TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಜಿಯೋ ಬರುವುದಕ್ಕಿಂತ ಮೊದಲು ತಾವು ಆಡಿದ್ದೇ ಆಟ ಎಂದು ತಿಳಿದಿದ್ದ ಟೆಲಿಕಾಂ ಕಂಪೆನಿಗಳಿಗೆ ಏಟಿನ ಮೇಲೆ ಏಟು ಬೀಳುತ್ತಿದೆ. ಜಿಯೊ ತನ್ನು ಹೊಸ ಪೋಸ್ಡ್‌ಪೇಯ್ಡ್ ದರ ಘೋಷಿಸುತ್ತಿದ್ದಂತೇ, ಇತರೆ ಟೆಲಿಕಾಂ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿ ಪಾತಾಳ ಕಂಡಿವೆ. ಈಗ ಮತ್ತೆ ದರ ಸಮರ ಹೆಚ್ಚಾಗುವ ಸಂಭವವಿದೆ.
ಪ್ರಿಪೇಯ್ಡ್ ವಿಭಾಗದಲ್ಲಿ ಪ್ರಯೋಗ ಮಾಡಿ ಗೆದ್ದಿರುವ, ಜಿಯೊ ದೃಷ್ಟಿ ಈಗ ಪೋಸ್ಟ್‌ಪೇಯ್ಡ್ ವಿಭಾಗದ ಮೇಲೆ ಬಿದ್ದಿದೆ. ₹ 199ಕ್ಕೆ ಅನಿಯಮಿತ ಕರೆಗಳು, ಎಸ್‌ಎಂಎಸ್ ಸೌಲಭ್ಯ ಒದಗಿಸುವುದಾಗಿ ಘೋಷಿಸಿದೆ. ಅಂತರಾಷ್ಟ್ರೀಯ ಕರೆಗಳ ದರ ಕೇವಲ 50 ಪೈಸೆಯಿಂದ ಆರಂಭವಾಗುವುದು ಈ ಕೊಡುಗೆಯ ಮತ್ತೊಂದು ಆಕರ್ಷಣೆಯಾಗಿದೆ.
4ಜಿ ವೇಗದ 25ಜಿಬಿ ಡೇಟಾ ಸೌಲಭ್ಯವನ್ನು ಪ್ರತಿತಿಂಗಳಿಗೆ ಜಿಯೋ ನೀಡಿರುವುದು ಟೆಲಿಕಾಂ ಕಂಪೆನಿಗಳಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ಪ್ರತಿ ತಿಂಗಳು 25GBಗೂ ಹೆಚ್ಚುವರಿ ಡೇಟಾ ಬೇಕೆಂದರೆ 1 ಜಿಬಿಗೆ ಕೇವಲ ₹20 ಪಾವತಿಸಬೇಕು ಎಂಬು ಗ್ರಾಹಕರಿಗೂ ಪ್ರಿಯವಾಗಿದೆ. ಆದರೆ, ಈ ಆಫರ್‌ನಿಂದ ಇತರೆ ಟೆಲಿಕಾಂಗಳು ಬೆಚ್ಚಿಬಿದ್ದಿವೆ.
ಜಿಯೋ ಕಡಿಮೆ ಬೆಲೆಗೆ ಕರೆ ಸೌಲಭ್ಯಗಳ ಕೊಡುಗೆಯನ್ನು ಘೋಷಿಸುವುದಕ್ಕೂ ಮುನ್ನ ಎಲ್ಲ ದೂರಸಂಪರ್ಕ ಸಂಸ್ಥೆಗಳು, ಕಡಿಮೆ ದರಕ್ಕೆ ಕರೆ ಸೌಲಭ್ಯ ಒದಗಿಸುವುದು ಅಸಾಧ್ಯ ಎಂಬಂತೆ ವರ್ತಿಸುತ್ತಿದ್ದವು. ಆದರೆ, ಈಗ ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಜಿಯೊ ಹಾದಿಯನ್ನೇ ತುಳಿದಿರುವ ಟೆಲಿಕಾಂ ಕಂಪೆನಿಳು ಮತ್ತೆ ಜಿಯೋ ಹಿಂದೆ ಬಿದ್ದಿವೆ.
ಈ ಮೊದಲೇ ದೂರ ಸಂಪರ್ಕ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿದ್ದ ಜಿಯೋ, ಅಮೆರಿಕ, ಕೆನಡಾದಂತಹ ದೇಶಗಳಿಗೆ ಮಾಡುವ ಕರೆಗಳ ದರವನ್ನು ಕೇವಲ 50 ಪೈಸೆಯಿಂದ ಆರಂಭಿಸಿರುವುದು ಕೊಡುಗೆಯ ಮತ್ತೊಂದು ಆಕರ್ಷಣೆಯಾಗಿದೆ. ಅಂತರರಾಷ್ಟ್ರೀಯ ರೋಮಿಂಗ್ ದರವನ್ನು ನಿಮಿಷಕ್ಕೆ ಕೇವಲ ₹ 2 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
ಓದಿರಿ: ವಿಜೃಂಭಣೆಯಿಂದ ಲಾಂಚ್ ಆಯ್ತು 'ಒನ್‌ಪ್ಲಸ್ 6'!..ಕಳ್ಳನೂ ಖರೀದಿಸುವ ಬೆಲೆಯಲ್ಲಿ!!