ನಿಮ್ಮ ಐಫೋನ್‌ ಬ್ಯಾಟರಿ ಸಾಮರ್ಥ್ಯ ಚೆನ್ನಾಗಿರಬೇಕೆಂದರೆ ತಪ್ಪದೇ ಈ ಕೆಲಸ ಮಾಡಿ!

|

ನಾವು ಫೋನ್‌ ಅನ್ನು ಎಲ್ಲ ಕೆಲಸಕ್ಕೂ ಬಳಕೆ ಮಾಡುತ್ತೇವೆ. ಅದರಲ್ಲೂ ಕೆಲವರೂ ಬೆಳಗ್ಗೆ ವಾಶ್‌ರೂಂಗೆ ತೆಗೆದುಕೊಂಡು ಹೋಗುವುದರಿಂದ ಹಿಡಿದು ಮಲಗುವಾಗಲೂ ಪಕ್ಕದಲ್ಲೇ ಇಟ್ಟುಕೊಂಡು ನಿದ್ದೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಫೋನ್ ಇಂದು ಬಳಕೆಯಾಗತ್ತಿದೆ. ಅಂತೆಯೇ ಫೋನ್ ಯಾವಾಗಲೂ ನಿಮ್ಮ ಕೈಲಿ ಇರಬೇಕು, ಚಾರ್ಜ್‌ ಬೇಗ ಖಾಲಿಯಾಗಬಾರದು ಎಂದುಕೊಂಡರೆ ಇಲ್ಲಿದೆ ನೋಡಿ ಉಪಾಯ.

ಫೋನ್‌

ಹೌದು, ಫೋನ್‌ ಅನ್ನು ಸರ್ವ ರೀತಿಯಲ್ಲೂ ಬಳಕೆ ಮಾಡುವುದರಿಂದ ಇದರ ನೇರ ಹೊಡೆತ ಬ್ಯಾಟರಿ ಮೇಲೆ ಬೀಳುತ್ತದೆ. ಅದರಲ್ಲೂ ಇಂದು ಐಫೋನ್‌ ಬಳಕೆದಾರರು ಹೆಚ್ಚಾಗಿದ್ದು, ಈ ಫೋನ್‌ನ ಕಾರ್ಯಕ್ಷಮತೆ ಹೆಚ್ಚಿರುವುದರಿಂದ ಹಾಗೂ ಹೆಚ್ಚಾಗಿಯೇ ಬಳಕೆ ಮಾಡುವುದರಿಂದ ಬ್ಯಾಟರಿ ಬೇಗನೇ ಖಾಲಿಯಾಗುವ ಸಂಭವ ಹೆಚ್ಚು. ಪರಿಣಾಮ ಬ್ಯಾಟರಿ ಸಾಮರ್ಥ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳುವ ಕೆಲವು ಸಲಹೆಗಳನ್ನು ನಾವು ತಿಳಿಸಿದ್ದೇವೆ ಈ ಲೇಖನ ಓದಿರಿ.

ಬ್ಯಾಟರಿ ಆರೋಗ್ಯವನ್ನು ಕಾಪಾಡಿಕೊಳ್ಳಿ

ಬ್ಯಾಟರಿ ಆರೋಗ್ಯವನ್ನು ಕಾಪಾಡಿಕೊಳ್ಳಿ

ದೀರ್ಘ ಸಮಯದ ವರೆಗಿನ ಬ್ಯಾಟರಿ ಅವಧಿಯನ್ನು ಪಡೆಯಲು ನಿಮ್ಮ ಐಫೋನ್‌ನ ಬ್ಯಾಟರಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರಮುಖವಾದ ಕೆಲಸವಾಗಿದೆ. ಸಾಮಾನ್ಯವಾಗಿ ನಿಮ್ಮ ಐಫೋನ್ 25 % ಗೆ ಇಳಿದಾಗ ಚಾರ್ಜ್ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಹಾಗೆಯೇ ಒಮ್ಮೆ ಚಾರ್ಜ್‌ ಮಾಡಲು ಇಟ್ಟಾಗ 85 % ರಷ್ಟು ಚಾರ್ಜ್ ಆದ ನಂತರವೇ ಫೋನ್‌ ಅನ್ನು ಚಾರ್ಜಿಂಗ್‌ ಪ್ಲಗ್‌ನಿಂದ ತೆಗೆಯುವುದು ಸೂಕ್ತ. ಈ ಮೂಲಕ ನೀವು ಐಫೋನ್‌ನ ಬ್ಯಾಟರಿಯ ಬಲವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

 ಚಾರ್ಜ್ ಆಗುವಾಗ ಬಳಕೆ ಮಾಡಬೇಡಿ

ಚಾರ್ಜ್ ಆಗುವಾಗ ಬಳಕೆ ಮಾಡಬೇಡಿ

ಸಾಮಾನ್ಯವಾಗಿ ಎಲ್ಲರೂ ಮಾಡುವ ಪ್ರಮುಖ ತಪ್ಪು ಎಂದರೆ ಫೋನ್‌ ಅನ್ನು ಚಾರ್ಜ್‌ಗೆ ಹಾಕಿರುವಾಗಲೇ ಬಳಕೆಮಾಡುವುದು. ಅದರಲ್ಲೂ ಚಾರ್ಜ್ ಮಾಡುವಾಗ ಫೋನ್‌ ಬಳಸದಂತೆ ಆಪಲ್ ಅಧಿಕೃತವಾಗಿ ಶಿಫಾರಸು ಕೂಡ ಮಾಡುತ್ತದೆ. ಯಾಕೆಂದರೆ ಚಾರ್ಜ್ ಆಗುವಾಗ ಐಫೋನ್‌ಗಳು ಸ್ವಲ್ಪ ಬಿಸಿಯಾಗುತ್ತವೆ, ಹೀಗಾಗಿ ಒಳಗಿನ ಶಾಖವನ್ನು ಹಿಡಿದಿಟ್ಟುಕೊಂಡು ಆ ಕ್ಷಣದಲ್ಲಿ ಚಾರ್ಜಿಂಗ್ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಐಫೋನ್‌ನ ಬ್ಯಾಟರಿ ಆರೋಗ್ಯ ಮತ್ತು ಚಾರ್ಜ್ ವ್ಯವಸ್ಥೆಯ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ.

ಬ್ಯಾಟರಿ ಸೇವರ್ ಫೀಚರ್ಸ್‌ ಬಳಸಿ

ಬ್ಯಾಟರಿ ಸೇವರ್ ಫೀಚರ್ಸ್‌ ಬಳಸಿ

ಯಾವುದೇ ಐಫೋನ್‌ನಲ್ಲಿ ಇನ್‌ಬಿಲ್ಟ್‌ ಬ್ಯಾಟರಿ ಸೇವರ್‌ ಫೀಚರ್ಸ್‌ ಬಳಕೆ ಮಾಡಬಹುದು. ನಿಮ್ಮ ಬ್ಯಾಟರಿ ಅವಧಿಯನ್ನು ಸುಧಾರಿಸುವ ತ್ವರಿತ ಮಾರ್ಗಗಳಲ್ಲಿ ಇದೂ ಸಹ ಪ್ರಮುಖವಾದ ಮಾರ್ಗವಾಗಿದೆ. ಆದರೆ, ಈ ಫೀಚರ್ಸ್‌ನಲ್ಲಿ ನೀವು ಯಾವುದೇ ನೋಟಿಫಿಕೇಶನ್‌ ಹಾಗೂ ಇನ್ನಿತರೆ ತ್ವರಿತ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವುದಷ್ಟೇ ಸಮಸ್ಯೆ.

ಆಪ್‌ಗಳನ್ನು ತೆರವುಗೊಳಿಸಬೇಡಿ

ಆಪ್‌ಗಳನ್ನು ತೆರವುಗೊಳಿಸಬೇಡಿ

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ದೃಷ್ಟಿಯಿಂದ ಆಪ್‌ಗಳನ್ನು ತೆರವುಗೊಳಿಸಿ ಎಂದು ಸೂಚನೆ ನೀಡಲಾಗುತ್ತದೆ. ಆದರೆ, ಐಫೋನ್‌ ನಲ್ಲಿ ಆ ಸಮಸ್ಯೆ ಇಲ್ಲ. ಈ ಕಾರಣಕ್ಕಾಗಿಯೇ ನೀವು ಬ್ಯಾಗ್ರೌಂಡ್ ಆಪ್‌ಗಳನ್ನು ಪದೇ ಪದೇ ಕ್ಲೋಸ್‌ ಮಾಡಿ ಮತ್ತೆ ಹೊಸದಾಗಿ ಓಪನ್‌ ಮಾಡಲು ಮುಂದಾದರೆ ಬ್ಯಾಟರಿ ಸಾಮರ್ಥ್ಯ ಬೇಗನೆ ಖಾಲಿಯಾಗುವ ಸಂಭವ ಹೆಚ್ಚು. ಪರಿಣಾಮ ಸಾಧ್ಯವಾದಷ್ಟು ಇದನ್ನು ಕಡಿಮೆ ಮಾಡಲು ಮುಂದಾಗಿ.

ಇತ್ತೀಚಿನ ಐಓಎಸ್‌ ಆವೃತ್ತಿಗೆ ಅಪ್‌ಡೇಟ್‌ ಮಾಡಿ

ಇತ್ತೀಚಿನ ಐಓಎಸ್‌ ಆವೃತ್ತಿಗೆ ಅಪ್‌ಡೇಟ್‌ ಮಾಡಿ

ಇನ್ನು ಐಫೋನ್‌ನಲ್ಲಿ ಕಾಲಕಾಲಕ್ಕೆ ತಕ್ಕಂತೆ ಐಓಎಸ್‌ ನವೀಕರಣ ಆಗುತ್ತಿರುತ್ತದೆ. ಹಾಗೆಯೇ ಈ ರೀತಿಯ ಅಪ್‌ಡೇಟ್‌ನಿಂದ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ ಎಂದು ಕೆಲವರು ಆಗಾಗ್ಗೆ ಹೇಳುತ್ತಿರುತ್ತಾರೆ. ಆದರೆ, ಇದಕ್ಕೆ ನಿಖರವಾದ ಪುರಾವೆಗಳನ್ನು ಈವರೆಗೂ ಒದಗಿಸಲು ಸಾಧ್ಯವಾಗಿಲ್ಲ. ಇನ್ನು ಐಫೋನ್‌ನಲ್ಲಿ ಉತ್ತಮ ಬ್ಯಾಟರಿ ಬಾಳಿಕೆಯನ್ನು ಪಡೆಯಲು ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದು ಸೂಕ್ತವಾದ ಕೆಲಸವಾಗಿದೆ ಎಂದು ಕಂಪೆನಿಯೇ ಹೇಳುತ್ತದೆ.

Best Mobiles in India

English summary
simple tricks to improve iPhone battery life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X