ವಾಟ್ಸಾಪ್‌ನಲ್ಲಿ ಬಳಕೆದಾರರಿಗಿಲ್ಲ ಸುರಕ್ಷೆ
700 ಮಿಲಿಯನ್ ಸಕ್ರಿಯ ಬಳಕೆದಾರರು ವಾಟ್ಸಾಪ್ ಅನ್ನು ಬಳಸುತ್ತಿದ್ದು, ಜನಪ್ರಿಯ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ವಾಟ್ಸಾಪ್ ಜನಪ್ರಿಯಗೊಳ್ಳುತ್ತಿದೆ. ಅದಾಗ್ಯೂ ವಾಟ್ಸಾಪ್ ಕೆಲವೊಂದು ಭದ್ರತಾ ವಿಚಾರದಲ್ಲಿ ಮುಗ್ಗರಿಸುತ್ತಿದ್ದು ಎಚ್ಚರಿಕೆಯ ಕರೆಘಂಟೆಯನ್ನು ಈ ಲೇಖನದಲ್ಲಿ ನಾವು ನಿಮಗಾಗಿ ತಿಳಿಸುತ್ತಿದ್ದೇವೆ.
ಓದಿರಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು
ಇತ್ತೀಚೆಗೆ ತಾನೇ ವಾಟ್ಸಾಪ್‌ನಲ್ಲಿ ಭದ್ರತಾ ಅಪಾಯವನ್ನು ಗುರುತಿಸಿದ್ದು ನಿಮ್ಮ ಪ್ರೊಫೈಲ್ ಚಿತ್ರವನ್ನು ಬರಿಯ ಸ್ನೇಹಿತರಿಗಾಗಿ ಮಾತ್ರ ಎಂದು ನಾವು ಹೊಂದಿಸಿದರೂ ಅದನ್ನು ಎಲ್ಲರೂ ನೋಡಬಹುದಾಗಿದೆ. ಆದರೂ ಈ ಲೇಖನದಲ್ಲಿ ವಾಟ್ಸಾಪ್‌ನ ಕುರಿತಾದ ಇನ್ನಷ್ಟು ಆಸಕ್ತಿಮಯ ಅಂಶಗಳನ್ನು ನಾವು ತಿಳಿಸುತ್ತಿದ್ದೇವೆ.
ನಿಮ್ಮ ಫೋನ್‌ನ ಫೋಟೋ ರೋಲ್ ಅಥವಾ ಗ್ಯಾಲರಿಯಲ್ಲಿ ನೀವು ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ಚಿತ್ರ ಸ್ವಯಂಚಾಲಿತವಾಗಿ ಸ್ಟೋರ್ ಆಗುತ್ತದೆ. ಇದು ನಿಮ್ಮ ಸ್ನೇಹಿತರಿಗೆ ಕಾಣುವುದು ಖಂಡಿತ. ನಿಮ್ಮ ಐಫೋನ್‌ನಲ್ಲಿ ಇದನ್ನು ನಿರ್ಬಂಧಿಸಲು ಸೆಟ್ಟಿಂಗ್ ಮೆನು ಇಲ್ಲಿ ಪ್ರೈವಸಿ ನಂತರ ಫೋಟೋಗಳು ಮತ್ತು ಡೀಸೆಲೆಕ್ಟ್ ವಾಟ್ಸಾಪ್ ಇದನ್ನು ಅನುಸರಿಸಿ. ನಿಮ್ಮ ಫೋನ್‌ನ ವಿಳಾಸ ಪಟ್ಟಿಯಲ್ಲಿರುವವರಿಗೆ ವಾಟ್ಸಾಪ್ ಪ್ರೊಫೈಲ್ ಚಿತ್ರವನ್ನು ನೀವು ನಿರ್ಬಂಧಿಸಬಹುದು. ಪ್ರೈವಸಿ ಮೆನುವಿನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಶೇರಿಂಗ್ ಅನ್ನು "ಕಾಂಟಾಕ್ಟ್ಸ್ ಓನ್ಲಿ" ಎಂದು ಹೊಂದಿಸಿ. ವಾಟ್ಸಾಪ್‌ನ ಸಹಾಯವನ್ನು ನೀವು ಕೋರದ ಹೊರತು ಅದು ನಿಮ್ಮ ಸಹಾಯಕ್ಕೆ ಧಾವಿಸದು ಎಂಬ ಅಂಶ ನೆನಪಿರಲಿ. ಇನ್ನು ಯಾರಾದರೂ ಈ ಸಹಾಯ ಹಸ್ತದ ಕುರಿತು ನಿಮಗೆ ಲಿಂಕ್ ಅನ್ನು ಕಳುಹಿಸುತ್ತಿದ್ದಾರೆ ಎಂದಾದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಕಳೆದುಕೊಂಡ ಸಮಯದಲ್ಲಿ ಅದೇ ಸಂಖ್ಯೆಯಲ್ಲಿ ಬೇರೆ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ ಸಿಮ್ ಬದಲಾಯಿಸಿ. ಇದರಿಂದ ನಿಮ್ಮ ಕಳೆದುಹೋದ ಫೋನ್‌ನಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ಬ್ಲಾಕ್ ಮಾಡಬಹುದಾಗಿದೆ. ಏಕೆಂದರೆ ಒಂದೇ ಸಂಖ್ಯೆಯನ್ನು ಒಂದೇ ಡಿವೈಸ್‌ನಲ್ಲಿ ಒಮ್ಮೆಗೆ ಮಾತ್ರ ವಾಟ್ಸಾಪ್ ಅನ್ನು ಬಳಸಬಹುದು. ವಾಟ್ಸಾಪ್‌ನಲ್ಲಿರುವ ನಿಮ್ಮ ಗೌಪ್ಯ ಸಂದೇಶ ಅಥವಾ ಚಿತ್ರವನ್ನು ಸ್ನೇಹಿತರು ನೋಡುವರಾ ಎಂಬ ಭಯವೇ? ವಾಟ್ಸಾಪ್ ನಿಮಗೆ ಯಾವುದೇ ಭದ್ರತಾ ಮುತುವರ್ಜಿಯನ್ನು ನೀಡದೇ ಹೋದರೂ ಮೆಸೆಂಜರ್ ಮತ್ತು ಚಾಟ್ ಲಾಕ್ ಮೊದಲಾದ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ಲಾಕ್ ಮಾಡಬಹುದಾಗಿದೆ. ಇನ್ನು ಲಾಸ್ಟ್ ಸೀನ್ ಅನ್ನು ನಿಷ್ಕ್ರಿಯಗೊಳಿಸಲು "ಪ್ರೊಫೈಲ್, ಪ್ರೈವಸಿ ಮೆನು ಇಲ್ಲಿಗೆ ಹೋಗಿ ಲಾಸ್ಟ್ ಸೀನ್ ಅನ್ನು ಐಓಎಸ್, ಆಂಡ್ರಾಯ್ಡ್ ವಿಂಡೋಸ್ ಅಥವಾ ಬ್ಲ್ಯಾಕ್‌ಬೆರ್ರಿಯಲ್ಲಿ ನಿಷ್ಕ್ರಿಯಗೊಳಿಸಬಹುದು. ನಿಮ್ಮ ಯಾವುದೇ ಗೌಪ್ಯ ಮಾಹಿತಿ, ವಿಳಾಸ, ಫೋನ್ ಸಂಖ್ಯೆಗಳು, ಇಮೇಲ್ ವಿಳಾಸವನ್ನು ವಾಟ್ಸಾಪ್‌ನಲ್ಲಿ ಹಂಚಲಾಗುವುದಿಲ್ಲ. ಕೆಲವೊಂದು ಅಪಾಯ ಸಂದರ್ಭಗಳಲ್ಲಿ ಮಾತ್ರ ಇಂತಹ ಗೌಪ್ಯ ಮಾಹಿತಿಯನ್ನು ನಿಮಗೆ ಹಂಚಿಕೊಳ್ಳಬಹುದಾಗಿದೆ. ಮೊದಲೆಲ್ಲಾ ಸ್ನೇಹಿತರ ಮನೆಗೆ ಹೋದಾಗ ಕರೆಘಂಟೆಯನ್ನು ಒತ್ತಬೇಕಾಗಿತ್ತು ಇಲ್ಲವೇ ಕರೆ ಮಾಡಬೇಕಾಗಿತ್ತು ಆದರೀಗ ವಾಟ್ಸಾಪ್‌ನಲ್ಲಿ ಅವರಿಗೆ ನಾವು ಅವರ ಮನೆಯ ಹೊರಗಿದ್ದೇವೆ ಎಂಬ ಸಂದೇಶ ರವಾನಿಸಿದರೆ ಸಾಕು. ಸಂದೇಶಗಳಿಗಿಂತಲೂ ವಾಟ್ಸಾಪ್‌ನಲ್ಲಿ ಹೆಚ್ಚಿನ ಎಮೋಜಿಗಳಿದ್ದು ಸಂದರ್ಭಕ್ಕೆ ತಕ್ಕಂತೆ ವಾಕ್ಯವನ್ನು ರಚಿಸದೇ ಈ ಎಮೋಜಿಗಳನ್ನು ಬಳಸಿ ಸ್ನೇಹಿತರೊಂದಿಗೆ ಮಾತುಕಥೆಯನ್ನು ನಡೆಸಬಹುದು. ಇನ್ನು ನಿಮ್ಮ ಫೋನ್‌ನಲ್ಲಿ ತೆಗೆದ ಫೋಟೋವನ್ನು ವಾಟ್ಸಾಪ್‌ನಲ್ಲಿ ತ್ವರಿತವಾಗಿ ಕಳುಹಿಸಬಹುದು. ಮೊದಲೆಲ್ಲಾ ಎಮ್‌ಎಮ್‌ಎಸ್ ಮೊರೆಹೋಗಬೇಕಾಗಿತ್ತು ಇಲ್ಲವೇ ಫೇಸ್‌ಬುಕ್ ಆಶ್ರಯಿಸಬೇಕಾಗಿತ್ತು. ಆದರೀಗ ಈ ವ್ಯವಸ್ಥೆ ಬದಲಾಗಿದೆ. ಒಂದೇ ಹೆಸರಿನಲ್ಲಿ ನಿಮ್ಮ ಸ್ನೇಹಿತರ ದೊಡ್ಡ ಗುಂಪನ್ನೇ ಇಲ್ಲಿ ರಚಿಸಿಕೊಳ್ಳಬಹುದು. ವಾಟ್ಸಾಪ್ ಮೀಡಿಯಾ ಫೋಲ್ಡರ್ ಅನ್ನು ಬಳಸಿಕೊಂಡು ವೀಡಿಯೊಗಳನ್ನು ನಿಮಗೆ ಕಳುಹಿಸಬಹುದು. ವಾಟ್ಸಾಪ್‌ನಲ್ಲಿರುವ ಅಸಂಖ್ಯ ವಾಟ್ಸಾಪ್ ಫಾರ್ವರ್ಡ್ ಸಂದೇಶಗಳಿಗೆ ಅಭಾರಿಯಾಗಿದ್ದಷ್ಟೂ ಸಾಲದು. ನಮ್ಮ ಸ್ನೇಹಿತರಿಗೆ ಏನಾದರೂ ಸಂದೇಶಗಳನ್ನು ಕಳುಹಿಸಬೇಕಿದ್ದರೆ ಈ ಫಾರ್ವರ್ಡ್ ಸಂದೇಶಗಳನ್ನು ಬಳಸಿದರೆ ಸಾಕು. ಟೆಲಿ ಮಾರ್ಕೆಟರ್ಸ್‌ಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವಾಟ್ಸಾಪ್ ಉತ್ತಮ ವೇದಿಕೆಯಾಗಿದೆ ಸಂದೇಶವನ್ನು ಓದಿದ್ದಾರೆ ಎಂಬುದನ್ನು ಸೂಚಿಸುವ ಬ್ಲ್ಯೂಟಿಕ್ ವಾಟ್ಸಾಪ್‌ನ ಹೊಸ ವಿಶೇಷತೆಯಾಗಿದೆ.
ಫೋನ್‌ನ ಫೋಟೋ ರೋಲ್

ಪ್ರೊಫೈಲ್ ಚಿತ್ರ

ವಾಟ್ಸಾಪ್ ಸಹಾಯ

ವಾಟ್ಸಾಪ್ ಖಾತೆ ಬ್ಲಾಕ್

ಲಾಕ್ ಮಾಡಬಹುದಾಗಿದೆ

ಲಾಸ್ಟ್ ಸೀನ್

ಗೌಪ್ಯ ಮಾಹಿತಿ

ವಾಟ್ಸಾಪ್

ಎಮೋಜಿ

ಫೋಟೋ ತ್ವರಿತವಾಗಿ ಕಳುಹಿಸಬಹುದು

ಸ್ನೇಹಿತರ ದೊಡ್ಡ ಗುಂಪನ್ನೇ

ಮೀಡಿಯಾ ಫೋಲ್ಡರ್

ಫಾರ್ವರ್ಡ್ ಸಂದೇಶ

ಟೆಲಿ ಮಾರ್ಕೆಟರ್ಸ್

ಬ್ಲ್ಯೂಟಿಕ್


Click it and Unblock the Notifications








