ನಿಮ್ಮನ್ನು ನಿಯಂತ್ರಿಸುತ್ತಿರುವ ಫೇಸ್‌ಬುಕ್‌

By Suneel
|

ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಿ. ನೀವು ನಿದ್ರೆ ಇಂದ ಎದ್ದ ತಕ್ಷಣ ಏನು ಮಾಡುತ್ತೀರಿ ? ಹಾಗೆ ರಾತ್ರಿ ಮಲಗುವ ಮುಂಚೆ ಏನು ಮಾಡುತ್ತೇನೆ ಎಂದು ಕೇಳಿಕೊಳ್ಳಿ ? ಈ ಎರಡು ಪ್ರಶ್ನೆಗಳಿಗೂ ಉತ್ತರ ಫೋನ್‌ ಚೆಕ್‌ ಮಾಡುವುದು. ತಿಂಗಳಿಗೊಂದು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೊಂಡಂತೆ ಸಾಮಾಜಿಕ ಜಾಲತಾಣಗಳು ಇಂದು ಹೆಚ್ಚು ಗಮನಸೆಳೆಯುತ್ತಿವೆ. ಅಲ್ಲದೇ ನಮ್ಮ ದೇಹಕ್ಕೆ ಹೊಂದಿಕೊಂಡ ಮೂರನೇ ಪ್ರಮುಖ ಅಂಗವಾಗಿ ಮಾರ್ಪಾಡುತ್ತಿದೆ.

ಓದಿರಿ: ಮಾನಸಿಕ ಖಿನ್ನತೆಗೆ ಫೇಸ್‌ಬುಕ್‌ ಪರಿಹಾರ

ಅಂತ್ಯವಿಲ್ಲದ ಫೇಸ್‌ಬುಕ್‌ ಲೈಕ್‌ಗಳು, ಟ್ವಿಟರ್‌ನ ರೀಟ್ವೀಟ್‌ಗಳು, ಇನ್ಸ್ಟಾಗ್ರಾಮ್‌ನ ಸೆಲ್ಫೀಗಳು , ಇವುಗಳೊಂದಿಗಿನ ಸಂಚಾರ ಹೇಗೆ ಅಪಾಯಕಾರಿ ಎಂದು ಹೇಳಲಾಗುತ್ತಿಲ್ಲ. ಆದರೂ ಸಹ ಇಂದು ಸಾಮಾಜಿಕ ಜಾಲತಾಣಗಳು ಇಂದು ನಮಗೆ ಸ್ವಯಂ ಮೌಲ್ಯ ಮತ್ತು ಸಾಮಾಜಿಕ ಗೌರವವನ್ನು ಕಲ್ಪಿಸಿಕೊಡುತ್ತವೆ. ನಿಮಗೇನಾದರೂ ನಂಬಲು ಸಾಧ್ಯವಿಲ್ಲ ಎಂದರೆ ಗಿಜ್‌ಬಾಟ್‌ ನ ಈ ಲೇಖನ ಓದಿ ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಲೇಖನದ ಈ 10 ಅಂಶಗಳು ಸಾಮಾಜಿಕ ಜಾಲತಾಣ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ನಿಮ್ಮ ಮನಸ್ಸನ್ನು ದಿನನಿತ್ಯ ನಿಯಂತ್ರಣದಲ್ಲಿಡುತ್ತವೆ.

ಡ್ರೆಸ್‌ ಧರಿಸುವಿಕೆ ಮೇಲೆ ನಿಯಂತ್ರಣ

ಡ್ರೆಸ್‌ ಧರಿಸುವಿಕೆ ಮೇಲೆ ನಿಯಂತ್ರಣ

ಸಾಮಾಜಿಕ ಜಾಲತಾಣಗಳು ನಿಮ್ಮ ಡ್ರೆಸ್‌ ಧರಿಸುವಿಕೆ ಮೇಲೆ ನಿಯಂತ್ರಣ ಹೊಂದುತ್ತವೆ.

ಮಾತನಾಡುವುದರ ಮೇಲೆ ನಿಯಂತ್ರಣ

ಮಾತನಾಡುವುದರ ಮೇಲೆ ನಿಯಂತ್ರಣ

ಇಂದು ಕೇವಲ ನೀವು ಮಾತಿನಲ್ಲಿ ಹೇಳದೆ ಅಕ್ಷರಗಳ ಮೂಲಕ ದಿನಕ್ಕೆ ಒಂದು ಭಾರಿಯಾದರೂ ಸಹ ಸಂಭಾಷಣೆ ಮಾಡುತ್ತಿದ್ದೀರಿ.

ನೀವು ತಿನ್ನುವ ಆಹಾರದ ಮೇಲೆ ನಿಯಂತ್ರಣ

ನೀವು ತಿನ್ನುವ ಆಹಾರದ ಮೇಲೆ ನಿಯಂತ್ರಣ

ಇಂದು ಸ್ಮಾರ್ಟ್‌ಫೋನ್‌ ನೀವು ತಿನ್ನುವ ಆಹಾರದ ಮೇಲೆ ಸಹ ಒಂದು ರೀತಿ ಹೊಂದಾಣಿಕೆ ಮತ್ತು ಸಂತೋಷವನ್ನು ಪಡೆಯಲು ಕಾರಣವಾಗುತ್ತಿದೆ. ಉದಾಹರಣೆಗೆ ವಿಶೇಷ ಆಹಾರ ತಿನ್ನುವ ವೇಳೆ ಎಷ್ಟೋ ಜನರು ಫೋಟೋ ತೆಗೆದುಕೊಳ್ಳುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಯಬಿಡುತ್ತಿದ್ದಾರೆ. ಸಂತೋಷವನ್ನು ವ್ಯಕ್ತಪಡಿಸಲು ಸಹ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ

ದಿನನಿತ್ಯದ ವ್ಯಾಯಾಮದ ಮೇಲೆ ನಿಯಂತ್ರಣ

ದಿನನಿತ್ಯದ ವ್ಯಾಯಾಮದ ಮೇಲೆ ನಿಯಂತ್ರಣ

ಇಂದು ಕೆಲವು ಅಪ್ಲಿಕೇಶನ್‌ಗಳು ವ್ಯಾಯಾಮ ಮಾಡಿದ ನಂತರದ ವ್ಯಾತ್ಯಾಸಗಳನ್ನು ತೋರಿಸುವಲ್ಲಿ ಬಳಕೆಯಾಗುತ್ತಿವೆ. ಅಂದರೆ ಕೆಲವು ಅಪ್ಲಿಕೇಶನ್‌ಗಳು ನಿಮ್ಮ ಫೋಟೊಗಳ ವ್ಯತ್ಯಾಸವನ್ನು ವ್ಯಾಯಾಮದ ಮೊದಲು ಸ್ನಾಪ್‌ಚಾಟ್‌ ನಲ್ಲಿ ಫೋಟೋ ತೆಗೆದು ಮತ್ತು ವ್ಯಾಯಾಮದ ನಂತರದಲ್ಲೂ ಫೋಟೋವನ್ನು ಸ್ಮಾಪ್‌ಚಾಟ್‌ನಲ್ಲಿ ತೆಗೆಯುವುದರಿಂದ ನೀವು ವ್ಯತ್ಯಾಸ ತಿಳಿಯಬಹುದು.

ಸಾಮಾಜಿಕ ಚಟುವಟಿಕೆಗಳ ಮೇಲೆ ನಿಯಂತ್ರಣ

ಸಾಮಾಜಿಕ ಚಟುವಟಿಕೆಗಳ ಮೇಲೆ ನಿಯಂತ್ರಣ

ಇಂದು ಯಾವುದೇ ಫೋಟೋವನ್ನು ಅಪ್‌ಲೋಡ್‌ ಮಾಡುವ ಮೊದಲು ಒಮ್ಮೆ ಯೋಚಿಸಬೇಕಾಗುತ್ತದೆ. ಗೆಳೆಯರೊಂದಿಗೆ ಮಧ್ಯಪಾನ ಮಾಡಿದ ಚಟುವಟಿಕೆಯು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದರಿಂದ ನಾವು ಸಾಮಾಜಿಕವಾಗಿ ನೆಡೆದುಕೊಳ್ಳುವ ಕೆಲವು ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದ್ದೇವೆ.

ಸಾಮಾಜಿಕ ಜಾಲತಾಣಗಳು ನಾವು ಹೇಗಿದ್ದೇವೆ ಎಂಬುದನ್ನು ನಿಯಂತ್ರಿಸುತ್ತದೆ

ಸಾಮಾಜಿಕ ಜಾಲತಾಣಗಳು ನಾವು ಹೇಗಿದ್ದೇವೆ ಎಂಬುದನ್ನು ನಿಯಂತ್ರಿಸುತ್ತದೆ

ಕೆಲವೊಮ್ಮೆ ಯಾವುದೇ ಕ್ಷಣಗಳು ಸಹ ನಮ್ಮ ನೆರೆಹೊರೆಯವರಿಂದ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದರಿಂದ ಇಂದು ಪ್ರತಿ ಮಾತಿನಲ್ಲೂ ಹಾಗೂ ಚಟುವಟಿಕೆಯಲ್ಲೂ ಎಚ್ಚರ ವಹಿಸಬೇಕಾಗುತ್ತದೆ.

ಮ್ಯೂಸಿಕ್‌ನ ಅಭಿರುಚಿಯಲ್ಲಿ ನಿಯಂತ್ರಣ

ಮ್ಯೂಸಿಕ್‌ನ ಅಭಿರುಚಿಯಲ್ಲಿ ನಿಯಂತ್ರಣ

ಸಾಮಾಜಿಕ ಜಾಲತಾಣ ಬಳಕೆದಾರರು ಇಂದು ತಮ್ಮ ಅಭಿರುಚಿಗಳನ್ನು ಸಹ ಶೇರ್‌ ಮಾಡಿಕೊಳ್ಳುತ್ತಿದ್ದು, ಅವರು ಲೈಕ್‌ಗಳಿಗಾಗಿ ಪ್ರಖ್ಯಾತ ಮ್ಯೂಸಿಕ್ ಬ್ಯಾಂಡ್‌ಗಳನ್ನು ತಮ್ಮ ಅಭಿರುಚಿಯಾಗಿ ಹೊಂದುತ್ತಿದ್ದಾರೆ.

ನೋಟಗಳ  ಮೇಲೆ ನಿಯಂತ್ರಣ

ನೋಟಗಳ ಮೇಲೆ ನಿಯಂತ್ರಣ

ಪ್ರೀತಿ ಪಾತ್ರರಿಗಾಗಿ ಇಂದು ಉತ್ತಮ ಸೆಲ್ಫೀಗಳು ಸಹ ನೋಟಗಳ ಮೇಲೆ ಪರಿಣಾಮ ಬೀರಿವೆ.

ಕುಟುಂಬ ಮತ್ತು ಗೆಳೆಯರೊಂದಿಗಿನ ಸಮಯದ ಮೇಲೆ ನಿಯಂತ್ರಣ

ಕುಟುಂಬ ಮತ್ತು ಗೆಳೆಯರೊಂದಿಗಿನ ಸಮಯದ ಮೇಲೆ ನಿಯಂತ್ರಣ

ಇಂದು ರಜೆ ದಿನಗಳನ್ನು ನಾವು ಕಳೆಯುವ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದರಿಂದ ರಜೆ ದಿನಗಳ ಸಮಯವನ್ನು ಕಳೆಯುವ ಹವ್ಯಾಸ ಬದಲಾಗುತ್ತಿದೆ.

ಸಾಕು ಪ್ರಾಣಿಗಳೊಂದಿಗಿನ ಸಮಯದ ಮೇಲೆ ನಿಯಂತ್ರಣ

ಸಾಕು ಪ್ರಾಣಿಗಳೊಂದಿಗಿನ ಸಮಯದ ಮೇಲೆ ನಿಯಂತ್ರಣ

ಸಾಕು ಪ್ರಾಣಿಗಳೊಂದಿಗಿನ ಪ್ರೀತಿಯ ಒಡನಾಟಗಳು ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೆಚ್ಚು ಪ್ರಾಣಿಗಳನ್ನು ಪ್ರೀತಿಯಿಂದ ನೋಡುವಲ್ಲಿ ಮನೋಭಾವ ಬದಲಾವಣೆಗೆ ಕಾರಣವಾಗುತ್ತಿದೆ.

Best Mobiles in India

English summary
With the development of a new smartphone almost every month, it's no secret the power of social media has grown dramatically in just a few short years. Our phones have attached themselves like a third limb to our bodies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X