ಶಾಹೀದ್ ಕಪೂರ್ ಖಾತೆ ಹ್ಯಾಕ್?

By Shwetha
|

ಪ್ರಸಿದ್ಧ ಬಾಲಿವುಡ್ ತಾರೆ ಶಾಹೀದ್ ಕಪೂರ್ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದು ಫೇಸ್‌ಬುಕ್ ವಾಲ್‌ನಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿ ತಮ್ಮ ಖಾತೆ ಹ್ಯಾಕಿಂಗ್ ಆಗಿರುವುದರ ಬಗ್ಗೆ ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ ಏನಾದರೂ ಪೋಸ್ಟ್ ಬಂದಲ್ಲಿ ಅದನ್ನು ತಾವು ಹಾಕಿರುವುದಲ್ಲ ಎಂಬುದನ್ನು ನೀವು ನೆನಪಿನಲ್ಲಿರಿಸಿಕೊಳ್ಳಬೇಕು ಎಂಬುದಾಗಿ ಶಾಹೀದ್ ಕಪೂರ್ ತಿಳಿಸಿದ್ದಾರೆ.

ಓದಿರಿ: ಫೇಸ್‌ಬುಕ್ ಕಚೇರಿಯಲ್ಲಿ ಮೋಡಿ ಮಾಡಿದ ನರೇಂದ್ರ ಮೋದಿ

ಇನ್ನು ತಮ್ಮ ಖಾತೆಯನ್ನು ಶೀಘ್ರದಲ್ಲಿ ರೀಸ್ಟೋರ್ ಮಾಡುವುದಾಗಿ ಕೂಡ ಅವರು ಹೇಳಿಕೊಂಡಿದ್ದಾರೆ. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ತಾರೆಯೊಬ್ಬರ ಫೇಸ್‌ಬುಕ್ ಖಾತ ಹ್ಯಾಕ್ ಆಗುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ಇಷ್ಟು ಪ್ರಸಿದ್ಧವಾಗಿರುವ ಸೆಲೆಬ್ರಿಟಿಗಳ ಖಾತೆಯೇ ಹ್ಯಾಕ್ ಆಗುತ್ತದೆ ಎಂದಾದಲ್ಲಿ ಜನಸಾಮಾನ್ಯರಾದ ನಮ್ಮ ಖಾತೆಯ ಬಗ್ಗೆ ಎಷ್ಟು ಜಾಗ್ರತೆಯನ್ನು ನಾವು ವಹಿಸಬೇಕಾಗುತ್ತದೆ ಅಲ್ಲವೇ? ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಓದಿರಿ:ಫೇಸ್‌ಬುಕ್ ಮೂಲಕ ಪೋಲೀಸರ ಅತಿಥಿಯಾದ ಖದೀಮರು

ಬಲವಾದ ಪಾಸ್‌ವರ್ಡ್ ರಚಿಸಿ

ಬಲವಾದ ಪಾಸ್‌ವರ್ಡ್ ರಚಿಸಿ

ನಿಮ್ಮ ಆನ್‌ಲೈನ್ ಖಾತೆಗಳಿಗಿಂತ ಭಿನ್ನವಾಗಿರುವ ಫೇಸ್‌ಬುಕ್ ಪಾಸ್‌ವರ್ಡ್ ರಚಿಸಿಕೊಳ್ಳಿ. ಇನ್ನು ಪಾಸ್‌ವರ್ಡ್ ಬದಲಾಯಿಸಲು ಖಾತೆ ಸೆಟ್ಟಿಂಗ್ಸ್ > ಜನರಲ್ > ಪಾಸ್‌ವರ್ಡ್.

ನಿಮ್ಮ ಮೊಬೈಲ್ ಸಂಖ್ಯೆ ದೃಢೀಕರಿಸಿ

ನಿಮ್ಮ ಮೊಬೈಲ್ ಸಂಖ್ಯೆ ದೃಢೀಕರಿಸಿ

ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸುವುದು ನಿಮ್ಮ ಫೇಸ್‌ಬುಕ್ ಖಾತೆಯನ್ನು ಭದ್ರಪಡಿಸುತ್ತದೆ. ನೀವು ಎಲ್ಲಿಯಾದರೂ ನಿಮ್ಮ ಪಾಸ್‌ವರ್ಡ್ ಅನ್ನು ಕಳೆದುಕೊಂಡಲ್ಲಿ, ಎಸ್‌ಎಮ್‌ಎಸ್ ಮೂಲಕ ಆ ಪಾಸ್‌ವರ್ಡ್ ಅನ್ನು ಫೇಸ್‌ಬುಕ್ ನಿಮಗೆ ಕಳುಹಿಸುತ್ತದೆ. ಖಾತೆ ಸೆಟ್ಟಿಂಗ್‌ಗಳು > ಮೊಬೈಲ್ ಮತ್ತು ಫೋನ್ ಸಂಖ್ಯೆ ಸೇರಿಸಿ.

ಸುಭದ್ರ ಬ್ರೌಸಿಂಗ್ ಆಕ್ಟಿವೇಟ್ ಮಾಡಿ

ಸುಭದ್ರ ಬ್ರೌಸಿಂಗ್ ಆಕ್ಟಿವೇಟ್ ಮಾಡಿ

ಸೆಕ್ಯೂರ್ ಬ್ರೌಸಿಂಗ್ ಆಯ್ಕೆಯನ್ನು ನೀವು ಆನ್ ಮಾಡಿದಲ್ಲಿ ಫೇಸ್‌ಬುಕ್ ಸುರಕ್ಷಿತವಾಗಿರುತ್ತದೆ. ನಿಮ್ಮ ಎಫ್‌ಬಿ ಖಾತೆಯ ಬಲ ಮೇಲ್ಭಾಗ ಮೂಲೆಯಲ್ಲಿರುವ ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡಿ ಮತ್ತು ಅಕೌಂಟ್ ಸೆಟ್ಟಿಂಗ್ಸ್‌ಗೆ ಹೋಗಿ.

ಲಾಗಿನ್ ಅಪ್ರೂವಲ್ಸ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಿ

ಲಾಗಿನ್ ಅಪ್ರೂವಲ್ಸ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಿ

ಇದನ್ನು ಮಾಡಲು ಅಕೌಂಟ್ ಸೆಟ್ಟಿಂಗ್ಸ್ > ಸೆಕ್ಯುರಿಟಿ ಮತ್ತು ಲಾಗಿನ ಅಪ್ರೂವಲ್ಸ್‌ಗಾಗಿ ನೋಡಿ ಹಾಗೂ ಎಡಿಟ್ ಬಟನ್ ಕ್ಲಿಕ್ ಮಾಡಿ.

ಹಿಂದಿನ ಸೆಶನ್‌ಗಳನ್ನು ಡಿಸ್‌ಕನೆಕ್ಟ್ ಮಾಡಿ

ಹಿಂದಿನ ಸೆಶನ್‌ಗಳನ್ನು ಡಿಸ್‌ಕನೆಕ್ಟ್ ಮಾಡಿ

ಅಕೌಂಟ್ ಸೆಟ್ಟಿಂಗ್ಸ್ > ಸೆಕ್ಯುರಿಟಿ ಪುಟ ಮತ್ತು ಆಕ್ಟೀವ್ ಸೆಶನ್‌ಗಳು ಹಾಗೂ ಎಡಿಟ್ ಕ್ಲಿಕ್ ಮಾಡಿ.

ಖಾಸಗಿ ಬ್ರೌಸಿಂಗ್ ಅನ್ನು ಆಕ್ಟಿವೇಟ್ ಮಾಡಿ

ಖಾಸಗಿ ಬ್ರೌಸಿಂಗ್ ಅನ್ನು ಆಕ್ಟಿವೇಟ್ ಮಾಡಿ

ಖಾಸಗಿ ಬ್ರೌಸಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ನಿಮ್ಮ ಖಾತೆಯನ್ನು ಭದ್ರಪಡಿಸಬಹುದು.

ಕೀಪ್ ಮಿ ಲಾಗ್ಡ್ ಇನ್ ಆಯ್ಕೆ ಮಾಡಬೇಡಿ

ಕೀಪ್ ಮಿ ಲಾಗ್ಡ್ ಇನ್ ಆಯ್ಕೆ ಮಾಡಬೇಡಿ

ನಿಮ್ಮ ಖಾತೆಗೆ ನೀವು ಲಾಗಿನ್ ಆದ ಸಮಯದಲ್ಲಿ ಲಾಗ್ ಇನ್ ಪುಟದಲ್ಲಿ ಕೀಪ್ ಮಿ ಲಾಗ್ಡ್ ಇನ್ ಎಂಬ ಸಣ್ಣ ಬಾಕ್ಸ್ ಗೋಚರಿಸುತ್ತದೆ. ಇದನ್ನು ಎಂದಿಗೂ ಕ್ಲಿಕ್ ಮಾಡಬೇಡಿ.

ಸ್ಪ್ಯಾಮ್ ಲಿಂಕ್‌ಗಳನ್ನು ತಡೆಯಿರಿ

ಸ್ಪ್ಯಾಮ್ ಲಿಂಕ್‌ಗಳನ್ನು ತಡೆಯಿರಿ

ಫೇಕ್ ವೆಬ್‌ಸೈಟ್‌ಗಳು, ದೋಷಪೂರಿತ ಲಿಂಕ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಕಂಪ್ಯೂಟರ್‌ಗೆ ಹಾನಿಯನ್ನುಂಟು ಮಾಡಬಹುದು. ನಿಮಗೆ ಫೇಸ್‌ಬುಕ್ ಕಳುಹಿಸಿದ ಇಮೇಲ್‌ಗಳು ಬರಬಹುದು ಆದರೆ ಇದನ್ನು ಫೇಸ್‌ಬುಕ್ ಕಳುಹಿಸದೇ ದೋಷಪೂರಿತ ಖಾತೆ ಕಳುಹಿಸಿದ್ದಾಗಿರುತ್ತದೆ.

ದೋಷಪೂರಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ

ದೋಷಪೂರಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ

ನಿಮ್ಮ ಸ್ನೇಹಿತರಿಂದ ಬಂದಿರುವಂತಹ ಲಿಂಕ್ ಆಗಿದ್ದರೂ ಇಂತಹ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಯಾವುದೇ ಲಿಂಕ್ ಅನ್ನು ಖಾತ್ರಿಪಡಿಸಿ ನಂತರ ಮುಂದವರೆಯಿರಿ.

ನಿಮ್ಮ ಪಾಸ್‌ವರ್ಡ್ ಬಳಕೆದಾರ ಹೆಸರು ಎಂದಿಗೂ ನೀಡದಿರಿ

ನಿಮ್ಮ ಪಾಸ್‌ವರ್ಡ್ ಬಳಕೆದಾರ ಹೆಸರು ಎಂದಿಗೂ ನೀಡದಿರಿ

ನಿಮ್ಮ ವೈಯಕ್ತಿಕ ಪಾಸ್‌ವರ್ಡ್ ಅಥವಾ ಬಳಕೆದಾರ ಹೆಸರನ್ನು ಎಂದಿಗೂ ಯಾರಿಗೂ ನೀಡಬೇಡಿ. ಅದರಲ್ಲೂ ದೋಷಪೂರಿತ ವೆಬ್‌ಸೈಟ್‌ಗಳು ಮತ್ತು ಲಿಂಕ್‌ಗಳಿಗೆ.

www.facebook.com ಗೆ ಮಾತ್ರ ಲಾಗಿನ್ ಆಗಿ

www.facebook.com ಗೆ ಮಾತ್ರ ಲಾಗಿನ್ ಆಗಿ

ಯಾವಾಗಲೂ www.facebook.com ಗೆ ಮಾತ್ರ ಲಾಗಿನ್ ಆಗಿ

ಬ್ರೌಸರ್ ಅಪ್‌ಡೇಟ್ ಮಾಡಿ

ಬ್ರೌಸರ್ ಅಪ್‌ಡೇಟ್ ಮಾಡಿ

ನಿಮ್ಮ ಬ್ರೌಸರ್ ಭದ್ರತೆ ನಿಖರವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಬ್ರೌಸರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ.

ಬಳಕೆಯ ನಂತರ ಸೈನ್ ಔಟ್ ಮಾಡಿ

ಬಳಕೆಯ ನಂತರ ಸೈನ್ ಔಟ್ ಮಾಡಿ

ನಿಮ್ಮ ಫೇಸ್‌ಬುಕ್ ಖಾತೆಯಿಂದ ಸೈನ್ ಔಟ್ ಆಗಲು ಎಂದಿಗೂ ಮರೆಯಬೇಡಿ ಇದು ಹೆಚ್ಚು ಮುಖ್ಯವಾಗಿ ನೀವು ಮಾಡಲೇಬೇಕಾದ ಕೆಲಸವಾಗಿದೆ.

ಅಧಿಸೂಚನೆಗಳನ್ನು ಆನ್ ಮಾಡಿ

ಅಧಿಸೂಚನೆಗಳನ್ನು ಆನ್ ಮಾಡಿ

ಹೊಸ ಡಿವೈಸ್‌ನಿಂದ ನಿಮ್ಮ ಫೇಸ್‌ಬುಕ್ ಖಾತೆಯನ್ನು ಪ್ರವೇಶಿಸಿದಾಗ ಇದು ನಿಮ್ಮನ್ನು ಎಚ್ಚರಿಸುತ್ತದೆ. ನೀವಲ್ಲದೆ ಬೇರೆ ಯಾರಾದರೂ ನಿಮ್ಮ ಖಾತೆಯನ್ನು ಪ್ರವೇಶಿಸುತ್ತಿದ್ದಾರೆ ಎಂದಾದಲ್ಲಿ ಅದು ನಿಮಗೆ ಇಮೇಲ್ ಎಚ್ಚರಿಕೆಯನ್ನು ಕಳುಹಿಸುತ್ತದೆ.

ಭದ್ರತಾ ಕೋಡ್

ಭದ್ರತಾ ಕೋಡ್

ನೀವು ಇನ್ನಷ್ಟು ಸುಭದ್ರವಾಗಿರಬೇಕು ಎಂದು ಭಾವಿಸುತ್ತಿದ್ದೀರಾ ಎಂದಾದಲ್ಲಿ, ಸೆಕ್ಯುರಿಟಿ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಲಾಗಿನ್ ಅಪ್ರೂವಲ್ಸ್‌ಗಳನ್ನು ಹೊಂದಿಸಿಕೊಳ್ಳಿ.

ಆಗಾಗ್ಗೆ ಪಾಸ್‌ವರ್ಡ್ ಬದಲಾಯಿಸಿಕೊಳ್ಳಿ

ಆಗಾಗ್ಗೆ ಪಾಸ್‌ವರ್ಡ್ ಬದಲಾಯಿಸಿಕೊಳ್ಳಿ

ನಿಮ್ಮ ಖಾತೆಯನ್ನು ಬೇರೆ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ ಎಂಬ ಎಚ್ಚರಿಕೆ ನಿಮಗೆ ಬರುತ್ತಿದೆ ಎಂದಾದಲ್ಲಿ ನಿಮ್ಮ ಪಾಸ್‌ವರ್ಡ್ ಬದಲಾಯಿಸಿಕೊಳ್ಳಿ. ಆಗಾಗ್ಗೆ ಪಾಸ್‌ವರ್ಡ್ ಕೂಡ ಬದಲಾಯಿಸಿಕೊಳ್ಳುತ್ತಿರಿ.

ಕೀಲಾಗರ್ ಬಳಸಿ

ಕೀಲಾಗರ್ ಬಳಸಿ

ಸಾಫ್ಟ್‌ವೇರ್ ಕೀಲಾಗರ್ ಒಂದು ಪ್ರೊಗ್ರಾಮ್ ಆಗಿದ್ದು ನೀವು ಕೀಬೋರ್ಡ್‌ನಲ್ಲಿ ಮಾಡಿರುವ ಪ್ರತಿ ಸ್ಟ್ರೋಕ್ ಅನ್ನು ದಾಖಲಿಸುತ್ತದೆ. ಯಾವಾಗಲೂ ಫೈರ್‌ವಾಲ್ ಬಳಸಿ. ಫೈರ್‌ವಾಲ್ ನಿಮ್ಮ ಕಂಪ್ಯೂಟರ್‌ನ ಆನ್‌ಲೈನ್ ಚಟುವಟಿಕೆಯನ್ನು ಮಾನಿಟರ್ ಮಾಡುತ್ತದೆ ಮತ್ತು ದೋಷಪೂರಿತ ಎಂದು ಕಂಡುಬಂದಲ್ಲಿ ನಿಮ್ಮನ್ನು ಎಚ್ಚರಿಸುತ್ತದೆ.

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ

ನಿಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗಿದೆ.

ವೆಬ್‌ಸೈಟ್ ಲಾಗ್‌ಆಫ್ ಮಾಡಿ

ವೆಬ್‌ಸೈಟ್ ಲಾಗ್‌ಆಫ್ ಮಾಡಿ

ನಿಮ್ಮ ಕೆಲಸ ಪೂರ್ಣಗೊಂಡ ನಂತರ ವೆಬ್‌ಸೈಟ್‌ನಿಂದ ಲಾಗ್‌ಆಫ್ ಮಾಡಿ.

ವಿಶ್ವಾಸಾರ್ಹ ವೈಫೈ ಬಳಸಿ

ವಿಶ್ವಾಸಾರ್ಹ ವೈಫೈ ಬಳಸಿ

ನೀವು ಬಳಸುತ್ತಿರುವ ವೈಫೈ ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಫೇಸ್‌ಬುಕ್ ಬಳಸುವಾಗ ಈ ಅಂಶವನ್ನು ನೀವು ತಲೆಯಲ್ಲಿಟ್ಟುಕೊಳ್ಳಲೇಬೇಕು.

Most Read Articles
Best Mobiles in India

English summary
Actor Shahid Kapoor, who became the latest victim of an online hack, took to Twitter to inform his fans and followers that his Facebook account has now been restored. "Facebook account has been restored.Ganpati Baapa Morya," Shahid wrote on the micro-blogging website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more