ಜನರ ಸಾವಿಗೆ ಕಾರಣವಾಗುತ್ತಿರುವ ಸೆಲ್ಫಿ

Written By:

ಈ ವರ್ಷದಲ್ಲಿ ಶಾರ್ಕ್‌ ಮೀನು ದಾಳಿಗಿಂತ ಸೆಲ್ಫಿ ಕ್ಲಿಕ್ಕಿಸುವಾಗಲೇ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹುಫ್ಫಿನ್‌ಟನ್‌ ಪೋಸ್ಟ್‌ನಲ್ಲಿ 12 ಜನರು ತಮ್ಮ ಸೆಲ್ಫಿ ಫೋಟೊ ತೆಗೆದುಕೊಳ್ಳುವಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. 8 ಜನರು ಶಾರ್ಕ್‌ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಹರಿದಾಡಿದೆ.

ಜನರ ಸಾವಿಗೆ ಕಾರಣವಾಗುತ್ತಿರುವ ಸೆಲ್ಫಿ

ಓದಿರಿ: ವರ್ಲ್ಡ್ ವೈಡ್‌ ವೆಬ್‌ ಬೆಳವಣಿಗೆಯ ವಿಶಿಷ್ಟತೆ ಏನು?

ಭಾರತದ ತಾಜ್‌ ಮಹಲ್‌ನ ಒಂದು ಮೆಟ್ಟಿಲಿನ ಮೇಲೆ ನಿಂತು ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿರುವಾಗ 66 ವಯಸ್ಸಿನ ಜಪಾನ್‌ ಪ್ರವಾಸಿಗನೊಬ್ಬ ಕಾಲು ಜಾರಿ ಸಾವಿಗೀಡಾಗಿದ್ದಾರೆ. ಅಲ್ಲದೆ ಜುಲೈನಲ್ಲಿ ಮಿಸಿಸಿಪಿಯ ಮಹಿಳೆಯೊಬ್ಬಳು ಕಾಡೆಮ್ಮೆಯಿಂದ ಘೋರವಾಗಿ ಸಾವಿಗೀಡಾಗಿದ್ದಾಳೆ. ಈಕೆ ಎಲ್ಲೋಸ್ಟೋನ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಸಮೀಪದಿಂದ ಸೆಲ್ಫಿ ಫೋಟೊ ತೆಗೆಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಟೆಲಿಗ್ರಾಫ್ ವರದಿಮಾಡಿದೆ.

ಜನರ ಸಾವಿಗೆ ಕಾರಣವಾಗುತ್ತಿರುವ ಸೆಲ್ಫಿ

ಪ್ರಸ್ತುತ ವರ್ಷ ರಷ್ಯಾ ಸರ್ಕಾರವು ಸಚಿತ್ರ ಕೈಪಿಡಿಯೊಂದನ್ನು ಬಿಡುಗಡೆ ಮಾಡಿ, ಅದರಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಎದುರಾಗುವ ಅಪಾಯಕಾರಿ ಸನ್ನಿವೇಶಗಳನ್ನು ಕುರಿತು ಹೇಳಿ ಎಚ್ಚರಿಕೆ ನೀಡಿದೆ. ಎಲೀನಾ ಅಲೆಕ್ಸಿಯೇವಾ ಎಂಬುವವರು , ಅಧಿಕೃತವಾಗಿ, " ನಮ್ಮ ಸಚಿತ್ರ ಕೈಪಿಡಿಯು ನಿಮಗೆ ಸಿಲ್ಫಿ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸಿದೆ, ಆದರೆ ಈ ಮಾಹಿತಿಯೇ ನಿಮಗೆ ಕೊನೆಯದಲ್ಲ " ಎಂದಿದ್ದಾರೆ. ಹಾಗು ನಮ್ಮ ಅಭಿಯಾನದ ಧ್ಯೇಯವೆಂದರೆ, " ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್‌ ಲೈಕ್ಸ್‌ಗಳನ್ನ ಪಡೆಯುವುದಲ್ಲ, ನಿಮ್ಮ ಯೋಗಕ್ಷೇಮವಾಗಿದೆ" ಎಂದಿದ್ದಾರೆ.

ಜನರ ಸಾವಿಗೆ ಕಾರಣವಾಗುತ್ತಿರುವ ಸೆಲ್ಫಿ

ಓದಿರಿ: ಟೆಕ್‌ ವ್ಯಾಧಿಗಳ ಬಗ್ಗೆ ನಿಮಗೆಷ್ಟು ಗೊತ್ತು

ರಷ್ಯಾದ ಈ ಸಚಿತ್ರ ಕೈಪಿಡಿಯು ಬಿಬಿಸಿ ವರದಿ ಮಾಡಿರುವ ಮಾಸ್ಕೋದ 21 ವರ್ಷದ ಮಹಿಳೆಯೊಬ್ಬಳು ತನ್ನ ತಲೆಗೆ ಗನ್‌ ಇರಿಸಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಸೂಟ್‌ ಮಾಡಿಕೊಂಡು ಸಾವಿನಿಂದ ಪಾರಾಗಿರುವ ಘಟನೆ ಕುರಿತು ಮಾಹಿತಿ ಒಳಗೊಂಡಿದೆ.

English summary
More people have died while trying to taking a 'selfie' than from shark attacks this year.
Please Wait while comments are loading...
Opinion Poll

Social Counting