Subscribe to Gizbot

ಬನ್ಸಲ್‌ ಫೇಸ್‌ಬುಕ್‌ ಪೇಜ್‌ :ಒಂದೇ ದಿನದಲ್ಲಿ 10 ಸಾವಿರ ಲೈಕ್‌!

Posted By:

ಮಾಜಿ ರೇಲ್ವೆ ಸಚಿವ ಪವನ್‌ ಕುಮಾರ್‌ ಬನ್ಸಲ್‌ ಅವರಿಗೆ ಫೇಸ್‌ಬುಕ್‌ನಲ್ಲಿ ಒಂದೇ ದಿನದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ.ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದೆ ತಡ ಪವನ್‌ ಕುಮಾರ್‌ ಆತಂಕಕ್ಕೆ ಒಳಗಾಗಿದ್ದು,ಪೊಲೀಸರಿಗೆ ದೂರು ನೀಡಿದ್ದಾರೆ.

ಚಂಡೀಘಢದ ಸಂಸದ ಪವನ್‌ ಕುಮಾರ್‌ ಬನ್ಸಲ್‌ ಅವರು ಫೇಸ್‌ಬುಕ್‌ ಪೇಜ್‌ ಹೊಂದಿದ್ದು, ಡಿಸೆಂಬರ್‌24ರಂದು 51,600 ಜನ ಲೈಕ್‌ ಮಾಡಿದ್ದರೆ,ಅದೇ ದಿನ ಪೇಜ್‌ ಲೈಕ್‌ ಮಾಡಿದ ಅಭಿಮಾನಿಗಳ ಸಂಖ್ಯೆ 62,500 ಏರಿದೆ.ಬನ್ಸಲ್‌ ಹೇಳುವಂತೆ ಪ್ರತಿದಿನ 20,30 ಅಭಿಮಾನಿಗಳು ಪೇಜ್‌ನ್ನು ಲೈಕ್‌ ಮಾಡುತ್ತಿದ್ದರೆ, ಆ ದಿನ 10,900 ಅಭಿಮಾನಿಗಳು ಲೈಕ್‌ ಮಾಡಿದ್ದಾರೆ.ಒಂದೇ ದಿನದಲ್ಲಿ ಈ ರೀತಿ ಅಭಿಮಾನಿಗಳ ಸಂಖ್ಯೆ ಏರಿಕೆಯಾಗಲು ಸಾಧ್ಯವಿಲ್ಲ. ಯಾರೋ ಕೆಲವರು ಉದ್ದೇಶಪೂರ್ವ‌ಕವಾಗಿ ನನ್ನ ಹೆಸರು ಕೆಡಿಸಿಲು ಫೇಸ್‌ಬುಕ್‌‌ನಲ್ಲಿ ಈ ಕೃತ್ಯ ಎಸಗುತ್ತಿದ್ದಾರೆ ಎಂದು ತನ್ನ ದೂರಿನಲ್ಲಿ ಹೇಳಿದ್ದಾರೆ.

 ಬನ್ಸಲ್‌ ಫೇಸ್‌ಬುಕ್‌ ಪೇಜ್‌ :ಒಂದೇ ದಿನದಲ್ಲಿ 10 ಸಾವಿರ ಲೈಕ್‌!

ಚಂಡೀಘಡದ ಪೊಲೀಸರು ದೂರಿನ ಅನ್ವಯ ತನಿಖೆ ಆರಂಭಿಸಿದ್ದು ಸೈಬರ್‌ ವಿಭಾಗಕ್ಕೆ ತನಿಖೆಯನ್ನು ವರ್ಗಾಯಿಸಿದ್ದಾರೆ.ಅಳಿಯನ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾದ ಆರೋಪದ ಹಿನ್ನಲೆಯಲ್ಲಿ ರೇಲ್ವೆ ಸಚಿವ ಸ್ಥಾನಕ್ಕೆ ಮೇ ತಿಂಗಳಿನಲ್ಲಿ ಪವನ್‌ ಕುಮಾರ್‌ ಬನ್ಸಲ್‌ ರಾಜೀನಾಮೆ ನೀಡಿದ್ದರು.

ಫೇಸ್‌ಬುಕ್‌ ಮತ್ತು ಟ್ವೀಟರ್‌ಗಳನ್ನು ಸಮರ್ಥವಾಗಿ ಬಳಸಿ ಪ್ರಚಾರ ನಡೆಸುತ್ತಿರುವ ಬಿಜೆಪಿ ಕಾರ್ಯತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸಹ ತನ್ನದೇ ಆದ ಸೈಬರ್‌ ಸೈನ್ಯ ಆರಂಭಿಸಲು ನಿರ್ಧರಿಸಿದೆ. ಇದೇ 24 ರಂದು ಗುಜರಾತ್‌ ವಡೋದರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಐಟಿ ತರಬೇತಿ ಕಾರ್ಯ‌ಕ್ರಮದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಅಹಮದ್‌ ಪಟೇಲ್‌ ಪಕ್ಷದ ಪ್ರಚಾರಕ್ಕಾಗಿ ಸೈಬರ್‌ ಸೈನ್ಯವನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದರು. ಅಹಮದ್‌ ಪಟೇಲ್‌ ಹೇಳಿಕೆ ನೀಡಿದ ದಿನವೇ ಬನ್ಸಲ್ ಅವರ ಫೇಸ್‌ಬುಕ್‌ ಫ್ಯಾನ್‌ ಪೇಜ್‌ ಅಭಿಮಾನಿಗಳ ಸಂಖ್ಯೆ ಒಮ್ಮಿದೊಮ್ಮೆಗೆ ಏರಿಕೆಯಾಗಿದೆ.

ಈ ಹಿಂದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತಮ್ಮ ಪ್ರಸಿದ್ಧಿಗೆ ಫೇಸ್‌‌ಬುಕ್‌‌ ಮತ್ತು ಟ್ವೀಟರ್‌ನಲ್ಲಿ ಫೇಕ್‌ ಫಾಲೋವರ್‌ಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.


ಇದನ್ನೂ ಓದಿ: ಕಲೆಯಾಗದ ಹೊಸ ಸಿಲಿಕ್‌ ಟೀ ಶರ್ಟ್‌ ಹೇಗಿದೆ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot