Subscribe to Gizbot

ಸೋಲನ್ನು ಹಿಮ್ಮೆಟ್ಟಿಸಿದ ಗೂಗಲ್‌ ನೆಕ್ಸಸ್ ಯಶೋಗಾಥೆ

Written By:

ಟೆಕ್‌ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿದಂತೆ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರು ಸಹ ಹೊಸದೊಂದು ರೀತಿಯಲ್ಲಿ ಆಗಾಗ ಹೊಸ ಫ್ಲ್ಯಾಗ್‌ಶಿಪ್‌ನೊಂದಿಗೆ ಉತ್ಪನ್ನಗಳನ್ನು ಹೊರತರುತ್ತಿದ್ದಾರೆ. ಈ ರೀತಿಯ ಬೆಳವಣಿಗೆಯಿಂದ ಯಾವ ಸ್ಮಾರ್ಟ್‌ಫೋನ್‌ ಅತ್ಯಂತ ಉನ್ನತ ಶ್ರೇಣಿಯಲ್ಲಿತ್ತು ಎಂಬುದನ್ನು ಸುಲಭವಾಗಿ ಮರೆಯಬಹುದಾಗಿದೆ.

ಓದಿರಿ:ಫೋನ್ ಚಾರ್ಜಿಂಗ್ ಕಟ್ಟುಕಥೆಗಳು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ

ನೆಕ್ಸಸ್‌ ಗೂಗಲ್‌ ಜೊತೆ ತಯಾರಾದ ಒಂದು ಉತ್ತಮ ಫೋನ್‌ ಆಗಿದ್ದು, ಪ್ರಖ್ಯಾತ ಶ್ರೇಣಿಯ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳನ್ನು ಆಂಡ್ರಾಯ್ಡ್‌ಮತ್ತು ಟೆಕ್‌ ಪ್ರಿಯರಿಗೆ ಒದಗಿಸಿದೆ. ಅಂತಯೇ ಈಗ ಗೂಗಲ್‌ 'ನೆಕ್ಸಸ್ ಹ್ಯಾಂಡ್‌ಸೆಟ್‌' ಸೀರೀಸ್‌ನ ಹೊಸ ಫೋನ್‌ ಲಾಂಚ್‌ ಮಾಡಿದೆ. ನೆಕ್ಸಸ್ 5X ಮತ್ತು ನೆಕ್ಸಸ್‌6P ಗೂಗಲ್ ಲಾಂಚ್‌ ಮಾಡಿರುವ ಹೊಸ ಸ್ಮಾರ್ಟ್‌ಫೋನ್‌ಗಳಾಗಿದ್ದು, ನೆಕ್ಸಸ್‌ ಸೀರೀಸ್‌ನ ಎಲ್ಲಾ ಸ್ಮಾರ್ಟ್‌ಫೋನ್‌ ಮಾಹಿತಿಗಳನ್ನು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೆಕ್ಸಸ್ 1 - ಜನವರಿ 2010

ನೆಕ್ಸಸ್ 1 - ಜನವರಿ 2010

HTC ಗೆ ಹೋಲುವಂತೆ ವಿನ್ಯಾಸದಲ್ಲಿ ಈ ಫೋನ್‌ ತಯಾರಿಸಲಾಗಿತ್ತು. ಆಂಡ್ರಾಯ್ಡ್‌ 2.1 ಎಕ್ಲೇರ್, ಸಿಂಗಲ್‌ ಕೋರ್ ಪ್ರೊಸೆಸರ್, 512mb RAM, 5mp ಕ್ಯಾಮೆರಾ ಜೊತೆಗೆ ಗೂಗಲ್‌ ವಾಯ್ಸ್‌ ಮತ್ತು ಗೂಗಲ್‌ ಮ್ಯಾಪ್ಸ್‌ ಹೊಂದಿತ್ತು.

ನೆಕ್ಸಸ್ s - ಡಿಸೆಂಬರ್‌ 2010

ನೆಕ್ಸಸ್ s - ಡಿಸೆಂಬರ್‌ 2010

ನೆಕ್ಸಸ್ s ಫೋನ್‌ಗೆ HTC ತೊರೆದು ಸ್ಯಾಮ್‌ಸಂಗ್ ಜೊತೆಸೇರಿ ಈ ಫೋನ್‌ ತಯಾರಿಸಲಾಯಿತು. ಇದು ಆಂಡ್ರಾಯ್ಡ್‌ 2.3 ಜಿಂಜರ್‌ಬರ್ಡ್‌ನಲ್ಲಿ ಚಾಲನೆ ನೀಡಿ ಎನ್‌ಎಫ್‌ಸಿಗೆ ಪೂರ್ಣವಾಗಿ ಸಹಕಾರ ನೀಡಿತು. 4inch ಸ್ಕ್ರೀನ್‌, 5MP ಕ್ಯಾಮೆರಾ ಅಳವಡಿಸಲಾಗಿತ್ತು

ಗ್ಯಾಲಾಕ್ಸಿ ನೆಕ್ಸಸ್ - ಡಿಸೆಂಬರ್‌ 2011

ಗ್ಯಾಲಾಕ್ಸಿ ನೆಕ್ಸಸ್ - ಡಿಸೆಂಬರ್‌ 2011

ಅಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್‌ 4.0, ಪ್ರೊಸೆಸರ್‌ ಡ್ಯುಯಲ್‌ ಕೋರ್ ಹೊಂದಿದ್ದು, ಈ ಫೋನ್‌ 1GB RAM ಮತ್ತು 16GB ಇಂಟರ್‌ನಲ್‌ ಮೆಮೊರಿ ನೀಡಲಾಗಿತ್ತು. ಇದನ್ನು ನವೆಂಬರ್‌ 2011 ರಲ್ಲಿ ಬಿಡುಗಡೆ ಮಾಡಲಾಯಿತು.

ನೆಕ್ಸಸ್ 4 - ನವೆಂಬರ್ 2012

ನೆಕ್ಸಸ್ 4 - ನವೆಂಬರ್ 2012

ಈ ಫೋನ್‌ ಮಾರುಕಟ್ಟೆಗೆ ತರಲು ಗೂಗಲ್‌ ನೆಕ್ಸಸ್ ಎಲ್‌ಜಿ ಜೊತೆ ಪಾರ್ಟ್‌ನರ್‌ಶಿಪ್‌ ಬೆಳಸಿತು. ಇದು ರಬ್ಬರೈಜ್ಡ್‌ ಸಾಪ್ಟ್‌ ಟಚ್‌ ಲಕ್ಷಣಹೊಂದಿತ್ತು. ಈ ಮೊಬೈಲ್‌ ಮಾರುಕಟ್ಟೆಯಲ್ಲಿ ಎದುರಾಳಿಗಳನ್ನು ಎದುರಿಸಲು ಗೂಗಲ್‌ ಬೆಲೆಯಲ್ಲಿ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟಿತು.

 ನೆಕ್ಸಸ್ 5 - ಅಕ್ಟೊಬರ್‌ 2013

ನೆಕ್ಸಸ್ 5 - ಅಕ್ಟೊಬರ್‌ 2013

ಈ ಹ್ಯಾಂಡ್‌ಸೆಟ್‌ ಕೂಡ ಎಲ್‌ಜಿ ಪಾರ್ಟ್‌ನರ್‌ಶಿಪ್‌ನೊಂದಿಗೆ ತಯಾರಿಸಲಾಯಿತು. ಗೂಗಲ್‌ ಸರಳವಾಗಿ ಇದನ್ನು ವಿನ್ಯಾಸಗೊಳಿಸಿತ್ತು. ಅಲ್ಲದೆ, ಕಡಿಮೆ ಬೆಲೆಗೆ 2GB RAM, 32GB ಇಂಟರ್‌ ನಲ್‌ ಮೆಮೊರಿ ಒದಗಿಸಲಾಗಿತ್ತು ಮತ್ತು 8mp ಕ್ಯಾಮೆರಾ ಸಾಮರ್ಥ್ಯ ನೀಡಲಾಗಿತ್ತು.

ನೆಕ್ಸಸ್ 6 - ನವೆಂಬರ್ 2014

ನೆಕ್ಸಸ್ 6 - ನವೆಂಬರ್ 2014

ನೆಕ್ಸಸ್ 6 ಮೊಟೊರೋಲಾದ 'ಮೊಟೊ x' ಆಧಾರವಾಗಿತ್ತು. ಆಶ್ಚರ್ಯವೆಂದರೆ, ಈ ಫೋನ್ ಗಾತ್ರ ಮತ್ತು ಬೆಲೆ ಎರಡನ್ನು ಹೆಚ್ಚಿಸಲಾಗಿತ್ತು. 5.96 inch ಸ್ಕ್ರೀನ್‌, ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್‌ 805 ಪ್ರೊಸೆಸರ್‌ ಮತ್ತು 3GB RAM ಅಳವಡಿಸಲಾಗಿತ್ತು. ಇದು ಆಂಡ್ರಾಯ್ಡ್‌ 5.0 ಲಾಲಿಪಪ್‌ ಇನ್‌ಸ್ಟಾಲ್‌ ಮಾಡಲಾಗಿತ್ತು.

 ನೆಕ್ಸಸ್ 5X - ಸೆಪ್ಟೆಂಬರ್‌ 2015

ನೆಕ್ಸಸ್ 5X - ಸೆಪ್ಟೆಂಬರ್‌ 2015

ನೆಕ್ಸಸ್ 5 ಎರಡು ವರ್ಷಗಳ ಕಾಲ ಇದರ ಇನ್ನೊಂದು ಹೊಸ ಅಪ್‌ಡೇಟ್‌ ಬರುವ ತನಕ ಹೆಚ್ಚು ಪ್ರಖ್ಯಾತವಾಗಿತ್ತು. ಇದು ಎಲ್‌ಜಿ ತಯಾರಿ ಮಾಡಿದ ಇನ್ನೊಂದು ಫೋನ್‌. ಇದು ನೆಕ್ಸಸ್ 5 ಗೆ ಹೋಲಿಕೆಯಾಗಿದ್ದು, ಆಂಡ್ರಾಯ್ಡ್‌ 6.0 ಅಪರೇಟಿಂಗ್‌ಸಿಸ್ಟಮ್‌ ಹೊಂದಿತ್ತು.

ನೆಕ್ಸಸ್ 6P - ಸೆಪ್ಟೆಂಬರ್‌ 2015

ನೆಕ್ಸಸ್ 6P - ಸೆಪ್ಟೆಂಬರ್‌ 2015

ಗೂಗಲ್‌ ಈ ಸ್ಮಾರ್ಟ್‌ಫೋನ್‌ ತಯಾರಿಗೆ Huawei ಜೊತೆ ಪಾರ್ಟ್‌ನರ್‌ಶಿಪ್‌ ಬೆಳೆಸಿತು. ಮಾರಾಟದಲ್ಲಿ ಗೆಲುವು ಸಾಧಿಸಲು ಗೂಗಲ್‌ ಈ ನಿರ್ಧಾರ ಕೈಗೊಂಡಿತು. ಪ್ರಸ್ತುತದಲ್ಲಿ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಈ ಮೊಬೈಲ್‌ ಬೆರಳುಗಳ ಸ್ಕ್ಯಾನರ್‌, ಸ್ನಾಪ್‌ಡ್ರಾಗನ್‌ 810 ಪ್ರೊಸೆಸರ್‌, TBC ಕನೆಕ್ಟಿವಿಟಿ ಇತ್ಯಾದಿ ಅನುಕೂಲಗಳನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Every year, smartphone manufacturers bring out a brand new flagship device for us all to get excited about. With this cycle and the number of manufacturers out there, it’s easy to forget what was top of the line just a few years ago.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot