ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಏಕಾಂಗಿ ಜೀವನಕ್ಕೊಂದು ಫುಲ್‌ಸ್ಟಾಪ್!!!

Written By:

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಳಸದವರು ಯಾರಿದ್ದಾರೆ ಹೇಳಿ? ವಿಶ್ವದಾದ್ಯಂತ ಫೋನ್ ಪ್ರಿಯರು ಮಿಲಿಯಗಟ್ಟಲೆ ಸಂಖ್ಯೆಯಲ್ಲಿದ್ದು ಇವರು ತಮ್ಮ ಫೋನ್ ಅನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹೌದು ಇಂದಿನ ಲೇಖನದಲ್ಲಿ ನಾವು ತಿಳಿಸುವ ಅಂಶ ಇದುವೇ ಆಗಿದೆ. ತಮ್ಮ ಸಂಗಾತಿಗಿಂತಲೂ ಮೊಬೈಲ್ ಫೋನ್ ಬಳಕೆದಾರರಿಗೆ ಪ್ರಿಯವಾಗಿದೆ ಎಂಬುದು ಅಚ್ಚರಿಯ ಸಂಗತಿಯಾದರೂ ಒಪ್ಪಲೇಬೇಕಾದ ಸತ್ಯವಾಗಿದೆ.

ಓದಿರಿ: ಆಂಡ್ರಾಯ್ಡ್ ಬಳಕೆದಾರರ ತಲೆಯ ಮೇಲೆ ಅಪಾಯದ ತೂಗುಕತ್ತಿ!!!

ಅಧ್ಯಯನಗಳು ಈ ಅಂಶವನ್ನು ನಿಜವೆಂದು ಪ್ರತಿಪಾದಿಸುತ್ತಿದ್ದು ರಾತ್ರಿ ವೇಳೆಯಲ್ಲಿ ಕೂಡ ಸಂಗಾತಿಗಿಂತಲೂ ಫೋನ್‌ಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಾರಂತೆ. ಮತ್ತು ಫೋನ್ ಬಳಸುತ್ತಾ ಸಮಯ ಜಾರುವ ಪರಿವೆ ಕೂಡ ಇವರಿಗೆ ಇರುವುದಿಲ್ಲ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಮಾಹಿತಿಯನ್ನು ನಾವು ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಕೈಯಲ್ಲಿ ತಮ್ಮ ಡಿವೈಸ್ ಹಿಡಿದುಕೊಂಡು ನಿದ್ರಾ ದೇವಿಯ ತೋಳ್ತೆಕ್ಕೆಗೆ ಹೆಚ್ಚು ಭಾರತೀಯರು ಜಾರುತ್ತಿದ್ದಾರೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಹೀಗೆ ತಮ್ಮೊಂದಿಗೆ ಮೊಬೈಲ್ ಹಿಡಿದುಕೊಂಡು ನಿದ್ರಿಸುವವರ ಸಂಖ್ಯೆ ಭಾರತದಲ್ಲಿ 74% ವಾಗಿದ್ದು ಚೀನಾದಲ್ಲಿ 70% ಆಗಿದೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ವಾರಾಂತ್ಯದ ಲೈಂಗಿಕ ಕ್ರಿಯೆಗಿಂತಲೂ ಇವರು ಮೊಬೈಲ್ ಫೋನ್‌ಗೆ ರಾತ್ರಿ ವೇಳೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಇನ್ನು 54% ದಷ್ಟು ಬಳಕೆದಾರರು ಸ್ನಾನ ಮಾಡುವಾಗ ಕೂಡ ಫೋನ್ ಅನ್ನು ಬಳಸುತ್ತಿದ್ದು, ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಫೋನ್ ಪ್ರಧಾನವಾಗಿದೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ತಮ್ಮ ಫೋನ್ ಕುರಿತ ರಹಸ್ಯಗಳನ್ನು 40% ದಷ್ಟು ಜನರು ತಮ್ಮ ನಿಕಟ ಸ್ನೇಹಿತರಲ್ಲಿ ಕೂಡ ತಿಳಿಸುದಿಲ್ಲವಂತೆ

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಇನ್ನು ನಿಖರ ಅಧ್ಯಯನದ ಮೂಲಕ ಪರಿಶೀಲಿಸಿದಾಗ ಫೋನ್ ಮತ್ತು ಬಳಕೆದಾರರ ಸಂಬಂಧ ಅಷ್ಟು ಸುಖದಾಯಕವಲ್ಲ ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಕೇವಲ 39% ದಷ್ಟು ಜನರು ತಮ್ಮ ಡಿವೈಸ್‌ನೊಂದಿಗೆ ಸಂತೋಷವಾಗಿದ್ದು ಉಳಿದ 79% ದಷ್ಟು ಬಳಕೆದಾರರು ತಮ್ಮ ಸಂತಸಕ್ಕೆ ಫೋನ್ ಭಂಗವುಂಟು ಮಾಡುತ್ತಿದೆ ಎಂದೇ ಜರೆದಿದ್ದಾರೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಈ ಸಮೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲಾಗಿದ್ದು ಗ್ಲೋಬಲ್ ಪಬ್ಲಿಕ್ ಒಪೀನಿಯನ್ ರೀಸರ್ಚ್ ಕನ್ಸಲ್ಟನ್ಸಿ ಕೆಆರ್‌ಸಿ ಇದರ ನೇತೃತ್ವ ವಹಿಸಿದ್ದು ಅಮೇರಿಕಾ, ಬ್ರಿಟನ್, ಬ್ರೆಜಿಲ್, ಚೀನಾ, ಸ್ಪೇನ್, ಮೆಕ್ಸಿಕೊ ಮತ್ತು ಭಾರತದ ಒಟ್ಟು 7,112 ಸ್ಮಾರ್ಟ್‌ಫೋನ್ ಬಳಕೆದಾರರನ್ನು ಈ ಅಧ್ಯಯನ ಒಳಗೊಂಡಿದೆ.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಕಳೆದ ವರ್ಷ ಇಂತಹುದೇ ಸಮೀಕ್ಷೆಯನ್ನು ಸಂಸ್ಥೆ ನಡೆಸಿದ್ದು 57% ದಷ್ಟು ಭಾರತೀಯರು ಸ್ಮಾರ್ಟ್‌ಫೋನ್ ಇಲ್ಲದೆ ನಾವು ಇರಲಾರೆವು ಎಂಬ ತತ್ವಕ್ಕೆ ಬದ್ಧರಾಗಿರುವವರಾಗಿದ್ದರು.

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ
  

ಸ್ಮಾರ್ಟ್‌ಫೋನ್ ನಿಮ್ಮ ರಾತ್ರಿ ಸಂಗಾತಿ

ಇನ್ನು ಈ ಅಧ್ಯಯನಗಳಿಂದ ತಿಳಿದು ಬಂದಿರುವ ಅಂಶವೆಂದರೆ 98% ದಷ್ಟು ಭಾರತೀಯರು ತಮ್ಮ ಫೋನ್‌ನೊಂದಿಗೆ ನಿದ್ರಿಸುತ್ತಾರೆ ಮತ್ತು 83% ದಷ್ಟು ಜನರು ಫೋನ್ ಅನ್ನು ತಮ್ಮ ಸಮೀಪವೇ ಇಟ್ಟುಕೊಳ್ಳುತ್ತಾರೆ ಮತ್ತು ಫೋನ್‌ನ ಸಮೀಪವೇ ಇರುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
More Indians are sleeping with smartphones in their hands, a survey has found, adding that some would rather give up sex for a weekend than part from their "sleeping partner".
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot