Subscribe to Gizbot

ಫೋನ್ ಚಾರ್ಜಿಂಗ್ ಕಟ್ಟುಕಥೆಗಳು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ

Written By:

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಂತೆಲ್ಲಾ ತಲೆತಿನ್ನುವ ಸಮಸ್ಯೆಯಾಗಿದೆ ಅದರ ಬ್ಯಾಟರಿ. ಫೋನ್ ಬ್ಯಾಟರಿ ಡ್ರೈ ಆಗುವುದು ಅಥವಾ ಚಾರ್ಜಿಂಗ್ ನಿಧಾನವಾಗುವುದು ಹೀಗೆ ಒಂದಿಲ್ಲೊಂದು ಸಮಸ್ಯೆಯನ್ನು ಫೋನ್‌ಗಳು ಕಾಲಕ್ರಮೇಣ ಅನುಭವಿಸುತ್ತಲೇ ಇರುತ್ತವೆ. ಈ ಸಮಸ್ಯೆಗೆ ಪರಿಹಾರ ನಮ್ಮ ಕೈಗೆಟಕುವ ದೂರದಲ್ಲಿದ್ದರೂ ನಾವು ಮಾತ್ರ ಮೂಢನಂಬಿಕೆಯನ್ನು ಅನುಸರಿಕೊಂಡು ಹೋಗುತ್ತೇವೆ.

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ಚಾರ್ಜಿಂಗ್ ಕುರಿತ ಕಟ್ಟು ಕಥೆಗಳನ್ನೇ ಇಂದಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಈ ಕಟ್ಟುಕಥೆಗಳನ್ನು ನೀವು ನಂಬಿರುವವರು ಆಗಿದ್ದಲ್ಲಿ ಆ ವಿಚಾರಗಳನ್ನೇ ಇಂದೇ ನಿಮ್ಮ ತಲೆಯಿಂದ ತೆಗೆದುಹಾಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಮೊರಿ ಇದೆ

ಬ್ಯಾಟರಿಗಳಿಗೆ ಮೆಮೊರಿ ಇದೆ

ಆಗಾಗ್ಗೆ ಫೋನ್‌ಗೆ ಚಾರ್ಜ್ ಮಾಡುವುದು ನಿಮ್ಮ ಫೋನ್‌ಗೆ ದೋಷವನ್ನುಂಟು ಮಾಡುವುದಿಲ್ಲ ಎಂಬ ಸತ್ಯವನ್ನು ಕಂಡುಕೊಳ್ಳಿ. ಇನ್ನು ಕೇವಲ 50% ಚಾರ್ಜ್ ಆಗಿ ನಂತರ ಅರ್ಧದಲ್ಲೇ ಫೋನ್ ಚಾರ್ಜಿಂಗ್ ನಿಂತಿದೆ ಎಂದಾದಲ್ಲಿ ಸುಮ್ಮನೆ ಚಿಂತಿಸದಿರಿ.

ಕಡಿಮೆ ಗುಣಮಟ್ಟ

ಕಡಿಮೆ ಗುಣಮಟ್ಟದ ಚಾರ್ಜರ್‌ಗಳಿಂದ ಹಾನಿ

ಎಲ್ಲಾ ಚಾರ್ಜರ್‌ಗಳು ಈ ರೀತಿಯಾಗಿ ಪರಿಣಾಮವನ್ನು ಬೀರಲಾರವು ಎಂದು ಹೇಳಲಾಗುವುದಿಲ್ಲ. ಬ್ರ್ಯಾಂಡ್ ಚಾರ್ಜರ್‌ಗಳು ದೊರೆಯದೇ ಹೋದ ಸಂದರ್ಭದಲ್ಲಿ ನೀವು ಕಡಿಮೆ ದರದ ಚಾರ್ಜರ್‌ಗಳನ್ನು ಫೋನ್ ಚಾರ್ಜಿಂಗ್‌ಗಾಗಿ ಬಳಸಬಹುದಾಗಿದೆ.

ರಾತ್ರಿಪೂರ್ತಿ ಫೋನ್ ಚಾರ್ಜ್

ರಾತ್ರಿಪೂರ್ತಿ ಫೋನ್ ಚಾರ್ಜ್ ಮಾಡುವುದರಿಂದ ಹಾನಿ

ಕೆಲವೊಂದು ಫೋನ್‌ಗಳು ನಿಮ್ಮಿಂದಲೇ ಹೆಚ್ಚು ಸ್ಮಾರ್ಟ್ ಆಗಿರುತ್ತವೆ ಮತ್ತು ಚಾರ್ಜ್ ಪೂರ್ತಿಯಾದೊಡನೆ ಅವು ಸ್ವಯಂಚಾಲಿತವಾಗಿ ನಿಲ್ಲುತ್ತವೆ. ಆದರೆ ಬ್ಯಾಟರಿ ದೀರ್ಘತೆಯನ್ನು ನಿಮಗೆ ಇದರಿಂದ ವಿಸ್ತರಿಸಬಹುದಾಗಿದೆ. ಹೆಚ್ಚಿನ ಸಮಯ 40% ಅಥವಾ 80% ದಷ್ಟು ಮಾತ್ರ ಚಾರ್ಜ್ ಮಾಡಿದರೆ ಸಾಕು.

ಬ್ಯಾಟರಿಗೆ ಹಾನಿ

ಫೋನ್ ಆಫ್ ಮಾಡುವುದರಿಂದ ಬ್ಯಾಟರಿಗೆ ಹಾನಿ

ಖಂಡಿತ ಈ ಮಾತನ್ನು ತಳ್ಳಿಹಾಕಬಹುದು. ನಿಮ್ಮ ಫೋನ್ ಅನ್ನು ನಿರ್ದಿಷ್ಟ ಸಮಯದವರೆಗೆ ಆಫ್ ಮೋಡ್‌ನಲ್ಲಿರಿಸಿದರೆ ಬ್ಯಾಟರಿ ಡ್ರೈನ್ ಆಗುತ್ತದೆ. ಆದರೆ ಸ್ವಿಚ್ ಆನ್ ಮಾಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಫೋನ್ ಬಳಸಬೇಡಿ

ಚಾರ್ಜ್‌ನಲ್ಲಿರುವಾಗ ಫೋನ್ ಬಳಸಬೇಡಿ

ನೀವು ಕಡಿಮೆ ಗುಣಮಟ್ಟದ ಚಾರ್ಜರ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರುವುದೇ ಸೂಕ್ತ.

ಪೂರ್ಣವಾಗಿ ಚಾರ್ಜ್ ಮಾಡಿ

ಪೂರ್ಣವಾಗಿ ಚಾರ್ಜ್ ಮಾಡಿ ನಂತರ ಬಳಸಿ

ಫೋನ್ ಪೂರ್ಣವಾಗಿ ಚಾರ್ಜ್ ಆಗದೆಯೇ ಅದನ್ನು ಬಳಸುವುದರಿಂದ ಫೋನ್‌ಗೆ ಹಾನಿಯಾಗುತ್ತದೆ ಎಂದೇ ಜನರು ಭಾವಿಸುತ್ತಾರೆ. ಆದರೆ ಈ ಅನಿಸಿಕೆ ತಪ್ಪು ಫೋನ್ ಭಾಗಶಃ ಚಾರ್ಜ್ ಆಗಿದ್ದರೂ ಅದನ್ನು ಬಳಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ.

ಬ್ಯಾಟರಿಗೆ ದೀರ್ಘತೆ

ಫ್ರೀಜರ್‌ನಲ್ಲಿಡುವುದರಿಂದ ಬ್ಯಾಟರಿಗೆ ದೀರ್ಘತೆ

ಇದು ಎಲ್ಲಾ ಸಮಯದಲ್ಲೂ ನಿಮ್ಮ ಉಪಾಯಕ್ಕೆ ಪುಷ್ಟಿಯನ್ನು ನೀಡುವುದಿಲ್ಲ ಎಂಬುದನ್ನು ಕಂಡುಕೊಳ್ಳಿ. ಲಿಯಾನ್ ಬ್ಯಾರಿಗಳು ಇದರಿಂದ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತವೆ. ಕೊಠಡಿಯ ಉಷ್ಣತೆ ನಿಮ್ಮ ಫೋನ್‌ನ ಬ್ಯಾಟರಿಗೆ ಅತ್ಯುತ್ತಮವಾದುದಾಗಿದೆ.

ಬ್ಯಾಟರಿ ಕುಗ್ಗುತ್ತದೆ

ಇಂಟರ್ನೆಟ್ ಬಳಸುವುದರಿಂದ ಬ್ಯಾಟರಿ ಕುಗ್ಗುತ್ತದೆ

ಇನ್ನು ನಿಮ್ಮ ಫೋನ್‌ನಲ್ಲಿ ನೀವು ಗೇಮಿಂಗ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಕುಗ್ಗುತ್ತದೆ. ಇನ್ನು ಇಂಟರ್ನೆಟ್‌ನ ಅಧಿಕ ಬಳಕೆಯಿಂದ ಫೋನ್ ಬ್ಯಾಟರಿ ಕುಗ್ಗುತ್ತದೆ ಎಂಬುದು ಸುಳ್ಳಾಗಿದೆ.

ಲಾಭವುಂಟಾಗುವುದಿಲ್ಲ

ವೈಫೈ, ಬ್ಲ್ಯೂಟೂತ್, ಜಿಪಿಎಸ್ ಆಫ್ ಮಾಡುವುದು

ನಿಮ್ಮ ಫೋನ್‌ನಲ್ಲಿರುವ ಈ ಎಲ್ಲಾ ಸೌಲಭ್ಯಗಳನ್ನು ನೀವು ಆಫ್ ಮಾಡುವುದರಿಂದ ನಿಮಗೆ ನಷ್ಟವೇ ಹೊರತು ಲಾಭವುಂಟಾಗುವುದಿಲ್ಲ ಎಂಬುದನ್ನು ಗಮನಿಸಿಕೊಳ್ಳಿ.

ಬ್ಯಾಟರಿ ದೀರ್ಘತೆ

ಟಾಸ್ಕ್ ಮ್ಯಾನೇಜರ್‌ಗಳ ಸಹಾಯ

ಮೂರನೇ ವ್ಯಕ್ತಿ ಟಾಸ್ಕ್ ಮ್ಯಾನೇಜರ್‌ಗಳು ನಿಮ್ಮ ಫೋನ್‌ನ ಬ್ಯಾಟರಿ ದೀರ್ಘತೆಯಲ್ಲಿ ಎಂದಿಗೂ ಸಹಾಯ ಮಾಡಲಾರವು ಎಂಬುದನ್ನು ಕಂಡುಕೊಳ್ಳಿ. ಇವುಗಳು ವಿಶ್ವಾಸಾರ್ಹವಾಗಿರುವುದಿಲ್ಲ. ಇದರಿಂದ ನಿಮ್ಮ ಫೋನ್‌ಗೆ ಹಾನಿ.

ಪೂರ್ತಿಯಾಗಿ ಚಾರ್ಜ್ ಮಾಡಿ

ಹೊಸ ಫೋನ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿ

ಹೊಸ ಫೋನ್ ಅನ್ನು ನೀವು ಬಳಸುವ ಮೊದಲು ಅದನ್ನು ಪೂರ್ತಿಯಾಗಿ ಚಾರ್ಜ್ ಮಾಡಬೇಕೆಂದು ಹೇಳುತ್ತಾರೆ.ಆದರೆ ಇದಕ್ಕೆ ಸರಿಯಾದ ಸಾಕ್ಷಿಗಳಿಲ್ಲ ಎಂಬುದನ್ನು ಕಂಡುಕೊಳ್ಳಿ. ಹೆಚ್ಚಿನ ಫೋನ್ ತಯಾರಕರು ಅರ್ಧದಷ್ಟು ಚಾರ್ಜ್ ಅನ್ನು ಡಿವೈಸ್‌ನಲ್ಲಿ ಇಟ್ಟಿರುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
There are many misleading myths that evolved over time about charging your phone, most of them are completely wrong. These myths are not only false but can actually do more harm than good, and reduce the total life span of your battery.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot