DTH ಗ್ರಾಹಕರಿಗೆ ಸಿಹಿಸುದ್ದಿ: ಟಾಟಾಪ್ಲೇ ಬಿಂಜ್‌ನಲ್ಲಿ ಈಗ ಮತ್ತೆ 3 ಓಟಿಟಿ ಲಭ್ಯ!

|

ಡಿಟುಹೆಚ್‌ (DTH) ವಲಯದಲ್ಲಿ ಜನಪ್ರಿಯ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಟಾಟಾಪ್ಲೇ ಬಿಂಜ್‌ (Tata Play Binge) ಇತ್ತೀಚಿಗೆ ಓಟಿಟಿ ಪ್ರಯೋಜನಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಭರ್ಜರಿ ಖುಷಿ ನೀಡಿದೆ. ಅದೇ ಹಾದಿಯಲ್ಲಿ ಮುಂದುವರೆದಿರುವ ಟಾಟಾಪ್ಲೇ ಬಿಂಜ್‌ ಇದೀಗ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಸಂತಸದ ಸುದ್ದಿಯನ್ನು ನೀಡಿದೆ.

ಪ್ಲಾಟ್‌ಫಾರ್ಮ್‌ಗಳನ್ನು

ಹೌದು, ಟಾಟಾಪ್ಲೇ ಬಿಂಜ್‌ (Tata Play Binge) ಮೂರು ಹೊಸ ಪ್ರಾದೇಶಿಕ ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳನ್ನು ಸೇರಿಸುವುದಾಗಿ ತಿಳಿಸಿದೆ. ಮನೋರಮಾಮ್ಯಾಕ್ಸ್, ಕೂಡೆ ಮತ್ತು ತರಂಗ್ ಪ್ಲಸ್ ಹೊಸದಾಗಿ ಸೇರಿಸಲಾದ ಓಟಿಟಿ ಪ್ಲಾಟ್‌ಫಾರ್ಮ್‌ಗಳಾಗಿವೆ. ಇವು ಕ್ರಮವಾಗಿ ಕೇರಳ ಮತ್ತು ಒಡಿಶಾದ ಪ್ರದೇಶಗಳಿಂದ ಕಥೆಗಳನ್ನು ಟಾಟಾ ಪ್ಲೇ ಬಿಂಜ್‌ನ ಎಲ್ಲಾ ಚಂದಾದಾರರಿಗೆ ಲಭ್ಯ ಮಾಡಲಾಗುತ್ತದೆ.

ಬಿಂಜ್‌

ಅಂದಹಾಗೆ ಟಾಟಾಪ್ಲೇ ಬಿಂಜ್‌ ಸದ್ಯ 22 ಓಟಿಟಿ ಆಪ್‌ಗಳನ್ನು ಒಂದೇ ಇಂಟರ್ಫೇಸ್ ಹಾಗೂ ಒಂದೇ ಚಂದಾದಾರಿಕೆಯಲ್ಲಿ ಒದಗಿಸುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿಯೂ ಲಭ್ಯವಿದ್ದು, ಓಟಿಟಿ ಪ್ಲಾಟ್‌ಫಾರ್ಮ್ ಅನ್ನು ಆಕ್ಸಸ್‌ ಮಾಡಲು ಪ್ಲೇ ಬಿಂಜ್‌ ಬಳಕೆದಾರರು ಟಾಟಾ ಪ್ಲೇ DTH ಸಂಪರ್ಕವನ್ನು ಹೊಂದುವ ಅಗತ್ಯವಿಲ್ಲ.

ಡಿವೈಸ್‌ಗಳಲ್ಲಿ

ಟಾಟಾಪ್ಲೇ ಬಿಂಜ್‌+ ಆಂಡ್ರಾಯ್ಡ್‌ ಸೆಟ್‌ಟಾಪ್‌ ಬಾಕ್ಸ್‌, ಅಮೆಜಾನ್‌ ಫೈರ್‌ಟಿವಿ ಸ್ಟಿಕ್‌ನ ಟಾಟಾ ಪ್ಲೇ ಆವೃತ್ತಿ ಮತ್ತು www.TataplayBinge.com ಮೂಲಕ ವೀಕ್ಷಕರು ಬಿಗ್ ಸ್ಕ್ರೀನ್‌ ಸಂಪರ್ಕಿತ ಡಿವೈಸ್‌ಗಳಲ್ಲಿ ಎಲ್ಲಾ 22 ಓಟಿಟಿ (OTT) ಆಪ್‌ಗಳನ್ನು ಆಕ್ಸಸ್‌ ಮಾಡಬಹುದಾಗಿದೆ. ಇನ್ನು ಓಟಿಟಿ ಆಪ್‌ಗಳ ಮತ್ತು ಗೇಮ್‌ಗಳ ಸಂಪೂರ್ಣ ಪ್ಯಾಕೇಜ್ ತಿಂಗಳಿಗೆ 299 ರೂ. ಆಗಿದೆ.

ಈ ಓಟಿಟಿ ಆಪ್ಸ್‌ಗಳು ಲಭ್ಯ:

ಈ ಓಟಿಟಿ ಆಪ್ಸ್‌ಗಳು ಲಭ್ಯ:

ಹೊಸ ಮನೋರಮಾಮ್ಯಾಕ್ಸ್, ಕೂಡೆ ಮತ್ತು ತರಂಗ್ ಪ್ಲಸ್ ಆಪ್‌ಗಳ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್, ಜೀ5, MX ಪ್ಲೇಯರ್, ಸೋನಿಲೈವ್‌, ರೀಲ್‌ಡ್ರಾಮಾ, ವೂಟ್‌ ಸೆಲೆಕ್ಟ್‌, hoichoi, ಪ್ಲ್ಯಾನೆಟ್‌ ಮರಾಠಿ, ನಮ್ಮಫ್ಲಿಕ್ಸ್, Chaupal, ಸನ್‌ನೆಕ್ಸ್ಟ್‌, ಹಂಗಾಮಾ ಪ್ಲೇ, ಎರೋಸ್‌ ನವ್‌, ShemarooMe, ವೂಟ್‌ ಕಿಡ್ಸ್‌, Curiosity Stream, ಎಪಿಕ್‌ ಆನ್‌ ಮತ್ತು DocuBay. ಹಾಗೆಯೇ ಇತರೆ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ ಗಳು ಲಭ್ಯ. ಇದರೊಂದಿಗೆ ಟಾಟಾ ಪ್ಲೇ ಬಿಂಜ್‌ನಲ್ಲಿ ಉಚಿತ ಗೇಮಿಂಗ್ ಸಹ ಲಭ್ಯವಿದೆ.

ನೂತನವಾಗಿ

ಇತ್ತೀಚಿಗೆ ಟಾಟಾ ಪ್ಲೇ (Tata Play) ಮತ್ತು MX ಪ್ಲೇಯರ್‌ ಜೊತೆಯಾಗಿದ್ದು, ಈ ಮೂಲಕ MX ಪ್ಲೇಯರ್‌ ವೀಡಿಯೊ ಸ್ಟ್ರೀಮಿಂಗ್ ಆಪ್‌ ಟಾಟಾ ಪ್ಲೇ ಬಿಂಜ್ ಪ್ಯಾಕ್‌ನಲ್ಲಿ ಸಿಗಲಿದೆ. ಟಾಟಾಪ್ಲೇ ಬಿಂಜ್‌ನಲ್ಲಿ 16 ಓಟಿಟಿ ಆಪ್‌ಗಳು ಇದ್ದವು, ಇದೀಗ MX ಪ್ಲೇಯರ್‌ ಸೇರ್ಪಡೆಯಿಂದ ಟಾಟಾ ಪ್ಲೇ ಬಿಂಜ್ ನಲ್ಲಿ 17 ಓಟಿಟಿ ಆಪ್‌ಗಳು ದೊರೆಯಲಿವೆ. ಇನ್ನು ನೂತನವಾಗಿ ಸೇರ್ಪಡೆಯಾಗಿರುವ MX ಪ್ಲೇಯರ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಇತರ ಭಾಷೆಗಳಲ್ಲಿ ಲಭ್ಯ. ಟಾಟಾಪ್ಲೇ ಬಿಂಜ್ (Tata Play Binge) ಆರಂಭಿಕ ಯೋಜನೆಯು 59ರೂ. ಆಗಿದೆ.

ಪ್ಲೇಯರ್

ಹಾಗೆಯೇ MX ಪ್ಲೇಯರ್‌ 5,000 ಚಲನಚಿತ್ರಗಳು ಮತ್ತು 800+ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅಲ್ಲದೇ ಈ MX ಪ್ಲೇಯರ್ 300 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇನ್ನು ಟಾಟಾಪ್ಲೇ ಜೊತೆಗಿನ ಪಾಲುದಾರಿಕೆಯೊಂದಿಗೆ, MX ಪ್ಲೇಯರ್ ಟಾಟಾ ಪ್ಲೇ ಬಿಂಜ್‌ನಲ್ಲಿ ಜಾಹೀರಾತು-ಮುಕ್ತ ಕಂಟೆಂಟ್‌ ನೀಡುತ್ತದೆ. ಇನ್ನು ಈ ಆಪ್‌ನಲ್ಲಿ ಬಳಕೆದಾರರು MX ಒರಿಜಿನಲ್‌ಗಳು, ಬಾಲಿವುಡ್ ಚಲನಚಿತ್ರಗಳು, ಹಾಲಿವುಡ್ ಚಲನಚಿತ್ರಗಳು, ದಕ್ಷಿಣ ಭಾರತೀಯ ಡಬ್ಬಿಂಗ್ ಚಲನಚಿತ್ರಗಳು, ಕೊರಿಯನ್ ನಾಟಕಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

Best Mobiles in India

English summary
Tata Play Binge adds regional OTTs manoraramaMAX, Koode and Tarang Plus to its platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X