ಬರೀ 2ರೂ. ಮಾತ್ರ ನೀಡಿ, ನಾನ್‌ ಸ್ಟಾಪ್‌ ಆಗಿ ನಿಮಗೆ ಬೇಕಾದ ಹಾಡುಗಳನ್ನು ಕೇಳಿ!

|

ಸದ್ಯ ಮ್ಯೂಸಿಕ್‌ ಅಪ್ಲಿಕೇಶನ್‌ಗಳು ಸಿಕ್ಕಾಪಟ್ಟೆ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಸ್ಪಾಟಿಫೈ (Spotify) ಸಹ ಒಂದಾಗಿದ್ದು, ಇದು ಉಚಿತ ಹಾಗೂ ಚಂದಾದಾರಿಗೆಯ ಯೋಜನೆ ಮಾದರಿಯನ್ನು ಪಡೆದಿದೆ. ಜನಪ್ರಿಯ ಸ್ಪಾಟಿಫೈ (Spotify) ಮ್ಯೂಸಿಕ್‌ ಪ್ಲಾಟ್‌ಫಾರ್ಮ್ ಇದೀಗ ತನ್ನ ಭಾರತೀಯ ಬಳಕೆದಾರರಿಗೆ ಹೊಸ ರೀವಾರ್ಡ್‌ ಕಾರ್ಯಕ್ರಮವನ್ನು ಘೋಷಿಸಿದ್ದು, ಸಂಗೀತ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಸ್ಪಾಟಿಫೈ ಆಡಿಯೊ

ಹೌದು, ಸ್ಪಾಟಿಫೈ ಆಡಿಯೊ ಸ್ಟ್ರೀಮಿಂಗ್ ಆಪ್‌ ಹೊಸ ಪ್ರೀಮಿಯಂ ಚಂದಾದಾರಿಕೆಯನ್ನು ಪರಿಚಯಿಸಿದ್ದು, ಕೇವಲ 2 ರೂ.ಗೆ ಪ್ರೀಮಿಯಂ ಮಿನಿ ಯೋಜನೆಯನ್ನು ನೀಡುತ್ತಿದೆ. ಇನ್ನು ಈ ಪ್ರೀಮಿಯಂ ಮಿನಿ ಯೋಜನೆಯು ಬಳಕೆದಾರಿಗೆ ಒಂದು ವಾರದ ಚಂದಾದಾರಿಕೆ ಒದಗಿಸುತ್ತದೆ. ಈ ಯೋಜನೆಯ ಪಡೆದ ಗ್ರಾಹಕರು ಆಪ್‌ನ ಪ್ರೀಮಿಯಂ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಪ್ರೀಮಿಯಂ

ಅಂದಹಾಗೆ 2 ರೂ. ಬೆಲೆಯ ಪ್ರೀಮಿಯಂ ಮಿನಿ ಯೋಜನೆಯು ಜಾಹೀರಾತು-ಮುಕ್ತ ಅನುಭವದೊಂದಿಗೆ ಹಾಡುಗಳು ಮತ್ತು ಪಾಡ್‌ಕಾಸ್ಟ್‌ಗಳ ಸಂಪೂರ್ಣ ಕ್ಯಾಟಲಾಗ್‌ನ ಉಚಿತ ಸ್ಟ್ರೀಮಿಂಗ್ ಅನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಸ್ಪಾಟಿಫೈ ತನ್ನ ಆಪ್‌ ಅನ್ನು ಚಾಲೆಂಜ್, ರಿವಾರ್ಡ್ ಮತ್ತು ಹೆಲ್ಪ್ ಎಂಬ ಮೂರು ವಿಭಾಗಗಳೊಂದಿಗೆ ಕೆಳಭಾಗದಲ್ಲಿ ಹೊಸ ಬಹುಮಾನಗಳ ಬಟನ್‌ನೊಂದಿಗೆ ಅಪ್‌ಡೇಟ್‌ ಮಾಡುತ್ತಿದೆ.

ಕೇವಲ 2ರೂ.ಗೆ ಸ್ಪಾಟಿಫೈ ಪ್ರೀಮಿಯಂ ಮಿನಿ ಯೋಜನೆ ಪಡೆಯಲು ಹೀಗೆ ಮಾಡಿ:

ಕೇವಲ 2ರೂ.ಗೆ ಸ್ಪಾಟಿಫೈ ಪ್ರೀಮಿಯಂ ಮಿನಿ ಯೋಜನೆ ಪಡೆಯಲು ಹೀಗೆ ಮಾಡಿ:

ಭಾರತದಲ್ಲಿ ಸ್ಪಾಟಿಫೈ (Spotify) ಪ್ರೀಮಿಯಂ ಮಿನಿ ಚಂದಾದಾರಿಕೆಯನ್ನು 1 ದಿನಕ್ಕೆ 7 ರೂ.ಗೆ ಅಥವಾ 1 ವಾರಕ್ಕೆ 25 ರೂ.ಗೆ ಲಭ್ಯವಾಗಿಸಿದೆ. ಆದರೆ ಈ ಹೊಸ ಕೊಡುಗೆಯೊಂದಿಗೆ, ಬಳಕೆದಾರರು ಸವಾಲನ್ನು ಪೂರ್ಣಗೊಳಿಸಿದರೆ, ಅವರು 1 ವಾರಕ್ಕೆ ಕೇವಲ 2 ರೂ.ಗೆ ಸೇವೆ ಪಡೆಯಬಹುದಾಗಿದೆ. ಇನ್ನು ಕೊಡುಗೆಯನ್ನು ಪಡೆಯಲು, ಬಳಕೆದಾರರು ಮುಂದಿನ 30 ದಿನಗಳಲ್ಲಿ ಯಾವುದೇ 10 ದಿನಗಳವರೆಗೆ ಮಿನಿ ಪ್ರೀಮಿಯಂ ಮಾಡಬೇಕಾಗುತ್ತದೆ.

ಖಾತೆಯನ್ನು

* ಸ್ಪಾಟಿಫೈ ಖಾತೆಯನ್ನು ತೆರೆಯಿರಿ.
* ಸೆಟ್ಟಿಂಗ್‌ಗಳು > ಖಾತೆ ಮೇಲೆ ಟ್ಯಾಪ್ ಮಾಡಿ
* ಈಗ 7ರೂ. ಗೆ ಸ್ಪಾಟಿಫೈ ಪ್ರೀಮಿಯಂ ಮಿನಿ ಪ್ಲಾನ್ ಒಂದು ದಿನದ ಯೋಜನೆ ಅಥವಾ 25ರೂ.ಗೆ ಏಳು ದಿನಗಳ ಯೋಜನೆಯನ್ನು ಖರೀದಿಸಿ.

ಪ್ರೀಮಿಯಂ

* ಸ್ಪಾಟಿಫೈ ಪ್ರೀಮಿಯಂ ಮಿನಿ ಅನ್ನು 10 ದಿನಗಳವರೆಗೆ ಬಳಸಲು ನೀವು 7ರೂ. ಯೋಜನೆಯನ್ನು ಖರೀದಿಸಿದರೆ ನೀವು ಪ್ರತಿದಿನ ರೀಚಾರ್ಜ್ ಅನ್ನು ಪುನರಾವರ್ತಿಸಬೇಕು. ಅದೇ ರೀತಿ, 10 ದಿನಗಳ ಪ್ರೀಮಿಯಂ ಮಿನಿ ಬಳಕೆಗಾಗಿ ಸವಾಲನ್ನು ಪೂರ್ಣಗೊಳಿಸಲು ನೀವು ಒಂದು ವಾರದ ನಂತರ 25ರೂ. ರೀಚಾರ್ಜ್ ಅನ್ನು ಪುನರಾವರ್ತಿಸಬೇಕು.
* 10 ದಿನಗಳ ನಂತರ, Spotify ಪ್ರೀಮಿಯಂ ಮಿನಿ ಚಂದಾದಾರಿಕೆಯನ್ನು 7 ದಿನಗಳವರೆಗೆ ಕೇವಲ 2 ರೂಗಳಲ್ಲಿ ನೀಡುತ್ತದೆ.
* ಮಿನಿ-ಚಂದಾದಾರಿಕೆ ಯೋಜನೆಯು ಕೇವಲ 1 ಡಿವೈಸ್‌ ಖಾತೆಯ ಮಿತಿಯನ್ನು ಹೊಂದಿದೆ.

ದೇಶಗಳಿಗಾಗಿ

ಇನ್ನು ಸ್ಪಾಟಿಫೈ (Spotify) ಪರಿಚಯಿಸಿರುವ ಈ ರಿವಾರ್ಡ್ ಪ್ರೋಗ್ರಾಂ ಕೊಡುಗೆಯು ಏಷ್ಯಾದ ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಮೊದಲು ಭಾರತದಿಂದ ಪ್ರಾರಂಭವಾಗುತ್ತದೆ ಎಂಬುದನ್ನು ಗಮನಿಸಬೇಕು. ಈ ಫೀಚರ್‌ iOS ಮತ್ತು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಲಭ್ಯವಿರುತ್ತದೆ.

ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್‌ಗಳ ಮಾಹಿತಿ

ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್‌ಗಳ ಮಾಹಿತಿ

* ಪ್ರೀಮಿಯಂ ವೈಯಕ್ತಿಕ ಪ್ಲ್ಯಾನ್‌: ಈ ಯೋಜನೆಯು ಒಂದು ಖಾತೆಯ ಮಿತಿಯೊಂದಿಗೆ ತಿಂಗಳಿಗೆ 117ರೂ.ಗೆ ಪ್ರೀಮಿಯಂ ಪ್ರವೇಶಗಳನ್ನು ನೀಡುತ್ತದೆ.
* ಪ್ರೀಮಿಯಂ ಡ್ಯುಯೊ: ಈ ಪ್ಲ್ಯಾನ್ ತಿಂಗಳಿಗೆ 149ರೂ. ಗೆ ಲಭ್ಯವಿದೆ, ಇದು ಖಾತೆಯ ಮಿತಿಗಳನ್ನು ಇಬ್ಬರು ಬಳಕೆದಾರರಿಗೆ ಹೊಂದಿಸುತ್ತದೆ.
* ಪ್ರೀಮಿಯಂ ಫ್ಯಾಮಿಲಿ: ಈ ಪ್ಲ್ಯಾನ್ ತಿಂಗಳಿಗೆ 179ರೂ. ಗೆ ಲಭ್ಯವಿದೆ, ಈ ಯೋಜನೆಯು ನಿಮಗೆ 6 ಖಾತೆಗಳನ್ನು ಸಂಪರ್ಕಿಸಲು ಅನುಮತಿಸುತ್ತದೆ.
* ಪ್ರೀಮಿಯಂ ಸ್ಟೊಡೆಂಟ್‌: ಮುಖ್ಯವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ, ಈ ಪ್ಲ್ಯಾನ್ ತಿಗಳಿಗೆ 59 ರೂ.ಗೆ ಒಂದು ಖಾತೆಗೆ ಪ್ರೀಮಿಯಂ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
Spotify app is offering a new premium mini plan for just Rs 2 for a week.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X