ಜಿಯೋ ಚೆನ್ನಾಗಿಲ್ಲ ಎಂದು ನೇರವಾಗಿ ಅಂಬಾನಿಗೆ ಹೇಳಿದ ಕ್ಯಾಮೆರಾಮನ್!..ವೈರಲ್ ವಿಡಿಯೋ!!

|

ಜಿಯೋ ನೆಟ್‌ವರ್ಕ್ ಚೆನ್ನಾಗಿಲ್ಲ ಎಂದು ಜಿಯೋ ಕಂಪೆನಿಯ ಮಾಲಿಕರಾದ ಮುಕೇಶ್ ಅಂಬಾನಿ ಅವರಿಗೆ ಹೇಳಿದರೆ ಹೇಗಿರುತ್ತದೆ ಹೇಳಿ?. ಹೌದು, ಇಂತಹುದೇ ಒಂದು ಘಟನೆ ಮೊನ್ನೆ ಮೊನ್ನೆಯಷ್ಟೇ ನಡೆದಿದೆ. ಭಾರತ ಮತ್ತು ಏಷ್ಯಾದ ಅತಿದೊಡ್ಡ ಶ್ರೀಮಂತ ಹಾಗೂ ರಿಲಾಯನ್ಸ್ ಜಿಯೋ ಕಂಪೆನಿಯ ಮಾಲಿಕ ಅಂಬಾನಿಗೆ ಕ್ಯಾಮೆರಾಮನ್ ಓರ್ವ ಟಾಂಗ್ ನೀಡಿದ್ದಾನೆ.!

ವೈರಲ್ ಭವಾನಿ ಎಂಬ ಇನ್‌ಸ್ಟಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ಇಂತದೊಂದು ಘಟನೆ ಸೆರೆಯಾಗಿದ್ದು, ಕಾರ್ಯಕ್ರಮ ಒಂದರಲ್ಲಿ ಅಂಬಾನಿ, ಪತ್ನಿ ನಿತಾ ಅಂಬಾನಿ, ಮಗಳು ಇಶಾ ಮತ್ತು ಪುತ್ರರಾದ ಆಕಾಶ್ ಮತ್ತು ಅನಂತ್ ಅಂಬಾನಿ ಅವರೊಂದಿಗೆ ಆಕಾಶ್ ಪ್ರೇಯಸಿ ಶೋಲೋ ಮೆಹ್ತಾ ಸಹ ಜೊತೆಗಿದ್ದ ಸಂದರ್ಭದಲ್ಲೇ ಇಂತಹದೊಂದು ಘಟನೆ ಜರುಗಿದೆ.

ಜಿಯೋ ಚೆನ್ನಾಗಿಲ್ಲ ಎಂದು ನೇರವಾಗಿ ಅಂಬಾನಿಗೆ ಹೇಳಿದ ಕ್ಯಾಮೆರಾಮನ್!

ಅಂಬಾನಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದ ವೇಳೆಯಲ್ಲಿ ಕ್ಯಾಮೆರಾಮನ್ ಓರ್ವ, 'ಸರ್, ಜಿಯೊ ನಹಿ ಚಾಲ್ ರಾಹಾ'( ಜಿಯೋ ಕೆಲಸ ಮಾಡುತ್ತಿಲ್ಲ) ಎಂದು ಕೂಗಿ ಹೇಳಿದ್ದಾನೆ. ಇದರಿಂದ ಅಂಬಾನಿ ಅವರು ಸ್ವಲ್ಪವಿಚಲಿತರಾದರೂ ಸಹ ಆ ಬಗ್ಗೆ ಏನೂ ತಿಳಿದವರಂತೆ ಅಲ್ಲಿಗೆ ಬಂದಿದ್ದ ನಟ ಸಂಜಯ್ ದತ್ ಅವರನ್ನು ಭೇಟಿಯಾಗಲು ಹೋಗಿದ್ದಾರೆ.

ಭಾರತ ಸೇರಿದಂತೆ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಮುಕೇಶ್ ಅಂಬಾನಿಗೆ ಕ್ಯಾಮೆರಾಮನ್ ಟಾಂಗ್ ನೀಡಿರುವುದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೇಶದಾಧ್ಯಂತ ಹೈ ಸ್ಪೀಡ್ ಅಂತರ್ಜಾಲದ ಅಲೆಯನ್ನೇ ಎಬ್ಬಿಸಿರುವ ಜಿಯೋ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದರಿಂದ ಅಂಬಾನಿಯ ಕಿವಿಗೂ ಬಿದ್ದಂತಾಗಿದೆ.

ಭಾರತದ ಟೆಲಿಕಾಂ ಪ್ರಪಂಚದಲ್ಲೇ ಸಂಚಲನ ಮೂಡಿಸಿರುವ ಜಿಯೋ, ಈಗಲೂ ಸಹ ಕೆಲವೆಡೆ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿಯೂ ಕಟ್ಟಡ ಅಥವಾ ಮನೆಯ ಒಳಗೆ ಜಿಯೋ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂಬುದು ನಿಜವೂ ಹೌದು. ಆದರೆ, ಜಿಯೋ ಕೆಲಸ ಮಾಡುತ್ತಿಲ್ಲ ಎಂದು ಮುಕೇಶ್ ಅಂಬಾನಿಯವರಿಗೆ ಹೇಳಿದ ವಿಡಿಯೋ ನಗುತರಿಸುವಂತಿದೆ.

ಓದಿರಿ: ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಮುಳುಗಡೆ!?

Best Mobiles in India

English summary
'Sir, Jio nahi chal raha', photographer tells Mukesh Ambani at Deepika-Ranveer wedding reception. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X