ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

|

ಪ್ರಸ್ತುತ ಗೂಗಲ್ ಸಂಸ್ಥೆಯ ಯೂಟ್ಯೂಬ್‌ ಜನರಿಗೆ ಅವರ ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆಯಾಗಿ ಬಳಕೆಯಾಗುತ್ತಿದೆ ಎನ್ನುವುದು ಒಂದು ಕಡೆಯಾದರೇ, ಯೂಟ್ಯೂಬ್ ಹಣಗಳಿಕೆಯ ತಾಣವಾಗಿದೆ ಎಂದರೇ ತಪ್ಪಾಗಲಾರದು. ಏಕೆಂದರೇ ಸದ್ಯ ಅನೇಕ ಯೂಟ್ಯೂಬರ್‌ಗಳು ಯೂಟ್ಯೂಬ್‌ ಚಾನಲ್‌ಗಳನ್ನು ಶುರುಮಾಡಿ ಉತ್ತಮವಾಗಿ ಹಣಗಳಿಸುತ್ತಿದ್ದಾರೆ. ಈ ಲಿಸ್ಟಿಗೆ ಪುಟಾಣಿ ಮಕ್ಕಳೂ ಸಹ ಸೇರಿದ್ದು, ಮಿಲಿಯನ್‌ಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ ಎಂದರೇ ನೀವು ನಂಬಲೇಬೇಕು.

ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

ಹೌದು, ದಕ್ಷಿಣ ಕೋರಿಯಾದ ಬೋರಮ್ ಎಂಬ ಆರು ವರ್ಷ ವಯಸ್ಸಿನ ಪುಟ್ಟ ಬಾಲಕಿ ಎರಡು ಯೂಟ್ಯೂಬ್ ಚಾನಲ್‌ಗಳನ್ನು ಹೊಂದಿದ್ದು, ಈಗಾಗಲೇ ಒಟ್ಟು 30 ಬಿಲಿಯನ್ ಚಂದಾದರರನ್ನು ಹೊಂದಿ ಯೂಟ್ಯೂಬ್ ಸ್ಟಾರ್‌ ಆಗಿ ಮಿಂಚುತ್ತಿದ್ದಾಳೆ. ಈಕೆ ಇತ್ತೀಚಿಗೆ ದಕ್ಷಿಣ ಕೋರಿಯಾದ ಸಿಯೋಲ್‌ನಲ್ಲಿ (Seoul) 9.5 ಬಿಲಿಯನ್ ಕೋರಿಯನ್ (ಸುಮಾರು 55 ಕೋಟಿ) ಬೆಲೆ ಬಾಳುವ ಐದು ಅಂತಸ್ತಿನ ಕಟ್ಟಡವನ್ನು ಖರೀದಿಸಿದ್ದು, ಈಗ ವಿಶ್ವವ್ಯಾಪಿ ವೈರಲ್‌ ಸುದ್ದಿಯಾಗಿ ಹರಿದಾಡುತ್ತಿದೆ.

ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

ಯೂಟ್ಯೂಬ್‌ನಲ್ಲಿ ಬೋರಮ್ ಎರಡು ಅಕೌಂಟ್‌ಗಳನ್ನು ಹೊಂದಿದ್ದು, ಒಂದರಲ್ಲಿ ಆಟಿಕೆಗಳ ಕುರಿತಾಗಿ ರಿವ್ಯೂವ್‌ ಮಾಡುತ್ತಾಳೆ ಈ ಅಕೌಂಟ್‌ಗೆ ಸುಮಾರು 13.6ಮಿಲಿಯನ್ ಚಂದಾದಾರರಿದ್ದಾರೆ. ಹಾಗೆಯೇ ಇನ್ನೊಂದು ಅಕೌಂಟ್‌ನಲ್ಲಿ ಬ್ಲಾಗ್‌ ಆಗಿ ಬಳಸುತ್ತಿದ್ದು, ಈ ಅಕೌಂಟ್‌ಗೆ 17.5ಮಿಲಿಯನ್ ಜನರು ಚಂದಾದಾರರಾಗಿದ್ದಾರೆ. ಈಕೆಯ ಮಾಡಿದ ಒಂದು ವಿಡಿಯೊ ಕಡಿಮೆ ಅಂದರೂ 376ಮಿಲಿಯನ್ ವೀಕ್ಷಣೆ ಪಡೆದಿದೆ.

ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

ಯೂಟ್ಯೂಬ್‌ ಸ್ಟಾರ್‌ ಆಗಿರುವ ಈ ಪುಟ್ಟ ಬಾಲಕಿಯ ವಿಡಿಯೊಗಳನ್ನು ಎಲ್ಲರೂ ಇಷ್ಟಪಡುತ್ತಾರೆ ನಿಜ. ಆದರೆ, ಆಕೆಯ ಚಾನಲ್‌ನ ವಿಡಿಯೊ ಕಂಟೆಂಟ್‌ಗಳು ಇತರೆ ಎಳೆಯ ಮಕ್ಕಳಲ್ಲಿ ನಕಾರಾತ್ಮಕ ಮನೋಭಾವ ಬೀರುವ ಸಾಧ್ಯತೆಗಳಿರುತ್ತವೆ ಎಂದು 2017ರಲ್ಲಿ ದಕ್ಷಿಣ ಕೋರಿಯಾದ ಬಹುತೇಕ ನಾಗರಿಕರು ಈ ಬಗ್ಗೆ NGO ಗೆ ದೂರು ನೀಡಿದ್ದಾರೆ ಎಂದು ಕೋರಿಯಾ ಹೆರಾಲ್ಡ್‌ ವರದಿ ಮಾಡಿದೆ.

ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್! ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!

ಪುಟಾಣಿ ಯೂಟ್ಯೂಬರ್ ಬೋರಮ್‌ನ ಕೇಲವು ವಿಡಿಯೊಗಳ ಕಂಟೆಂಟ್‌ಗಳು ಚರ್ಚೆಗೆ ಗ್ರಾಸವಾಗಿದ್ದು, ಅವುಗಳಲ್ಲಿ ಬೋರಮ್ ಅವರ ತಂದೆಯ ಜೇಬಿನಿಂದ ಹಣ ಕದಿಯುವುದು ಮತ್ತು ರಸ್ತೆಯಲ್ಲಿ ಕಾರ ಚಾಲನೆ ಮಾಡಿರುವ ವಿಡಿಯೊಗಳು ಸೇರಿವೆ. ಈ ವಿಡಿಯೊಗಳನ್ನು ವೀಕ್ಷಿಸುವ ಇತರೆ ಮಕ್ಕಳಲ್ಲಿ ವಿಡಿಯೊದಲ್ಲಿನ ಅಂಶಗಳು ನಕಾರಾತ್ಮಕ ಪರಿಣಾಮವನ್ನು ಬೆಳೆಸುತ್ತವೆ ಎನ್ನಲಾಗಿದೆ.

ಓದಿರಿ : ಕಳೆದುಹೋದ ಫೋನ್‌ ಹುಡುಕಲು 'ಗೂಗಲ್‌' ಸಹಾಯ ಮಾಡಲಿದೆ!.ಹೇಗೆ ಗೊತ್ತಾ?ಓದಿರಿ : ಕಳೆದುಹೋದ ಫೋನ್‌ ಹುಡುಕಲು 'ಗೂಗಲ್‌' ಸಹಾಯ ಮಾಡಲಿದೆ!.ಹೇಗೆ ಗೊತ್ತಾ?

Best Mobiles in India

English summary
A six-year-old YouTuber who has 30million subscribers has bought a £6.4million skyscraper in Seoul. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X