ಅಪಘಾತದಿಂದ ಪ್ರಾಣ ಉಳಿಸಲು 'ಟೇಲ್‌ ಲೈಟ್‌ ರೈಡರ್‌'

By Suneel
|

ಅಪಘಾತಗಳಿಂದ ಪ್ರಾಣಿಗಳು ಅಧಿಕವಾಗಿ ಸಾವಿಗೀಡಾಗುತ್ತಿರುವ ವಿಷಯ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಸರ್ಕಾರಗಳು ಇವುಗಳಿಗೆ ಸೂಕ್ತ ಕ್ರಮ ಕೈಗೊಳ್ಳು ವಿಫಲವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುವ ಕುದುರೆಗಳ ರಕ್ಷಣೆಗಾಗಿ ಈಗ ಗ್ಯಾಜೆಟ್‌ ಒಂದನ್ನು ತಂತ್ರಜ್ಞಾನ ನಿಪುಣರು ಅಭಿವೃದ್ದಿಪಡಿಸಿದ್ದಾರೆ. ಈ ವಿಶೇಷ ಗ್ಯಾಜೆಟ್‌ ಯಾವುದು ಹಾಗೂ ಹೇಗೆ ಕುದುರೆಯನ್ನು ರಕ್ಷಿಸುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

ಓದಿರಿ: ನಿಮ್ಮ ಗ್ಯಾಜೆಟ್ ಚಾರ್ಜ್‌ ಮಾಡಲು ವೈಫೈ ಸಾಕು

ಟೇಲ್‌ ಲೈಟ್‌ ರೈಡರ್‌

ಟೇಲ್‌ ಲೈಟ್‌ ರೈಡರ್‌

ಕುದುರೆಗಳು ರೈಡ್‌ ಹೋಗಬೇಕಾದರೆ ಕುದರೆ ಸವಾರರು ಸಹ ಎಚ್ಚೆತ್ತು ಕೊಳ್ಳದೆ ಅಪಘಾತ ಮತ್ತು ಘರ್ಷಣೆಗೆ ಒಳಗಾಗಿ ಸಾವಿರಾರು ಕುದುರೆಗಳು ಸಾವಿಗೀಡಾಗುತ್ತಿದ್ದವು. ಈ ಘಟನೆಗಳನ್ನು ತಪ್ಪಿಸಲು ಕುದುರೆಗಳನ್ನು ರಕ್ಷಿಸಲು "ಟೇಲ್‌ ಲೈಟ್‌" ಎಂಬ ಹೊಸ ಗ್ಯಾಜೆಟ್‌ ಒಂದನ್ನು ಅಭಿವೃದ್ದಿಪಡಿಸಲಾಗಿದೆ.

 ಟೇಲ್‌ ಲೈಟ್ ರೈಡರ್‌

ಟೇಲ್‌ ಲೈಟ್ ರೈಡರ್‌

ಮಿಚಿಗನ್‌ನಲ್ಲಿನ ಟೆಕ್‌ ಸಂಸ್ಥೆಯು ಟೇಲ್‌ ಲೈಟ್‌ ಅಭಿವೃದ್ದಿ ಪಡಿಸಿದೆ. ಎಲ್‌ಇಡಿ ಲೈಟ್‌ ಸುರಕ್ಷಿತ ಸಿಸ್ಟಂ ಅನ್ನು ಕುದುರೆಗಳಿಗೆ ಸುರಕ್ಷತೆ ನೀಡಲು ವಿನ್ಯಾಸಗೊಳಿಸಲಾಗಿದೆ.

ಟೇಲ್‌ ಲೈಟ್‌ ರೈಡರ್‌

ಟೇಲ್‌ ಲೈಟ್‌ ರೈಡರ್‌

ಕುದುರೆಗಳು ರಸ್ತೆಗಳಲ್ಲಿ ರೈಡ್‌ ಹೋಗಬೇಕಾದರೆ ವಾಹನ ಚಾಲಕರಿಗೆ ಕುದುರೆಗಳಿರುವ ಉಪಸ್ಥಿತಿ ತಿಳಿಯುತ್ತದೆ. ಎಲ್‌ಇಡಿ ಲೈಟ್‌ನ ಗ್ಯಾಜೆಟ್‌ ಅನ್ನು ಕುದುರೆಯ ಹಿಂಭಾಗಕ್ಕೆ ಅಳವಡಿಸುವುದರಿಂದ ಕುದುರೆಯ ಉಪಸ್ಥಿತಿ ಇರುವ ಬಗ್ಗೆ ತಿಳಿದು ಅಪಘಾತ ತಪ್ಪಿಸಬಹುದು.

ಟೇಲ್‌ ಲೈಟ್ ರೈಡರ್‌

ಟೇಲ್‌ ಲೈಟ್ ರೈಡರ್‌

ಟೇಲ್‌ ಲೈಟ್ ಪ್ರೊ ಹಿಂದಿನ ಆವೃತ್ತಿಯ ಸರಳ ಕಲ್ಪನೆಯ ಗ್ಯಾಜೆಟ್‌. ಇದನ್ನು ಕೇವಲ 2 ಯುನಿಟ್‌ಗಳಿಂದ ವ್ಯವಸ್ಥೆಗೊಳಿಸಲಾಗಿದೆ.

ಟೇಲ್‌ ಲೈಟ್ ರೈಡರ್‌

ಟೇಲ್‌ ಲೈಟ್ ರೈಡರ್‌

ಕುದುರೆಗೆ ಟೇಲ್‌ ಲೈಟ್‌ ರೈಡರನ್ನು ಕುದುರೆಯ ಹಿಂಭಾಗಕ್ಕೆ ಹಾಗೂ ಮುಂದಿನ ಕೊರಳಿನ ಭಾಗಕ್ಕೂ ಅಳವಡಿಸಲಾಗುತ್ತದೆ.

ಟೇಲ್‌ ಲೈಟ್‌ ರೈಡರ್‌

ಟೇಲ್‌ ಲೈಟ್‌ ರೈಡರ್‌

ಟೇಲ್‌ ಲೈಟ್‌ ರೈಡರ್‌ಅನ್ನು ರಿಮೋಟ್‌ನಿಂದ ನಿಯಂತ್ರಿಸಬಹುದಾಗಿದ್ದು, ಬಳಕೆದಾರನು ಆನ್‌ ಮತ್ತು ಆಫ್‌ ಮಾಡಬಹುದಾಗಿದೆ.

ಟೇಲ್‌ ಲೈಟ್ ರೈಡರ್‌

ಟೇಲ್‌ ಲೈಟ್ ರೈಡರ್‌

ಟೇಲ್‌ ಲೈಟ್ ರೈಡರ್‌ ಗ್ಯಾಜೆಟ್‌ನಲ್ಲಿ ಬ್ರೈಟ್‌ನೆಸ್‌ ಅನ್ನು ಬೇಕಾದ ರೀತಿಯಲ್ಲಿ ಹೊಂದಿಸಬಹುದಾಗಿದೆ. ಅಲ್ಲದೇ ಗುಲಾಬಿ, ಹಸಿರು, ಕೆಂಪು ಬಣ್ಣಗಳಿಗೆ ಲೈಟ್‌ ಬಣ್ಣವನ್ನು ಬದಲಿಸಬಹುದಾಗಿದೆ.

ಟೇಲ್‌ ಲೈಟ್ ರೈಡರ್‌

ಗ್ಯಾಜೆಟ್‌ ಖರೀದಿ ಅಧಿಕವಾದಲ್ಲಿ ಅದರ ಬೆಲೆಯನ್ನು $155 ಮಾಡಲಾಗುವುದು. ಹೆಚಿನ ಮಾಹಿತಿಯನ್ನು ವೀಡಿಯೋದಲ್ಲಿ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ 'ಸಮಿ ಗ್ರಾಸ್' ಹೇಳಲಿದ್ದಾರೆ.

Most Read Articles
Best Mobiles in India

English summary
Tail Lights Rider Safety System serves one purpose and that is to ensure that accidents and collisions, which end up hurting and killing thousands of horses and riders each year, cease.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X