ಭಾರತದಲ್ಲಿ ಸೋನಿಯ ಹೊಸ ಹೋಮ್‌ ಪ್ರೊಜೆಕ್ಟರ್‌ ಅನಾವರಣ; 4K ಸಾಮರ್ಥ್ಯ

|

ಸೋನಿ ಕಂಪೆನಿಯು ಆಡಿಯೋ ಹಾಗೂ ವಿಡಿಯೋ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಗಳಿಸಿಕೊಂಡಿದೆ. ಕಂಪೆನಿಯ ಯಾವುದೇ ಡಿವೈಸ್‌ಗಳು ದೀರ್ಘ ಬಾಳಿಕೆ ಹಾಗೂ ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದು, ಈಗಾಗಲೇ ಹಲವಾರು ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದರ ನಡುವೆ ಈಗ ಭಾರತದಲ್ಲಿ ಹೊಸ ಪ್ರೀಮಿಯಂ ಲೇಸರ್ ಹೋಮ್ ಪ್ರೊಜೆಕ್ಟರ್‌ಗಳನ್ನು ಲಾಂಚ್ ಮಾಡಲಾಗಿದೆ.

ಸೋನಿ

ಹೌದು, ಸೋನಿ ಕಂಪೆನಿಯು ಭಾರತದಲ್ಲಿ ಸೋನಿ VPL-XW7000ES ಮತ್ತು VPL-XW5000ES 4K ಎಂಬ ಎರಡು ಲೇಸರ್ ಹೋಮ್ ಪ್ರೊಜೆಕ್ಟರ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇವು ಇನ್‌ಪುಟ್ ಲ್ಯಾಗ್ ರಿಡಕ್ಷನ್ ಮೋಡ್ ಫೀಚರ್ಸ್‌ ಪಡೆದುಕೊಂಡಿವೆ. ಹಾಗೆಯೇ VPL-XW5000ES ಹೋಮ್ ಪ್ರೊಜೆಕ್ಟರ್ ಪ್ರಪಂಚದಲ್ಲೇ ಅತ್ಯಂತ ಕಾಂಪ್ಯಾಕ್ಟ್ ಸ್ಥಳೀಯ 4K ಲೇಸರ್ ಹೋಮ್ ಪ್ರೊಜೆಕ್ಟರ್ ಎಂದು ಗುರುತಿಸಿಕೊಂಡಿದೆ. ಹಾಗಿದ್ರೆ ಇವುಗಳ ಇನ್ನಷ್ಟು ಫೀಚರ್ಸ್‌ ಹಾಗೂ ಬೆಲೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಈ ಎರಡು ಹೊಸ VPL-XW7000ES ಮತ್ತು VPL-XW5000ES ಹೋಮ್‌ ಪ್ರೊಜೆಕ್ಟರ್‌ಗಳು 4K SXRD TM (ಸಿಲಿಕಾನ್ ಎಕ್ಸ್-ಟಾಲ್ ರಿಫ್ಲೆಕ್ಟಿವ್ ಡಿಸ್‌ಪ್ಲೇ) ಫೀಚರ್ಸ್‌ ಪಡೆದುಕೊಂಡಿವೆ. ಹಾಗೆಯೇ 4K SXRD TM 0.61 ಇಂಚಿನ ಫಲಕವನ್ನು ಹೊಂದಿದ್ದು, ಇವು ಕಾಂಪ್ಯಾಕ್ಟ್ ಚಾಸಿಸ್‌ನಲ್ಲಿ ಪ್ಯಾಕ್ ಮಾಡಲಾದ ಹೆಚ್ಚಿನ ರೆಸಲ್ಯೂಶನ್ ಮತ್ತು ಹೆಚ್ಚಿನ ಕಾಂಟ್ರಾಸ್ಟ್‌ ಆಯ್ಕೆ ಪಡೆದುಕೊಂಡಿವೆ. ಈ ಮೂಲಕ ಇವುಗಳಿಂದ ಉತ್ತಮ ವೀಕ್ಷಣೆಯ ಅನುಭವವನ್ನು ಪಡೆಯಬಹುದಾಗಿದೆ.

ಎಷ್ಟೇ ಬೆಳಕಿದ್ದರೂ ವೀಕ್ಷಿಸಬಹುದು!

ಎಷ್ಟೇ ಬೆಳಕಿದ್ದರೂ ವೀಕ್ಷಿಸಬಹುದು!

ಈ ಡಿವೈಸ್‌ಗಳು ಸೋನಿಯ X1 ಅಲ್ಟಿಮೇಟ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, TRILUMINOUS PRO ಸಂಯೋಜನೆಯೊಂದಿಗೆ ಅತ್ಯುತ್ತಮ ಕ್ವಾಲಿಟಿಯ ವಿಡಿಯೋ ವೀಕ್ಷಣೆ ಮಾಡಲು ಸಹಕಾರಿಯಾಗಲಿದೆ. ಹಾಗೆಯೇ ಇದು 4K HDR ಅನುಭವವನ್ನು ನೀಡುತ್ತದೆ. ಅದರಂತೆ 4K HDR ಲೇಸರ್ ವೇರಿಯಂಟ್‌ಗಳಲ್ಲಿ ಒಂದಾದ VPL-XW7000ES, 3,200 ಲ್ಯುಮೆನ್ಸ್ ಬ್ರೈಟ್‌ನೆಸ್ ಮತ್ತು ಲೈವ್ ಕಲರ್ ಎನ್‌ಹಾನ್ಸರ್‌ನೊಂದಿಗೆ ಪ್ಯಾಕ್‌ ಆಗಿದೆ. ಇದರಿಂದ ಎಷ್ಟೇ ಪ್ರಕಾಶಮಾನವಾದ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಮತ್ತು ಎದ್ದುಕಾಣುವ ಚಿತ್ರಗಳನ್ನು ಒದಗಿಸುತ್ತದೆ, ಇದು ಲಿವಿಂಗ್ ರೂಮ್‌ಗಳಿಗೆ ಪರಿಪೂರ್ಣವಾಗಿದೆ.

ಪ್ರೊಜೆಕ್ಟರ್‌

ಪ್ರೊಜೆಕ್ಟರ್‌

ಹಾಗೆಯೇ VPL-XW7000ES ಪ್ರೊಜೆಕ್ಟರ್‌ ಹೊಸ 70mm ವ್ಯಾಸದ ಅಡ್ವಾನ್ಸ್ಡ್ ಕ್ರಿಸ್ಪ್ ಫೋಕಸ್ಡ್ (ACF) ಲೆನ್ಸ್ ಮೂಲಕ ಆಸ್ಫೆರಿಕಲ್ ಫ್ರಂಟ್ ಎಲಿಮೆಂಟ್ ಮತ್ತು ಫ್ಲೋಟಿಂಗ್ ಫೋಕಸ್ ಗ್ರೂಪ್ ಜೊತೆಗೆ ದೊಡ್ಡ ಸ್ಕ್ರೀನ್‌ ಮೇಲೆ ಹೆಚ್ಚಿನ ಸ್ಪಷ್ಟತೆ ಇರುವ ಚಿತ್ರಗಳನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

HDR ರೀಮಾಸ್ಟರಿಂಗ್ ಆಯ್ಕೆ

HDR ರೀಮಾಸ್ಟರಿಂಗ್ ಆಯ್ಕೆ

VPL-XW5000ES ಹೋಮ್‌ ಪ್ರೊಜೆಕ್ಟರ್‌ 2,000 ಲ್ಯುಮೆನ್ಸ್ ಬ್ರೈಟ್‌ನೆಸ್, ಹೆಚ್ಚಿನ ಕಾಂಟ್ರಾಸ್ಟ್ ಮತ್ತು ರೆಸಲ್ಯೂಶನ್ ಜೊತೆಗೆ ಲುಮೆನ್‌ಗೆ 30% ಕಡಿಮೆ ಶಕ್ತಿಯನ್ನು ಇದು ಬಳಕೆ ಮಾಡುತ್ತದೆ. ಇದರೊಂದಿಗೆ ನೈಜ ಸಮಯದ ಚಿತ್ರ ಸಂಸ್ಕರಣೆಗಾಗಿ ಆಬ್ಜೆಕ್ಟ್ ಆಧಾರಿತ HDR ರೀಮಾಸ್ಟರಿಂಗ್ ಆಯ್ಕೆಯನ್ನು ಇದು ಪಡೆದುಕೊಂಡಿದೆ. ಹಾಗೆಯೇ ಈ ಡಿವೈಸ್‌ 95% DCI-P3 ಕಲರ್ ಗ್ಯಾಮಟ್ ಅನ್ನು ಒಳಗೊಂಡಿದೆ.

ಇನ್‌ಪುಟ್ ಲ್ಯಾಗ್ ರಿಡಕ್ಷನ್ ಮೋಡ್

ಇನ್‌ಪುಟ್ ಲ್ಯಾಗ್ ರಿಡಕ್ಷನ್ ಮೋಡ್

ಈ ಎರಡು ಲೇಸರ್ ಪ್ರೊಜೆಕ್ಟರ್‌ಗಳು ಇನ್‌ಪುಟ್ ಲ್ಯಾಗ್ ರಿಡಕ್ಷನ್ ಮೋಡ್ ಫೀಚರ್ಸ್‌ ಪಡೆದುಕೊಂಡಿದ್ದು, ಗೇಮಿಂಗ್ ಸಮಯದಲ್ಲಿ ಪ್ರತಿಕ್ರಿಯೆಯ ವೇಗವನ್ನು ಸುಧಾರಿಸಲಿದೆ. ಹಾಗೆಯೇ ವಿವರವಾದ ಚಿತ್ರದ ಗುಣಮಟ್ಟವನ್ನು ಖಚಿತಪಡಿಸಲಿದೆ. ಇದರೊಂದಿಗೆ ಈ ಎರಡೂ ಡಿವೈಸ್‌ 13ms ಇನ್‌ಪುಟ್ ಲ್ಯಾಗ್‌ನೊಂದಿಗೆ 2K 120Hz ಇನ್‌ಪುಟ್ ಅನ್ನು ಬೆಂಬಲಿಸುತ್ತವೆ.

ಡಿವೈಸ್‌

ಈ ಡಿವೈಸ್‌ಗಳನ್ನು ಹಿಂದಿನ ಸರಣಿಯ ಡಿವೈಸ್‌ಗಳಿಗೆ ಹೋಲಿಕೆ ಮಾಡಿದರೆ VPL-XW7000ES ಗಾತ್ರದಲ್ಲಿ 20% ಚಿಕ್ಕದಾಗಿದ್ದು, ತೂಕದಲ್ಲಿ 30% ಹಗುರವಾಗಿದೆ. ಹಾಗೆಯೇ, VPL-XW5000ES ಪ್ರಪಂಚದಲ್ಲೇ ಅತ್ಯಂತ ಕಾಂಪ್ಯಾಕ್ಟ್ ಸ್ಥಳೀಯ 4K ಲೇಸರ್ ಹೋಮ್ ಪ್ರೊಜೆಕ್ಟರ್ ಆಗಿ ಗುರುತಿಸಿಕೊಂಡಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಸೋನಿಯ VPL-XW7000ES ಹೋಮ್‌ ಪ್ರೊಜೆಕ್ಟರ್‌ಗೆ ಭಾರತದಲ್ಲಿ 16,00,000 ರೂ. ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ VPL-XW5000ES ಹೋಮ್‌ ಪ್ರೊಜೆಕ್ಟರ್‌ಗೆ 550,000 ರೂ. ಗಳಲ್ಲಿ ಭಾರತದಲ್ಲಿ ಲಭ್ಯವಾಗಲಿದೆ. ಇನ್ನು ಈ 4K ಲೇಸರ್ ಹೋಮ್ ಪ್ರೊಜೆಕ್ಟರ್‌ಗಳು ಭಾರತದಲ್ಲಿ ಡಿಸೆಂಬರ್ 2022 ರ ಅಂತ್ಯದಿಂದ ಅಧಿಕೃತ ವಿತರಕರ ಮೂಲಕ ಪ್ರತ್ಯೇಕವಾಗಿ ಮಾರಾಟವಾಗಲಿದೆ ಎಂದು ಕಂಪೆನಿ ತಿಳಿಸಿದೆ.

Best Mobiles in India

English summary
Sony launched VPL-XW7000ES and VPL-XW5000ES 4K laser home projector in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X