ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!

|

ದೇಶದಲ್ಲಿ ಟೆಲಿಕಾಂ ವಲಯ ಸುಮಾರು ಹತ್ತು ವರ್ಷದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, ಅದರೊಂದಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟವರ್ಕ್‌ ಹೊರತುಪಡಿಸಿ ಹಲವು ಖಾಸಗಿ ಕಂಪನಿಗಳು ಟೆಲಿಕಾಂ ಸೇವೆ ಆರಂಭಿಸಿವೆ. ಟ್ರಾಯ್‌ ಅಂಕಿ ಸಂಖ್ಯೆ ಪ್ರಕಾರ 2008 ರಿಂದ 2018 ವರೆಗೆ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಅಂಕಿ ಸಂಖ್ಯೆಯಲ್ಲಿ ಏರಿಳಿಕೆ ಕಂಡಿದ್ದು, ಈ ಅವಧಿಯಲ್ಲಿ ಹಲವು ಕಂಪನಿಗಳು ಮುಚ್ಚಿಹೋಗಿವೆ.

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!

ಹೌದು, ಖಾಸಗಿ ಟೆಲಿಕಾಂ ಸಂಸ್ಥೆಗಳು ದೇಶದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದ್ದು, ಹತ್ತು ವರ್ಷದಲ್ಲಿ ಬಾರಿ ಬದಲಾವಣೆಗಳಾಗಿವೆ. ಕೇಲವು ಟೆಲಿಕಾಂ ಕಂಪನಿಗಳು ಅಲ್ಪ ಅವಧಿಯಲ್ಲಿ ಸೇವೆ ಸ್ಥಗಿತ ಮಾಡಿದವು ಇನ್ನು ಕೇಲವು ಕಂಪನಿಗಳು ಇತರೆ ಕಂಪನಿಗಳೊಂದಿಗೆ ವಿಲಿನವಾದವು. ಅವುಗಳಲ್ಲಿ ಸದ್ಯ ಲೀಡ್‌ನಲ್ಲಿರುವ ಟೆಲಿಕಾಂ ಕಂಪನಿಗಳೆಂದರೇ ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ ಆಗಿವೆ.

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!

2008 ರಿಂದ 2018ರ ಅವಧಿಯಲ್ಲಿ ದೇಶದ ಖಾಸಗಿ ಟೆಲಿಕಾಂ ವಲಯದಲ್ಲಿ ಚಂದಾದಾರ ಅಂಕಿ ಅಂಶಗಳಲ್ಲಿ ಆಗಿರುವ ಬದಲಾವಣೆಗಳೆನು.? ಯಾವ ಕಂಪನಿ ತನ್ನ ಬಳಕೆದಾರರನ್ನು ಉಳಿಸಿಕೊಂಡು ಸ್ಥಿರ ಸ್ಥಾನದಲ್ಲಿದೆ? ಮತ್ತು ಈ ಅವಧಿಯಲ್ಲಿ ಹೊಸದಾಗಿ ಟೆಲಿಕಾಂ ಸೇವೆ ಆರಂಭಿಸಿದ ಸಂಸ್ಥೆಗಳು ಯಾವುವು ಎಂಬುದರ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿರಿ.

ಏರಟೆಲ್

ಏರಟೆಲ್

ಖಾಸಗಿ ಟೆಲಿಕಾಂ ವಲಯದಲ್ಲಿ ಹೆಸರುವಾಸಿಯಾಗಿರುವ ಈ ಸಂಸ್ಥೆಯು 2008ರಲ್ಲಿ 64.27 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. 2017ರಲ್ಲಿ 277.51 ಮಿನಿಯನ್‌ ಹಾಗೂ 2018ರ ಮಾರ್ಚ ಅಂತ್ಯದ ವರೆಗಿನ ಟ್ರಾಯ್ ಅಂಕಿ ಅಂಶದ ಪ್ರಕಾರ 308.12 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಆರಂಭದಿಂದಲೂ ಏರಟೆಲ್‌ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ವೊಡಾಪೋನ್‌

ವೊಡಾಪೋನ್‌

2008ರಲ್ಲಿ 44.13 ಮಿಲಿಯನ್ ಚಂದಾದಾರರನ್ನು ಹೊಂದಿದ್ದ ವೋಡಾಫೋನ್‌ ಟೆಲಿಕಾಂ ಕಂಪನಿಯು ಆಗಿನ ಹೆಸರು ಹಚ್‌ ಎಂದಿತ್ತು. 2017ರಲ್ಲಿ 209.20 ಮಿಲಿಯನ್ ಹಾಗೂ 2018ರಲ್ಲಿ 222.92 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಈ ಕಂಪನಿಯು ಸಹ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.

ಐಡಿಯಾ

ಐಡಿಯಾ

ಐಡಿಯಾ ಟೆಲಿಕಾಂ ಕಂಪನಿಯು 2008ರಲ್ಲಿ 28.21 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. 2017ರಲ್ಲಿ 195.37 ಮಿಲಿಯನ್ ಮತ್ತು 2018ರಲ್ಲಿ 211.21 ಮಿಲಿಯನ್ ಬಳಕೆದಾರರು ಈ ಕಂಪನಿಯ ಚಂದಾದಾರರಾಗಿದ್ದರು. 2018ರ ಅವಧಿವರೆಗೆ ಈ ಕಂಪನಿಯ ಸಹ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಸದ್ಯ ವೊಡಾಫೋನ್‌ ಸಂಸ್ಥೆಯೊಂದಿಗೆ ವಿಲಿನವಾಗಿದೆ.

ಏರ್‌ಸೇಲ್‌

ಏರ್‌ಸೇಲ್‌

2008ರಲ್ಲಿ ಏರ್‌ಸೇಲ್‌ ಟೆಲಿಕಾಂ ಕಂಪನಿಯ ಚಂದಾದಾರರ ಸಂಖ್ಯೆಯು 10.61 ಮಿಲಿಯನ್ ಆಗಿತ್ತು. ಹಾಗೇ 2017ರಲ್ಲಿ ಚಂದಾದಾರರ ಸಂಖ್ಯೆಯನ್ನು 90.90ಮಿಲಿಯನ್‌ಗೆ ಹೆಚ್ಚಿಸಿಕೊಂಡಿದ್ದು, 2018ರ ಫೆಬ್ರುವರಿ ವರೆಗೆ 78.92 ಚಂದಾದಾರರನ್ನು ಹೊಂದಿತ್ತು. ನಂತರ ಈ ಟೆಲಿಕಾಂ ಕಂಪನಿ ಸೇವೆಯನ್ನು ಸ್ಥಗಿತಗೊಳಿಸಿತು.

ರಿಲಾಯನ್ಸ್‌

ರಿಲಾಯನ್ಸ್‌

2008ರಲ್ಲಿ ರಿಲಾಯನ್ಸ್‌ ಸ್ವದೇಶಿ ಟೆಲಿಕಾಂ ಕಂಪನಿಯ ಚಂದಾದಾರರ ಸಂಖ್ಯೆಯು 46.67 ಮಿಲಿಯನ್ ಆಗಿತ್ತು. ನಂತರ 2017ರಲ್ಲಿ ಚಂದಾದಾರರ ಸಂಖ್ಯೆಯು 84.68 ಮಿಲಿಯನ್‌ಗೆ ಹೆಚ್ಚಳವಾಯಿತು. ಮುಂದೆ 2018ರಲ್ಲಿ 1.11 ಚಂದಾದಾರರನ್ನು ಹೊಂದಿತ್ತು. ಆದರೆ ಆನಂತರ ಈ ಟೆಲಿಕಾಂ ಕಂಪನಿ ಸೇವೆಯನ್ನು ಸ್ಥಗಿತಗೊಳಿಸಿತು.

ಜಿಯೋ

ಜಿಯೋ

2016 ಆಕ್ಟೋಬರ್‌ನಲ್ಲಿ ಟೆಲಿಕಾಂ ವಲಯಕ್ಕೆ ರಿಲಾಯನ್ಸ್ ಜಿಯೋ ಸಂಸ್ಥೆಯು ಹೊಸದಾಗಿ ಸೇವೆ ಆರಂಭಿಸಿತು. 2017ರಲ್ಲಿ 108.68ಮಿಲಿಯನ್ ಚಂದಾದಾರರನ್ನು ಜಿಯೋ ಹೊಂದಿತ್ತು. ಮುಂದೆ 2018ರಲ್ಲಿ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 186.56 ಮಿಲಿಯನ್ ಬಳಕೆದಾರರು ಜಿಯೋದತ್ತ ವಾಲಿದರು. ಸದ್ಯ ಹೆಚ್ಚಿನ ಚಂದಾದಾರರನ್ನು ಈ ಸಂಸ್ಥೆಯು ಹೊಂದಿದೆ.

ಓದಿರಿ : ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?ಓದಿರಿ : ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?

Best Mobiles in India

English summary
Subscribers of Private Operators in India.2008-2018.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X