ಜಿಯೋ ಗಿಗಾಫೈಬರ್‌ಗೆ ಅಡ್ಡಗಾಲು!..ಟಾಟಾ ಸ್ಕೈನಿಂದ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ!

|

ಡಿಟುಎಚ್‌(DTH) ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿ ಜನಪ್ರಿಯತೆಗಳಸಿರುವ ಟಾಟಾಸ್ಕೈ, ಇದೀಗ ಬ್ರಾಡ್‌ಬ್ಯಾಂಡ್‌ ಇಂಟರ್ನೆಂಟ್ ಸೇವೆಯ ವಲಯದಲ್ಲೂ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕೆಂದು ತಲೆಕೆಡಿಸಿಕೊಳ್ಳುತ್ತಿದೆ. ಕಂಪನಿಯು ಹೆಚ್ಚಿನ ಬಳಕೆದಾರರನ್ನು ಹೊಂದಲು ಮಾಸ್ಟರ್‌ ಪ್ಲ್ಯಾನ್‌ ಒಂದನ್ನೂ ರೂಪಿಸಿದ್ದು, ಈ ಮೂಲಕ ಬರಲಿರುವ ಜಿಯೋ ಗಿಗಾಫೈಬರ್‌ ಓಟಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆಗಳಿವೆ.

 ಜಿಯೋ ಗಿಗಾಫೈಬರ್‌ಗೆ ಅಡ್ಡಗಾಲು!..ಟಾಟಾ ಸ್ಕೈನಿಂದ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ!

ಹೌದು, ಟಾಟಾ ಸ್ಕೈ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಅನಿಯಮಿತ ಉಚಿತ ಡಾಟಾ ಪ್ಲ್ಯಾನ್‌ಗಳನ್ನು ನೀಡಿದ್ದು, ಈಗಾಗಲೇ ಹಲವು ಹೊಸ ಪ್ಲ್ಯಾನ್‌ಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆರಂಭಿಕ ಪ್ಲ್ಯಾನ್‌ 999ರೂ.ಗಳು ಆಗಿದ್ದು, ಇದರಲ್ಲಿ 10 Mbps ವೇಗದಲ್ಲಿ ಇಂಟರ್ನೆಟ್‌ ಸೇವೆಯು ದೊರೆಯಲಿದೆ. ದೇಶದ 15 ನಗರಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಚಾಲ್ತಿ ಇದ್ದು, ಈ ಸೇವೆಯನ್ನು ಈಗ 21 ನಗರಗಳಿಗೆ ವಿಸ್ತರಿಸಿದೆ.

 ಜಿಯೋ ಗಿಗಾಫೈಬರ್‌ಗೆ ಅಡ್ಡಗಾಲು!..ಟಾಟಾ ಸ್ಕೈನಿಂದ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ!

ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಮತ್ತೆ ರಿಲಾಯನ್ಸ್‌ ಜಿಯೋ ಗಿಗಾಫೈಬರ್‌ಗೆ ಮೂಲಕ ಕ್ರಾಂತಿ ಸೃಷ್ಠಿಸಲಿದೆ ಎನ್ನುವ ಮೂನ್ಸೂಚನೆಗಳನ್ನು ಅರಿತಿರುವ ಟಾಟಾಸ್ಕೈ ಬ್ರಾಡ್‌ಬ್ಯಾಂಡ್ ಸೇವೆಯಲ್ಲಿ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವು ಮತ್ತು ಉಳಿಸಿಕೊಳ್ಳಲು ಈ ಹೊಸ ಅಸ್ತ್ರವನ್ನು ರೂಪಿಸಿದೆ. ಹಾಗಾದರೇ ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ವಿಶೇಷತೆ ಏನು? ಮತ್ತು ಯಾವೆಲ್ಲಾ ನಗರಗಳಿಗೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ವಿಸ್ತರಿಸಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು! ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಸೇವೆಯು ಹಲವು ವಿಶೇಷ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಆರಂಭಿಕ ಪ್ಲ್ಯಾನ್ 999ರೂ.ಗಳಾಗಿದೆ. ಈ ಪ್ಲ್ಯಾನ್‌ನಲ್ಲಿ ಇಂಟರ್ನೆಟ್‌ 10 Mbps ವೇಗದಲ್ಲಿ ಕಾರ್ಯಮಾಡಲಿದ್ದು, ಉಚಿತ ಡಾಟಾ ಲಭ್ಯವಾಗಲಿದೆ. ಹಾಗೆಯೇ 1,250ರೂ.ಗಳ ಪ್ಲ್ಯಾನ್‌ನಲ್ಲಿ 25 Mbps, 1,500ರೂ.ಗಳ ಪ್ಲ್ಯಾನ್‌ನಲ್ಲಿ 50 Mbps, 1,800ರೂ.ಗಳ ಪ್ಲ್ಯಾನ್‌ನಲ್ಲಿ 75 Mbps ಮತ್ತು 2,400ರೂ.ಗಳ ಪ್ಲ್ಯಾನ್ 100 Mbps ವೇಗವನ್ನು ಪಡೆದುಕೊಂಡಿರುತ್ತದೆ.

ವ್ಯಾಲಿಡಿಟಿ ಆಯ್ಕೆಗಳು

ವ್ಯಾಲಿಡಿಟಿ ಆಯ್ಕೆಗಳು

ಹಲವು ವಿವಿಧ ಇಂಟರ್ನೆಟ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿರುವ ಟಾಟಾ ಸ್ಕೈ ಬಳಕೆದಾರರಿಗೆ ವ್ಯಾಲಿಡಿಟಿಯಲ್ಲಿಯೂ ವಿವಿಧ ಆಯ್ಕೆಗಳನ್ನು ನೀಡಿದೆ. ಬಳಕೆದಾರರಿಗೆ ಒಂದು ತಿಂಗಳ ವ್ಯಾಲಿಡಿಟಿ, ಮೂರು ತಿಂಗಳ ಅವಧಿಯ ವ್ಯಾಲಿಡಿಟಿ, ಆರು ತಿಂಗಳ ವಾಯ್ದೆ ಮತ್ತು ಹನ್ನೆರಡು ತಿಂಗಳ(ಒಂದು ವರ್ಷ) ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಲಭ್ಯವಿದ್ದು, ಅವರ ಅಗತ್ಯಕ್ಕೆ ಅನುಗುಣವಾಗಿ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು.

ಓದಿರಿ : ಅತೀ ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದೆ 'ಪಬ್‌ಜಿ ಲೈಟ್‌ ವರ್ಷನ್'! ಓದಿರಿ : ಅತೀ ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದೆ 'ಪಬ್‌ಜಿ ಲೈಟ್‌ ವರ್ಷನ್'!

ಫಸ್ಟ್‌ ಲಿಸ್ಟ್‌ನಲ್ಲಿನ ನಗರಗಳು

ಫಸ್ಟ್‌ ಲಿಸ್ಟ್‌ನಲ್ಲಿನ ನಗರಗಳು

ಅಹಮದಾಬಾದ್, ಬೆಂಗಳೂರು, ಭೋಪಾಲ್, ಚೆನ್ನೈ, ದೆಹಲಿ, ಘಜಿಯಾಬಾದ್, ಗ್ರೇಟರ್ ನೋಯ್ಡಾ, ಗುರಗಾಂವ್, ಹೈದರಾಬಾದ್, ಮೀರಾ ಭಯಾಂದರ್, ಮುಂಬೈ, ನೋಯ್ಡಾ, ಪಿಂಪ್ರಿ ಚಿಂಚ್ವಾಡ್ ಮತ್ತು ಥಾಣೆ ನಗರಗಳಲ್ಲಿ ಈಗಾಗಲೇ ಬ್ರಾಡ್‌ಬ್ಯಾಂಡ್ ಸೇವೆ ಸ್ಟಾರ್ಟ್‌ ಆಗಿದ್ದು, ಮುಂದಿನ ಹಂತದಲ್ಲಿ ಕೋಲ್ಕತಾ, ಪುಣೆ ಮತ್ತು ಜೈಪುರಗಳಿಗೂ ಬ್ರಾಡ್‌ಬ್ಯಾಂಡ್ ಸೇವೆಯನ್ನು ವಿಸ್ತರಿಸಲಿದೆ.

ಹೊಸದಾಗಿ ಸೇರಿದ ನಗರಗಳು

ಹೊಸದಾಗಿ ಸೇರಿದ ನಗರಗಳು

ಟಾಟಾ ಸ್ಕೈ ತನ್ನ ಬ್ರಾಡ್‌ಬ್ಯಾಂಡ್‌ ಸೇವೆಯ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮತ್ತೆ ಹೊಸದಾಗಿ ಸೂರತ್, ಇಂದೋರ್, ನವೀ ಮುಂಬಯಿ ಮತ್ತು ಲಕ್ನೋ ನಗರಗಳಿಗೂ ಹಬ್ಬಿಸಲಿದೆ. ಈ ಮೂಲಕ ದೇಶದ ಪ್ರಮುಖ ನಗರ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ನೀಡಿ, ಬಳಕೆದಾರರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

ಜಿಯೋಗೆ ಗುನ್ನ ನೀಡುವ ಯತ್ನ

ಜಿಯೋಗೆ ಗುನ್ನ ನೀಡುವ ಯತ್ನ

ಸದ್ಯದಲ್ಲೇ ಮಾರುಕಟ್ಟೆ ಎಂಟ್ರಿ ಕೊಡಲಿರುವ ರಿಲಾಯನ್ಸ್‌ ಜಿಯೋ ಗಿಗಾಫೈಬರ್ ದೇಶದಲ್ಲಿ ಹೊಸ ಬದಲಾವಣೆಗಳನ್ನು ಹುಟ್ಟುಹಾಕಲಿದೆ ಎನ್ನುವ ಲಕ್ಷಣಗಳಿದೆ. ಜಿಯೊ ಗಿಗಾಫೈಬರ್ ವ್ಯಾಪಿಸುವ ಮೊದಲೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿದೆ ಟಾಟಾಸ್ಕೈ. ಅದಕ್ಕಾಗಿ ಹೊಸ ಡಾಟಾ ಪ್ಲ್ಯಾನ್‌ಗಳು ಮತ್ತು ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಿದೆ.

ಓದಿರಿ : ಬಿಗ್‌ ವಾರ್ ಶುರು!..'ನೋಕಿಯಾ 2.2' v/s 'ರೆಡ್ಮಿ 7' ಯಾವುದು ಬೆಸ್ಟ್‌?ಓದಿರಿ : ಬಿಗ್‌ ವಾರ್ ಶುರು!..'ನೋಕಿಯಾ 2.2' v/s 'ರೆಡ್ಮಿ 7' ಯಾವುದು ಬೆಸ್ಟ್‌?

Best Mobiles in India

English summary
Initially, Tata Sky started providing its broadband services in 14 cities of India, however, now the service provider has expanded to 21 cities. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X