Sonyಯಿಂದ ಹೊಸ ವಾಯರ್‌ಲೆಸ್‌ ಹೆಡ್‌ಫೋನ್ ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

|

ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರು ಇಯರ್‌ಫೋನ್ ಹೊಂದಿರುವುದು ಸಾಮಾನ್ಯ. ಆದರೆ ಕೆಲವರು ಅತ್ಯುತ್ತಮ ಸೌಂಡ್‌ಗಾಗಿ ಟಾಪ್ ಕಂಪನಿಗಳ ಹೈ ಎಂಡ್ ಇಯರ್‌ಫೋನ್ ಖರೀದಿಸುತ್ತಾರೆ. ಮತ್ತೆ ಕೆಲವರು ಬಜೆಟ್ ಬೆಲೆಯಲ್ಲಿನ ಉತ್ತಮ ಇಯರ್‌ಫೋನ್ ಖರೀದಿಸಲು ಮುಂದಾಗುತ್ತಾರೆ. ಮಾರುಕಟ್ಟೆಯಲ್ಲಿ ಅದರಲ್ಲಿಯೂ ಸೋನಿ ಸಂಸ್ಥೆಯ ಇಯರ್‌ಫೋನ್‌ಗಳಿಗೆ ಡಿಮ್ಯಾಂಡ್ ಜಾಸ್ತಿನೇ ಇದೆ. ಈ ನಿಟ್ಟಿನಲ್ಲಿ ಸೋನಿ ಇದೀಗ ಹೊಸದೊಂದು ಹೆಡ್‌ಫೋನ್ ಬಿಡುಗಡೆ ಮಾಡಿದೆ.

ಸೋನಿ ಆಡಿಯೊ

ಹೌದು, ಜನಪ್ರಿಯ ಸೋನಿ ಆಡಿಯೊ ಸಂಸ್ಥೆಯು ಹೊಸದಾಗಿ WI-1000XM2 ಹೆಸರಿನ ವಾಯರ್‌ಲೆಸ್ ನಾಯಿಸ್‌ ಕ್ಯಾನ್ಸಲೇಷನ್ ಹೆಡ್‌ಫೋನ್ ಬಿಡುಗಡೆ ಮಾಡಿದೆ. ಈ ಹೆಡ್‌ಫೋನ್ ಅಡ್ವಾನ್ಸ್‌ ನಾಯಿಸ್‌ ಕ್ಯಾನ್ಸಲೇಷನ್ ತಂತ್ರಜ್ಞಾನವನ್ನು ಪಡೆದಿದ್ದು, ಜೊತೆಗೆ ಕ್ವಿಕ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಬ್ಯಾಟರಿ ಬಾಳಿಕೆಯು ಅತ್ಯುತ್ತಮವಾಗಿದ್ದು, ನೆಕ್‌ಬ್ಯಾಂಡ್‌ ರಚನೆಯನ್ನು ಹೊಂದಿದೆ.

ಸೋನಿ WI-1000XM2

ಸೋನಿ WI-1000XM2 ಹೆಡ್‌ಫೋನ್ ಬಳಕೆದಾರರಿಗೆ ಅನುಕೂಲಕರವಾಗದ ಸೌಂಡ್ ಅಡ್ಜೆಸ್ಟ್ ಮಾಡುವ ಆಯ್ಕೆಯನ್ನು ಹೊಂದಿದೆ. ಡ್ಯುಯಲ್ ನಾಯಿಸ್‌ ಕ್ಯಾನ್ಸಲೇಷನ್ ತಂತ್ರಜ್ಞಾನ್ ಹೊಂದಿದ್ದು, ಯಾವುದೇ ಬಾಹ್ಯ ಶಬ್ದ ಕೇಳಿಸಿದಂತಹ ರಚನೆಯನ್ನು ಪಡೆದಿದೆ. ನೆಕ್‌ಬ್ಯಾಂಡ್ ಡಿಸೈನ್‌ನಲ್ಲಿರುವ ಈ ಹೆಡ್‌ಫೋನ್ ಹಗುರವಾಗಿದ್ದು, ಬಡ್ಸ್‌ ಕಿವಿಗಳಿಗೆ ಕಂಫರ್ಟ್‌ ಆಗಿ ಫಿಟ್ ಆಗುವಂತಿವೆ.

ಗೂಗಲ್‌ ಅಸಿಸ್ಟಂಟ್

ಇನ್ನು ಈ ಹೆಡ್‌ಫೋನ್ ಗೂಗಲ್‌ ಅಸಿಸ್ಟಂಟ್, ಅಮೆಜಾನ್ ಅಲೆಕ್ಸಾ, ಮತ್ತು Hi-Res ಆಡಿಯೊ ಸೌಲಭ್ಯಗಳನ್ನು ಇನ್‌ಬಿಲ್ಟ್‌ ಆಗಿ ಪಡೆದಿದೆ. ಇನ್ನು ಹೆಡ್‌ಫೋನ್ ಬ್ಯಾಟರಿಯು 10 ಗಂಟೆ ಬ್ಯಾಕ್‌ಅಪ್ ಒದಗಿಸುವ ಸಾಮರ್ಥ್ಯದಲ್ಲಿದ್ದು, ಕೇವಲ ಹತ್ತು ನಿಮಿಷದ ಚಾರ್ಜ್ ಸುಮಾರು 80ನಿಮಿಷಗಳ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುತ್ತದೆ. ಹಾಗೆಯೇ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌, ಬ್ಲೂಟೂತ್ v5.0, 3.5mm ಆಡಿಯೊ ಜಾಕ್ ಸೌಲಭ್ಯಗಳನ್ನು ಒಳಗೊಂಡಿದೆ.

ಮಾರುಕಟ್ಟೆಯಲ್ಲಿ

ಸೋನಿಯ ಈ ಹೊಸ WI-1000XM2 ಹೆಡ್‌ಫೋನ್ ಕೆವಲ ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಈ ಡಿವೈಸ್ ಬೆಲೆಯು 21,990ರೂ. ಆಗಿದೆ. ಅಧಿಕೃತ ಸೋನಿ ಸೆಂಟರ್‌ಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದ್ದು, ಅಲ್ಲದೇ ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿಯೂ ಸಹ ಖರೀದಿಗೆ ಲಭ್ಯವಿದೆ.

Most Read Articles
Best Mobiles in India

English summary
Sony WI-1000XM2 feature a quick charge technology, providing 80 minutes of playback with just 10 minutes of charge. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X