ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌: 6000mAh ಬ್ಯಾಟರಿ ಆಯ್ಕೆ!

|

ಟೆಕ್ನೋ ಕಂಪೆನಿ ಆಕರ್ಷಕ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಅದರಂತೆ ಈಗ ಹೊಸ ಸ್ಮಾರ್ಟ್‌ಫೋನ್‌ ಒಂದನ್ನು ಪರಿಚಯಿಸಿದೆ. ಅದುವೇ ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್‌. ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹಾಗೆಯೇ 90Hz ರಿಫ್ರೆಶ್‌ ರೇಟ್‌ ಈ ಸ್ಮಾರ್ಟ್‌ಫೋನ್‌ನಲ್ಲಿದೆ.

ಟೆಕ್ನೋ

ಹೌದು, ಟೆಕ್ನೋ ತನ್ನ ಪೋವಾ ಸರಣಿಯ ಹೊಸ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈ ಟೆಕ್ನೋ ಪೋವಾ 4 ಪ್ರೊ ಅನ್ನು ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಫೋನ್‌ 4G ಡಿವೈಸ್‌ ಆಗಿದೆ. ಇದರ ಜೊತೆಗೆ ಮೀಡಿಯಾ ಟೆಕ್‌ ಹಿಲಿಯೋ G99 ನಲ್ಲಿ ಕಾರ್ಯನಿರ್ವಹಿಸಲಿರುವ ಈ ಫೋನ್‌ 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ವೇಗದ ಜಾರ್ಜಿಂಗ್‌ಗಾಗಿ 45W ಆಯ್ಕೆ ಇದರಲ್ಲಿದ್ದು, ರಿವರ್ಸ್‌ ಚಾರ್ಜಿಂಗ್‌ ಫೀಚರ್ಸ್‌ ಸಹ ಇದೆ. ಹಾಗಿದ್ರೆ ಮತ್ಯಾಕೆ ತಡ ಇದರ ಸಂಪೂರ್ಣ ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್‌ 6.6 ಇಂಚಿನ ಅಮೋಲೆಡ್ ವಾಟರ್ ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಪಡೆದಿದೆ. ಈ ಡಿಸ್‌ಪ್ಲೇ FHD+ ರೆಸಲ್ಯೂಶನ್‌ನ ಸಾಮರ್ಥ್ಯ ಪಡೆದಿದ್ದು, 720 x 1600  ಪಿಕ್ಸೆಲ್‌ ರೆಸಲ್ಯೂಸನ್‌ ಪಡೆದಿದೆ. ಹಾಗೆಯೇ 480nits ಬ್ರೈಟ್‌ನೆಸ್‌ ಜೊತೆಗೆ 120Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಆಯ್ಕೆ ಪಡೆದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್ ಇತ್ತೀಚಿನ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ ಜಿ 99 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದರ ಜೊತೆಗೆ ಇಂಟಿಗ್ರೇಟೆಡ್ ಮಾಲಿ ಜಿ 57 ಜಿಪಿಯು ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 12ರಲ್ಲಿ ರನ್‌ ಆಗಲಿದೆ. ಇನ್ನು 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಜೊತೆಗೆ RAM ಅನ್ನು ಸಹ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ 1 TB ವರೆಗೂ ಇಂಟರ್ನಲ್‌ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಬಹುದು.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಇದರಲ್ಲಿ ಎಲ್‌ಇಡಿ ಫ್ಲ್ಯಾಶ್‌ ಜೊತೆಗೆ 50 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ನ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗೆಯೆ ಸೆಲ್ಫಿಗಾಗಿ ಎಲ್ಇಡಿ ಫ್ಲ್ಯಾಶ್‌ ಜೊತೆಗೆ 8 ಮೆಗಾಪಿಕ್ಸೆಲ್‌ನ ಕ್ಯಾಮೆರಾ ರಚನೆ ಪಡೆದಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್‌ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ. ಹಾಗೆಯೇ ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಷ್ಟೇ ಅಲ್ಲದೆ 10W ನ ರಿವರ್ಸ್ ಚಾರ್ಜಿಂಗ್ ಆಯ್ಕೆ ಸಹ ಇದರಲ್ಲಿದೆ. ಇನ್ನು ಚಾರ್ಜಿಂಗ್ ಹಾಗೂ ಡೇಟಾ ಟ್ರಾನ್ಸ್ಫರ್‌ಗಾಗಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದಿಕೊಂಡಿದೆ.

ಇತರೆ ಫೀಚರ್ಸ್‌ ಹಾಗೂ ಲಭ್ಯತೆ

ಇತರೆ ಫೀಚರ್ಸ್‌ ಹಾಗೂ ಲಭ್ಯತೆ

ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್‌ ಫ್ಲೋರೈಟ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ ಕನೆಕ್ಟಿವಿಟಿ ವಿಷಯದಲ್ಲಿ ಸಾಮಾನ್ಯವಾಗಿ ಡ್ಯುಯಲ್ ಸಿಮ್, 4G, ವೈ-ಫೈ, ಬ್ಲೂಟೂತ್ ಸೇರಿದಂತೆ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಸ್ಟಿರಿಯೋ ಸ್ಪೀಕರ್‌ ಫೀಚರ್‌ ಜೊತೆಗೆ ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಇದೆ. ಇನ್ನುಳಿದಂತೆ ಟೆಕ್ನೋ ಪೋವಾ 4 ಪ್ರೊ ಪ್ರಸ್ತುತ ಬಾಂಗ್ಲಾದೇಶದಲ್ಲಿ ಮಾತ್ರ ಲಭ್ಯವಿದ್ದು, ಇತರ ಪ್ರದೇಶಗಳಲ್ಲಿ ಈ ಡಿವೈಸ್‌ ಯಾವಾಗ ಲಭ್ಯವಾಗಲಿದೆ?, ಬೆಲೆ ಎಷ್ಟಿರಲಿದೆ? ಎಂಬ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Best Mobiles in India

English summary
The techno company has made a name for itself in the market by introducing smartphones with attractive features. Meanwhile, this company has now launched the Techno Poa 4 Pro smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X