ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌

By Suneel
|

ತಂತ್ರಜ್ಞಾನ ಬಳಕೆ ಹಾಗೂ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ದಿಯನ್ನು ಯಾರು ಸಹ ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದುದು ತಂತ್ರಜ್ಞಾನ ಬಳಕೆ ಮಾಡುತ್ತಿರುವುದು ನಮ್ಮ ನಾಶಕ್ಕೆ ನಾವೆ ತಂದುಕೊಳ್ಳುತ್ತಿರುವ ಅಪಾಯವಾಗಿದೆ. ಹೀಗೆ ಹೇಳಿದ್ದು ಬೇರೆ ಯಾರು ಅಲ್ಲಾ. ಇಂಗ್ಲೀಷ್‌ ತಾತ್ವಿಕ ಭೌತಶಸ್ತ್ರಜ್ಞರಾದ ಸ್ಟೀಫನ್‌ ಹಾಕಿಂಗ್‌. ಹೌದು, ತಂತ್ರಜ್ಞಾನದ ಬಗ್ಗೆ ಸ್ಟೀಫನ್‌ ಹಾಕಿಂಗ್‌ ಹೇಳಿದ್ದು ಹೀಗೆಯೇ. ಅವರು ಹೀಗೆ ಹೇಳಿದಾದ್ರು ಯಾಕೆ ಎಂದು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಓದಿರಿ.

ಓದಿರಿ: ಇಂಟರ್ನೆಟ್ ಕ್ರಾಂತಿ: ಡಿಜಿಟಲ್ ಸಾಕ್ಷರತೆ

 ಮಾನವನ ನಾಶಕ್ಕಾಗಿ ಹೊಸ ತಂತ್ರಜ್ಞಾನ

ಮಾನವನ ನಾಶಕ್ಕಾಗಿ ಹೊಸ ತಂತ್ರಜ್ಞಾನ

ತಂತ್ರಜ್ಞಾನವಿಲ್ಲದೇ ಪ್ರಪಂಚವನ್ನು ಊಹಿಸಲು ಸಾಧ್ಯವಿಲ್ಲ. ಆದರೆ ತಂತ್ರಜ್ಞಾನವೇ ಪ್ರಳಯಕ್ಕೆ ಪಾಕವಿಧಾನವಾಗಿದೆ. ತಂತ್ರಜ್ಞಾನ ಜೀವನ ಶೈಲಿಯಲ್ಲಿ ಹೊಸತನ ತರಬಹುದು ಆದರೆ ಅವುಗಳೇ ಮಾನವನ ನಾಶಕ್ಕೆ ಕಾರಣವಾಗುವಲ್ಲಿ ಸಂಶಯವಿಲ್ಲ ಎಂದು ಸ್ಟೀಫನ್‌ ಹಾಕಿಂಗ್ ಹೇಳಿದ್ದಾರೆ.

ಪ್ರಪಂಚ ಹೇಗೆ ಕೊನೆಗೊಳ್ಳುತ್ತದೆ ?

ಪ್ರಪಂಚ ಹೇಗೆ ಕೊನೆಗೊಳ್ಳುತ್ತದೆ ?

ಸ್ಟೀಫನ್‌ ಹಾಕಿಂಗ್‌ರವರಿಗೆ, "ಪ್ರಪಂಚ ಹೇಗೆ ಕೊನೆಗೊಳುತ್ತದೆ" ಎಂದು ಕೇಳಿದ ಪ್ರಶ್ನೆಗೆ "ಮಾನವರು ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕತೆಯಿಂದ ಹಲವು ಆತಂಕಗಳನ್ನು ಎದುರಿಸುತ್ತಿದ್ದಾರೆ. ಅವುಗಳು ಜಾಗತಿಕ ತಾಪಮಾನ, ನ್ಯೂಕ್ಲಿಯಾರ್ ಯುದ್ಧ ಹಾಗೂ ಅನುವಂಶೀಯ ವೈರಸ್‌ಗಳ ವಿನ್ಯಾಸಗಳು" ಎಂದು ಹೇಳಿದ್ದಾರೆ.

ಬ್ಲಾಕ್‌ ಹೋಲ್ಸ್‌ ದಿನ

ಬ್ಲಾಕ್‌ ಹೋಲ್ಸ್‌ ದಿನ

ಸ್ಟೀಫನ್ ಹಾಕಿಂಗ್‌'ರವರ ಗಮನಾರ್ಹ ವಿಷಯಗಳು ಬಿಬಿಸಿಯು ಜನವರಿ 7 ರಂದು ಕೈಗೊಂಡಿದ್ದ "ನೇಚರ್‌ ಆಫ್‌ ಬ್ಲಾಕ್‌ ಹೋಲ್ಸ್‌" ಬಗೆಗಿನ ವಾರ್ಷಿಕ ಉಪನ್ಯಾಸ ರೆಕಾರ್ಡಿಂಗ್‌ ವೇಳೆ ಹೊರಬಿದ್ದಿವೆ.

 ಹೊಸ ನಕ್ಷತ್ರಗಳ ಕಡೆ ಪಯಣ

ಹೊಸ ನಕ್ಷತ್ರಗಳ ಕಡೆ ಪಯಣ

"ಭೂಮಿಯ ಮೇಲೆ ವಿಪತ್ತುಗಳು 1,000 ವರ್ಷಗಳಿಂದ 10,000 ವರ್ಷಗಳ ನಡುವೆ ಕಾಣಿಸಿಕೊಳ್ಳಬಹುದು. ಆದರೆ ಮಾನವರು ಆಗ ಕೊನೆಗೊಳ್ಳುವುದಿಲ್ಲಾ. ಕಾರಣ ಅವರು ಹೊಸ ನಕ್ಷತ್ರಗಳನ್ನು ತಮ್ಮ ವಾಸಕ್ಕಾಗಿ ಬಳಸಿಕೊಳ್ಳುತ್ತಾರೆ" ಎಂದು ಸ್ಟೀಫನ್‌ ಹಾಕಿಂಗ್‌ ಹೇಳಿದ್ದಾರೆ.

ಸ್ಟೀಫನ್‌ ಹಾಕಿಂಗ್‌ ಹೇಳಿದ ಜೋಕ್‌

ಸ್ಟೀಫನ್‌ ಹಾಕಿಂಗ್‌ ಹೇಳಿದ ಜೋಕ್‌

ಬಾಹ್ಯಾಕಾಶ ಸಂಶೋಧನೆ ಹೆಚ್ಚು ನಡೆಯುತ್ತಿರುವ ಹಿನ್ನೆಲೆಯಿಂದ " ಇನ್ನು ನೂರು ವರ್ಷಗಳು ಕಳೆದರೂ ಸಹ ಬಾಹ್ಯಾಕಾಶದಲ್ಲಿ ವಾಸಿಸಲು ವಸಹಾತು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸಮಯದಲ್ಲಾದರೂ ನಾವು ಎಚ್ಚರಿಕೆಯಿಂದ ಇರಬೇಕಿದೆ" ಎಂದು ಉಪನ್ಯಾಸದ ವೇಳೆ ಜೋಕ್‌ ಮಾಡಿದರು.

ಸ್ಟೀಫನ್‌ ಹಾಕಿಂಕ್‌ ಹೈಲೈಟ್ಸ್‌

ಸ್ಟೀಫನ್‌ ಹಾಕಿಂಕ್‌ ಹೈಲೈಟ್ಸ್‌

ಸ್ಟೀಫನ್‌ ಹಾಕಿಂಗ್‌ರವರು ಬರೆದ ಪತ್ರದಲ್ಲಿ "ನಾವು ಅನಿರ್ಧೇಶಿತ ಬುದ್ಧಿಮತ್ತೆ ರಚಿಸುವುದರ ಬದಲು, ಪ್ರಯೋಜನಕಾರಿ ಬುದ್ಧಿಮತ್ತೆ ರಚಿಸುವ ಬಗ್ಗೆ ನಮ್ಮ ಗುರಿ ಬದಲಿಸಬೇಕು. ಈ ಗುರಿ ಬದಲಿಸುವುದು ಬಹುಶಃ ದಶಕಗಳ ಕಾಲ ತೆಗೆದುಕೊಳ್ಳಬಹುದು. ಆದ್ದರಿಂದ ಇಂದು ರಾತ್ರಿ ಪ್ರಾರಂಭ ಮಾಡುವುದಕ್ಕಿಂದ ಈಗಿನಿಂದಲೇ ಸಂಶೋಧನೆ ಮಾಡಲು ಪ್ರಾರಂಭಿಸಿ." ಎಂಬುದನ್ನು ಹೈಲೈಟ್ ಮಾಡಿದ್ದಾರೆ.

Best Mobiles in India

English summary
Stephen Hawking Says Humans Will Use Technology To Cause Their Own Extinction! Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X