ಬಳಕೆದಾರರನ್ನು ಆಕರ್ಷಿಸಲು ಹೊಸ ಫೀಚರ್ಸ್‌ ಪರಿಚಯಿಸಿದ ಸಿಗ್ನಲ್‌ ಆಪ್‌

|

ಈಗಾಗಲೇ ನಮ್ಮ ನಡುವೆ ಹಲವಾರು ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳು ಇದ್ದು, ಗ್ರಾಹಕರಿಗೆ ಮೆಸೇಜಿಂಗ್‌ ಹಾಗೂ ಇನ್ನಿತರೆ ಸೇವೆ ನೀಡುತ್ತಿವೆ. ಇದರ ನಡುವೆ ಕೆಲವು ವರ್ಷಗಳಿಂದ ಆರಂಭವಾದ ಸಿಗ್ನಲ್‌ ಆಪ್‌ ಈಗ ಇತರೆ ಆಪ್‌ಗಳಿಗೆ ಪೈಪೋಟಿ ನೀಡಲು ಮುನ್ನೆಲೆಗೆ ಬರುತ್ತಿದೆ. ಹೌದು, ಈಗ ಹೊಸ ಫೀಚರ್ಸ್‌ಗಳನ್ನು ಅನಾವರಣ ಮಾಡಿದ್ದು, ಹಲವು ಆಯ್ಕೆಗಳನ್ನು ನೀಡಲಾಗಿದೆ.

 ಸಾಮಾಜಿಕ ಪ್ಲಾಟ್‌ಫಾರ್ಮ್‌

ಹೌದು, ಈಗಾಗಲೇ ಅಸ್ತಿತ್ವದಲ್ಲಿರುವ ವಾಟ್ಸಾಪ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ನಂತೆಯೇ ಈ ಆಪ್‌ ಕೆಲಸ ಮಾಡುತ್ತದೆಯಾದರೂ ಪ್ರಮುಖ ಫೀಚರ್ಸ್‌ಗಳು ಇರುವುದರಿಂದ ಅವುಗಳಿಗೆ ಪೈಪೋಟಿ ನೀಡಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭಧ್ರಪಡಿಸಿಕೊಳ್ಳಲು ಮುಂದಾಗಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಯ್ಕೆ ಹೊಂದಿರುವ ಸಿಗ್ನಲ್‌ ಆಪ್‌ ಈಗ ಬೀಟಾವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಫೋಟೋಗಳು, ವಿಡಿಯೋ ಹಾಗೂ ಇನ್ನಿತರೆ ಫೈಲ್‌ಗಳನ್ನು ಇತರರ ಜೊತೆ ಹಂಚಿಕೊಳ್ಳಲು ಸಾಧ್ಯವಾಗುವಂತೆ ಮಾಡಲಾಗಿದೆ.

ಸ್ನಾಪ್‌ಚಾಟ್‌

ಈ ಸಿಗ್ನಲ್‌ ಆಪ್‌ ಸ್ನಾಪ್‌ಚಾಟ್‌, ವಾಟ್ಸಾಪ್‌, ಯೂಟೂಬ್‌, ಫೇಸ್‌ಬುಕ್‌ ಹಾಗೂ ಇನ್ನಿತರೆ ಸಾಮಾಜಿಕ ಸಂದೇಶಗಳ ಆಪ್‌ನಲ್ಲಿ ಇರುವ ಫೀಚರ್ಸ್‌ಗಳಂತೆಯೇ ವಿಡಿಯೋ, ಫೋಟೋ ಹಾಗೂ ಫೈಲ್‌ ಮತ್ತು ಸಂದೇಶಗಳನ್ನು ಕಳುಹಿಸಬಹುದಾಗಿದ್ದು, ಪ್ರಮುಖ ಫೀಚರ್ಸ್‌ ಎಂದರೆ ಕಳುಹಿಸಲಾದ ಸಂದೇಶಗಳು 24 ಗಂಟೆಗಳ ನಂತರ ಮರೆಯಾಗುತ್ತವೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್

ಈ ಬಗ್ಗೆ ಆಂಡ್ರಾಯ್ಡ್‌ ಡೆವಲಪರ್ ಗ್ರೇಸನ್ ಪ್ಯಾರೆಲ್ಲಿ ಅವರು ಸಿಗ್ನಲ್ ಗ್ರೂಫ್‌ನ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸಿಗ್ನಲ್‌ನಲ್ಲಿನ ಸ್ಟೋರಿಗಳು ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗದಂತೆ ಸಂವಹನ ನಡೆಸಲು ಹೊಸ ಮಾರ್ಗವನ್ನು ನೀಡಲಾಗಿದೆ. ಇದರಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಫೀಚರ್‌ ಅನ್ನು ನೀಡಲಾಗಿದೆ ಎಂದಿದ್ದಾರೆ.

 ಕಂಟ್ರೋಲ್‌

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಫೀಚರ್ ಅಷ್ಟೇ ಅಲ್ಲದೆ, ಇದರ ಜೊತೆಗೆ ನೀವು ಯಾರ ಜೊತೆ ನಿಮ್ಮ ಸ್ಟೋರಿಗಳನ್ನು ಶೇರ್‌ ಮಾಡಿಕೊಳ್ಳಬಹುದು ಎಂಬುದನ್ನು ಕಂಟ್ರೋಲ್‌ ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿದೆ. ಹಾಗೆಯೇ ಎಲ್ಲಾ ಸಿಗ್ನಲ್‌ ಬಳಕೆದಾರರಿಗೂ ಸ್ಟೋರಿಗಳು ರವಾನೆ ಆಗಲಿ ಎಂದು ಇಚ್ಚಿಸಿದರೆ ಅದನ್ನೂ ಸಹ ಮಾಡಬಹುದು ಎಂದು ಉಲ್ಲೇಖಿಸಿದ್ದಾರೆ.

'ಕ್ಲೋಸ್‌ ಫ್ರೆಂಡ್‌'

'ಕ್ಲೋಸ್‌ ಫ್ರೆಂಡ್‌'

ಇನ್ನು ಇನ್‌ಸ್ಟಾಗ್ರಾಮ್‌ ನಲ್ಲಿರುವಂತೆ 'ಕ್ಲೋಸ್‌ ಫ್ರೆಂಡ್‌' ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇದನ್ನು ನೀವು ಕಸ್ಟಮ್‌ಆಗಿ ರಚನೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನಿಮ್ಮ ಸಂದೇಶಗಳನ್ನು ನೇರವಾಗಿ ಕ್ಲೋಸ್‌ ಫ್ರೆಂಡ್ ಗ್ರೂಫ್‌ಗೆ ರವಾನೆ ಮಾಡಬಹುದು. ಹಾಗೆಯೇ ಇತರೆ ಗುಂಪಿನಲ್ಲಿ ನೀವು ಸದಸ್ಯರಾಗಿದ್ದರೆ ಆ ಗುಂಪಿಗೂ ನೀವು ಸಂದೇಶ ಕಳುಹಿಸಬಹುದು.

ಟೆಸ್ಟಿಂಗ್‌

ಇನ್ನು ನಿಮ್ಮ ಗ್ರೂಫ್‌ಗಳಿಗೆ ನೀವು ಸ್ಟೋರಿಗಳನ್ನು ಶೇರ್‌ ಮಾಡಿದಾದ ಆ ಗ್ರೂಫ್‌ನಲ್ಲಿ ಸದಸ್ಯರಾಗಿರುವ ಯಾರೇ ಆದರೂ ಅದನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಶೇರ್‌ ಮಾಡಬಹುದು, ಪ್ರತಿಕ್ರಿಯಿಸಲೂಬಹುದು. ಆದರೆ ಇದು ಟೆಸ್ಟಿಂಗ್‌ ಹಂತದಲ್ಲಿರುವುದರಿಂದ ಬೀಟಾ ಪರೀಕ್ಷಕರಾಗಿರುವವರು ಮಾತ್ರ ಪ್ರಸ್ತುತ ಹಂಚಿಶೇರ್‌ ಆದ ಸ್ಟೋರಿಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ನಿಷ್ಕ್ರಿಯದ ಆಯ್ಕೆ

ನಿಷ್ಕ್ರಿಯದ ಆಯ್ಕೆ

ಪ್ರಮುಖ ವಿಷಯ ಎಂದರೆ ಇದರಲ್ಲಿ ಒತ್ತಡದ ಬಳಕೆಗೆ ಪ್ರೇರೇಪಿಸುವ ಅವಕಾಶ ಇಲ್ಲ. ನಿಮಗೆ ಇಷ್ಟ ಇದ್ದರೆ ಸಿಗ್ನಲ್‌ ಆಪ್‌ನಲ್ಲಿ ನಿಮಗಿಷ್ಟದ ಸಮಯದ ವರೆಗೆ ನಿಷ್ಕ್ರಿಯರಾಗಬಹುದು. ಇದಕ್ಕೆ ಒಂದು ಆಯ್ಕೆ ನೀಡಲಾಗಿದೆ. ಸೆಟ್ಟಿಂಗ್‌ಗಳ ಮೆನುವಿನಲ್ಲಿ ಬಳಕೆದಾರರು ಸ್ಟೋರಿಗಳನ್ನು 'ಆಫ್‌' ಮಾಡಬಹುದಾಗಿದೆ. ಪರಿಣಾಮ ತಾವೂ ಸಹ ಯಾವುದೇ ಸ್ಟೋರಿಗಳನ್ನು ರಚಿಸುವ ಹಾಗಿರುವುದಿಲ್ಲ, ಹಾಗೆಯೇ ಬೇರೆಯವರು ಕಳುಹಿಸಿದ ಪೋಸ್ಟ್‌ನ್ನು ಸಹ ನೋಡುವ ಹಾಗಿರುವುದಿಲ್ಲ. ಅದರಂತೆ ಯಾವಾಗ ಬೇಕೋ ಆವಾಗ 'ಆನ್‌' ಮಾಡಿಕೊಂಡರೆ ಮತ್ತೇ ಅದನ್ನು ಸಾಮಾನ್ಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಂತೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಫೀಚರ್ಸ್‌ ಬಗ್ಗೆ ಆಂಡ್ರಾಯ್ಡ್‌ ಡೆವಲಪರ್ ಗ್ರೇಸನ್ ಪ್ಯಾರೆಲ್ಲಿ ಹಿಂಟ್‌ ನೀಡಿದ್ದಾರೆ.

Best Mobiles in India

Read more about:
English summary
There are already several social platforms among us, serving customers with messaging and more. Accordingly, now app called Signal has given many features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X