ಭಾರತದಲ್ಲಿ ಟೆಕ್ನೋ ಪೋವಾ ನಿಯೋ 5G ಫೋನ್ ಲಾಂಚ್‌ಗೆ ದಿನಾಂಕ ಫಿಕ್ಸ್‌

|

ಹಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಮೂಲಕ ಟೆಕ್ನೋ ಕಂಪೆನಿ ಜನಪ್ರಿಯಗೊಂಡಿದೆ. ಈ ವರ್ಷದ ಆರಂಭದಲ್ಲಿ ಟೆಕ್ನೋ ಭಾರತದಲ್ಲಿ ಪೋವಾ ನಿಯೋ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಘೋಷಣೆ ಮಾಡಿತ್ತು. ಇದಾದ ಒಂದು ತಿಂಗಳ ನಂತರ ಪೋವಾ 5G ಎಂಬ ತನ್ನ ಮೊದಲ 5G ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈಗ ಈ ಕಂಪೆನಿ ಪೋವಾ ನಿಯೋ ಸ್ಮಾರ್ಟ್‌ಫೋನ್‌ನ 5G ರೂಪಾಂತರವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ.

ಟೆಕ್ನೋ ಪೋವಾ

ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಾಂಕ ನಿಗದಿಯಾಗಿದೆ. ಇದು ಸೆಪ್ಟೆಂಬರ್ 23 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಸ್ಮಾರ್ಟ್‌ಫೋನ್‌ 6,000 mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ ಡ್ಯೂಯಲ್‌ ರಿಯರ್‌ ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗೆಯೇ 6.9 ಇಂಚಿನ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನುಳಿದಂತೆ ಇದು 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 12 ಆಧಾರಿತ HiOS UI ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿಯೇ ಮಾಹಿತಿ ನೀಡಿದೆ. ವರದಿಯ ಪ್ರಕಾರ ಈ 5G ಸ್ಮಾರ್ಟ್‌ಫೋನ್‌ ಬೆಲೆ ಭಾರತದಲ್ಲಿ 17,000 ರೂ.ಗಳಿಂದ 19,000 ರೂ. ಗಳಾಗಿರಬಹುದು. ಇನ್ನುಳಿದಂತೆ ಇದರ ಕ್ಯಾಮೆರಾದ ಮೆಗಾಪಿಕ್ಸೆಲ್‌ ಎಷ್ಟು?, ಬ್ಯಾಟರಿ ಬ್ಯಾಕ್‌ಅಪ್‌ ಹೇಗಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಡಿಸ್‌ಪ್ಲೇ ವಿಶೇಷ

ಡಿಸ್‌ಪ್ಲೇ ವಿಶೇಷ

ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್ 6.9 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ ಪಂಚ್ ಹೋಲ್ ನಾಚ್ ಹೊಂದಿದೆ. ಇದಕ್ಕೆ ಬೆಂಬಲವಾಗಿ 90Hz ರಿಫ್ರೆಶ್ ದರ ಮತ್ತು ಪೂರ್ಣ HD+ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. 720×1640 ಪಿಕ್ಸಲ್‌ಗಳ ರೆಸಲ್ಯೂಶನ್ ಜೊತೆಗೆ 480 ನಿಟ್‌ಗಳ ಬ್ರೈಟ್‌ನೆಸ್‌ಗೆ ಬೆಂಬಲ ಇರುತ್ತದೆ.ವಾಲ್ಯೂಮ್ ರಾಕರ್‌ಗಳು ಮತ್ತು ಪವರ್ ಬಟನ್ ಅನ್ನು ಫೋನ್‌ನ ಬಲ ಬೆನ್ನೆಲುಬಿನಲ್ಲಿ ಇರಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ಸ್ಪ್ರಿಂಟ್ ಬ್ಲೂ ಬಣ್ಣದ ರೂಪಾಂತರಗಳಲ್ಲಿ ಮಾರುಕಟ್ಟಗೆ ಬರುವ ನಿರೀಕ್ಷೆ ಇದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಈ ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 810 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಸದ್ಯಕ್ಕೆ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಇರಲಿದ್ದು, ವರ್ಚುವಲ್‌ ಆಗಿ 5GB RAM ಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆಯಂತೆ.

ಕ್ಯಾಮರಾ ವೈಶಿಷ್ಟ್ಯ

ಕ್ಯಾಮರಾ ವೈಶಿಷ್ಟ್ಯ

ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್‌ ಮುಂಭಾಗದ ಕ್ಯಾಮೆರಾ ಆಯ್ಕೆಯ ರಚನೆಯಲ್ಲಿ ಲಭ್ಯವಾಗಬಹುದು ಎಂದು ತಿಳಿದುಬಂದಿದೆ. ಈ ಕ್ಯಾಮೆರಾಗಳ ಜೊತೆ ಎಲ್‌ಇಡಿ ಪ್ಲಾಷ್‌ ಲೈಟ್‌ ಆಯ್ಕೆಯನ್ನೂ ಸಹ ನೀಡಲಾಗಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಲಭ್ಯತೆ

ಬ್ಯಾಟರಿ ಸಾಮರ್ಥ್ಯ ಹಾಗೂ ಲಭ್ಯತೆ

ಈ ಸ್ಮಾರ್ಟ್‌ಫೋನ್‌ನ ಪ್ರಮುಖ ವೈಶಿಷ್ಟ್ಯಗಳ ಪಟ್ಟಿಯಲ್ಲಿ 18W ವೇಗದ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲದಲ್ಲಿ 6,000 mAh ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನಲ್ಲಿದೆ ಎಂದು ಈಗಾಗಲೇ ದೃಢಪಟ್ಟಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್ 23 ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇದನ್ನು ಇ ಕಾಮರ್ಸ್‌ ಪ್ಲಾಟ್‌ಪಾರ್ಮ್‌ಗಳು ಹಾಗೂ ಅಧಿಕೃತ ಸ್ಟೋರ್‌ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಇದರ ಬೆಲೆ ಭಾರತದಲ್ಲಿ 17,000 ರೂ.ಗಳಿಂದ 19,000 ರೂ.ಗಳಾಗಿರಬಹುದು ಎಂದು ಊಹಿಸಲಾಗಿದೆ.

Best Mobiles in India

English summary
Earlier this year, Tecno had announced Pova Neo smartphones in India. Now Pova is all set to make 5G variant of the Pova smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X