ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಅಬ್ಬರ ಹೆಚ್ಚಾಗಿದ್ದು, ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುತ್ತಿವೆ. ಇತ್ತೀಚಿನ ಈ ಬೆಳವಣಿಗೆಗಳಿಂದ ಬೇಸತ್ತ ಸೋನಿ ಕಂಪನಿಯು ದೇಶಿಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸದಿರುವ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ವಿಶ್ವ ಮಾರುಕಟ್ಟೆಯಿಂದ ಮಾತ್ರ ಹಿಂದೆ ಸರಿದಿಲ್ಲ ಎನ್ನುವುದನ್ನು ಮನವರಿಕೆ ಮಾಡಲು ಮತ್ತೆ ಈಗ ಪಣತೊಟ್ಟು ನಿಂತಿದೆ.

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

ಹೌದು, ಸೋನಿ ಕಂಪನಿಯು ಸದ್ಯ ಹೊಸ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಕಾರ್ಯನಿರತವಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಚ್ಚರಿ ನೀಡಲು ಪೂರ್ವ ಸಿದ್ಧತೆ ನಡೆಸುತ್ತಿದೆ. ಸ್ಮಾರ್ಟ್‌ಫೋನ್‌ ಕಂಪನಿಗಳು ಫೋಲ್ಡೆಬಲ್‌ ಫೋನ್‌ ತಯಾರಿಕೆಯತ್ತ ಹೆಚ್ಚಿನ ಒಲವನ್ನು ತೋರುತ್ತಿದ್ದು, ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಸೋನಿ ನೂತನ 'Nautilus ಡಿಸೈನ್‌' ಸ್ಮಾರ್ಟ್‌ಫೋನ್‌ ಸಿದ್ಧಪಡಿಸುತ್ತಿದೆ.

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

ಈಗಾಗಲೇ ಸ್ಯಾಮ್‌ಸಂಗ್ ಮತ್ತು ಹುವಾವೆ ಕಂಪನಿಗಳು ಫೋಲ್ಡೆಬಲ್‌ ಫೋನ್‌ಗಳನ್ನು ಘೋಷಿಸಿದ್ದು, ಅಷ್ಟೇ ಅಲ್ಲದೇ ಚೀನಾ ಮೂಲದ ಶಿಯೋಮಿ ಮತ್ತು ಒಪ್ಪೊ ಸಹ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ತಯಾರಿಕೆಯ ಸುಳಿವು ನೀಡಿವೆ. ಆದರೆ ಸೋನಿ ಭಿನ್ನವಾಗಿ ಫೋಲ್ಡೆಬಲ್‌ ಟ್ಯಾಬ್ಲೆಟ್‌ ತಯಾರಿಕೆಗೆ ಮುಂದಾಗಿದ್ದು, Nautilus ಡಿಸೈನ್‌ ಹೊಂದಿರಲಿದ್ದು, ರೋಲಿಂಗ್ ಮಾದರಿ ಸ್ಕ್ರೀನ್‌ ಇರಲಿದೆ ಎನ್ನುತ್ತಿವೆ ಲೀಕ್‌ ಮಾಹಿತಿಗಳು.

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ದೊಡ್ಡ ಅಚ್ಚರಿ ನೀಡಲು ಸಜ್ಜಾದ 'ಸೋನಿ'!

ಸೋನಿ ರೋಲಿಂಗ್ ಮಾದರಿಯ ಡಿಸ್‌ಪ್ಲೇ ಇರುವ ಟ್ಯಾಬ್ಲೆಟ್‌ ನಿರ್ಮಾಣದತ್ತ ನಡೆದಿದ್ದು, ಈ ಡಿವೈಸ್‌ ಇತರೆ ಫೋಲ್ಡೆಬಲ್‌ ಡಿಸ್‌ಪ್ಲೇಗಿಂತ ವಿಶೇಷವಾದ ಡಿಸೈನ್‌ ಅನ್ನು ಹೊಂದಿರಲಿದೆ. ಸೋನಿ ಕಂಪನಿಯ ನೂತನ ಫೋಲ್ಡೆಬಲ್‌ ಟ್ಯಾಬ್ಲೆಟ್‌ ಎಲ್‌ಜಿಯ ಸ್ಕ್ರೀನ್‌ ಹೊಂದಿರುವ ಸಾಧ್ಯತೆಗಳಿದ್ದು, ಬಹುಶಃ ಸೋನಿಯ ಫೋಲ್ಡೆಬಲ್‌ ಟ್ಯಾಬ್ಲೆಟ್‌ ಅತ್ಯುತ್ತಮ ಮನರಂಜನಾ ಸಾಧನ ಎನಿಸಿಕೊಳ್ಳುವ ಫೀಚರ್ಸ್‌ಗಳನ್ನು ಹೊಂದಿರಲಿದೆ.

ಓದಿರಿ : ಭಾರತದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಭಾರತದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಸೋನಿಯ Nautilus ಡಿಸೈನ್‌ ಮಾದರಿಯ ಹೊಸ ಟ್ಯಾಬ್ಲೆಟ್ ಡಿವೈಸ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 (SM7250 SoC) ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿರಲಿದ್ದು, ಹಾಗೆಯೇ X50 ಮೋಡೆಮ್ ಹೊಂದಿರಲಿದೆ. ಇದರೊಂದಿಗೆ ಕ್ಯಾಮೆರಾದಲ್ಲಿ 10x ಝೂಮ್‌ ಸಾಮರ್ಥ್ಯವನ್ನು ಪರಿಚಯಿಸಲಿದ್ದು, 3,230 mAh ಸಾಮರ್ಥ್ಯ ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒದಗಿಸಲಿದೆ. ಇದೇ ಡಿಸೆಂಬರ್‌ ಒಳಗೆ ಅಥವಾ 2020ರ ಆರಂಭದ ವೇಳೆಗೆ ಈ ಡಿವೈಸ್‌ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಓದಿರಿ : ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!ಓದಿರಿ : ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಈ ಟಿಪ್ಸ್‌ ಮರೆಯಬೇಡಿ!

Best Mobiles in India

English summary
Sony is rumored to be doing exactly that. Even better, it will have a rollable “Nautilus Design” when others can barely do simple foldable screens. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X