಮಾನ್ಯವಾಗಿ ಹಲವಾರು ರೈತರು ಹಾಗೂ ಇನ್ನಿತರೆ ಬಡವರ ಬಳಿ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ಇದಕ್ಕಾಗಿಯೇ ಈ ಸಮುದಾಯಕ್ಕೆ ಸಹಾಯಕವಾಗಲಿ ಎಂದು ಎಸ್‌ಬಿಐ ವಿಶೇಷವಾದ ಸೌಲಭ್ಯ ಕಲ್ಪಿಸಿದ್ದು, ಫೀಚರ್‌ ಫೋನ್‌ಗಳ ಮೂಲಕವೂ ಹಣ ವರ್ಗಾವಣೆ ಪ್ರಕ್ರಿಯೆ ನಡೆಸಬಹುದಾಗಿದೆ. ಇದರಲ್ಲಿ ಬಳಕೆದಾರರು ನಾಲ್ಕು ವಿಭಿನ್ನ ತಂತ್ರಜ್ಞಾನ ಆಯ್ಕೆಗಳಲ್ಲಿ ಒಂದನ್ನು ಬಳಸಿಕೊಂಡು ಯುಪಿಐ ರಚಿಸಬಹುದು.

ಇದಕ್ಕಾಗಿ ಬಳಕೆದಾರರು ಮೊದಲು IVR (ಇಂಟರಾಕ್ಟಿವ್ ಧ್ವನಿ ಪ್ರತಿಕ್ರಿಯೆ) ಸಂಖ್ಯೆಗೆ ಕರೆ ಮಾಡಬೇಕಿದೆ. ಅಂದರೆ, ಸಿಮ್ ಸೇವೆಯಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಹೇಗೆ ಕರೆ ಮಾಡುತ್ತೀರೋ ಅದೇ ಶೈಲಿಯಲ್ಲಿ ಕರೆ ಮಾಡುವ ಮೂಲಕ ಈ ಸೇವೆ ಪಡೆಯಬಹುದು.

ಫೀಚರ್ ಫೋನ್‌ಗಳಲ್ಲಿ 123PAY ಬಳಸಲು ಯುಪಿಐ ಐಡಿ ಕ್ರಿಯೇಟ್‌ ಮಾಡುವುದು ಹೇಗೆ?

ಹಂತ 1
ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಫೀಚರ್ ಫೋನ್‌ನಿಂದ IVR ಸಂಖ್ಯೆಯಾದ 080 4516 3666, 080 4516 3581 ಅಥವಾ 6366 200 200 ಗೆ ಡಯಲ್ ಮಾಡಿ. ಇದರಲ್ಲಿ ಯುಪಿಐ ಬ್ಯಾಂಕಿಂಗ್‌ಗಾಗಿ ನೋಂದಾಯಿಸಲು ಬಯಸುವ ಖಾತೆಯ ಬ್ಯಾಂಕ್‌ನ ಹೆಸರನ್ನು ನಮೂದಿಸಿ.

ಹಂತ 2
ಇದಾದ ಬಳಿಕ ಆಯ್ಕೆಮಾಡಿದ ಬ್ಯಾಂಕ್‌ನ ಎಲ್ಲಾ ಖಾತೆಗಳ ಬಗ್ಗೆ ತಿಳಿಸಲಾಗುತ್ತದೆ. ಅದರಲ್ಲಿ ನಿಮಗೆ ಬೇಕಾದ ಖಾತೆಯನ್ನು ಆರಿಸಿ. ನಂತರ ಯುಪಿಐ ಪಿನ್ ಅನ್ನು ಹೊಂದಿಸಲು ಕೇಳಲಾಗುತ್ತದೆ. ಈ ವೇಳೆ ನಿಮ್ಮ ಯುಪಿಐ ಪಿನ್ ಅನ್ನು ರಚಿಸಲು ನಿಮ್ಮ ಬ್ಯಾಂಕ್ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕೆಗಳನ್ನು ಮತ್ತು ಬ್ಯಾಂಕ್‌ನಿಂದ ಸ್ವೀಕರಿಸಿದ ಓಟಿಪಿಯನ್ನು ಅನ್ನು ನೀವು ನಮೂದಿಸಬೇಕಾಗುತ್ತದೆ.

ಹಂತ 3
ಈ ವಿವರಗಳನ್ನು ಮೌಲ್ಯೀಕರಿಸಿದ ನಂತರ ನಿಮ್ಮ ಖಾತೆಗೆ ನೀವು 4/6 ಅಂಕಿಯ ಯುಪಿಐ ಪಿನ್ ಅನ್ನು ಸೆಟ್‌ ಮಾಡಬಹುದು. ಆಯ್ಕೆಮಾಡಿದ ಖಾತೆಗಾಗಿ ನಿಮ್ಮ ಯುಪಿಐ ಪಿನ್ ಅನ್ನು ಈಗಾಗಲೇ ಹೊಂದಿಸಿದ್ದರೆ, ಯುಪಿಐ ಪಿನ್ ಹೊಂದಿಸುವ ಮೇಲಿನ ಹಂತವನ್ನು ಸ್ಕಿಪ್‌ ಮಾಡಬಹುದು. ಇದಾದ ನಂತರ ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ಆಧಾರದ ಮೇಲೆ ಬಳಕೆದಾರರ ಪ್ರೊಫೈಲ್ ಅನ್ನು ರಚಿಸಲಾಗುತ್ತದೆ. ಈ ಎಲ್ಲಾ ಹಂತಗಳನ್ನು ಪೂರೈಸಿದ ನಂತರ ಡಿಜಿಟಲ್ ಪಾವತಿಗಳನ್ನು ಮಾಡಲು ನಿಮಗೆ ಅವಕಾಶ ಸಿಗುತ್ತದೆ.

Best Mobiles in India

English summary
SBI shared Safety Tips for UPI Transactions. These tips help to keep customers safe from cyber criminals. and also we gave information about how to make UPI payment on feature phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X