ವಾಟ್ಸಾಪ್‌ನಲ್ಲಿ ಈ ತರಹ ಫೋಟೋ ಶೇರ್ ಮಾಡುವುದನ್ನು ಇಂದೇ ನಿಲ್ಲಿಸಿ!

|

ಮೆಟಾ ಮಾಲೀಕತ್ವದ ವಾಟ್ಸಾಪ್‌ (WhatsApp) ಅಪ್ಲಿಕೇಶನ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದ್ದು, ಲೀಡಿಂಗ್‌ ಇನ್‌ಸ್ಟಂಟ್‌ ಮೆಸೆಜ್‌ ಪ್ಲಾಟ್‌ಫಾರ್ಮ್ ಆಗಿದೆ. ವಾಟ್ಸಾಪ್‌ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ವಾಟ್ಸಾಪ್‌ ಟೆಕ್ಸ್ಟ್‌ ಮೆಸೆಜ್‌ ಜೊತೆಗೆ ಫೋಟೊ, ವಿಡಿಯೋ, ಫೈಲ್, ಲೊಕೇಶನ್ ಶೇರಿಂಗ್‌ ಆಯ್ಕೆಗಳನ್ನು ಹೊಂದಿದ್ದು, ಅತ್ಯುತ್ತಮ ತಾಣ ಎನಿಸಿದೆ. ಆದರೆ ವಾಟ್ಸಾಪ್‌ನಲ್ಲಿ ಈ ರೀತಿ ಫೋಟೋ ಶೇರ್ ಮಾಡುವುದನ್ನು ನಿಲ್ಲಿಸಿ.

ಹೌದು, ವಾಟ್ಸಾಪ್‌ (WhatsApp) ನಲ್ಲಿ ಟೆಕ್ಸ್ಟ್‌ ಮೆಸೆಜ್‌ ಜೊತೆಗೆ ಹೆಚ್ಚಾಗಿ ಫೋಟೊ, ವಿಡಿಯೋ ಹಾಗೂ ಮೀಡಿಯಾ ಫೈಲ್ ಶೇರ್ ಮಾಡಲು ಬಳಕೆ ಮಾಡುತ್ತಾರೆ. ಇನ್ನು ವಾಟ್ಸಾಪ್‌ ಮೂಲಕ ಫೋಟೋ ಶೇರ್ ಮಾಡಿದಾಗ ಅಥವಾ ಸ್ವೀಕರಿಸಿದಾಗ, ಆಪ್‌ ಫೋಟೊದ ಗಾತ್ರವನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಫೋಟೋ ಕ್ವಾಲಿಟಿ/ ಗುಣಮಟ್ಟ ಕಡಿಮೆ ಆಗಿರುವುದನ್ನು ನೀವು ಗಮನಿಸಿರಬಹುದು. ಫೋಟೊ ಗುಣಮಟ್ಟ ಕಡಿಮೆ ಆಗದಿರಲಿ ಎಂದು ಮತ್ತೆ ಕೆಲವರು ಪಿಡಿಎಫ್ ಮಾದರಿಯಲ್ಲಿ ಕಳುಹಿಸುತ್ತಾರೆ.

ವಾಟ್ಸಾಪ್‌ನಲ್ಲಿ

ಇನ್ನು ನೀವೇನಾದರೂ ಇದೇ ರೀತಿ ವಾಟ್ಸಾಪ್‌ನಲ್ಲಿ ಕಡಿಮೆ ಗುಣಮಟ್ಟದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದರೆ, ಕೂಡಲೇ ಹೀಗೆ ಕಳುಹಿಸುವುದನ್ನು ಬಿಟ್ಟು ಬಿಡಿ. ವಾಟ್ಸಾಪ್‌ನಲ್ಲಿ ಫೋಟೋ ಶೇರ್ ಮಾಡುವಾಗ ಫೋಟೊಗಳ ಕ್ವಾಲಿಟಿ ಕಡಿಮೆ ಆಗುವುದನ್ನು ತಪ್ಪಿಸಲು ಮಾರ್ಗವಿದೆ. ಹಾಗಾದರೆ ವಾಟ್ಸಾಪ್‌ನಲ್ಲಿ ಗುಣಮಟ್ಟದ ಫೋಟೋಗಳನ್ನು ಶೇರ್ ಮಾಡಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ ಶೇರ್ ಮಾಡಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ ಶೇರ್ ಮಾಡಲು ಹೀಗೆ ಮಾಡಿ:

ಹಂತ 1. ನಿಮ್ಮ ಐಫೋನ್‌ ಅಥವಾ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ವಾಟ್ಸಾಪ್‌ ಆಪ್‌ ತೆರೆಯಿರಿ.

ಹಂತ 2. ನಂತರ, ವಾಟ್ಸಾಪ್‌ ಸೆಟ್ಟಿಂಗ್‌ ತೆರೆಯಲು, ಬಲಭಾಗದ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

ಹಂತ 3. ಬಳಿಕ ಸೆಟ್ಟಿಂಗ್‌ಗಳಲ್ಲಿ, Storage and Data ಆಯ್ಕೆ ಮಾಡಿರಿ.

ಹಂತ 4. ತದ ನಂತರ, ಫೋಟೋ ಅಪ್‌ಲೋಡ್ ಗುಣಮಟ್ಟವನ್ನು ಟ್ಯಾಪ್ ಮಾಡಬೇಕು ಮತ್ತು Best Quality option ಆಯ್ಕೆಯನ್ನು ಸೆಲೆಕ್ಟ್‌ ಮಾಡಿರಿ.

ಹಂತ 5. ಒಮ್ಮೆ Best Quality option ಆಯ್ಕೆ ಮಾಡಿದ ನಂತರ, ಓಕೆ ಕ್ಲಿಕ್ ಮಾಡಿ.

ವಾಟ್ಸಾಪ್‌ನಲ್ಲಿ ಫೋಟೋ ಮತ್ತು ವೀಡಿಯೊ ಶೇರ್ ಮಾಡಲು ಈ ಕ್ರಮ ಅನುಸರಿಸಿ:

ವಾಟ್ಸಾಪ್‌ನಲ್ಲಿ ಫೋಟೋ ಮತ್ತು ವೀಡಿಯೊ ಶೇರ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ವಾಟ್ಸಾಪ್‌ ಆ[ಪ್ ತೆರೆಯಿರಿ ಮತ್ತು ನೀವು ಫೋಟೋ ಅಥವಾ ವೀಡಿಯೊವನ್ನು ಕಳುಹಿಸಲು ಬಯಸುವ ವೈಯಕ್ತಿಕ ಅಥವಾ ಗುಂಪು ಚಾಟ್ ಅನ್ನು ತೆರೆಯಿರಿ.

ಹಂತ 2: ಲಗತ್ತಿಸಿ (ಪಿನ್) ಐಕಾನ್ ಕ್ಲಿಕ್ ಮಾಡಿ.

ಫೋಟೋ

ಹಂತ 3: ಆಂಡ್ರಾಯ್ಡ್‌ ಫೋನಿನಲ್ಲಿ, ಫೋಟೋ ಅಥವಾ ವೀಡಿಯೊವನ್ನು ಆಯ್ಕೆ ಮಾಡಲು ಗ್ಯಾಲರಿ ಕ್ಲಿಕ್ ಮಾಡಿ. ಬಹು ಚಿತ್ರಗಳನ್ನು ಆಯ್ಕೆ ಮಾಡಲು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ. ಫೋಟೋಗಳು ಮತ್ತು ವೀಡಿಯೊಗಳಿಗೆ ಹೆಡ್‌ಲೈನ್‌ ಸಹ ಕೊಡಬಹುದು. ಪ್ರತಿ ಫೋಟೋಗೂ ಹೆಡ್‌ಲೈನ್‌ ಸೇರಿಸಲು ಫೋಟೋಗಳ ನಡುವೆ ಸ್ವೈಪ್ ಮಾಡಿ, ಕೊನೆಯಲ್ಲಿ ಸೆಂಡ್‌ ಐಕಾನ್ ಕ್ಲಿಕ್ ಮಾಡಿ.

ಐಫೋನ್‌

ಹಂತ 4: ಐಫೋನ್ ಬಳಕೆದಾರರು ಪ್ಲಸ್ ಐಕಾನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ ಮತ್ತು ನಂತರ ನಿಮ್ಮ ಐಫೋನ್‌ ಫೋಟೋಗಳು ಅಥವಾ ಆಲ್ಬಮ್‌ಗಳಿಂದ ಫೋಟೋ ಅಥವಾ ವೀಡಿಯೊವನ್ನು ಆಯ್ಕೆ ಮಾಡಲು ಫೋಟೋ ಲೈಬ್ರರಿ ಮತ್ತು ವೀಡಿಯೊವನ್ನು ಆಯ್ಕೆ ಮಾಡಬೇಕಾಗುತ್ತದೆ. ಫೋಟೋ ಅಥವಾ ವೀಡಿಯೊವನ್ನು ಆಯ್ಕೆ ಮಾಡಿದ ನಂತರ, ಏಕಕಾಲದಲ್ಲಿ ಅನೇಕ ಫೋಟೋಗಳು ಅಥವಾ ವೀಡಿಯೊಗಳನ್ನು ಆಯ್ಕೆ ಮಾಡಲು ಕೆಳಗಿನ ಎಡಭಾಗದಲ್ಲಿ ಸೇರಿಸು ಟ್ಯಾಪ್ ಮಾಡಿ.

Best Mobiles in India

English summary
Stop Sending WhatsApp Photos in Wrong Way! Do THIS instead.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X