ಭಾರತೀಯರಿಗೆ ಗೂಗಲ್‌ನಿಂದ ಗುಡ್‌ ನ್ಯೂಸ್‌; ನೀವೆಲ್ಲಾ ಸಂತಸ ಪಡುವ ವಿಷಯ!

|

ತಂತ್ರಜ್ಞಾನ ವಿಷಯದಲ್ಲಿ ಭಾರತ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಈ ಕಾರಣಕ್ಕೆ ಹಲವಾರು ಪ್ರಮುಖ ಕಂಪೆನಿಗಳು ತಮ್ಮ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡುವುದರ ಜೊತೆಗೆ ಇಲ್ಲೆ ತಯಾರು ಮಾಡುವ ಕಾರ್ಯಕ್ಕೂ ಮುಂದಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿ ಚೀನಾವನ್ನು ಮಂಡಿಯೂರಿಸಲು ಭಾರತ ಎಲ್ಲಾ ರೀತಿಯಲ್ಲೂ ಸಿದ್ಧವಾಗುತ್ತಿದೆ. ಇದರ ಭಾಗವಾಗಿಯೇ ಈಗಾಗಲೇ ಹಲವಾರು ಕಂಪೆನಿಗಳು ಚೀನಾದಿಂದ ಭಾರತಕ್ಕೆ ವರ್ಗಾವಣೆಯಾಗುತ್ತಿದ್ದು, ಅದರಲ್ಲಿ ಆಪಲ್‌ ಸಹ ಒಂದು. ಈ ನಡುವೆ ಭಾರತೀಯರು ಸಂತಸ ಪಡುವ ಮತ್ತೊಂದು ವಿಷಯ ತಿಳಿದುಬಂದಿದೆ.

ಸರ್ಚ್‌

ಹೌದು, ಸರ್ಚ್‌ ಇಂಜಿನ್ ದೈತ್ಯ ಗೂಗಲ್‌ನ ಎಲ್ಲಾ ಉತ್ಪನ್ನಗಳಿಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದರಲ್ಲೂ ಪಿಕ್ಸೆಲ್ ಸ್ಮಾರ್ಟ್ ಫೋನ್ ವಿಶೇಷ ಫೀಚರ್ಸ್‌ನೊಂದಿಗೆ ಹೆಚ್ಚಾಗಿ ಮಾರಾಟವಾಗುತ್ತಿವೆ. ಈ ಕಾರಣಕ್ಕೆ ಗೂಗಲ್‌ ಸಂಸ್ಥೆ ಭಾರತೀಯರಿಗೆ ಸಂತಸದ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಇದು ಏನಾದರೂ ಕಾರ್ಯಗತಗೊಂಡರೆ ಭವಿಷ್ಯದಲ್ಲಿ ಚೀನಾವನ್ನು ತಂತ್ರಜ್ಞಾನ ವಿಷಯದಲ್ಲಿ ಮಣಿಸಲು ಭಾರತದ ಮುಂದಾಗುತ್ತದೆ. ಹಾಗಿದ್ರೆ ಗೂಗಲ್‌ ಕಂಪೆನಿ ಭಾತದಲ್ಲಿ ಮಾಡುವುದಾದರೂ ಏನು? ಗೂಗಲ್‌ ಸಿಇಓ ಭಾರತೀಯರಿಗೆ ಕೊಡಲು ಮುಂದಾಗಿರುವ ಕೊಡುಗೆ ಏನು ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ವಿವರಿಸಿದ್ದೇವೆ ಓದಿರಿ.

ಭಾರತದಲ್ಲೇ ತಯಾರಾಗಲಿವೆ ಪಿಕ್ಸೆಲ್‌ ಫೋನ್

ಭಾರತದಲ್ಲೇ ತಯಾರಾಗಲಿವೆ ಪಿಕ್ಸೆಲ್‌ ಫೋನ್

ಜಾಗತಿಕವಾಗಿ ಗೂಗಲ್‌ ಪಿಕ್ಸೆಲ್‌ ಫೋನ್‌ಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳ ಬಳಕೆ ಹೆಚ್ಚಾಗಿಯೇ ಕಂಡುಬಂದಿದೆ. ಇದನ್ನು ಮನಗಂಡಿರುವ ಗೂಗಲ್‌ ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ಚೀನಾಗೆ ನುಂಗಲಾರದ ತುತ್ತು..

ಚೀನಾಗೆ ನುಂಗಲಾರದ ತುತ್ತು..

ಪ್ರಮುಖವಾಗಿ ಆಪಲ್‌ನ ಅರ್ಧಕ್ಕಿಂತ ಹೆಚ್ಚು ಉತ್ಪಾದನೆಯನ್ನು ಚೀನಾದಲ್ಲಿ ಮಾಡಲಾಗುತ್ತದೆ. ಆದರೆ ಪ್ರಸ್ತುತ ಆಪಲ್ ಸಂಸ್ಥೆಯು ಭಾರತದಲ್ಲಿಯೂ ಈ ಸ್ಮಾರ್ಟ್‌ಫೋನ್‌ಗಳನ್ನು ಹಾಗೂ ಟ್ಯಾಬ್‌ಗಳನ್ನು ತಯಾರು ಮಾಡಲು ಮುಂದಾಗಿದ್ದು, ಇದರ ನಡುವೆಯೇ ಗೂಗಲ್‌ನ ಈ ಹೊಸ ಪ್ಲ್ಯಾನ್‌ ಹೊರಬಿದ್ದಿದ್ದು, ಚೀನಾಗೆ ಪೆಟ್ಟುಕೊಟ್ಟಂತಾಗಿದೆ. ಇನ್ನು ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬರುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಸಂಬಂಧ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ತಂತ್ರಜ್ಞಾನ

ಭಾರತವು ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಉದ್ಯಮಿಗಳನ್ನು ಕೈ ಬೀಸಿ ಕರೆಯುತ್ತಿದ್ದು, ಅವರಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತಾ ಬರುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರದ ಪಿಎಲ್‌ಐ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ಗೂಗಲ್‌ ಪಿಕ್ಸೆಲ್‌ ಫೋನ್‌ಗಳನ್ನು ತಯಾರಿಸಲು ಸುಂದರ್ ಪಿಚೈ ನೇರವಾಗಿ ಭಾರತಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಚೀನಾದಲ್ಲೇ ತಯಾರಾಗುತ್ತಿದ್ದವು

ಈ ಹಿಂದೆ ಚೀನಾದಲ್ಲೇ ತಯಾರಾಗುತ್ತಿದ್ದವು

ಕೊರೊನಾ ಚೀನಾವನ್ನು ಎಲ್ಲಾ ರೀತಿಯಲ್ಲೂ ಸಂಕಷ್ಟಕ್ಕೆ ದೂಡಿದೆ. ಕೊರೊನಾ ವೈರಸ್‌ನಿಂದಾಗಿ ಅಲ್ಲಿನ ಕಾರ್ಖಾನೆಗಳು ಅಗತ್ಯವಿರುವ ಸಂಖ್ಯೆಯ ಫೋನ್‌ಗಳನ್ನು ಉತ್ಪಾದಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುಪಾಲು ಕಂಪೆನಿಗಳು ಇತರೆ ದೇಶಗಳಲ್ಲಿ ತಮ್ಮ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಮುಂದಾಗುತ್ತಿದ್ದಾರೆ. ಅದೇ ರೀತಿ ಗೂಗಲ್‌ ಸಹ ಈಗ ಭಾರತದ ಕಡೆ ಮುಖ ಮಾಡಿದೆ. ಅದರಂತೆ ಸುಂದರ್ ಪಿಚೈ ನೇರವಾಗಿ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

 ಯಾವಾಗ ಆಗಮನ ?

ಯಾವಾಗ ಆಗಮನ ?

ಈ ತಿಂಗಳ ಕೊನೆಯಲ್ಲಿ ಸುಂದರ್ ಪಿಚೈ ಭಾರತಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ. ಸುಂದರ್ ಪಿಚೈ ಅವರೊಂದಿಗಿನ ಸಭೆಯಲ್ಲಿ ನಾವು ಭಾರತದಲ್ಲಿ ಗೂಗಲ್ ಪಿಕ್ಸೆಲ್ ಫೋನ್‌ಗಳ ತಯಾರಿಕೆ, ಆಪ್‌ಗಳ ಡೆವಲಪರ್ ಎಕೋ ವ್ಯವಸ್ಥೆ, ಸೈಬರ್ ಭದ್ರತೆ, ಮೊಬೈಲ್ ಸೇವೆಗಳಲ್ಲಿ ಭಾರತೀಯ ಭಾಷೆಗಳ ಬಳಕೆ ಕುರಿತು ಚರ್ಚಿಸುತ್ತೇವೆ ಎಂದು ಕೇಂದ್ರ ಸಂವಹನ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಮಾಹಿತಿ ನೀಡಿದ್ದರು.

ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆಯೇ?

ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆಯೇ?

ಭಾರತದಲ್ಲಿ ಪಿಕ್ಸೆಲ್‌ ಫೋನ್‌ಗಳ ತಯಾರಿಕಾ ವಿಷಯ ಅಷ್ಟೇ ಅಲ್ಲದೆ, ಇತ್ತೀಚೆಗೆ ಗೂಗಲ್ ನಲ್ಲಿ ಕೆಲವು ಉದ್ಯೋಗಿಗಳನ್ನು ವಜಾ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ. ಆದರೂ ಸಹ ನಿಖರವಾಗಿ ಯಾವುದೇ ಮಾಹಿತಿ ಈ ಬಗ್ಗೆ ತಿಳಿದುಬಂದಿಲ್ಲ.

ವರದಿ

ಕಳೆದ ತಿಂಗಳು ಬಿಡುಗಡೆಯಾದ ವರದಿ ಪ್ರಕಾರ, 6 ಪ್ರತಿಶತ ಅಥವಾ 10,000 ಉದ್ಯೋಗಿಗಳನ್ನು ವಜಾ ಮಾಡಲು ಗುರುತು ಮಾಡಿ ಎಂದು ಗೂಗಲ್‌ ಅಧಿಕಾರಿಗಳಿಗೆ ಹೇಳಿದೆಯಂತೆ. ಅದರಂತೆ ಕಳಪೆ ಕೆಲಸ ಮಾಡುವ ನೌಕರರನ್ನು ವಜಾ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೆಲವು ಗೂಗಲ್ ಉದ್ಯೋಗಿಗಳನ್ನು ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ವಜಾಗೊಳಿಸಬಹುದು ಎಂದು ತೋರುತ್ತದೆ. ಈ ಮಾಹಿತಿಯಿಂದ ಗೂಗಲ್ ಉದ್ಯೋಗಿಗಳು ತುಂಬಾ ಚಿಂತಿತರಾಗಿದ್ದಾರೆ.

Best Mobiles in India

English summary
Sundar pichai is coming to india to discuss the manufacturing of pixel phones with indian govt

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X